ಅನುದಿನದ ಮನ್ನಾ
2
2
108
ಪರಲೋಕ ಎಂದು ಕರೆಯಲ್ಪಡುವ ಸ್ಥಳ
Monday, 19th of May 2025
Categories :
ಪರಲೋಕ (Heaven)
"ಬಾಯೇ ನೀನು ದುಡುಕಿ ಮಾತನಾಡಬೇಡ, ದೇವರ ಮುಂದೆ ಮಾತನಾಡಲು ನಿನ್ನ ಹೃದಯವು ಆತುರಪಡದೇ ಇರಲಿ. ದೇವರು ಪರಲೋಕದಲ್ಲಿದ್ದಾರೆ. ನೀನಾದರೋ ಭೂಮಿಯ ಮೇಲೆ ಇರುವೆ, ಆದಕಾರಣ ನಿನ್ನ ಮಾತುಗಳು ಕೊಂಚವಾಗಿರಲಿ."(ಪ್ರಸಂಗಿ 5:2)
ಪರಲೋಕವು ಮೂಲತಃ , ಸರ್ವಶಕ್ತನಾದ ಮತ್ತು ಮಹಿಮೆಯ ಅರಸನಾದ , ಇಡೀ ಬ್ರಹ್ಮಾಂಡಕ್ಕೆ ರಾಜಾಧೀರಾಜನಾದ ಮತ್ತು ಸೃಷ್ಟಿಕರ್ತನಾದ ದೇವರು ನಿವಾಸಿಸುವ ಅಸಾಧಾರಣ ಕ್ಷೇತ್ರವಾಗಿದೆ. ದೈವಿಕ ಪ್ರಕಾಶದಿಂದ ಆವೃತವಾದ ಈ ಆಕಾಶ ಕ್ಷೇತ್ರವು ದೇವರ ವಾಸಸ್ಥಳ ಮಾತ್ರವಲ್ಲದೆ ಶಾಂತಿ, ಪ್ರಶಾಂತತೆ ಮತ್ತು ಮಿತಿಯಿಲ್ಲದ ಪ್ರೀತಿಯನ್ನು ಹೊರಹೊಮ್ಮಿಸುವ ಪವಿತ್ರ ಸ್ಥಳವಾಗಿದೆ. ದೈವಿಕ ಅಸ್ತಿತ್ವದ ಕೇಂದ್ರಬಿಂದುವಾಗಿ, ಪರಲೋಕವು ದೇವರ ಅಪ್ರತಿಮ ಶಕ್ತಿ ಮತ್ತು ಆತನ ಶಾಶ್ವತ ಪ್ರಸನ್ನತೆಗೆ ಸಾಕ್ಷಿಯಾಗಿದೆ.
ಪರಲೋಕದಲ್ಲಿ , ದೇವರ ಉಪಸ್ಥಿತಿ ಮತ್ತು ಆತನನ್ನು ನೋಡುವ ನಮ್ಮ ಸಾಮರ್ಥ್ಯವು ನಮ್ಮ ಪ್ರೀತಿ, ಭಾವನೆಗಳು, ಆಲೋಚನೆಗಳು, ಸಂಭಾಷಣೆಗಳು, ಹಾಡುಗಳು ಇತ್ಯಾದಿಗಳನ್ನು ಎಂದೆಂದಿಗೂ ಮತ್ತು ನಿರಂತರಕ್ಕೂ ಆಕ್ರಮಿಸುತ್ತದೆ. ದೇವರನ್ನು ತಿಳಿದುಕೊಳ್ಳುವುದೇ ನಿತ್ಯ ಜೀವ ಎಂದು ಕರ್ತನಾದ ಯೇಸು ಸ್ವತಃ ಹೇಳಿದ್ದಾನೆ (ಯೋಹಾನ 17:3).
ಕರ್ತನು ಹೀಗೆ ಹೇಳುತ್ತಾನೆ: ಆಕಾಶವು ನನ್ನ ಸಿಂಹಾಸನ, ಮತ್ತು ಭೂಮಿಯು ನನ್ನ ಪಾದಪೀಠ. (ಯೆಶಾಯ 66:1). ಅದು ಆತನ ಆಡಳಿತದ ಸ್ಥಾನವೂ ಆಗಿದೆ. ಅಲ್ಲಿ ನೀವು ಆತನ ಸಿಂಹಾಸನವನ್ನು ಕಾಣುವಿರಿ.
ಪರಲೋಕವು ದೇವ ದೂತರ ಪ್ರಾಥಮಿಕ ಕ್ಷೇತ್ರವೂ ಆಗಿದೆ.
ಆದರೆ ಆ ದಿನ ಮತ್ತು ಸಮಯದ ಕುರಿತು ಯಾರಿಗೂ ತಿಳಿದಿಲ್ಲ, ಸ್ವರ್ಗದಲ್ಲಿರುವ ದೇವದೂತರಿಗೂ ಸಹ ತಿಳಿದಿಲ್ಲ. (ಮಾರ್ಕ 13:32)
ಸತ್ಯವೇದವು ಇದರ ಕುರಿತು ನಮಗೆ ಮತ್ತಷ್ಟು ಹೇಳುತ್ತದೆ, " ಆದರೆ ನೀವು ಚೀಯೋನ್ ಪರ್ವತಕ್ಕೂ ಜೀವವುಳ್ಳ ದೇವರ ಪಟ್ಟಣವಾಗಿರುವ ಪರಲೋಕದ ಯೆರೂಸಲೇಮಿಗೂ ಆನಂದಭರಿತ ಅಸಂಖ್ಯಾತ ದೇವದೂತಗಣಗಳ ಬಳಿಗೂ..ಬಂದಿದ್ದೀರಿ" (ಇಬ್ರಿಯ 12:22)
ಪರಲೋಕದಲ್ಲಿ ಸಾವಿರಾರು ದೇವದೂತರುಗಳಿದ್ದಾರೆ.
ಪರಲೋಕ ಎಂಬುದು ನಿಜವಾದ ಸ್ಥಳವಾಗಿದೆ; ಈಗ ನಿಮ್ಮನ್ನು ಸುತ್ತುವರೆದಿರುವ ಸಂಗತಿಗಳಿಗಿಂತಲೂ ಹೆಚ್ಚು ನೈಜವಾಗಿದೆ ಇದರ ಕುರಿತು ಎಂದಿಗೂ ಅನುಮಾನಿಸಬೇಡಿ.ಕೆಲವು ಚಲನಚಿತ್ರಗಳ ಯಾವುದೇ ಚಿತ್ರಣಗಳು ನಿಮ್ಮಲ್ಲಿರುವ ಪರಲೋಕದ ಪರಿಕಲ್ಪನೆಯನ್ನು ಬದಲಾಯಿಸಲು ಬಿಟ್ಟುಕೊಡಬೇಡಿ. ಭೂಮಿಯು ನಿಜವಾದ ಸ್ಥಳವಾಗಿರುವಂತೆಯೇ ಇದು ಸಹ ಒಂದು ನಿಜವಾದ ಸ್ಥಳವಾಗಿದೆ.
ಮತ್ತೊಂದು ಕುತೂಹಲಕಾರಿ ವಿಷಯವೆಂದರೆ ಎಲ್ಲಾ ವಯಸ್ಸಿನ, ರಾಷ್ಟ್ರೀಯತೆಯ, ಸಾಮಾಜಿಕ ಹಿನ್ನೆಲೆಯುಳ್ಳ, ಲಿಂಗ ಮತ್ತು ವಿವಿಧ ಧರ್ಮಗಳ ಜನರು, ನಾಸ್ತಿಕರು ಸೇರಿದಂತೆ, ಪರಲೋಕವನ್ನು ವಿವರವಾಗಿ ವಿವರಿಸುವ ದರ್ಶನಗಳನ್ನು ಹೊಂದಿದ್ದಾರೆ. ಸತ್ಯವೆಂದರೆ ಕರ್ತನಾದ ಯೇಸು ಕ್ರಿಸ್ತನನ್ನು ತಮ್ಮ ಪ್ರಭು ಮತ್ತು ರಕ್ಷಕ ಎಂದು ನಂಬುವವರೆಲ್ಲರೂ ಒಂದು ದಿನ ಅಲ್ಲಿಗೆ ಬರುತ್ತಾರೆ.
ನೀವು ನಿಜವಾಗಿಯೂ ನಿಮ್ಮ ಜೀವನವನ್ನು ಕರ್ತನಿಗೆ ಒಪ್ಪಿಸಿದ್ದೀರಾ? ನೀವು ಆತನ ವಾಕ್ಯವನ್ನು ಓದಲು, ಪ್ರಾರ್ಥಿಸಲು ಮತ್ತು ಪರಲೋಕ ಮತ್ತು ಭೂಮಿಯನ್ನು ಸೃಷ್ಟಿಸಿದ ಕರ್ತನನ್ನು ಆರಾಧಿಸಲು ಸಮಯವನ್ನು ಹೂಡಲು ಬಯಸುತ್ತೀರಾ? ಈಗಲೇ ನಿತ್ಯತ್ವಕ್ಕಾಗಿ ಹೂಡಿಕೆ ಮಾಡುವ ಸಮಯ;ಅದನ್ನು ನಾಳೆ ಎಂದು ತಳ್ಳಬೇಡಿ.
ಗಮನಿಸಿ: ನಿಮಗೆ ಪರಲೋಕಕ್ಕೆ ಸಂಬಂಧಿಸಿದ ಯಾವುದಾದರೂ ಪ್ರಶ್ನೆಗಳಿವೆಯೇ? ನಿಮಗೆ ಪರಲೋಕದ ದರ್ಶನವಾಗಿದೆಯೇ (ಅದನ್ನು ವಿವರಿಸಿ)?
Bible Reading: 1 Chronicles 16-18
ಪ್ರಾರ್ಥನೆಗಳು
ಪ್ರತಿಯೊಂದು ಪ್ರಾರ್ಥನಾ ವಿಷಯವನ್ನು ಕನಿಷ್ಠ 3 ನಿಮಿಷಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಪ್ರಾರ್ಥಿಸಬೇಕು.
ವೈಯಕ್ತಿಕ ಆತ್ಮೀಕ ಬೆಳವಣಿಗೆ
ಕರ್ತನಾದ ಯೇಸುವೇ, ನೀನು ದೇವರ ಮಗನಾಗಿದ್ದು ತಂದೆಯನ್ನು ತಲುಪಲು ಏಕೈಕ ಮಾರ್ಗವಾಗಿದ್ದೀಯ. ನಾನು ನಿನ್ನನ್ನೇ ನನ್ನ ಕರ್ತನ್ನಾಗಿ ಮತ್ತು ರಕ್ಷಕನಾಗಿ ಸ್ವೀಕರಿಸುತ್ತೇನೆ. ನನಗಾಗಿ ಶಿಲುಬೆಯ ಮೇಲೆ ನೀನು ಮಾಡಿದ ಅಮೂಲ್ಯ ಬಲಿಗಾಗಿ ನಿನಗೆ ಸ್ತೋತ್ರ. ನಾನು ನಿನ್ನನ್ನು ಇನ್ನೂ ಹೆಚ್ಚು ನಿಕಟವಾಗಿ ತಿಳಿದುಕೊಳ್ಳಲು ನಾನು ಬಯಸುತ್ತೇನೆ ಕರ್ತನೇ. ಈ ಕೃಪೆಗಾಗಿ ನಾನು ನಿನ್ನನ್ನೇ ಬೇಡಿಕೊಳ್ಳುತ್ತೇನೆ. ಆಮೆನ್.
ಕುಟುಂಬ ರಕ್ಷಣೆ
ನಾನು ಕರ್ತನಲ್ಲಿ ಭಯಭಕ್ತಿಯುಳ್ಳವನಾಗಿ ಆತನ ಆಜ್ಞೆಗಳಲ್ಲಿ ಅತ್ಯಾನಂದಪಡುನಾದರಿಂದ ನಾನು ಧನ್ಯನು.ನನ್ನ ಸಂತಾನವು ಲೋಕದಲ್ಲಿ ಬಲಿಷ್ಠವಾಗುವದು; ನನ್ನ ವಂಶವು ಶುಭಹೊಂದುವದು.(ಕೀರ್ತನೆ 112:1-3)
KSM ಚರ್ಚ್
ತಂದೆಯೇ , KSM ಚರ್ಚ್‌ಗೆ ಸಂಪರ್ಕ ಹೊಂದಿದ ಪ್ರತಿಯೊಬ್ಬ ವ್ಯಕ್ತಿಯು ದೇವರ ವಾಕ್ಯದಲ್ಲೂ ಮತ್ತು ಪ್ರಾರ್ಥನೆಯಲ್ಲಿ ಬೆಳೆಯಲಿ ಎಂದು ನಾನು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ಅವರು ನಿನ್ನ ಆತ್ಮನ ನೂತನ ಅಭಿಷೇಕವನ್ನು ಹೊಂದಿಕೊಳ್ಳಲಿ.
ದೇಶ
ತಂದೆಯೇ, ಭಾರತದ ಪ್ರತಿಯೊಂದು ನಗರ ಮತ್ತು ರಾಜ್ಯದಲ್ಲಿ ನಿಮ್ಮ ಆತ್ಮದಿಂದಲೂ ಮತ್ತು ವಿವೇಕದಿಂದಲೂ ತುಂಬಿರುವ ನಾಯಕರನ್ನು ಎಬ್ಬಿಸಿ.
Join our WhatsApp Channel

Most Read
● ನಮ್ಮ ಆಯ್ಕೆಯ ಪರಿಣಾಮಗಳು● ದಿನ 26:40ದಿನಗಳ ಉಪವಾಸ ಪ್ರಾರ್ಥನೆ
● ನಿಮ್ಮ ನಂಬಿಕೆಯಲ್ಲಿ ರಾಜಿ ಮಾಡಿಕೊಳ್ಳಬೇಡಿ
● ಸ್ವಸ್ಥ ಚಿತ್ತತೆ ಎಂಬುದು ಒಂದು ವರ
● ಯೇಸುವಿನ ರಕ್ತವನ್ನು ಹಚ್ಚುವುದು
● ಇಂತಹ ಪರಿಶೋಧನೆಗಳು ಏಕೆ?
● ಎದುರಾಗುವ ವಿರೋಧಗಳನ್ನು ನಂಬಿಕೆಯಿಂದ ಎದುರಿಸುವುದು.
ಅನಿಸಿಕೆಗಳು