english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಸಮೃದ್ಧಿಗಾಗಿರುವ ಮರೆತುಹೋದ ಒಂದು ಕೀಲಿಕೈ
ಅನುದಿನದ ಮನ್ನಾ

ಸಮೃದ್ಧಿಗಾಗಿರುವ ಮರೆತುಹೋದ ಒಂದು ಕೀಲಿಕೈ

Wednesday, 21st of May 2025
1 1 119
Categories : ಮಧ್ಯಸ್ತಿಕೆ ಪ್ರಾರ್ಥನೆ (Intercession)
ಯೋಬನು ತನ್ನ ಸ್ನೇಹಿತರಿಗಾಗಿ ಪ್ರಾರ್ಥಿಸಿದಾಗ ಕರ್ತನು ಅವನ ನಷ್ಟಗಳನ್ನೆಲ್ಲ ಪುನಃಸ್ಥಾಪಿಸಿದನು. ವಾಸ್ತವವಾಗಿ ಕರ್ತನು ಯೋಬನಿಗೆ ಮೊದಲಿಗಿಂತ ಎರಡು ಪಟ್ಟು ಹೆಚ್ಚಾಗಿ ಕೊಟ್ಟನು. (ಯೋಬ 42:10) 

ಯೋಬನು ತನ್ನ ಸ್ನೇಹಿತರೆಂದು ಕರೆಯಲ್ಪಡುವವರಿಗಾಗಿ ಪ್ರಾರ್ಥಿಸಬೇಕೆಂದು  ಮತ್ತು ಮಧ್ಯಸ್ಥಿಕೆ ವಹಿಸಬೇಕೆಂಬುದನ್ನು   ಆಯ್ಕೆ ಮಾಡಿಕೊಂಡಾಗ ಅವನ ಸಮೃದ್ಧಿಯನ್ನು ಪುನಃಸ್ಥಾಪಿಸಲಾಯಿತು,  ವಾಸ್ತವವಾಗಿ ಅವನ ಸ್ನೇಹಿತರು  'ಉನ್ಮಾದಿಗಳು' - ಸ್ನೇಹಿತರಂತೆ ವೇಷ ಧರಿಸಿದ ಶತ್ರುಗಳೂ ಆಗಿದ್ದರು. ಈ ವ್ಯಕ್ತಿಗಳು ಅವನ ಕರಾಳ ಕ್ಷಣಗಳಲ್ಲಿ, ಅವನಿಗೆ ನಿಜವಾಗಿಯೂ ಅಗತ್ಯವಿದ್ದ ಬೆಂಬಲ ಮತ್ತು ಹಿತೋಕ್ತಿಗಳನ್ನು  ನೀಡದೆ ಅವನನ್ನು ಟೀಕಿಸಿದರು,ಅವನನ್ನು  ತಪ್ಪಾಗಿ ಗ್ರಹಿಸಿದರು ಮತ್ತು ತಪ್ಪಾಗಿ ತೀರ್ಪು ಮಾಡಿದರು. ಆದರೂ, ಅವರು ಹೀಗೆ   ಮಾಡಿದ್ದರೂ , ಯೋಬನು ಈ ವ್ಯಕ್ತಿಗಳಿಗಾಗಿ ಪ್ರಾರ್ಥಿಸಿ  ಬೇಡಿಕೊಂಡು, ಕ್ಷಮೆಯಲ್ಲಿರುವ  ಶಕ್ತಿಯನ್ನು ಮತ್ತು ನಮಗೆ ನೋವುಂಟು ಮಾಡಿದವರಿಗೂ ಸಹ ಕೃಪೆಯನ್ನು ವಿಸ್ತರಿಸುವ ಮಹತ್ವವನ್ನು ಪ್ರದರ್ಶಿಸಿದನು. 

ಕರ್ತನಾದ ಯೇಸು ಸಹ ಇದೇ ರೀತಿಯ ಭಾವನೆಯನ್ನು ಒತ್ತಿಹೇಳಿದನು, "ನಿಮ್ಮನ್ನು ದ್ವೇಷಿಸುವವರಿಗಾಗಿ, ನಿಮ್ಮನ್ನು ಹಿಂಸಿಸುವವರಿಗಾಗಿ ಪ್ರಾರ್ಥಿಸಿ" (ಮತ್ತಾಯ 5:44) ಎಂದು ನಮ್ಮನ್ನು ಒತ್ತಾಯಿಸಿದನು. ಹಾಗೆ ಮಾಡುವುದರಿಂದ, ನಾವು ನಮ್ಮ ಪರಲೋಕದ ತಂದೆಯ ಮನೋಭಾವವನ್ನು ಸಾಕಾರಗೊಳಿಸಿ  ಆತನ ದೈವಿಕ ಸಹಾನುಭೂತಿ ಮತ್ತು ಕರುಣೆಯನ್ನು ಪ್ರದರ್ಶಿಸುವವರಾಗುತ್ತೇವೆ. ಈ ನಿಸ್ವಾರ್ಥ ಕಾರ್ಯದ ಮೂಲಕ, ನಾವು ದೇವರಿಗೆ ಹತ್ತಿರವಾಗುತ್ತೇವೆ ಮತ್ತು ಪ್ರೀತಿ ಮತ್ತು ಕ್ಷಮೆಯ ಪರಿವರ್ತಕ ಶಕ್ತಿಯನ್ನು ಪ್ರದರ್ಶಿಸುವವರಾಗುತ್ತೇವೆ
 
ಎಲ್ಲಾ ಪುರುಷರು ಮತ್ತು ಮಹಿಳೆಯರು ರಕ್ಷಿಸಲ್ಪಡಬೇಕು ಮತ್ತು ಯಾರೂ ಸಹ ನಾಶವಾಗಬಾರದು ಎಂಬುದು ದೇವರ ಬಯಕೆಯಾಗಿದೆ. ಪ್ರತಿಯೊಬ್ಬ ಮಧ್ಯಸ್ಥಗಾರನ ಶ್ರಮಕ್ಕೆ ಕರ್ತನು ಪ್ರತಿಫಲ ನೀಡುತ್ತಾನೆ ಎಂದು ನಾನು ನಂಬುತ್ತೇನೆ. ಕರ್ತನಿಂದ ಬರುವ ಈ ಪ್ರತಿಫಲವು ಭೌತಿಕವಾಗಿ ಮಾತ್ರವಲ್ಲದೆ ಆತ್ಮೀಕ ಆಶೀರ್ವಾದಗಳಲ್ಲಿಯೂ ಪ್ರಕಟವಾಗಬಹುದು ಎಂಬುದನ್ನು ನಾನು ನಂಬುತ್ತೇನೆ.

ಅದಕ್ಕಾಗಿಯೇ ನಾನು ಜನರಿಗೆ ಮಧ್ಯಸ್ಥಿಕೆ ಪ್ರಾರ್ಥನೆಯ ತಂಡಕ್ಕೆ ಸೇರಲು ಹೇಳುತ್ತಿರುತ್ತೇನೆ. ಅನೇಕ ಜನರು ಈ ಪ್ರವಾದನೆ ಮಧ್ಯಸ್ಥಿಕೆ ಪ್ರಾರ್ಥನೆ ಯನ್ನು ಅರ್ಥಮಾಡಿಕೊಳ್ಳದೇ  ಗೊಣಗುಟ್ಟುತ್ತಾರೆ, ಇದರಿಂದಾಗಿ ಅವರ ಆಶೀರ್ವಾದವನ್ನು ಕಳೆದುಕೊಳ್ಳುತ್ತಾರೆ. ಇತರರಿಗಾಗಿ ಮಧ್ಯಸ್ಥಿಕೆ ಪ್ರಾರ್ಥನೆ ಮಾಡುವಾಗ ಅನೇಕರು ತಾವು ಏನನ್ನೊ  ಕಳೆದುಕೊಳ್ಳುತ್ತಿದ್ದೇವೆ ಎಂದು  ಭಾವಿಸುತ್ತಾರೆ.  ವಾಸ್ತವವೆಂದರೆ, ಇದು ತದ್ವಿರುದ್ಧವಾಗಿದೆ - ನೀವು ನಿಜವಾಗಿಯೂ ಅದರಿಂದ ಏನನ್ನೋ ಹೊಂದುಕೊಳ್ಳುತ್ತಿದ್ದೀರಿ. 

ಅಷ್ಟೇ ಅಲ್ಲದೆ, ದಾನಿಯೇಲನು ತನ್ನ ರಾಷ್ಟ್ರಕ್ಕಾಗಿ ಪ್ರಾರ್ಥಿಸಿದಾಗ, ಅವನು ಅಭಿವೃದ್ಧಿ ಹೊಂದಿದನು. "ಆದ್ದರಿಂದ ಈ [ಮನುಷ್ಯ] ದಾನಿಯೇಲನು ದಾರ್ಯಾವೇಶನ ಆಳ್ವಿಕೆಯಲ್ಲೂ  ಮತ್ತು ಪರ್ಷಿಯಾದ  ಕೊರೆಶನ ಆಳ್ವಿಕೆಯಲ್ಲೂ  ಅಭಿವೃದ್ಧಿ ಹೊಂದಿದನು." (ದಾನಿಯೇಲ  6:28) ಎಂಬುದಾಗಿ ಓದುತ್ತೇವೆ.

ನಾವು ನಮ್ಮ  ಸುತ್ತಲೂ ಗಮನಿಸುವಾಗ  ಮತ್ತು ನಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ನೋಡುವಾಗ  ನಮ್ಮ ರಾಷ್ಟ್ರವನ್ನು ಟೀಕಿಸುವುದು ತುಂಬಾ ಸುಲಭ. ಆದಾಗ್ಯೂ, ನಾವು ನಮ್ಮ ರಾಷ್ಟ್ರವನ್ನು ನಂಬಿಕೆಯ ಕಣ್ಣುಗಳಿಂದ ನೋಡಬೇಕು. ನಮ್ಮ ರಾಷ್ಟ್ರವು ದೇವರ ಕಡೆಗೆ ತಿರುಗುವಂತೆ ನಾವು ಪ್ರಾರ್ಥಿಸೋಣ. ಕರ್ತನು ಖಂಡಿತವಾಗಿಯೂ ಅದಕ್ಕಾಗಿ  ನಿಮ್ಮನ್ನು ಸಮೃದ್ಧಗೊಳಿಸುತ್ತಾನೆ. 

Bible Reading: 1 Chronicles 23-25
ಪ್ರಾರ್ಥನೆಗಳು
ಪ್ರತಿ ಪ್ರಾರ್ಥನೆಯನ್ನು ಕನಿಷ್ಠ 2 ನಿಮಿಷಗಳ ಕಾಲ ಪುನರಾವರ್ತಿಸಿ.

ವೈಯಕ್ತಿಕ ಆತ್ಮೀಕ ಬೆಳವಣಿಗೆ
ತಂದೆಯಾದ ದೇವರೇ, ನಿನ್ನ ವಾಕ್ಯದಲ್ಲಿ ನನ್ನನ್ನು ಸ್ಥಾಪಿಸು, ನಿನ್ನ ವಾಕ್ಯವು ನನ್ನ ಜೀವನದಲ್ಲಿ ಫಲ ನೀಡಲಿ. ಶಾಂತಿಯ ದೇವರೇ, ನಿನ್ನ ವಾಕ್ಯದಿಂದ ನನ್ನನ್ನು ಪವಿತ್ರಗೊಳಿಸು, ಏಕೆಂದರೆ ನಿನ್ನ ವಾಕ್ಯವೇ ಸತ್ಯ. ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ . ಆಮೆನ್.

"ನಾನು ನೀರಿನ ಕಾಲುವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವೆನು. ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದಲ್ಲಾ; ಅದರ ಎಲೆ ಬಾಡುವದೇ ಇಲ್ಲ. ಅದರಂತೆ ನನ್ನ  ಕಾರ್ಯವೆಲ್ಲವೂ ಸಫಲವಾಗುವದು". (ಕೀರ್ತನೆ 1:3)

ನಾನು ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳುವುದಿಲ್ಲ.  ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆನು . (ಗಲಾತ್ಯ 6:9)

ಕುಟುಂಬದವರ  ರಕ್ಷಣೆಗಾಗಿ 
ತಂದೆಯಾದ ದೇವರೇ, ನನ್ನ ಕುಟುಂಬದ ಎಲ್ಲ ಸದಸ್ಯರ ಹೃದಯಗಳಲ್ಲಿ ಕ್ರಿಸ್ತನ ಸತ್ಯವನ್ನು ಸ್ವೀಕರಿಸಲು ನೀವು ಪ್ರೇರೇಪಿಸಬೇಕೆಂದು ನಾನು ಕೇಳುತ್ತೇನೆ. "ಯೇಸು ಕ್ರಿಸ್ತನನ್ನು ಕರ್ತನು, ದೇವರು ಮತ್ತು ರಕ್ಷಕನೆಂದು ತಿಳಿದುಕೊಳ್ಳುವ ಹೃದಯವನ್ನು ಅವರಿಗೆ ಕೊಡು. ಅವರು ತಮ್ಮ ಪೂರ್ಣ ಹೃದಯದಿಂದ ನಿಮ್ಮ ಕಡೆಗೆ ತಿರುಗುವಂತೆ ಮಾಡು.

ನನ್ನ ಹೆಗಲಿನಿಂದ ಪ್ರತಿಯೊಂದು ಹೊರೆಯನ್ನು ಮತ್ತು ನನ್ನ ಕುತ್ತಿಗೆಯಿಂದ ಪ್ರತಿಯೊಂದು ನೊಗವನ್ನು ತೆಗೆದುಹಾಕಲಾಗುವುದು ನಿನ್ನ  ಅಭಿಷೇಕದಿಂದಾಗಿ ನನ್ನ ನೊಗವು ಮುರಿಯಲ್ಪಡುವುದು.(ಯೆಶಾಯ 10:27) 

ಆರ್ಥಿಕ ಪ್ರಗತಿ 
ತಂದೆಯೇ, ನೀನು  ನನಗೆ ಸಂಪತ್ತನ್ನು ಪಡೆಯುವ ಶಕ್ತಿಯನ್ನು ನೀಡಿರುವುದರಿಂದ ನಾನು ನಿನಗೇ  ಸ್ತೋತ್ರ ಸಲ್ಲಿಸುತ್ತೇನೆ,  . ಸಂಪತ್ತನ್ನು ಸೃಷ್ಟಿಸುವ ಶಕ್ತಿ ಈಗ ನನ್ನ ಮೇಲೆ  ಯೇಸುನಾಮದಲ್ಲಿ ಸುರಿಯಲಿದೆ  (ಧರ್ಮೋಪದೇಶಕಾಂಡ 8:18) 

ನನಗಿರುವ  ಬಾದ್ಯತೆಯು ಶಾಶ್ವತವಾದದ್ದು . ಹಾಗಾಗಿ ಕೆಟ್ಟ ಸಮಯದಲ್ಲಿ ನಾನು ನಾಚಿಕೆಪಡುವುದಿಲ್ಲ: ಮತ್ತು ಕ್ಷಾಮದ ದಿನಗಳಲ್ಲಿ, ನಾನು ಮತ್ತು ನನ್ನ ಕುಟುಂಬ ಸದಸ್ಯರು ತೃಪ್ತರಾಗಿರುತ್ತೇವೆ. (ಕೀರ್ತನೆ 37:18-19)

 ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಮಹಿಮೆಯ ಐಶ್ವರ್ಯದ ಪ್ರಕಾರ ನನ್ನ ಎಲ್ಲಾ ಅಗತ್ಯಗಳನ್ನು ಪೂರೈಸುತ್ತಾನೆ. (ಫಿಲಿಪ್ಪಿ 4:19)

KSM ಚರ್ಚ್ 
ತಂದೆಯೇ, ಪಾಸ್ಟರ್ ಮೈಕೆಲ್ , ಅವರ ಕುಟುಂಬ ಸದಸ್ಯರು, ತಂಡದ ಸದಸ್ಯರು ಮತ್ತು ಕರುಣಾ ಸದನ್  ಸಭೆಗೆ ಸಂಪರ್ಕ ಹೊಂದಿದ ಪ್ರತಿಯೊಬ್ಬ ವ್ಯಕ್ತಿಯನ್ನು ಯೇಸುನಾಮದಲ್ಲಿ  ಸಮೃದ್ಧಗೊಳಿಸು. 

ರಾಷ್ಟ್ರ 
ತಂದೆಯೇ, "ನೀನು ಆಡಳಿತಗಾರರನ್ನು ಅವರ ಉನ್ನತ ಗೌರವದ ಸ್ಥಾನಗಳಲ್ಲಿ ಇರಿಸುವವನು, ಮತ್ತು ನಾಯಕರನ್ನು ಅವರ ಉನ್ನತ ಸ್ಥಾನಗಳಿಂದ ತೆಗೆದುಹಾಕುವವನು ಕೂಡ ನೀನೇಆಗಿದ್ದೀಯ" ಎಂದು ನಿನ್ನ ವಾಕ್ಯ  ಹೇಳುತ್ತದೆ. 
ಓ ದೇವರೇ, ನಮ್ಮ ರಾಷ್ಟ್ರದ ಪ್ರತಿಯೊಂದು ನಗರ ಮತ್ತು ರಾಜ್ಯದಲ್ಲಿಯೂ ಸರಿಯಾದ ನಾಯಕರನ್ನು ಯೇಸುನಾಮದಲ್ಲಿ  ಎಬ್ಬಿಸು. ಆಮೆನ್. 

ನಿಮ್ಮ ರಾಷ್ಟ್ರಕ್ಕಾಗಿ  ಸ್ವಲ್ಪ ಸಮಯ ಪ್ರಾರ್ಥಿಸಿ.

Join our WhatsApp Channel


Most Read
● ಈ ಹೊಸ ವರ್ಷದ ಪ್ರತಿ ದಿನದಲ್ಲೂ ಸಂತೋಷವನ್ನು ಅನುಭವಿಸುವುದು ಹೇಗೆ?
● ಉತ್ತಮವು ಅತ್ಯುತ್ತಮವಾದದಕ್ಕೆ ಶತೃ
● ಪ್ರಾರ್ಥನಾ ಹೀನತೆ ಎಂಬ ಪಾಪ
● ದಿನ 02:40 ದಿನಗಳ ಉಪವಾಸ ಪ್ರಾರ್ಥನೆ ದಿನಗಳು
● ಹಣವು ಚಾರಿತ್ರ್ಯವನ್ನು ವಿವರಿಸುತ್ತದೆ
● ಭವ್ಯಭವನದ ಹಿಂದಿರುವ ಮನುಷ್ಯ
● ಎಲ್ಲಾಮನುಷ್ಯರಿಗಾಗಿ ಇರುವ ಕೃಪೆ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್