“ಯೆಹೋವ ದೇವರು ಹೀಗೆ ಘೋಷಿಸುತ್ತಾನೆ , “ಈಗಲಾದರೂ ಉಪವಾಸದಿಂದಲೂ ಅಳುವಿಕೆಯಿಂದಲೂ ಗೋಳಾಟದಿಂದಲೂ ನಿಮ್ಮ ಪೂರ್ಣಹೃದಯದಿಂದ ನನ್ನ ಕಡೆಗೆ ತಿರುಗಿಕೊಳ್ಳಿರಿ.” (ಯೋವೇಲ 2:12)
ನಿಮ್ಮ ಪೂರ್ಣ ಹೃದಯದಿಂದ ನನ್ನ ಕಡೆಗೆ ತಿರುಗಿ.
ಒಬ್ಬರು ತಮ್ಮ ಪೂರ್ಣ ಹೃದಯದಿಂದ ಕರ್ತನ ಕಡೆಗೆ ತಿರುಗುವುದು ಎಂದರೆ ಹೇಗೆ ?
1. ಪಶ್ಚಾತ್ತಾಪ - ಪಶ್ಚಾತ್ತಾಪ ಎಂದರೆ ಲೋಕದಿಂದ ವಾಕ್ಯದ ಕಡೆಗೆ ತಿರುಗಿಕೊಳ್ಳುವುದು.
2. ಉಪವಾಸ - ಕಣ್ಣೀರಿನಿಂದಲೂ ಮತ್ತು ದುಃಖದಿಂದಲೂ ಕೂಡಿರಬೇಕು
ಆದ್ದರಿಂದ ಈಗಲೂ, ಕರ್ತನು ಹೇಳುತ್ತಿರುವುದೇನೆಂದರೆ, ತಿರುಗಿಕೊಳ್ಳಿ ನಿಮ್ಮ ಪೂರ್ಣ ಹೃದಯದಿಂದಲೂ ಉಪವಾಸದಿಂದ, ಗೋಳಾಡುವಿಕೆಯಿಂದಲೂ ಮತ್ತು ದುಃಖದಿಂದಲೂ ನನ್ನ ಬಳಿಗೆ ಬನ್ನಿರಿ [ಪ್ರತಿಯೊಂದು ಅಡಚಣೆಯನ್ನು ತೆಗೆದುಹಾಕುವವರೆಗೆ ಮತ್ತು ಮುರಿದು ಹೋದ ಅನ್ಯೋನ್ಯತೆಯನ್ನು ಪುನಃಸ್ಥಾಪಿಸುವವರೆಗೆ]. (ಯೋವೇಲ 2:12 ವರ್ಧಿಸಲಾಗಿದೆ)
ನನ್ನ ಬಳಿಗೆ ಬರುತ್ತಲೇ ಇರಿ…. ಇದು [ಪ್ರತಿಯೊಂದು ಅಡಚಣೆಯನ್ನು ತೆಗೆದುಹಾಕುವವರೆಗೆ ಮತ್ತು ಮುರಿದ ಅನ್ಯೋನ್ಯತೆಯನ್ನು ಪುನಃಸ್ಥಾಪಿಸುವವರೆಗೆ].
ನಿರಂತರ ಪ್ರಕ್ರಿಯೆಯಾಗಿರಬೇಕು. ಆದ್ದರಿಂದ ನಿಮ್ಮ ಬಟ್ಟೆಗಳನ್ನಲ್ಲ, ನಿಮ್ಮ ಹೃದಯವನ್ನು ಹರಿದುಕೊಳ್ಳಿ (ಯೋವೇಲ 2:13)
ಯಹೂದಿ ಸಂಸ್ಕೃತಿಯಲ್ಲಿ ದುಃಖವನ್ನು ತೊರ್ಪಡಿಸಿಕೊಳ್ಳುವ ಒಂದು ಅಭಿವ್ಯಕ್ತಿ ಎಂದರೆ ಬಟ್ಟೆಗಳನ್ನು ಹರಿದುಕೊಳ್ಳುವುದಾಗಿತ್ತು. ಈ ಪದ್ಧತಿ ಇಂದಿಗೂ ಯೆಹೂದ್ಯರಲ್ಲಿ ಮುಂದುವರೆದಿದೆ. ಇಲ್ಲಿ ದುಃಖದ ಬಾಹ್ಯ ಪ್ರದರ್ಶನಕ್ಕಿಂತ ಹೆಚ್ಚಾಗಿ, ಪಾಪಕ್ಕಾಗಿ ಯಥಾರ್ಥವಾಗಿ ದುಃಖಿಸುವಂತದ್ದು ಹೃತ್ಪೂರ್ವಕವಾಗಿ ಮನತಿರುಗಬೇಕಾದ್ದು ಹೆಚ್ಚು ಪ್ರಾಮುಖ್ಯವಾದದ್ದಾಗಿದೆ.
"ನಿಮ್ಮ ಬಟ್ಟೆಗಳನ್ನಲ್ಲ, ನಿಮ್ಮ ಹೃದಯಗಳನ್ನು ಹರಿದುಕೊಳ್ಳಿ" ಎಂದು ಪ್ರವಾದಿಯಾದ ಯೋವೇಲನು ದೇವರ ಆಜ್ಞೆಯನ್ನು ತಿಳಿಸಿದನು. (ಯೋವೇಲ 2:13).
ಬಾಹ್ಯ ಆಚರಣೆಗಳಿಗಿಂತ ದೇವರು ಹೃದಯದ ಸ್ಥಿತಿಯನ್ನು ಹೆಚ್ಚು ಮೆಚ್ಚುವವನಾಗಿದ್ದಾನೆ. "ನಿಮ್ಮ ದೇವರಾದ ಕರ್ತನ ಬಳಿಗೆ ಹಿಂತಿರುಗಿ, ಏಕೆಂದರೆ ಆತನು ದಯಾಳು, ಕರುಣಾಳು, ಕೋಪಿಸಿಕೊಳ್ಳುವುದರಲ್ಲಿ ನಿಧಾನಿಯೂ ಮತ್ತು ಕೃಪೆ ತೋರಿಸುವುದರಲ್ಲಿ ಮಹಾ ದಯೆಯುಳ್ಳವನು; ಮತ್ತು ಆತನು ಮಾಡಬೇಕೆಂದಿದ್ದ ಕೇಡಿಗೆ ಮನಮರಗುವ ದೇವರಾಗಿದ್ದಾನೆ " (ಯೋವೇಲ 2:13)
ದೇವರ ಒಳ್ಳೆಯತನ ಮತ್ತು ಕರುಣೆಯನ್ನು ಅರಿತು ಕೊಳ್ಳುವುದು ಯಥಾರ್ಥವಾದ ಮಾನಸಾಂತರದ ಮತ್ತೊಂದು ಉದ್ದೇಶವಾಗಿದೆ. ಆತನು ಸ್ವಸ್ಥ ಪಡಿಸುವವನು ಮತ್ತು ಕ್ಷಮಿಸುವವನು ಆಗಿದ್ದು ಆತನು ಘೋಷಿಸಿದ ನ್ಯಾಯತೀರ್ಪಿಗೆ ಮನಮರುಗಿ ಅದನ್ನು ಮರೆತುಬಿಡುವವನಾಗಿದ್ದಾನೆ ಎಂಬ ವಿಶ್ವಾಸವಿದ್ದಾಗ ನಾವು ಆತನ ಬಳಿಗೆ ಬರುವವರಾಗುತ್ತೇವೆ. "ದೇವರು ತುಂಬಾ ಕ್ರೂರಿ, ನಾನು ಆತನ ಬಳಿಗೆ ಹಿಂತಿರುಗಿ ಹೋಗದಿದ್ದರೆ , ಆತನು ನನ್ನನ್ನು ನಾಶಮಾಡುತ್ತಾನೆ" ಎಂಬ ಕಲ್ಪನೆಯೊಂದಿಗೆ ನಾವು ಮಾನಸಾಂತರ ಪಡಲು ಆಗುವುದಿಲ್ಲ ಬದಲಾಗಿ, "ನಮ್ಮ ದೇವರಾದ ಯೆಹೋವನ ಕಡೆಗೆ ತಿರಿಗಿಕೊಂಡರೆ ; ಆತನು ದಯೆಯೂ ಕನಿಕರವೂ ದೀರ್ಘಶಾಂತಿಯೂ ಮಹಾಕೃಪೆಯೂ ಉಳ್ಳವನಾಗಿ ಮಾಡಬೇಕೆಂದಿದ್ದ ಕೇಡಿಗೆ ಮನಮರುಗುತ್ತಾನೆ." ಎಂಬ ಕಲ್ಪನೆಯೊಂದಿಗೆ ನಾವು ಆತನ ಬಳಿಗೆ ಹಿಂತಿರುಗಿ ಹೋಗುವಾಗ ಯಥಾರ್ಥವಾದ ಮಾನಸಾಂತರಕ್ಕೆ ಆತನ ಒಳ್ಳೆಯತನವು ನಮ್ಮನ್ನು ಕರೆದೊಯ್ಯುವುದು. (ರೋಮ 2:4).
ಲೂಕ 5:1-11 ರಲ್ಲಿ, ಕರ್ತನಾದ ಯೇಸು ಪೇತ್ರನ ದೋಣಿಗೆ ಬಂದು ಅವರ ಬಲೆಗಳನ್ನು ಬೀಸುವಂತೆ ಆದೇಶಿಸಿದನು. ಹಾಗೇ ಮಾಡಿದ ಪರಿಣಾಮವಾಗಿ ಪೇತ್ರನು ಅಭೂತಪೂರ್ವ ಮೀನುಗಳ ರಾಶಿಯನ್ನೇ ಪಡೆದುಕೊಂಡನು . ಇದನ್ನು ಕಂಡ ಪೇತ್ರನು ತಕ್ಷಣವೇ ಯೇಸುವಿನ ಪಾದಗಳಿಗೆ ಬಿದ್ದು, “ಕರ್ತನೇ, ನಾನು ಪಾಪಿಷ್ಠನು, ನನ್ನನ್ನು ಬಿಟ್ಟು ಹೋಗು!” ಎಂದು ಹೇಳಿದನು.
ಪೇತ್ರನನ್ನು ಕರ್ತನ ಒಳ್ಳೆಯತನವೇ ಮಾನಸಾಂತರಕ್ಕೆ ನಡೆಸಿತು.ಹಾಗೆಯೇ ಅದು ನಮ್ಮ ವಿಷಯದಲ್ಲೂ ಆಗಬೇಕು.
Bible Reading: 2 Chronicles 6-8
ಪ್ರಾರ್ಥನೆಗಳು
ಪ್ರತಿಯೊಂದು ಪ್ರಾರ್ಥನಾ ವಿಷಯವನ್ನು ಕನಿಷ್ಠ 3 ನಿಮಿಷಗಳು ಅಥವಾ ಅದಕ್ಕಿಂತ ಹೆಚ್ಚು ಕಾಲವಾದರೂ ಪ್ರಾರ್ಥಿಸಬೇಕು.
ವೈಯಕ್ತಿಕ ಆತ್ಮೀಕ ಬೆಳವಣಿಗೆ
ತಂದೆಯೇ, ನಿನ್ನ ವಾಕ್ಯ ಮತ್ತು ಪ್ರಾರ್ಥನೆಯಲ್ಲಿ ಬೆಳೆಯಲು ನನಗೆ ಯೇಸುನಾಮದಲ್ಲಿ ಸಹಾಯ ಮಾಡಿ. ಪವಿತ್ರಾತ್ಮನು ನಿನ್ನ ಬೆಂಕಿಯಿಂದ ನನ್ನ ಪ್ರಾರ್ಥನಾ ಪೀಠವನ್ನು ಬೆಳಗಿಸಲಿ.
ಕುಟುಂಬ ರಕ್ಷಣೆ.
ತಂದೆಯೇ, ನಿನ್ನ ಕರುಣೆಯು ಪ್ರತಿದಿನವೂ ಹೊಸದಾಗಿರುವುದಕ್ಕೆ ನಾನು ನಿಮಗೆ ಸ್ತೋತ್ರ ಸಲ್ಲಿಸುತ್ತೇನೆ. ಖಂಡಿತವಾಗಿಯೂ ನಿನ್ನ ಒಳ್ಳೆಯತನ ಮತ್ತು ಕರುಣೆ ನಮ್ಮ ಜೀವನದ ಎಲ್ಲಾ ದಿನಗಳಲ್ಲೂ ನನ್ನನ್ನು ಮತ್ತು ನನ್ನ ಕುಟುಂಬ ಸದಸ್ಯರನ್ನು ಹಿಂಬಾಲಿಸುತ್ತದೆ ಮತ್ತು ನಾವು ಕರ್ತನ ಸನ್ನಿಧಿಯಲ್ಲಿಯೇ ಯಾವಾಗಲೂ ಯೇಸುನಾಮದಲ್ಲಿ ವಾಸಿಸುತ್ತೇವೆ. ಆಮೆನ್.
ಆರ್ಥಿಕ ಪ್ರಗತಿ
ನನ್ನ ಕರ್ತನಾದ ಯೇಸು ಕ್ರಿಸ್ತನ ಕೃಪೆಯನ್ನು ನಾನು ತಿಳಿದಿದ್ದೇನೆ, ಆತನು ಐಶ್ವರ್ಯವಂತನ್ನಾಗಿದ್ದರೂ , ನನ್ನ ನಿಮಿತ್ತ ಬಡವನಾದನು, ಆತನ ಬಡತನದ ಮೂಲಕ ನಾನು ಮತ್ತು ನನ್ನ ಕುಟುಂಬ ಸದಸ್ಯರು ಆತನ ರಾಜ್ಯಕ್ಕಾಗಿ ಐಶ್ವರ್ಯವಂತರಾಗುತ್ತೇವೆ. (2 ಕೊರಿಂಥ. 8:9)
KSM ಚರ್ಚ್
ತಂದೆಯೇ, ಪಾಸ್ಟರ್ ಮೈಕೆಲ್ , ಅವರ ಕುಟುಂಬ ಸದಸ್ಯರು ಮತ್ತು ಅವರ ತಂಡದ ಎಲ್ಲಾ ಸದಸ್ಯರು ಉತ್ತಮ ಆರೋಗ್ಯದಿಂದ ಇರಬೇಕೆಂದು ನಾನು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ನಿಮ್ಮ ಶಾಂತಿಯು ಅವರನ್ನು ಮತ್ತು ಅವರ ಕುಟುಂಬ ಸದಸ್ಯರನ್ನು ಸುತ್ತುವರೆದಿರಲಿ. ಕರುಣಾ ಸದನ ಸೇವೆಯು ಪ್ರತಿಯೊಂದು ಕ್ಷೇತ್ರದಲ್ಲೂ ಶ್ರೇಷ್ಠತೆಯಿಂದ ಬೆಳೆಯಲಿ.
ರಾಷ್ಟ್ರ
ತಂದೆಯೇ, ನಮ್ಮ ರಾಷ್ಟ್ರದಾದ್ಯಂತ ನಿನ್ನ ನೀತಿ ಮತ್ತು ಶಾಂತಿ ಹರಿಯಲಿ. ನಮ್ಮ ರಾಷ್ಟ್ರದ ವಿರುದ್ಧ ಕಾರ್ಯಮಾಡುವ ಸಕಲ ಅಂಧಕಾರ ಮತ್ತು ವಿನಾಶದ ಶಕ್ತಿಗಳು ಯೇಸುನಾಮದಲ್ಲಿ ನಾಶವಾಗಲಿ. ನಮ್ಮ ರಾಷ್ಟ್ರದ ಪ್ರತಿಯೊಂದು ನಗರ ಮತ್ತು ರಾಜ್ಯದಲ್ಲಿ ಶಾಂತಿ ಮತ್ತು ಸಮೃದ್ಧಿಯು ಯೇಸುನಾಮದಲ್ಲಿ ಉಂಟಾಗಲಿ.
Join our WhatsApp Channel

Most Read
● ಬೀಜದಲ್ಲಿರುವ ಶಕ್ತಿ -3● ನಿಮ್ಮನ್ನು ನಡೆಸುತ್ತಿರುವವರು ಯಾರು?
● ದೈತ್ಯರ ಜನಾಂಗ
● ಶಾಂತಿಯು ನಿಮ್ಮನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ಅರಿತುಕೊಳ್ಳಿ.
● ಮಹಾತ್ತಾದ ಕಾರ್ಯಗಳು
● ನಿಮ್ಮ ಗತಿಯನ್ನು ಬದಲಾಯಿಸಿ
● ಕರ್ತನ ಆಲೋಚನೆಯನ್ನು ಕೇಳಬೇಕಾದ ಅಗತ್ಯತೆ
ಅನಿಸಿಕೆಗಳು