ಜ್ಞಾನವಂತರ ಜೊತೆಗೆ ನಡೆಯುವವನು ಜ್ಞಾನಿಯಾಗುವನು; ಆದರೆ ಮೂರ್ಖರ ಜೊತೆಗಾರನು ಸಂಕಟಪಡುವನು.
(ಜ್ಞಾನೋಕ್ತಿ 13:20)
ಜ್ಞಾನಿಗಳೊಂದಿಗೆ ನಡೆದು ಜ್ಞಾನಿಗಳಾಗಿರಿ : ಮೂರ್ಖರೊಂದಿಗೆ ಸಹವಾಸ ಮಾಡಿ ತೊಂದರೆಯಲ್ಲಿ ಸಿಲುಕಿಕೊಳ್ಳಿ. (ಜ್ಞಾನೋಕ್ತಿ 13:20)
ನಾವು ಮಾಡುವ ಸಹವಾಸವು ನಮ್ಮ ಚಾರಿತ್ರ್ಯ ಮತ್ತು ಕಾರ್ಯಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ದೇವರವಾಕ್ಯ ಸ್ಪಷ್ಟಪಡಿಸುತ್ತವೆ. ನಮ್ಮ ಜೀವನದಲ್ಲಿ ಯಾರ ಜೊತೆಯಲ್ಲಿ ಸಮಯ ಕಳೆಯುತ್ತೇವೋ ಅದು ನಮ್ಮ ಒಳ್ಳೆಯದಕ್ಕೋ ಅಥವಾ ಕೆಟ್ಟ ಸಮಯವೋ ಎಂದು ನಿರ್ಧರಿಸುತ್ತದೆ. ಕ್ರಿಸ್ತನಂತಹ ಗುಣವನ್ನು ಬೆಳೆಸಿಕೊಳ್ಳಲು, ನಾವು ಪ್ರಜ್ಞಾಪೂರ್ವಕವಾಗಿ ಜ್ಞಾನಿಗಳೊಂದಿಗೆ ನಡೆಯುವುದನ್ನು ಆರಿಸಿಕೊಳ್ಳಬೇಕು ಮತ್ತು ಮೂರ್ಖರ ಪ್ರಭಾವಗಳಿಂದ ದೂರವಿರಬೇಕು.
"ಪೇತ್ರ, ಯೋಹಾನರ ಧೈರ್ಯವನ್ನು ಅವರು ಕಂಡಾಗ, ಇವರು ವಿದ್ಯೆ ಕಲಿಯದ ಸಾಮಾನ್ಯ ಜನರೆಂದು ತಿಳಿದು ಬಹು ಆಶ್ಚರ್ಯಚಕಿತರಾಗಿ, ಇವರು ಯೇಸುವಿನೊಂದಿಗೆ ಇದ್ದವರು ಎಂಬುದನ್ನು ಗುರುತಿಸಿಕೊಂಡರು".(ಅ. ಕೃ 4:13)
ಯೋಹಾನ ಮತ್ತು ಪೇತ್ರರನ್ನು ನೋಡಿದ ಯಹೂದಿ ಸಭೆಯವರು ಆ ಕುಂಟ ಭಿಕ್ಷುಕನನ್ನು ಯಾವ ಶಕ್ತಿಯಿಂದ ಗುಣಪಡಿಸಿದ್ದರು ಎಂದು ಅವರನ್ನು ಪ್ರಶ್ನಿಸಿತು. ಆಗ ಪೇತ್ರನು ಒಬ್ಬ ಸಾಮಾನ್ಯ ಮೀನುಗಾರನಾಗಿದ್ದರೂ ಶಿಲುಬೆಯ ಮತ್ತು ಸುವಾರ್ತೆಯ ಕುರಿತು ಸಾರುತ್ತಾ ಧೈರ್ಯದಿಂದಲೂ ಮತ್ತು ವಿಶ್ವಾಸದಿಂದಲೂ ಮಾತನಾಡಿದನು.
ಇಲ್ಲಿ ಸಂದರ್ಭವನ್ನು ಪರಿಗಣಿಸಿ ನೋಡಿ. ಪೇತ್ರ ಮತ್ತು ಯೋಹಾನರು ದೇವಾಲಯದಲ್ಲಿ ಹುಟ್ಟು ಕುಂಟನಾಗಿದ್ದ ಭಿಕ್ಷುಕನನ್ನು ಗುಣಪಡಿಸಿದ್ದಾರೆ (ಅಪೊಸ್ತಲರ ಕೃತ್ಯಗಳು 3:1-10). ಅಲ್ಲಿ ಜನಸಮೂಹ ಒಟ್ಟುಗೂಡಿದಾಗ, ಪೇತ್ರನು ಸಾಮಾನ್ಯ ಮೀನುಗಾರನಾಗಿದ್ದರೂ, ಸುವಾರ್ತೆ ಸಂದೇಶವನ್ನು ಸಾರುತ್ತಾನೆ (ಅಪೊಸ್ತಲರ ಕೃತ್ಯಗಳು 3:11-26). ಅವರನ್ನು ಬಂಧಿಸಿ ಸೆರೆಮನೆಗೆ ಹಾಕಿದ ನಂತರ, ಪೇತ್ರನು ಧಾರ್ಮಿಕ ಮುಖಂಡರನ್ನು ಉದ್ದೇಶಿಸಿ ಸಹ ಧೈರ್ಯದಿಂದ ಮಾತನಾಡುತ್ತಾನೆ (ಅಪೊಸ್ತಲರ ಕೃತ್ಯಗಳು 4:1-12).
ಅವನು ಹೇಳಿದ ವಿಷಯಗಳ ಬಗ್ಗೆ ಯೋಚಿಸುವಾಗ, ಒಂದು ಪ್ರಮುಖ ಸಂಗತಿಯನ್ನು ನೆನಪಿಸಿಕೊಳ್ಳುವುದು ಸಹಾಯ ಮಾಡುತ್ತದೆ: ಶಿಷ್ಯರ ಧೈರ್ಯ ಮತ್ತು ಆತ್ಮವಿಶ್ವಾಸದ ಮೂಲಕ್ಕೆ ಕಾರಣವಾದದ್ದು ಅವರಲ್ಲಿ ಏನೂ ಇರಲಿಲ್ಲ , ಆದರೆ ಆ ಧೈರ್ಯವು ಬಂದದ್ದು ಅವರು ಯೇಸುವಿನೊಂದಿಗೆ ಕಳೆದ ಸಮಯದ ನೇರ ಪರಿಣಾಮವಾಗಿತ್ತು.
ಆತನೊಂದಿಗೆ ವಾಸಿಸುವ ಮೂಲಕ ಮತ್ತು ಆತನೊಂದಿಗೆ ಮಾತನಾಡುವ ಮೂಲಕ, ಅವರು ಆತನಂತೆಯೇ ಆದರು. ಮೂರು ವರ್ಷಗಳ ಕಾಲ, ಅವರು ಯೇಸುವಿನ ಪಾದಗಳ ಬಳಿ ಕುಳಿತು, ಪಟ್ಟಣದಿಂದ ಪಟ್ಟಣಕ್ಕೆ ಆತನನ್ನು ಹಿಂಬಾಲಿಸುತ್ತಾ ಆತನ ಬೋಧನೆಗಳನ್ನು ಕೇಳುತ್ತಿದ್ಸರು. ಈ ಸಮಯದಲ್ಲಿ, ಆತನು ಅವರಿಗೆ ತರಬೇತಿ ನೀಡಿದ್ದರಿಂದ ಅವರು ಕ್ರಮೇಣ ತಮ್ಮ ಆಲೋಚನೆಗಳು, ವರ್ತನೆಗಳು ಮತ್ತು ಕಾರ್ಯಗಳಲ್ಲಿ ಆತನಂತೆಯೇ ಆದರು. ಅವರು ಜ್ಞಾನಿಯೊಂದಿಗೆ ನಡೆದು ಸ್ವತಃ ಜ್ಞಾನಿಗಳೇ ಆದರು.
ನಾವು ಯೇಸುವಿನಂತೆ ಇರಲು ಬಯಸಿದರೆ, ನಾವು ಮೊದಲು ಯೇಸುವಿನೊಂದಿಗೆ ಇರಬೇಕು. ಇದರರ್ಥ ಪ್ರಾರ್ಥನೆಯಲ್ಲಿ ಸಮಯ ಕಳೆಯುವುದು, ದೇವರವಾಕ್ಯವನ್ನು ಓದುವುದು ಮತ್ತು ಇತರ ವಿಶ್ವಾಸಿಗಳೊಂದಿಗೆ ಸಹಭಾಗಿತ್ವದಲ್ಲಿ ತೊಡಗಿಸಿಕೊಳ್ಳುವುದು ಇಂಥವುಗಳೇ. ನಾವು ಉದ್ದೇಶಪೂರ್ವಕವಾಗಿ ಕ್ರಿಸ್ತನೊಂದಿಗೆ ನಮ್ಮ ಸಂಬಂಧವನ್ನು ಬೆಳೆಸಿಕೊಳ್ಳುತ್ತಾ , ಆತನ ಮಾರ್ಗದರ್ಶನ, ಜ್ಞಾನ ಮತ್ತು ಬಲವನ್ನು ಹುಡುಕಬೇಕು. ನಾವು ಧಿಡೀರ್ ಎಂದು ಕ್ರಿಸ್ತನ ಹಾಗೇ ಆಗುವುದಿಲ್ಲ.ಆ ನಮ್ಮ ರೂಪಾಂತರವು ಜೀವಮಾನದ ಪರ್ಯಂತರದ ಪ್ರಯಾಣವಾಗಿದ್ದು , ಪವಿತ್ರೀಕರಣದ ಪ್ರಕ್ರಿಯೆಯಾಗಿದ್ದು, ಅದರ ಮೂಲಕ ಪವಿತ್ರಾತ್ಮನು ನಮ್ಮಲ್ಲಿ ಕ್ರಿಸ್ತನ ಪ್ರತಿರೂಪಕ್ಕೆ ನಮ್ಮನ್ನು ಹೊಂದಿಕೊಳ್ಳುವಂತೆ ಮಾಡುತ್ತಾನೆ.
ಯೇಸು ಕ್ರಿಸ್ತನು ಯಾವ ಮನುಷ್ಯರ ಮೇಲೆ ಗಾಢವಾಗಿ ಪ್ರಭಾವ ಬೀರಿದ್ದಾನೆಂದು ಅವರ ಶತ್ರುಗಳು ಸಹ ನೋಡಬಲ್ಲರು. ನಿಮ್ಮ ಬಗ್ಗೆ ಅಂತಹ ಹೇಳಿಕೆಯನ್ನು ಹೇಳಬಹುದೇ? ನಾವು ಯೇಸುವಿನೊಂದಿಗೆ ಇದ್ದೇವೆ ಎಂದು ಜನರು ನಿಮ್ಮ ಮತ್ತು ನನ್ನ ಬಗ್ಗೆ ಹೇಳಬಹುದೇ?
Bible Reading: 2 Chronicles 13-16
ಪ್ರಾರ್ಥನೆಗಳು
ಪ್ರತಿಯೊಂದು ಪ್ರಾರ್ಥನಾ ವಿಷಯವನ್ನು ಕನಿಷ್ಠ 2 ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಪ್ರಾರ್ಥಿಸಬೇಕು.
ವೈಯಕ್ತಿಕ ಆತ್ಮೀಕ ಬೆಳವಣಿಗೆ
ನನ್ನ ಹೆಗಲಿನಿಂದ ಪ್ರತಿಯೊಂದು ಹೊರೆಯನ್ನು ಮತ್ತು ನನ್ನ ಕುತ್ತಿಗೆಯಿಂದ ಪ್ರತಿಯೊಂದು ನೊಗವನ್ನು ತೆಗೆದುಹಾಕಲಾಗುವುದು ನಿನ್ನ ಅಭಿಷೇಕದಿಂದಾಗಿ ನನ್ನ ನೊಗವು ಮುರಿಯಲ್ಪಡುವುದು.
ನಿನ್ನ ವಾಕ್ಯದ ಬೆಳಕು ನನ್ನನ್ನು ಮುನ್ನಡೆಸುವುದು (ಯೆಶಾಯ 10:27)
ಕುಟುಂಬದ ರಕ್ಷಣೆ
ನನ್ನ ಸಂತತಿಯು ಶಾಶ್ವತವಾಗಿರುತ್ತದೆ. ಕೆಟ್ಟ ಸಮಯದಲ್ಲಿಯೂ ನಾನು ನಾಚಿಕೆಪಡುವುದಿಲ್ಲ: ಕ್ಷಾಮದ ದಿನಗಳಲ್ಲಿಯೂ ನಾನು ಮತ್ತು ನನ್ನ ಕುಟುಂಬ ಸದಸ್ಯರು ಆತ್ಮೀಕವಾಗಿಯೂ ಮತ್ತು ಆರ್ಥಿಕವಾಗಿಯೂ ತೃಪ್ತರಾಗುತ್ತೇವೆ. (ಕೀರ್ತನೆ 37:18-19)
ಆರ್ಥಿಕ ಪ್ರಗತಿ
ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಮಹಿಮೆಯ ಐಶ್ವರ್ಯದ ಪ್ರಕಾರ ನನ್ನ ಎಲ್ಲಾ ಅಗತ್ಯಗಳನ್ನು ಪೂರೈಸುತ್ತಾನೆ. (ಫಿಲಿಪ್ಪಿ 4:19) ನನ್ನ ಮತ್ತು ನನ್ನ ಕುಟುಂಬ ಸದಸ್ಯರಿಗೆ ಯಾವ ಒಳ್ಳೆಯದಕ್ಕೂ ಯೇಸುನಾಮದಲ್ಲಿ ಕೊರತೆಯಾಗುವುದಿಲ್ಲ.
KSM ಚರ್ಚ್
ತಂದೆಯೇ, ನಿನ್ನ ವಾಕ್ಯವು ಹೇಳುತ್ತದೆ, ನಮ್ಮನ್ನು ಕಾಪಾಡಲು ಮತ್ತು ನಮ್ಮ ಮಾರ್ಗಗಳಲ್ಲಿ ನಮ್ಮನ್ನು ಕಾಯಲು ನೀನು ನಿನ್ನ ದೂತರಿಗೆ ಅಪ್ಪಣೆಕೊಡುವೆ ಎಂದು, ಆದರಿಂದ ಯೇಸುನಾಮದಲ್ಲಿ ಪಾಸ್ಟರ್ ಮೈಕೆಲ್, ಅವರ ಕುಟುಂಬ, ತಂಡದ ಸದಸ್ಯರು ಮತ್ತು ಕರುಣಾ ಸದನ ಸೇವೆಗೆ ಸಂಪರ್ಕ ಹೊಂದಿದ ಪ್ರತಿಯೊಬ್ಬ ವ್ಯಕ್ತಿಯ ಸುತ್ತಲೂ ನಿನ್ನ ಪವಿತ್ರ ದೇವದೂತರನ್ನು ಬಿಡುಗಡೆ ಮಾಡು. ಅವರ ವಿರುದ್ಧ ಕಾರ್ಯಮಾಡುವ ಪ್ರತಿಯೊಂದು ಅಂಧಕಾರದ ಶಕ್ತಿ ಗಳ ಕೆಲಸವನ್ನು ನಾಶಮಾಡು.
ರಾಷ್ಟ್ರ
ತಂದೆಯೇ, ನಿನ್ನ ಶಾಂತಿ ಮತ್ತು ನೀತಿಯು ನಮ್ಮ ರಾಷ್ಟ್ರವನ್ನು ತುಂಬಲಿ. ನಮ್ಮ ರಾಷ್ಟ್ರದ ವಿರುದ್ಧ ಕಾರ್ಯ ಮಾಡುವ ಪ್ರತಿಯೊಂದು ಅಂಧಕಾರದ ಮತ್ತು ವಿನಾಶದ ಎಲ್ಲಾ ಶಕ್ತಿಗಳು ಯೇಸುನಾಮದಲ್ಲಿ ನಾಶವಾಗಲಿ. ನಮ್ಮ ಕರ್ತನಾದ ಯೇಸು ಕ್ರಿಸ್ತನ ಸುವಾರ್ತೆಯು ಭಾರತದ ಪ್ರತಿಯೊಂದು ನಗರ ಮತ್ತು ರಾಜ್ಯದಲ್ಲಿ ಯೇಸುನಾಮದಲ್ಲಿ ಹರಡಲಿ.
Join our WhatsApp Channel

Most Read
● ಶತ್ರುವಿನ ಮಾರ್ಗ ರಹಸ್ಯವಾಗಿದೆ● ಯುದ್ಧಕ್ಕಾಗಿ ತರಬೇತಿ - II
● ಯಾರೂ ವಿನಾಯಿತಿ ಹೊಂದಿದವರಿಲ್ಲ.
● ದೇವರು ಹೇಗೆ ಒದಗಿಸುತ್ತಾನೆ #2
● ನೀವು ಪಾವತಿಸಬೇಕಾದ ಬೆಲೆ
● ನಿಮ್ಮ ಗತಿಯನ್ನು ಬದಲಾಯಿಸಿ
● ಪುರುಷರು ಏಕೆ ಪತನಗೊಳ್ಳುವರು -3
ಅನಿಸಿಕೆಗಳು