ಅನುದಿನದ ಮನ್ನಾ
2
0
104
ನಿಮ್ಮ ನಂಬಿಕೆಯ ಸಾಮರ್ಥ್ಯವನ್ನು ವಿಸ್ತರಿಸುವುದು ಹೇಗೆ?
Wednesday, 28th of May 2025
Categories :
ಗುಣ(character)
ಮಾರ್ಕ 9:23 ರಲ್ಲಿ, ಕರ್ತನಾದ ಯೇಸು, "...ನಂಬುವವನಿಗೆ ಎಲ್ಲವೂ ಸಾಧ್ಯ" ಎಂದು ಹೇಳಿದನು . ತಮ್ಮನ್ನು "ವಿಶ್ವಾಸಿಗಳು '' ಎಂದು ಹೇಳಿಕೊಳ್ಳುವ ವ್ಯಕ್ತಿಗಳನ್ನು ಸಾಮಾನ್ಯವಾಗಿ , ನಾವು ಮುಖಾಮುಖಿಯಾಗುತ್ತಿರುತ್ತೇವೆ. ಈ ರೀತಿ ತಾವೇ ಸ್ವತಃ ಹೇಳಿಕೊಳ್ಳುವಂತದ್ದು ಅಂತರ್ಗತವಾಗಿ ಯಾವುದೇ ರೀತಿ ತಪ್ಪಿಲ್ಲದಿದ್ದರೂ, ಈ ವ್ಯಕ್ತಿಗಳಲ್ಲಿ ಕೆಲವರು ಸತ್ಯವೇದದಲ್ಲಿ ಕಂಡುಬರುವ ಸತ್ಯಗಳು ಮತ್ತು ವಾಗ್ದಾನಗಳನ್ನು ಸ್ಪಷ್ಟವಾಗಿ ಅವರಿಗೆ ನೀಡಿದಾಗಲೂ ನಿರ್ಲಕ್ಷಿಸುವುದನ್ನು ಅಥವಾ ತಿರಸ್ಕರಿಸುವುದನ್ನು ನೋಡುವುದು ಬಹಳ ನಿರಾಶಾದಾಯಕವಾಗಿರುತ್ತದೆ.
ಈಗ ಅದರಲ್ಲಿರುವ ತೊಂದರೆ ಏನೆಂದರೆ, ದೇವರು ನಮಗಾಗಿ ಏನನ್ನಾದರೂ ಮಾಡಬಹುದು ಅಥವಾ ಮಾಡುತ್ತಾನೆ ಎಂದು ನಾವು ನಂಬದೇ (ಅದನ್ನು ಬೆಂಬಲಿಸಲು ಸತ್ಯವೇದದ ಸತ್ಯವಿದ್ದರೂ ಸಹ) ನಿರಾಕರಿಸಿದರೆ ಆ ಸ್ಥಳದಲ್ಲಿ ದೇವರಿಂದ ಏನನ್ನಾದರೂ ಪಡೆಯುವ ಸಾಧ್ಯತೆಯಿಂದ ನಾವು ನಮ್ಮನ್ನು ಹಿಂದೆಗೆಯುತ್ತಿದ್ದೇವೆ ಎಂದರ್ಥ . ನಾವು ಜೀವನದಲ್ಲಿ ಪಯಣಿಸುವಾಗ ನಮ್ಮಲ್ಲಿರುವ ನಂಬಿಕೆಯ ಕೊರತೆಯು ದೇವರು ನಮ್ಮ ಪರವಾಗಿ ಕಾರ್ಯನಿರ್ವಹಿಸುವುದನ್ನು ಮಿತಿಗೊಳಿಸುತ್ತದೆ.
ನಮ್ಮಲ್ಲಿ ಅನೇಕರು ದೇವರ ವಾಕ್ಯಕ್ಕೆ ಹೊಂದಿಕೆಯಾಗದ ನಂಬಿಕೆಗಳನ್ನು ಹೊಂದಿರುವುದು ಸಾಮಾನ್ಯವಾಗಿದೆ. ಆದ್ದರಿಂದ, ಈ ದಾರಿ ತಪ್ಪಿಸುವ ನಂಬಿಕೆಗಳನ್ನು ದೇವರ ವಾಕ್ಯದ ಸತ್ಯದೊಂದಿಗೆ ಅನ್ವಯಿಸಿಕೊಂಡು ನಾವು ನಿರಂತರವಾಗಿ ಕಾರ್ಯ ಮಾಡುವಂತದ್ದು ಬಹಳ ಮುಖ್ಯ. ಇದನ್ನು ಸಾಧಿಸಲು ಒಂದು ಮಾರ್ಗವೆಂದರೆ ನಿಯಮಿತವಾಗಿ ಆತನ ವಾಗ್ದಾನಗಳನ್ನು ಗಟ್ಟಿಯಾಗಿ ಅರಿಕೆ ಮಾಡುವಂತದ್ದು ಮತ್ತು ಅವುಗಳನ್ನು ನಮಗಾಗಿಯೇ ಎಂದು ಹೇಳಿಕೊಳ್ಳುವುದು.
ಆದಾಗ್ಯೂ, ಈ ವಾಗ್ದಾನಗಳನ್ನು ಹೇಳಿಕೊಳ್ಳುವಾಗ, ಅವು ಈಗಾಗಲೇ ನಮ್ಮ ಸ್ವಂತದ್ದು ಎಂಬಂತೆ ಅವುಗಳನ್ನು ಉಪಯೋಗಿಸಿಕೊಳ್ಳುವುದು ಸಹ ಅಷ್ಟೇ ಅತ್ಯಗತ್ಯ. ನಾವು ದೇವರ ವಾಗ್ದಾನಗಳ ಕುರಿತು ಬಹುಶಃ ಭವಿಷ್ಯದಲ್ಲಿ ಒಂದು ದಿನ ಮತ್ತು ಯಾವತ್ತೋ ಒಂದು ದಿನ ಅದು ನೆರವೇರುತ್ತದೆ ಎನ್ನುವಂತಹ ವಾಕ್ಯಗಳನ್ನು ಬಳಸಿ ಮಾತನಾಡುವಂತದ್ದು ದೊಡ್ಡ ಸಮಸ್ಯೆಯಾಗಿದೆ ಏಕೆಂದರೆ ನಂಬಿಕೆಯು ವರ್ತಮಾನ ಕಾಲದಲ್ಲಿ ಮಾತ್ರ ಕಾರ್ಯನಿರ್ವಹಿಸುವಂತದ್ದು.
ಉದಾಹರಣೆಗೆ, "ನಾನು ಗುಣಮುಖನಾಗಲಿದ್ದೇನೆ" ಎಂದು ಹೇಳುವ ಬದಲು, "ತಂದೆಯೇ, ನೀವು ಈಗಲೇ ನನ್ನ ದೇಹದಲ್ಲಿ ಕಾರ್ಯ ಮಾಡುತ್ತಿದ್ದೀರಿ, ಅದನ್ನು ಗುಣಪಡಿಸುತ್ತಿದ್ದೀರಿ, ಪುನಃಸ್ಥಾಪಿಸುತ್ತಿದ್ದೀರಿ ಮತ್ತು ಬಲಪಡಿಸುತ್ತಿದ್ದೀರಿ ಅದಕ್ಕಾಗಿ ಸ್ತೋತ್ರ . ಯೇಸುನಾಮದಲ್ಲಿ , ನಾನು ಆರೋಗ್ಯವಾಗಿದ್ದೇನೆ ಮತ್ತು ಸಂಪೂರ್ಣನಾಗಿದ್ದೇನೆ ಎಂದು ನಾನು ಘೋಷಿಸುತ್ತೇನೆ!" "ನನ್ನ ವ್ಯವಹಾರದಲ್ಲಿಯೂ ; ನನ್ನ ಕೆಲಸದಲ್ಲಿಯೂ ನಾನು ಉತ್ತಮವಾಗಿ ಕಾರ್ಯನಿರ್ವಹಿಸಲು ಆಶಿಸುತ್ತೇನೆ" ಎಂದು ಹೇಳುವ ಬದಲು, "ತಂದೆಯೇ, ನನ್ನ ಜೀವನದ ಮೇಲಿನ ನಿಮ್ಮ ಆಶೀರ್ವಾದವು ನನ್ನನ್ನು ಭಾಗ್ಯವಂತನ್ನಾಗಿ ಮಾಡುತ್ತದೆ ಮತ್ತು ಅದಕ್ಕೆ ನೀನು ಯಾವುದೇ ದುಃಖವನ್ನು ಸೇರಿಸುವುದಿಲ್ಲ. ಯೇಸುನಾಮದಲ್ಲಿ ನಾನು ಆಶೀರ್ವಾದಿಸಲ್ಪಟ್ಟ ವ್ಯಕ್ತಿ ." ಎಂದು ಹೇಳಿ.
ನಿಮ್ಮ ಜೀವನದ ಮೇಲೆ ದೇವರ ವಾಗ್ದಾನಗಳನ್ನು ಘೋಷಿಸಲು ಪ್ರಾರಂಭಿಸಿ. ಆಗ ನಿಮ್ಮ ಹೃದಯವು ಆ ವಾಗ್ದಾನಗಳೊಂದಿಗೆ ಸಂಪರ್ಕಗೊಂಡು ಅವುಗಳನ್ನು ಭೌತಿಕ ಸ್ಥಿತಿಯಲ್ಲಿ ಅಸ್ತಿತ್ವಕ್ಕೆ ತರುತ್ತದೆ. ಯೇಸು ನಿಮಗಾಗಿ ಮತ್ತು ನನಗಾಗಿ ಅದ್ಭುತವಾದ ಬಾಧ್ಯತೆಯನ್ನು ಹೊಂದಿದ್ದಾನೆ. ಹಾಗಾಗಿ ನಮಗೆ ಪ್ರತಿಯೊಂದು ವಾಗ್ದಾನ ಅನುಭವಿಸುವುದಕ್ಕೂ ಅನುಮತಿಇದೆ .
ನಮ್ಮ ದೇವರು ಮತ್ತು ನಮ್ಮ ಕರ್ತನಾದ ಯೇಸುವಿನ ಜ್ಞಾನದಲ್ಲಿ ನಿಮಗೆ ಕೃಪೆಯೂ ಮತ್ತು ಶಾಂತಿಯೂ ಹೆಚ್ಚಾಗಲಿ, ಏಕೆಂದರೆ ಆತನ ದೈವಿಕ ಶಕ್ತಿಯು ಮಹಿಮೆ ಮತ್ತು ಸದ್ಗುಣದಿಂದ ನಮ್ಮನ್ನು ಕರೆದಾತನ ಜ್ಞಾನದ ಮೂಲಕ ಜೀವನ ಮತ್ತು ದೈವಭಕ್ತಿಗೆ ಸಂಬಂಧಿಸಿದ ಎಲ್ಲವೂ ನಮಗೆ ಅನುಗ್ರಹಿಸಲ್ಪಟ್ಟಿದೆ . (2 ಪೇತ್ರ 1:2-3)
"ಆತನ ದೈವಿಕ ಶಕ್ತಿಯು ನಮಗೆ ಎಲ್ಲವನ್ನೂ ಅನುಗ್ರಹಿಸಿದಂತೆ " ಎಂಬ ವಾಕ್ಯವೃಂದಕ್ಕೆ ಗಮನ ಕೊಡಿ. ಈ ಭಾಗವು ಆತನು ಮುಂದೆ ನೀಡಬಹುದೆಂದು ಸೂಚಿಸುವುದಿಲ್ಲ; ಅದು ಆತನು ಈಗಾಗಲೇ ನೀಡಿದ್ದಾನೆಂದು ಆತ್ಮವಿಶ್ವಾಸದಿಂದ ಘೋಷಿಸುತ್ತದೆ. ಸಮೃದ್ಧಿ ಮತ್ತು ಆತ್ಮೀಕ ಬೆಳವಣಿಗೆಯ ಜೀವನವನ್ನು ನಡೆಸಲು ನಮಗೆ ಅಗತ್ಯವಿರುವ ಎಲ್ಲವನ್ನೂ ದೇವರು ನಮಗೆ ಈಗಾಗಲೇ ಒದಗಿಸಿದ್ದಾನೆ.
Bible Reading: 2 Chronicles 17-19
ಪ್ರಾರ್ಥನೆಗಳು
ತಂದೆಯಾದ ದೇವರೇ, ನಾನು ಕ್ರಿಸ್ತನ ಪ್ರೀತಿಯಲ್ಲಿ ಬೇರೂರಲು ಮತ್ತು ನೆಲೆಗೊಳ್ಳಲು ಯೇಸುನಾಮದಲ್ಲಿ ಅವಕಾಶ ಮಾಡಿಕೊಡಿ. ದೇವರ ಸರ್ವ ಸಂಪೂರ್ಣತೆಯಿಂದ ನಾನು ತುಂಬಲ್ಪಡಲಿ. ಆಮೆನ್.
Join our WhatsApp Channel

Most Read
● ಮರೆಯಾದ ಸ್ಥಳವನ್ನು ಆಶ್ರಯಿಸಿಕೊಳ್ಳುವುದು.● ಹಣಕಾಸಿನ ಅವ್ಯವಸ್ಥೆಯಿಂದ ಪಾರಾಗುವುದು ಹೇಗೆ?
● ದಿನ 40:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಹೋಲಿಕೆಯ ಬಲೆ
● ಕರ್ತನೇ, ನಾನು ಏನು ಮಾಡಬೇಕೆಂದು ನೀನು ಬಯಸುತ್ತೀ?
● ಕರ್ತನ ಬಳಿಗೆ ಹಿಂತಿರುಗಿ ಬನ್ನಿ
● ದೇವರಿಂದ ಒದಗಿದ ಕನಸು
ಅನಿಸಿಕೆಗಳು