english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ನಿಮಗೆ ಮಾರ್ಗದರ್ಶಕರು ಏಕೆ ಅವಶ್ಯ?
ಅನುದಿನದ ಮನ್ನಾ

ನಿಮಗೆ ಮಾರ್ಗದರ್ಶಕರು ಏಕೆ ಅವಶ್ಯ?

Tuesday, 17th of June 2025
1 1 125
Categories : ಮಾರ್ಗದರ್ಶಕ (Mentor)
ನಾನು ಕರ್ತನಾದ ಯೇಸು ಕ್ರಿಸ್ತನನ್ನು ನನ್ನ ವೈಯಕ್ತಿಕವಾಗಿ ನನ್ನ ಕರ್ತನು ಮತ್ತು ರಕ್ಷಕನಾಗಿ ಸ್ವೀಕರಿಸಿದ ನಂತರ, ನಾನು ಒಂದು ಆತ್ಮಭರಿತ ಸಭೆಗೆ ಹಾಜರಾಗಲು ಪ್ರಾರಂಭಿಸಿದೆ. ಸೇವೆ ಮುಗಿದ ನಂತರ, ಹುಡುಗರ ಒಂದು ಸಣ್ಣ ಗುಂಪು (ಅವರಲ್ಲಿ ಮೂವರು) ನನ್ನನ್ನು ಅವರೊಂದಿಗೆ ಚಹಾ ಕುಡಿಯಲು ಆಹ್ವಾನಿಸಿದರು. ಅವರು ಹತ್ತಿರದ ಹೋಟೆಲ್‌ನಲ್ಲಿ ಮಾಣಿಗಳಾಗಿ ಕೆಲಸ ಮಾಡುತ್ತಿದ್ದರು. ಚಹಾ ಸೇವಿಸುವಾಗ ನಾವು ಕರ್ತನ ಕುರಿತು ಮಾತನಾಡುತ್ತಿದ್ದೆವು, ದೇವರವಾಕ್ಯಗಳನ್ನು ಹಂಚಿಕೊಳ್ಳುತ್ತಿದ್ದೆವು, ಇತ್ಯಾದಿ ಮಾಡುತ್ತಿದ್ದೆವು. ಅಲ್ಲದೆ, ನಾನು ಪುಸ್ತಕಗಳನ್ನು ಓದಲು ಇಷ್ಟಪಡುತ್ತೇನೆ ಎಂದು ತಿಳಿದಾಗ ಅವರು ನನ್ನೊಂದಿಗೆ ಕೆಲವು ಕ್ರಿಶ್ಚಿಯನ್ ಪುಸ್ತಕಗಳನ್ನು ಹಂಚಿಕೊಳ್ಳುತ್ತಿದ್ದರು. ನಮ್ಮ ಕೂಡುವಿಕೆಯು ಹೆಚ್ಚು ಸಮಯ ಏನೂ ಇರುತ್ತಿರಲಿಲ್ಲ  (ಅಬ್ಬಬ್ಬಾ ಎಂದರೆ 45 ನಿಮಿಷಗಳಷ್ಟೇ ).

ಒಂದು ದಿನ, ನಾನು ಚರ್ಚ್‌ಗೆ ಹೋಗದಿದ್ದಾಗ, ಅವರೇ ನನ್ನ ನೆರೆಹೊರೆಯವರ ದೂರವಾಣಿಗೆ ಕರೆ ಮಾಡಿದರು. ಅದು ನನಗೆ ತುಂಬಾ ಹಿತಕರವಾದ ಅನುಭವ ಕೊಟ್ಟಿತು , ಆದ್ದರಿಂದ ನಾನು  ಅದನ್ನು  ಸ್ವೀಕರಿಸಿಕೊಂಡೆ. ದೇವರವಾಕ್ಯವು ಸ್ಪಷ್ಟವಾಗಿ ಹೇಳುವುದೇನೆಂದರೆ : ಕಬ್ಬಿಣವು ಕಬ್ಬಿಣವನ್ನು ಹರಿತಗೊಳಿಸಿದಂತೆ, ಒಬ್ಬ ಮಿತ್ರನು (ಮಾರ್ಗದರ್ಶಕ) ಮಿತ್ರನನ್ನು  ಹರಿತಗೊಳಿಸುತ್ತಾನೆ. (ಜ್ಞಾನೋಕ್ತಿ 27:17) ಎಂದು.

ಇಂದು ಚರ್ಚ್‌ನ ದುಃಖಕರ ವಿಷಯವೆಂದರೆ , ಜನರು, ಹಾಜರಾಗುತ್ತಾರೆ, ಕೂರುತ್ತಾರೆ  ಮುಗಿದ ನಂತರ ಎದ್ದು ಮನೆಗೆ  ಹೊರಡುತ್ತಾರೆ - ಯಾರನ್ನು ಸಂಧಿಸಲು ಬಯಸುವುದೂ ಇಲ್ಲ, ಯಾರಿಗೂ  ಅಧೀನರಾಗಲೂ ಬಯಸುವುದಿಲ್ಲ. ಆದರೆ ನೀವು ಅಧೀನರಾದರೆ ನೀವು ಯಾರನ್ನಾದಾರು ಸಂಧಿಸುವವರಾಗಿದ್ದರೆ ನಿಜವಾದ ಆತ್ಮೀಕ ಬೆಳವಣಿಗೆ ಹೊಂದುವುದನ್ನು ನೀವು ನೋಡುವವರಾಗುತ್ತೀರಿ; ನನ್ನ ಆರಂಭಿಕ ದಿನಗಳಲ್ಲಿಯೂ ಮತ್ತು  ಇಂದಿಗೂ ನಾನು ಇದನ್ನು ಮುಂದುವರಿಸಿದ್ದಕ್ಕಾಗಿ ನಾನು ದೇವರಿಗೆ ಧನ್ಯವಾದ ಹೇಳುತ್ತೇನೆ.

ಮದುವೆಗಳಲ್ಲಿ  ಆಗಾಗ್ಗೆ ಈ ಕೆಳಗಿನ ದೇವರ ವಾಕ್ಯಗಳನ್ನು ಬಳಸಲಾಗುತ್ತದೆ. ಆದರೆ ಈ ದೇವರವಾಕ್ಯಗಳ ಅನ್ವಯವು ಕೇವಲ ಮದುವೆಗೆ  ಮಾತ್ರ ಸೀಮಿತವಾಗಿರದೇ ನಮ್ಮ ಕ್ರಿಸ್ತೀಯ ಜೀವಿತದ ಮಾರ್ಗದರ್ಶನಕ್ಕೂ ನಾವು ಅದನ್ನು ಅನ್ವಯಿಸಿ ಕೊಳ್ಳಬಹುದು.

ಪ್ರಸಂಗಿ 4:9-10 ಒಬ್ಬರಿಗಿಂತ ಇಬ್ಬರು ಉತ್ತಮರು, ಏಕೆಂದರೆ ಇಬ್ಬರ ಶ್ರಮಕ್ಕೆ ಉತ್ತಮ ಪ್ರತಿಫಲವಿದೆ. ಏಕೆಂದರೆ ಒಬ್ಬನು ಬಿದ್ದರೆ, ಮತ್ತೊಬ್ಬನು ಸಂಗಾತಿಯನ್ನು ಮೇಲಕ್ಕೆತ್ತುವನು. ಆದರೆ ಒಬ್ಬನೇ ಇರುವಾಗ ಬಿದ್ದರೆ  ಒಬ್ಬಂಟಿಯಾಗಿರುವವನಿಗೆ ಅಯ್ಯೋ, ಎಂದು ಸಹಾಯ ಮಾಡಲು ಯಾರೂ ಇರುವುದಿಲ್ಲ.

ಆದ್ದರಿಂದ ಪ್ರತಿಯೊಬ್ಬ ಕ್ರೈಸ್ತನಿಗೂ ಆತ್ಮೀಕ ಮಾರ್ಗದರ್ಶಕನ ಅಗತ್ಯವಿದೆ ಎಂದು ನಾನು ನಂಬುತ್ತೇನೆ. ಏಕೆ? 

#1: ಇದು ಸತ್ಯವೇದಕ್ಕೆ ಅನುಗುಣವಾಗಿದೆ. 
ಮೋಶೆಯು ಯೆಹೋಶುವನಿಗೆ ಮಾರ್ಗದರ್ಶನ ನೀಡಿದನು. ಜೆತ್ರೋನನು ಮೋಶೆಗೆ ಮಾರ್ಗದರ್ಶನ ನೀಡಿದನು. ರೂತಳಿಗೆ ನವೋಮಿ ಜೊತೆಯಾಗಿ ಇದ್ದಳು. ಎಲೀಷನಿಗೆ ಎಲೀಯನಿದ್ದನು. ಯೇಸು ತನ್ನ ಶಿಷ್ಯರಿಗೆ ಮಾರ್ಗದರ್ಶನ ನೀಡಿದನು.  ತಿಮೋತಿಗೆ ಪೌಲ ಇದ್ದನು.ಹೀಗೆ  ಹಿರಿಯರು ಮುಂದಿನ ಪೀಳಿಗೆಗೆ ಕಲಿಸಬೇಕು ಮತ್ತು ಮಾರ್ಗದರ್ಶನ ನೀಡಬೇಕು ಎಂದು ಅಪೊಸ್ತಲ ಪೌಲನು ಸ್ವತಃ ನಮಗೆ ಹೇಳಿದನು (ತೀತ 2).

#2: ನಮಗೆಲ್ಲರಿಗೂ "ಕುರುಡು ಕಲೆ "ಗಳಿವೆ.
ವ್ಯಾಖ್ಯಾನದ ಪ್ರಕಾರ, "ಕುರುಡು ಕಲೆ" ಎಂಬುದು ನಮ್ಮಲ್ಲಿ ನಮಗೆ ಕಾಣದ ವಿಷಯ. ಆದ್ದರಿಂದ, ನಿಮಗೆ ಕುರುಡು ಕಲೆಗಳಿಲ್ಲ ಎಂದು ನೀವು ಹೇಳಿದರೆ, ನೀವು  ಅದನ್ನು ಹೊಂದಿದ್ದೀರಿ ಎಂದು ಒಪ್ಪಿಕೊಂಡಿದ್ದೀರಿ ಎಂಧರ್ಥ. ನಮ್ಮನ್ನು ನಾವು ಸಂಪೂರ್ಣವಾಗಿ ನೋಡಿ ಕೊಳ್ಳಲು ಬೇರೆಯವರ ಸಹಾಯ ನಮಗೆ  ಬೇಕು.

#3: ಜನರು ದೇವರು ನಮಗೆ ನೀಡಿದ ವರವಾಗಿದ್ದಾರೆ 
ಯಾರೋ ಒಬ್ಬರು ಒಮ್ಮೆ ಹೀಗೆ  ಹೇಳಿದ್ದಾರೆ , "ದೇವರು ನಮಗೆ ವರವನ್ನು ನೀಡುವಾಗ, ಆತನು ಅದನ್ನು ಯಾರಾದರೂ ಒಬ್ಬ ವ್ಯಕ್ತಿಯಲ್ಲಿ ಅದನ್ನು  ಸುತ್ತಿ ನಮಗೆ ನೀಡಿರುತ್ತಾನೆ." ಎಂದು.

ನಮ್ಮನ್ನು ಮಾರ್ಗದರ್ಶನ ಮಾಡಲು ಮತ್ತು ಪ್ರೋತ್ಸಾಹಿಸಲು ಯಾರೂ ನಮ್ಮ ಜೊತೆಯಲ್ಲಿ ನಡೆಯದೇ ಇರುವಾಗ  ನಾವು ಈ ವರವನ್ನು ಕಳೆದುಕೊಳ್ಳುತ್ತೇವೆ. ಇಂದಿನ ಕಾಲದಲ್ಲಿ ಇದು ಅತ್ಯಂತ ನಿರ್ಲಕ್ಷಿಸಲ್ಪಟ್ಟ ತತ್ವಗಳಲ್ಲಿ ಒಂದಾಗಿದೆ.ಆದರೆ ಇದರ  ಪ್ರಯೋಜನಗಳು ಅಮೂಲ್ಯವಾದವು ಮತ್ತು ಎಷ್ಟೊಂದು ಬಿರುಗಾಳಿಗಳನ್ನು ಹೊಂದಿರುವ ಈ  ಜೀವನದ ಸಮುದ್ರದಲ್ಲಿ ಜೀವಸೆಲೆಯನ್ನು ಅದು ನಮಗೆ ಒದಗಿಸುತ್ತವೆ. 

ಕರುಣಾ ಸದನದಲ್ಲಿ, ನಾವು J-12 ನಾಯಕರು  ಎಂದು ಕರೆಯಲ್ಪಡುವ ಒಂದು ತಂಡವನ್ನು  ಹೊಂದಿದ್ದೇವೆ, ಅವರು ಪಾಸ್ಟರ್  ಗೆ ತಮ್ಮ ಅಡಿಯಲ್ಲಿರುವ ಸದಸ್ಯರ  ವರದಿಯನ್ನು  ಮಾಡುತ್ತಾರೆ, ಅಂದರೆ ಅವರು ನನಗೆ ವರದಿ ಮಾಡುತ್ತಾರೆ.

ನೀವು J-12 ನಾಯಕನ ಅಡಿಯಲ್ಲಿದ್ದಾಗ, ಈ ವ್ಯಕ್ತಿಯು ನಿಮಗೆ ಮಾರ್ಗದರ್ಶಕರಾಗಿ ಮತ್ತು ಸಹಾಯಕರಾಗಿ ಕಾರ್ಯನಿರ್ವಹಿಸಿ ನಿಮ್ಮ  ಆತ್ಮೀಕ ಬೆಳವಣಿಗೆಗೆ ಸಹಾಯ ಮಾಡುತ್ತಾರೆ. ಅನೇಕರು ಇದಕ್ಕೆ ಸಾಕ್ಷಿಯಾಗಿದ್ದಾರೆ.

ನೀವು ಕರುಣಾ ಸದನದ ಭಾಗವಾಗಿದ್ದರೆ, ನೀವು ಯಾವುದಾದರೂ ನಾಯಕರ  ಅಡಿಯಲ್ಲಿರಬೇಕೆಂದು ನಾನು ಹೆಚ್ಚು ಶಿಫಾರಸು ಮಾಡುತ್ತೇನೆ. ನೀವು ನಾಯಕರ  ಅಡಿಯಲ್ಲಿರಲು ಬಯಸಿದರೆ, ನೀವು KSM ಕಚೇರಿಗೆ ಕರೆ ಮಾಡಬಹುದು. ಅಲ್ಲದೆ, ನೀವು ಬೇರೆ ಯಾವುದಾದರೂ ಚರ್ಚ್‌ನ ಭಾಗವಾಗಿದ್ದರೆ, ನಿಮಗಾಗಿ ಪ್ರಾರ್ಥಿಸಲು ಮತ್ತು ನೀವು ಅಧೀನರಾಗ ಬಹುದಾದ ಒಬ್ಬರನ್ನು ನಿಮಗಾಗಿ ಹುಡುಕಿಕೊಳುವಂತೆ ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ.

ಇವುಗಳ  ಪ್ರಯೋಜನಗಳು ಅಮೂಲ್ಯವಾದವು. ಸಂಬಂಧಪಟ್ಟವರಿಗೆ  ಮಾರ್ಗದರ್ಶನ ನೀಡುವುದು ಸುಲಭವಲ್ಲ ಮತ್ತು ಅವು ಏರಿಳಿತಗಳನ್ನು ಹೊಂದಿರಬಹುದು ಆದರೆ ದೇವರು ಇದೆಲ್ಲದರ ಮೂಲಕ ಕಾರ್ಯ ಮಾಡುತ್ತಿದ್ದಾನೆ ಎಂಬುದನ್ನು ನೆನಪಿಡಿ. (ರೋಮನ್ನರು 8:28 ಓದಿ)

 Bible Reading: Job 9-13
ಪ್ರಾರ್ಥನೆಗಳು
(ನಿಮಗೆ ಮಾರ್ಗದರ್ಶಕ ಇಲ್ಲದಿದ್ದರೆ ಇದನ್ನು ಪ್ರಾರ್ಥಿಸಿ): ತಂದೆಯೇ, ನನ್ನ ಜೀವನದಲ್ಲಿ ನಿಜವಾಗಿಯೂ ನಿಮ್ಮ ಪ್ರಸನ್ನತೆ ಮತ್ತು ಸತ್ಯಗಳನ್ನು ನಮಗೆ ಸುರಿಯಬಲ್ಲ ಮಾರ್ಗದರ್ಶಕನನ್ನು ಯೇಸುನಾಮದಲ್ಲಿ ನನಗೆ ಅನುಗ್ರಹಿಸು. 

(ನಿಮಗೆ ಮಾರ್ಗದರ್ಶಕ ಇದ್ದರೆ ಇದನ್ನು ಪ್ರಾರ್ಥಿಸಿ): 
ತಂದೆಯೇ, ನಾನು ನಿಮಗೆ ಸ್ತೋತ್ರ ಸಲ್ಲಿಸುತ್ತೇನೆ ………. ನಾನು ಅವನ/ಅವಳ ಮತ್ತು ಅವನ ಕುಟುಂಬದ ಮೇಲೆ ಯೇಸುನಾಮದಲ್ಲಿ ಆಶೀರ್ವಾದವನ್ನು ಘೋಷಿಸುತ್ತೇನೆ. ಆಮೆನ್.

 [ನಿಮ್ಮ ಮಾರ್ಗದರ್ಶಕರಿಗಾಗಿ ಯಾವಾಗಲೂ ನಿಯಮಿತವಾಗಿ ಪ್ರಾರ್ಥಿಸಿ]


Join our WhatsApp Channel


Most Read
● ಭೂಮಿಗೆ ಉಪ್ಪಾಗಿದ್ದೀರಿ
● ಈ ದಿನಗಳಲ್ಲಿ ಇದನ್ನು ಮಾಡಿರ
● ಉಪದ್ರವ ಕಾಲದ ಒಂದು ನೋಟ
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಪ್ರಾರ್ಥನಾ ಜೀವಿತ ಜೀವಿಸಲು ಕೆಲವು ಪ್ರಾಯೋಗಿಕ ಸಲಹೆಗಳು.
● ದಿನ 18:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 01:40 ದಿನಗಳ ಉಪವಾಸ ಹಾಗೂ ಪ್ರಾರ್ಥನೆ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್