हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಪವಿತ್ರಾತ್ಮನೊಂದಿಗೆ ಸಂವೇದನಶೀಲರಾಗಿ ವರ್ತಿಸುವುದು
Daily Manna

ಪವಿತ್ರಾತ್ಮನೊಂದಿಗೆ ಸಂವೇದನಶೀಲರಾಗಿ ವರ್ತಿಸುವುದು

Wednesday, 23rd of July 2025
1 0 54
ನಾನು ಶಾಸ್ತ್ರದಲ್ಲಿ ಹಲವು ಬಾರಿ, ಪವಿತ್ರಾತ್ಮನನ್ನು ಪಾರಿವಾಳಕ್ಕೆ ಹೋಲಿಸಲಾಗಿರುವುದನ್ನು. (ಗಮನಿಸಿ, ನಾನು ಹೋಲಿಸಲಾಗಿದೆ ಎಂದು ಹೇಳಿದೆ) ನೋಡಿದ್ದೇನೆ. ಇದಕ್ಕೆ ಕಾರಣವೆಂದರೆ ಪಾರಿವಾಳವು ಬಹಳ ಸೂಕ್ಷ್ಮವಾದ ಪಕ್ಷಿ. 

ನಾವು ಪವಿತ್ರಾತ್ಮನೊಂದಿಗೆ ನಿಕಟವಾಗಿ ನಡೆಯಬೇಕಾದರೆ, ನಾವು ಆತನ ಸೂಕ್ಷ್ಮ ಸ್ವಭಾವವನ್ನು ಅರ್ಥಮಾಡಿಕೊಳ್ಳಬೇಕು. 

"ಆಗ ಅವಳು - ಸಂಸೋನನೇ, ಫಿಲಿಷ್ಟಿಯರು ಬಂದಿದ್ದಾರೆಂದು ಕೂಗಲು ಅವನು ಎಚ್ಚತ್ತು - ಮುಂಚಿನಂತೆ ಈಗಲೂ ಕೊಸರಿಕೊಂಡು ಹೋಗುವೆನು ಅಂದುಕೊಂಡನು; ಆದರೆ ಯೆಹೋವನು ತನ್ನನ್ನು ಬಿಟ್ಟುಹೋಗಿದ್ದಾನೆಂಬದು ಅವನಿಗೆ ತಿಳಿಯಲಿಲ್ಲ". (ನ್ಯಾಯಾಸ್ಥಾಪಕರು 16:20) 

ಇದು ಧರ್ಮಗ್ರಂಥದ ಅತ್ಯಂತ ಹೃದಯವಿದ್ರಾವಕ ಭಾಗಗಳಲ್ಲಿ ಒಂದಾಗಿದ್ದು ಅಲ್ಲಿ ದೇವರಿಗಾಗಿ ಬಹಳ ಬಲವಾಗಿ ಬಳಸಲ್ಪಟ್ಟ ವ್ಯಕ್ತಿಯು ದೇವರ ಸಾನಿಧ್ಯವನ್ನು ಲಘುವಾಗಿ ತೆಗೆದುಕೊಂಡ್ಡದ್ದರಿಂದ  ಅವನು ಕರ್ತನಿಗೆ ಮೆಚ್ಚಿಕೆಯಾಗದ ಆತ ಇಷ್ಟಪಡದ ಸಂಗತಿಗಳ ಕುರಿತು ನಿಜವಾಗಿಯೂ ಕಾಳಜಿ ವಹಿಸಲಿಲ್ಲ. ಸಂಸೋನನ ಅತ್ಯಂತ ದೊಡ್ಡ ತಪ್ಪು ಎಂದರೆ, ಪವಿತ್ರಾತ್ಮನ ಸೂಕ್ಷ್ಮ ಸ್ವಭಾವವನ್ನು ಅರ್ಥಮಾಡಿಕೊಳ್ಳುವ ಕುರಿತು ಅವನು ಎಂದಿಗೂ ಕಾಳಜಿ ವಹಿಸಲಿಲ್ಲ. ಯೇಸುನಾಮದಲ್ಲಿ, ಇದು ಎಂದಿಗೂ ನಮ್ಮ ಪಾಲು ಆಗುವುದಿಲ್ಲ ಎಂದು ನಾನು ಪ್ರವಾದನೆ ನುಡಿಯುತ್ತೇನೆ. 

ಪವಿತ್ರಾತ್ಮನಿಗೆ ಸುಳ್ಳು ಹೇಳಬಹುದು ಎಂಬುದು ನಿಮಗೆ ತಿಳಿದಿದೆಯೇ? ಅನನೀಯ ಮತ್ತು ಸಫೀರಳು ಪವಿತ್ರಾತ್ಮನಿಗೆ ಸುಳ್ಳು ಹೇಳಿದರು ಎಂದು ಸತ್ಯವೇದ ದಾಖಲಿಸುತ್ತದೆ.

"ಆಗ ಪೇತ್ರನು - ಅನನೀಯಾ, ಸೈತಾನನು ನಿನ್ನ ಹೃದಯದಲ್ಲಿ ತುಂಬಿಕೊಂಡದ್ದೇನು? ನೀನು ಯಾಕೆ ಆ ಹೊಲದ ಕ್ರಯದಲ್ಲಿ ಕೆಲವನ್ನು ಬಚ್ಚಿಟ್ಟುಕೊಂಡು ಪವಿತ್ರಾತ್ಮನನ್ನು ವಂಚಿಸಬೇಕೆಂದಿದ್ದೀ?"( ಅಪೊಸ್ತಲರ ಕೃತ್ಯಗಳು 5:3 NLT) 

ನೀವು ಒಬ್ಬ ವ್ಯಕ್ತಿಗೆ ಮಾತ್ರ ಸುಳ್ಳು ಹೇಳಬಹುದೇ ಹೊರತು ಒಂದು ಶಕ್ತಿಗೆ ಅಲ್ಲ. 

ಅನನೀಯ ಮತ್ತು ಸಫೀರರ ಕಥೆಯು ಕ್ರೈಸ್ತರು ಸಹ ದಿಟ್ಟ, ಸ್ಪಷ್ಟ ಪಾಪಕ್ಕೆ ಆಕರ್ಷಿತರಾಗಬಹುದು ಎಂಬ ದುರಂತ ಸತ್ಯವನ್ನು ಪ್ರದರ್ಶಿಸಿತು. ಈ ರೀತಿಯಲ್ಲಿ ಸುಳ್ಳು ಹೇಳುವ ಬಯಕೆಯಿಂದ (ಅಪೊಸ್ತಲರ ಕೃತ್ಯಗಳು 5:3) ಮತ್ತು "ಕರ್ತನ ಆತ್ಮನನ್ನು ಪರೀಕ್ಷಿಸುವ" (ವಾಕ್ಯ 9) ಸಂಗತಿಗಳನ್ನು ಅವರ ಹೃದಯಗಳಲ್ಲಿ ತುಂಬಿದ್ದವನು ಸೈತಾನನೇ.

ಪವಿತ್ರಾತ್ಮನನ್ನು ವಿರೋಧಿಸಬಹುದು.

 ಪವಿತ್ರಾತ್ಮನನ್ನು ತಿರಸ್ಕರಿಸುವ ಮೂಲಕ ಅವರು ಆತನಿಗೆ ಅವಿಧೇಯರಾಗುತ್ತಿದ್ದಾರೆ ಎಂದು ಸ್ತೆಪನನು ಸಭಾಮಂದಿರದವರಿಗೆ(ಯಹೂದಿ ಕೌನ್ಸಿಲ್) ಗೆ ಹೇಳಿದನು.

“ಚಂಡಿಗಳೇ, ಮನಶ್ಶುದ್ಧಿಯೂ ಕರ್ಣಶುದ್ಧಿಯೂ ಇಲ್ಲದವರೇ, ನಿಮ್ಮ ಪಿತೃಗಳು ಹೇಗೋ ಹಾಗೆಯೇ ನೀವೂ ಯಾವಾಗಲೂ ಪವಿತ್ರಾತ್ಮನನ್ನು ಎದುರಿಸುವವರಾಗಿದ್ದೀರಿ. (ಅ. ಕೃ 7:51)

ಪವಿತ್ರಾತ್ಮನನ್ನು ದೂಷಿಸಬಹುದು.
ಪವಿತ್ರಾತ್ಮನನ್ನು ದೂಷಿಸಬಹುದು ಎಂದು ಯೇಸು ಬೋದಿಸಿದನು: 

"ಆದ್ದರಿಂದ ನಾನು ನಿಮಗೆ ಹೇಳುತ್ತೇನೆ, ಪ್ರತಿಯೊಂದು ಪಾಪ ಮತ್ತು ದೂಷಣೆ (ಪ್ರತಿಯೊಂದು ಕೆಟ್ಟ, ನಿಂದನೀಯ, ಹಾನಿಕರ ಮಾತು ಅಥವಾ ಪವಿತ್ರ ವಿಷಯಗಳ ವಿರುದ್ಧ ಅವಮಾನ)ಮಾಡುವಂತದ್ದು ಮನುಷ್ಯರಿಗೆ ಕ್ಷಮಿಸಲ್ಪಡುತ್ತದೆ, ಆದರೆ [ಪವಿತ್ರ] ಆತ್ಮನ ವಿರುದ್ಧದ ದೂಷಣೆಯು ಎಂದಿಗೂ ಕ್ಷಮಿಸಲ್ಪಡುವುದಿಲ್ಲ ಮತ್ತು ಕ್ಷಮಿಸಲ್ಪಡುವುದಿಲ್ಲ.

ಮತ್ತು ಮನುಷ್ಯಕುಮಾರನ ವಿರುದ್ಧ ಮಾತನಾಡುವವನು ಕ್ಷಮಿಸಲ್ಪಡುವನು, ಆದರೆ ಪವಿತ್ರಾತ್ಮನಿಗೆ ವಿರುದ್ಧವಾಗಿ ಮಾತನಾಡುವವನು ಈ ಲೋಕದಲ್ಲಿಯೂ ಯುಗದಲ್ಲಿಯೂ ಬರಲಿರುವ ಲೋಕದಲ್ಲಿಯೂ ಸಹ ಕ್ಷಮಿಸಲ್ಪಡುವುದಿಲ್ಲ (ಮತ್ತಾಯ 12:31-32 ವರ್ಧಿಸಲ್ಪಟ್ಟಿದೆ)

ಪವಿತ್ರಾತ್ಮನು ಯಾವಾಗಲೂ  ತನ್ನ ಸೂಕ್ಷ್ಮ ಮತ್ತು ಸೌಮ್ಯ ಸ್ವಭಾವದಿಂದಾಗಿ ನಿಮ್ಮ ಪಕ್ಕದಲ್ಲಿದ್ದಾನೆ, ಆದರೆ ಆತನು ಎಂದಿಗೂ ತನ್ನ ಚಿತ್ತವನ್ನು ನಿಮ್ಮ ಮೇಲೆ ಒತ್ತಾಯಿಸುವುದಿಲ್ಲ.ಆದರಿಂದ ನೀವು ಮಾಡುವ ಎಲ್ಲದಕ್ಕೂ ಆತನನ್ನು ಆಹ್ವಾನಿಸಬೇಕು. ತನ್ನ ಕೆಲಸವನ್ನು ಏಕಾಂಗಿಯಾಗಿ ಮಾಡಲು ಆತನಿಗೆ ಮುಕ್ತ ಮಾರ್ಗವಿರಬೇಕು. 

ಹಲವು ವರ್ಷಗಳ ಹಿಂದೆ, ಫೋರ್ಡ್ ಮೋಟಾರ್ ಕಂಪನಿಯ ಪ್ರಸಿದ್ಧ ಸಂಸ್ಥಾಪಕ ಹೆನ್ರಿ ಫೋರ್ಡ್ ಹೆದ್ದಾರಿಯಲ್ಲಿ ಚಾಲನೆ ಮಾಡುತ್ತಿದ್ದಾಗ, ಒಂದು ಕಾರು ರಸ್ತೆಯಿಂದ ಹೊರನಿಂತಿರುವುದನ್ನು ಮತ್ತು ಅದರ ಚಾಲಕ ಅದನ್ನು ದುರಸ್ತಿ ಮಾಡಲು ಪ್ರಯತ್ನಿಸುತ್ತಿರುವುದನ್ನು ಅವರು ಗಮನಿಸಿದರು. ಹೆನ್ರಿ ಫೋರ್ಡ್ ತನ್ನ ಕಾರಿನ ಮೂಲಕ ಅದನ್ನು ಎಳೆದು ಚಾಲಕನಿಗೆ ಸಹಾಯ ಮಾಡಬಹುದೇ ಎಂದು ಕೇಳಿದನು. 

ಅದಕ್ಕೆ ಆ ಚಾಲಕ ಕೋಪದಿಂದ, "ಮುದುಕ, ನಾನು ಮಾಡಲು ಸಾಧ್ಯವಾಗದ ಯಾವುದೂ ಇಲ್ಲ. ನಿನ್ನ ದಾರಿ ನೀನು ನೋಡಿಕೋ; ಇದನ್ನು ನಾನೇ ನಿಭಾಯಿಸುತ್ತೇನೆ" ಎಂದು ಹೇಳಿದನು.

 ಬಹಳ ಮೃದುವಾಗಿ, ಹೆನ್ರಿ ಫೋರ್ಡ್ ತನ್ನ ಕಾರನ್ನು ಹತ್ತಿ ಹಿಂತಿರುಗಿ ಹೊರಟುಹೋದನು. ರಿಪೇರಿ ಅಗತ್ಯವಿರುವ ವ್ಯಕ್ತಿಗೆ ತಾನು ಕಾರಿನ ತಯಾರಕನನ್ನೇ ತಿರಸ್ಕರಿಸಿದ್ದೇನೆ ಎಂದು ಅರಿವಾಗಲಿಲ್ಲ! ಖಂಡಿತವಾಗಿಯೂ, ತಯಾರಕನು ಅದನ್ನು ದುರಸ್ತಿ ಮಾಡಬಹುದಾಗಿತ್ತು.

 ಕ್ರೈಸ್ತರಾದ ನಾವು ಸಹ ಪವಿತ್ರಾತ್ಮನು ನಮ್ಮೊಂದಿಗೆ ಏನನ್ನು (ಅಥವಾ ಯಾವಾಗ) ಮಾತನಾಡುತ್ತಿದ್ದಾನೆ ಎಂಬುದನ್ನು ಗುರುತಿಸುವುದಿಲ್ಲವಾದ್ದರಿಂದ ಅನೇಕ ಅವಕಾಶಗಳು ಕಳೆದುಹೋಗುತ್ತವೆ. ಸರಳವಾಗಿ ಹೇಳುವುದಾದರೆ, ನಾವು ಆತನ ಧ್ವನಿ ಮತ್ತು ಉಪಸ್ಥಿತಿಗೆ ಸಾಕಷ್ಟು ಸಂವೇದನಾಶೀಲರಾಗಿರುವುದಿಲ್ಲ. 

Bible Reading: Ecclesiastes 11-12 ; Song of Solomon 1-4 
Confession
ತಂದೆಯಾದ ದೇವರೇ, ಯೇಸುವಿನ ಹೆಸರಿನಲ್ಲಿ ಇಂದು ನನ್ನ ಮೇಲೆ ನೂತನ ಅಗ್ನಿ ಬೀಳಲಿ. ನನ್ನ ಕರ್ತನೇ ಮತ್ತು ನನ್ನ ದೇವರೇ, ಯೇಸುವಿನ ಹೆಸರಿನಲ್ಲಿ ಪವಿತ್ರಾತ್ಮನಿಂದ ನನಗೆ ದೀಕ್ಷಾಸ್ನಾನ ಮಾಡಿಸು.

Join our WhatsApp Channel


Most Read
● ನೀವು ನಂಬಿಕೆದ್ರೋಹವನ್ನು ಅನುಭವಿಸಿದ್ದೀರಾ?
●  ದಿನ 24:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನಿಮ್ಮ ಮನಸ್ಸನ್ನು ಶಿಸ್ತುಗೊಳಿಸಿ
● ಅಸಾಮಾನ್ಯ ಆತ್ಮಗಳು
● ದಿನ 16:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ನೀವು ದೇವರಿಂದ ನೇಮಿಸಲ್ಪಡುವ ಮುಂದಿನ ಬಿಡುಗಡೆ ನಾಯಕರು ನೀವಾಗಬಹುದು
● ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿಕೊಳ್ಳುವುದು ಹೇಗೆ-2
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login