हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ದೇವರು ತಾಯಂದಿರನ್ನು ವಿಶೇಷವಾಗಿ ಇರಿಸಿದ್ದಾನೆ
Daily Manna

ದೇವರು ತಾಯಂದಿರನ್ನು ವಿಶೇಷವಾಗಿ ಇರಿಸಿದ್ದಾನೆ

Sunday, 11th of May 2025
1 0 48
"ದೇವರು ಎಲ್ಲೆಡೆ ಇರಲು ಸಾಧ್ಯವಿಲ್ಲ, ಆದ್ದರಿಂದ ಆತನು ತಾಯಂದಿರನ್ನು ಸೃಷ್ಟಿಸಿದನು." ಈ ಹೇಳಿಕೆಯು  ದೈವಶಾಸ್ತ್ರಕ್ಕೆ  ನಿಖರವಾಗಿಲ್ಲದಿದ್ದರೂ, ಈ ಹಳೆಯ ಯಹೂದಿ ಉಲ್ಲೇಖವು ನಮ್ಮ ಜೀವನದಲ್ಲಿ ತಾಯಂದಿರು ವಹಿಸುವ ಮಹತ್ವದ ಪಾತ್ರವನ್ನು ಸೂಕ್ತವಾಗಿ ವಿವರಿಸುತ್ತದೆ.

ದೇವರು ತನ್ನ ಜನರಾದ ಇಸ್ರೇಲ್‌ಗಾಗಿ ತನ್ನ ಪ್ರೀತಿಯನ್ನು ವಿವರಿಸುವಾಗ, ಅವನು ತನ್ನ ಪ್ರೀತಿಯನ್ನು ವಿವರಿಸಲು ತಾಯಿಯ ಪ್ರೀತಿಯ ರೂಪಕವನ್ನು ಬಳಸುತ್ತಾನೆ. ಇದು ನಿಜವಾಗಿಯೂ ಅದ್ಭುತವೆಂದು ನಾನು ಭಾವಿಸುತ್ತೇನೆ. 

"ಹೆತ್ತ  ತಾಯಿಯು ತನ್ನ ಮಗುವನ್ನು ಸಂತೈಸುವಂತೆ ,  ನಾನು ನಿಮ್ಮನ್ನು ಸಂತೈಸುತ್ತೇನೆ"(ಯೆಶಾಯ 66:13) 

ಅಪೊಸ್ತಲ ಪೌಲನು ಥೆಸಲೋನಿಕದಲ್ಲಿರುವ ಸಭೆಯನ್ನು ಅವನು ಎಷ್ಟು  ಪ್ರೀತಿಸುತ್ತಾನೆಂದು ತೋರಿಸಲು ಬಯಸಿದಾಗ, ಅವನು ತನ್ನ ಪ್ರೀತಿಯನ್ನು ತಾಯಿಯ ಪ್ರೀತಿಗೆ ಹೋಲಿಸಿ ಹೇಳಿದನು. 

"ತಾಯಿಯು ತನ್ನ ಮಕ್ಕಳನ್ನು ಪೋಷಿಸುತ್ತಾಳೋ ಎಂಬಂತೆ ನಾವು ನಿಮ್ಮ ಮಧ್ಯದಲ್ಲಿ ವಾತ್ಸಲ್ಯದಿಂದ ನಡೆದುಕೊಂಡಿದ್ದೆವು." (1 ಥೆಸಲೋನಿಕ 2:7 ) 

ಒಬ್ಬ ದೈವಭಕ್ತಳಾದ  ತಾಯಿಯ ನಂಬಿಕೆಯು ತನ್ನ ಮುಂದಿನ ಪೀಳಿಗೆಯ ಮೇಲೆ ಪರಿಣಾಮ ಬೀರುವ ಪರಂಪರೆಯನ್ನೇ ಹುಟ್ಟು ಹಾಕಬಹುದು. ಆಕೆಯು ಮೊದಲು ಕರ್ತನಲ್ಲಿ ಮತ್ತು ಆತನ ವಾಕ್ಯದಲ್ಲಿ ತನ್ನ ನಂಬಿಕೆಯನ್ನಿಟ್ಟು  ನಂತರ ತನ್ನ ಮಕ್ಕಳಲ್ಲಿ ಅದೇ ಮೌಲ್ಯಗಳನ್ನು ತುಂಬುತ್ತಾಳೆ. ಪ್ರಾರ್ಥಿಸುವ ತಾಯಿಯ ಕಾರಣದಿಂದಾಗಿಯೇ ನಾವು ಇಂದು ಈ ಸ್ಥಾನದಲ್ಲಿ  ನಿಂತಿದ್ದೇವೆ ಎಂದು ನಮ್ಮಲ್ಲಿ ಬಹುತೇಕರು ಒಪ್ಪುತ್ತೇವೆ ಎಂದು ನನಗೆ ಖಚಿತವಾಗಿ ತಿಳಿದದೆ.

ನೀವು ಒಬ್ಬ ತಾಯಿಯಾಗಿದ್ದರೆ ಮತ್ತು ನಿಮ್ಮ ಜೀವನ ಮತ್ತು ಪ್ರಾರ್ಥನೆಗಳು ನಿಮ್ಮ ಮಕ್ಕಳು ಮತ್ತು ಕುಟುಂಬದ ಮೇಲೆ ನಿಜವಾಗಿಯೂ ಪರಿಣಾಮ ಬೀರಿವೆಯೇ ಎಂದು ಆಶ್ಚರ್ಯ ಪಡುತ್ತಿದ್ದರೆ, ನಾನು ನಿಮಗೆ ಭರವಸೆ ನೀಡುತ್ತೇನೆ. ನಿಮ್ಮ ಈ ಒಳ್ಳೆಯ ಕೆಲಸವನ್ನು ಮುಂದುವರಿಸಿ. ನೀವು ಶೀಘ್ರದಲ್ಲೇ ಅದರ  ಫಲವನ್ನು ನೋಡುತ್ತೀರಿ. ಭರವಸೆ ಕಳೆದುಕೊಳ್ಳಬೇಡಿ. ನೆನಪಿಡಿ, ದೇವರು ನಂಬಿಗಸ್ತನಾಗಿದ್ದಾನೆ . 

"ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು." (ಗಲಾತ್ಯ 6:9) 

ಇಂದು, ಮೇ 11 ಈ ವರ್ಷದ ವಿಶೇಷ ದಿನ,ಅದು  ತಾಯಂದಿರ ದಿನ . ನೀವು ಎಷ್ಟೇ ಕಾರ್ಯನಿರತರಾಗಿದ್ದರೂ ಸರಿಯೇ ನಿಮ್ಮ ತಾಯಿಗೆ ಧನ್ಯವಾದ ಹೇಳಲು ದಯವಿಟ್ಟು ಸಮಯ ತೆಗೆದುಕೊಳ್ಳಿ. ಯಾವುದೇ ತಾಯಿ ಪರಿಪೂರ್ಣಳಲ್ಲ ಆದರೆ ತಾಯಿಯಾಗುವುದು ಸುಲಭವಲ್ಲ. ಹೆಚ್ಚಿನ ತಾಯಂದಿರಂತೆ ಆಕೆ ನಿಮಗೆ ತಿಳಿದಿರದಷ್ಟು ತ್ಯಾಗ ಮಾಡಿರುತ್ತಾಳೆ.
ಅವರಿಗಾಗಿ ಏಕೆ ಉಪವಾಸ ಮಾಡಿ ಪ್ರಾರ್ಥಿಸಬಾರದು? 

ಮತ್ತು ಎಲ್ಲಾ ತಾಯಂದಿರಿಗೆ, ನಾನು ಹೇಳುವುದೇನೆಂದರೆ. ನೀವು ದೇವರಿಗೂ  ಮತ್ತು ನಮಗೂ  ವಿಶೇಷವಾದವರು. ನೀವು ತಲೆಮಾರುಗಳ ನಡುವೆ ಸೇತುವೆ ನಿರ್ಮಿಸುವವರು. ನೀವು ಮಾಡುವ ಎಲ್ಲದಕ್ಕೂ ಧನ್ಯವಾದಗಳು. ಕರ್ತನು ನಿಮ್ಮನ್ನು ಗೌರವಿಸಿ  ಪ್ರತಿಫಲ ನೀಡುವವನಾಗಿದ್ದಾನೆ. (ರೂತ 2:12)

Here is something related to Mother’s Day. Happy Mother’s Day to all mother’s

"That kiss is how the mom and pup recognize each other" pic.twitter.com/Mmq8Pr01ME

— National Geographic (@NatGeo) May 4, 2021

"That kiss is how the mom and pup recognize each other" pic.twitter.com/Mmq8Pr01ME

— National Geographic (@NatGeo) May 4, 2021
Bible Reading: 2 Kings 19-20
Prayer
ಪ್ರೀತಿಯುಳ್ಳ ತಂದೆಯೇ, ನನಗೆ  ನೀನು ಅಮೂಲ್ಯ ಉಡುಗೊರೆಯಾಗಿ ಕೊಟ್ಟತಾಯಿಗಾಗಿ  ನಾನು ನಿಮಗೆ ಸ್ತೋತ್ರ ಸಲ್ಲಿಸುತ್ತೇನೆ. ದಯವಿಟ್ಟು ಆಕೆಗೆ ಉತ್ತಮ ಆರೋಗ್ಯ ಮತ್ತು ಮನಸ್ಸಿನ ಶಾಂತಿಯನ್ನು ಅನುಗ್ರಹಿಸು. ಆಕೆಯನ್ನು ಗೌರವಿಸಲು ಮತ್ತು ನಿನ್ನ ಹೆಸರಿಗೆ ಮಹಿಮೆ ತರಲು ನನಗೆ ಯೇಸುನಾಮದಲ್ಲಿ ಸಹಾಯ ಮಾಡು.


Join our WhatsApp Channel


Most Read
● ಕರ್ತನ ಆಲೋಚನೆಯನ್ನು ಕೇಳಬೇಕಾದ ಅಗತ್ಯತೆ
● ದಿನ 27:40 ದಿನಗಳ ಉಪವಾಸ ಪ್ರಾರ್ಥನೆ
● ಕೊಡುವ ಕೃಪೆ -2
● ದೈವೀಕ ಅನುಕ್ರಮ -2
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
● ನಿಮ್ಮ ಸಂಪರ್ಕವನ್ನು ಕಳೆದುಕೊಳ್ಳಬೇಡಿರಿ
● ನೀವೊಂದು ಉದ್ದೇಶಕ್ಕಾಗಿ ಹುಟ್ಟಿದ್ದೀರಿ.
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login