हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಆತನ ಬಲದ ಉದ್ದೇಶ.
Daily Manna

ಆತನ ಬಲದ ಉದ್ದೇಶ.

Friday, 1st of March 2024
3 2 372
Categories : ಶರಣಾಗತಿ (Surrender)
ಇಂದಿನ ದಿನಮಾನಗಳಲ್ಲಿ ಬಲಶಾಲಿಗಳು ಬಲಹೀನರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ, ಐಶ್ವರ್ಯವಂತರು ಬಡವರ ಮೇಲೆ ಆಳ್ವಿಕೆ ಮಾಡುತ್ತಾರೆ..ಪಟ್ಟಿಯೂ ಹೀಗೆ ಬೆಳೆಯುತ್ತಾ ಹೋಗುತ್ತದೆ.

ಆದಾಗಿಯೂ ದೇವರ ವ್ಯವಸ್ಥೆಯಲ್ಲಿ ಬಲದ ಮತ್ತು ಶಕ್ತಿಯ ಆಳ್ವಿಕೆಯ ನಿಯಮವು ಲೋಕದ ವ್ಯವಸ್ಥೆಗೆ ತದ್ವಿರುದ್ಧವಾಗಿದೆ

ಬಲ ಎನ್ನುವಂತದ್ದು ನಮ್ಮನ್ನು ಎಲ್ಲರೂ ನೋಡಲಿ ಎಂದು ಇತರರನ್ನು ಆಕರ್ಷಿಸುವುದಕ್ಕಾಗಿ ಇರುವಂತದ್ದಲ್ಲ ಅದು ನಾವು ನಮ್ಮ ಸುತ್ತಲಿನ ಜನರಿಗೆ ಉಪ್ಪಂತೆಯೂ ಬೆಳಕಿನಂತೆಯೂ ಉಪಯುಕ್ತವಾಗುವಂತೆ ಕೊಡಲ್ಪಟ್ಟಿದೆ. ಆತನ ಬಲವೆಂಬದು ನಾವು ದೇವರಿಂದ ಹೊಂದಿದ ಆಸ್ತಿಯಾಗಿದ್ದು ಅಗತ್ಯವಿರುವವರ ಮೇಲೆ ದಬ್ಬಾಳಿಕೆ ಮಾಡದೆ ಅಗತ್ಯವಿರುವವರನ್ನು ಅದಕ್ಕಾಗಿ ದುರ್ಬಳಕೆ ಮಾಡದೇ, ಅಗತ್ಯವಿರುವವರ ಮೇಲೆ ದೇವರ ಪ್ರಭಾವ ಬೀರುವಂತೆ ಅವರಿಗೆ ಸಹಾಯ ಮಾಡಲಿಕ್ಕೆಂದೇ ಕೊಡಲ್ಪಟ್ಟಿದೆ.

 ರೋಮ 15:1-2ರಲ್ಲಿ ಹೀಗೆ ಓದುತ್ತೇವೆ "ದೃಢವಾದ ನಂಬಿಕೆಯುಳ್ಳ ನಾವು ನಮ್ಮ ಸುಖವನ್ನು ನೋಡಿಕೊಳ್ಳದೆ ದೃಢವಿಲ್ಲದವರ ಅನುಮಾನಗಳನ್ನು ಸಹಿಸಿಕೊಳ್ಳಬೇಕು. [2] ನಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಹಿತವನ್ನೂ ಭಕ್ತಿವೃದ್ಧಿಯನ್ನೂ ಅಪೇಕ್ಷಿಸುವವನಾಗಿ ಅವನ ಸುಖವನ್ನು ನೋಡಿಕೊಳ್ಳಲಿ."

ಕೀಲಿಕೈ #1
ನಾವು ದೇವರ ಮುಂದೆ ನಮ್ಮನ್ನು ತಗ್ಗಿಸಿಕೊಂಡವರಾಗಿ ಆತನು ನಮಗೆ ಏನೆಲ್ಲಾ ಅನುಗ್ರಹಿಸಿದ್ದಾನೋ, ಅವೆಲ್ಲವನ್ನೂ ವಿವೇಕಯುತವಾಗಿ ಆತರ ಮಹಿಮೆಗಾಗಿ ಬಳಸುವುದಾದರೆ ದೇವರು ನಮ್ಮನ್ನು ನಂಬಿ ಇನ್ನೂ ಹೆಚ್ಚಾಗಿ ಅನುಗ್ರಹಿಸುವನು. 'ದೇವರ ಬಳಿಗೆ ಎಂದಿಗೂ ನಿಮ್ಮ ಬಲದಲ್ಲಿ ಬರಬೇಡಿರಿ ನಿಮ್ಮ ಬಲಕ್ಕಾಗಿ ಆತನ ಬಳಿಗೆ ಬನ್ನಿರಿ'

‭‭"ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾದವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗುವನು; ಸ್ವಲ್ಪವಾದದ್ದರಲ್ಲಿ ಅನ್ಯಾಯಗಾರನಾದವನು ಬಹಳವಾದದ್ದರಲ್ಲಿಯೂ ಅನ್ಯಾಯಗಾರನಾಗುವನು."(ಲೂಕ‬ ‭16:10‬).

 ತಮ್ಮೆಲ್ಲ ಕೊರತೆಗಳಿಗಾಗಿ ಆತನ ಮೇಲೆಯೇ ತಾವು ಆಧಾರಗೊಂದಿದ್ದೇವೆ ಎಂಬುದನ್ನು ಒಪ್ಪಿಕೊಳ್ಳುವಂತಹ ಜನರ ಉದಾಹರಣೆಗಳೇ ಸತ್ಯವೇದದ ತುಂಬೆಲ್ಲಾ ಇವೆ.ಅವರು ದೇವರೇ ತಮ್ಮ ಬಲದ ಮೂಲವೆಂದು ನೆನೆದು ಬಂದಾಗಲೆಲ್ಲಾ ಅವರು ದೇವರ ಮಹಿಮೆಯನ್ನು ಹೊಂದಿಕೊಂಡು ಎಲ್ಲಾ ಕಾರ್ಯಗಳು ಅವರಿಗೆ ಸುಖಮಯವಾಗಿ ಸಾಗಿದ್ದು ಉಂಟು.

ಅಪೋಸ್ತಲನಾದ ಪೌಲನು ಇದಕ್ಕೆ ಒಂದು ದೊಡ್ಡ ಉದಾಹರಣೆ ಅವನು ಸೈತಾನನ ದೂತನಿಂದ ಬಾಧಿಸಲ್ಪಟ್ಟಾಗ (ಶರೀರದಲ್ಲಿ ಹೊಕ್ಕ ಮುಳ್ಳು ಎಂದು ಕರೆಯಲ್ಪಟ್ಟಿದೆ), ಅವನು ದೇವರ ಸಹಾಯಕ್ಕಾಗಿ ಮೊರೆ ಇಟ್ಟನು ಆಗ ಕರ್ತನು ಅವನಿಗೆ ಸ್ಪಂದಿಸಿ...
"ಅದಕ್ಕಾತನು - ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ಬಲವು ಪೂರ್ಣಸಾಧಕವಾಗುತ್ತದೆ ಎಂದು ನನಗೆ ಹೇಳಿದ್ದಾನೆ. ಹೀಗಿರಲಾಗಿ ಕ್ರಿಸ್ತನ ಬಲವು ನನ್ನಲ್ಲಿ ನೆಲಸಿಕೊಂಡಿರಬೇಕೆಂದು ನನಗುಂಟಾಗುವ ನಿರ್ಬಲಾವಸ್ಥೆಗಳ ವಿಷಯದಲ್ಲಿಯೇ ಬಹುಸಂತೋಷವಾಗಿ ಹೆಚ್ಚಳಪಡುವೆನು."(2 ಕೊರಿಂಥದವರಿಗೆ‬ ‭12:9‬)

ಹಾಗಾಗಿ ಇಂದು ಮತ್ತು ಪ್ರತಿದಿನವೂ ಆತನ ಬಲದಿಂದಲೂ ಶಕ್ತಿಯಿಂದಲೂ ನಿಮ್ಮನ್ನು ತುಂಬಿಸುವಂತೆ ನೀವು ಬೇಡಿಕೊಳ್ಳಿರಿ. ಕಾರ್ಯಗಳು ಸಫಲವಾಗುವಾಗ ಯಾವಾಗಲೂ ಇದು ನಮ್ಮ ಬಲಹೀನತೆಯಲ್ಲಿ ಆತನ ಬಲವು ಮಾಡುತ್ತಿರುವ ಕಾರ್ಯವೆಂಬುದನ್ನು ಒಪ್ಪಿಕೊಳ್ಳಿ. ಆತನಿಗೆ ಮಹಿಮೆ ಸಲ್ಲಿಸುವುದನ್ನು ಮಾತ್ರ ಮರೆಯಬೇಡಿರಿ
Prayer
ತಂದೆಯೇ, ನಿನ್ನ ಕೃಪೆಯೇ ನನಗೆ ಸಾಕು ನನ್ನ ಬಲಹೀನತೆಯಲ್ಲಿಯೇ ನಿನ್ನ ಬಲವು ಪೂರ್ಣ ಸಾಧಕವಾಗಲಿ.

Join our WhatsApp Channel


Most Read
● ಮೂರ್ಖತನದಿಂದ ನಂಬಿಕೆಯನ್ನು ಪ್ರತ್ಯೇಕಿಸುವುದು
● ದಿನ 11:40 ದಿನಗಳ ಉಪವಾಸ ಪ್ರಾರ್ಥನೆ.
● ನಿರುತ್ಸಾಹ ಪಡಿಸುವ ಬಾಣಗಳನ್ನು ಜಯಿಸುವುದು-1
● ಕರ್ತನಾದ ಯೇಸುವಿನ ಮುಖಾಂತರ ಕೃಪೆ
● ನಿಮ್ಮ ಬಿಡುಗಡೆಯನ್ನು ಕಾಪಾಡಿಕೊಳ್ಳುವುದು ಹೇಗೆ
● ನಂಬಿಕೆ- ನಿರೀಕ್ಷೆ -ಪ್ರೀತಿ
● ನಂಬಿಕೆ ಎಂದರೇನು ?
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login