ಆಸ್ಯಸೀಮೆಯಲ್ಲಿರುವ ಏಳು ಸಭೆಗಳಿಗೆ ಯೋಹಾನನು ಬರೆಯುವದೇನಂದರೆ - ವರ್ತಮಾನ ಭೂತ ಭವಿಷ್ಯತ್ಕಾಲಗಳಲ್ಲಿರುವಾತನಿಂದ (ಪ್ರಕಟನೆ 1:4)
"ಆತನ ಸಿಂಹಾಸನದ ಮುಂದೆ ಇರುವ ಏಳು ಆತ್ಮಗಳು" ಎಂಬ ವಿಚಿತ್ರ ವಾಕ್ಯವನ್ನು ಗಮನಿಸಿ. ಇರುವುದು ಒಂದೇ ಆತ್ಮ- ಅದು ಪವಿತ್ರಾತ್ಮ.
ಏಳು ಎಂಬುದು ಸತ್ಯವೇದದ ಸಂಕೇತಗಳಲ್ಲಿ ಯಾವಾಗಲೂ ಸಂಪೂರ್ಣತೆ ಅಥವಾ ಪರಿಪೂರ್ಣತೆಯನ್ನು ಪ್ರತಿನಿಧಿಸುವ ಸಂಖ್ಯೆಯಾಗಿದೆ. ಹೀಗಾಗಿ, 'ಏಳು' ಎನ್ನುವ ಸಂಖ್ಯೆಯು ಪವಿತ್ರಾತ್ಮನ ಶಕ್ತಿಯ ಪೂರ್ಣತೆಯನ್ನೂ ಮತ್ತು ಕ್ರೈಸ್ತರು ಮಾಡಬೇಕಾದ ವಿವಿಧ ಚಟುವಟಿಕೆಗಳು ಅಥವಾ ಸೇವೆಗಳನ್ನು ಸೂಚಿಸುತ್ತದೆ.
"ಯೋಸೇಫನಿಗೆ ಅವನ ತಂದೆಯಾದ ಯಾಕೋಬನು ಬಣ್ಣ ಬಣ್ಣದ ನಿಲುವಂಗಿಯನ್ನು ನೀಡಿದ್ದನು".ಎಂದು ಸತ್ಯವೇದ ಹೇಳುತ್ತದೆ. (ಆದಿಕಾಂಡ 37:3). ಈ ನಿಲುವಂಗಿಯು ಪವಿತ್ರಾತ್ಮನ ನಿಲುವಂಗಿಯ ಸಂಕೇತವಾಗಿತ್ತು ಎಂಬುದನ್ನು ಸತ್ಯವೇದದ ವಿದ್ವಾಂಸರು ಒಪ್ಪುತ್ತಾರೆ. ಯೋಸೇಫನು ಹಳೆಯ ಒಡಂಬಡಿಕೆಯಲ್ಲಿ ಕ್ರಿಸ್ತನ ಒಂದು ಮಾದರಿಯಾಗಿದ್ದನು. ಈಗ ಇಲ್ಲಿ ಕರ್ತನಾದ ಯೇಸು ಅನೇಕ ಬಣ್ಣಗಳ ನಿಲುವಂಗಿಯನ್ನು ಧರಿಸಿದ್ದು, ಅದು ತನ್ನ ಪರಲೋಕದ ತಂದೆಯಿಂದ ಅವನಿಗೆ ನೀಡಲಾದ ಪವಿತ್ರಾತ್ಮನ ನಿಲುವಂಗಿಯಾಗಿದೆ.
ಈಗ ಪ್ರವಾದಿಯಾದ ಯೆಶಾಯನು ಯೆಶಾಯ 11:2 ರಲ್ಲಿ ಕ್ರಿಸ್ತನ ಬಗ್ಗೆ ಪ್ರವಾದನಾತ್ಮಕವಾಗಿ ಮಾತನಾಡುತ್ತಾ ಪವಿತ್ರಾತ್ಮನ ಏಳು ವಿಭಿನ್ನ ಸೇವೆಗಳ ಕುರಿತು ಸ್ಪಷ್ಟವಾಗಿ ಹೇಳುತ್ತಾನೆ:
ಆ ಅಂಕುರದ( ಆತನ) ಮೇಲೆ ಜ್ಞಾನ ವಿವೇಕದಾಯಕ ಆತ್ಮ, ಆಲೋಚನಾ ಪರಾಕ್ರಮಗಳನ್ನು ಹುಟ್ಟಿಸುವ ಆತ್ಮ, ತಿಳಿವಳಿಕೆಯನ್ನೂ ಮತ್ತು ಯೆಹೋವನ ಭಯವನ್ನೂ ಉಂಟುಮಾಡುವ ಆತ್ಮ, ಅಂತು ಯೆಹೋವನ ಆತ್ಮವೇ ನೆಲೆಗೊಂಡಿರುವುದು. (ಯೆಶಾಯ 11:2)
1. ಕರ್ತನ ಆತ್ಮ
2. ವಿವೇಕದ ಆತ್ಮ
3. ತಿಳುವಳಿಕೆಯ ಆತ್ಮ
4. ಆಲೋಚನೆಯ ಆತ್ಮ
5. ಬಳಪರಾಕ್ರಮದ ಆತ್ಮ
6. ಜ್ಞಾನದ ಆತ್ಮ
7. ಕರ್ತನ ಭಯದ ಆತ್ಮ
ಈ"ದೇವರ ಏಳು ಆತ್ಮಗಳು" ಪವಿತ್ರಾತ್ಮನ ಏಳು 'ಗುಣಲಕ್ಷಣಗಳು'. ಇವು ಆತ್ಮನ ಪರಿಪೂರ್ಣತೆಯನ್ನು ಸಹ ಸೂಚಿಸುತ್ತವೆ. ಈ ಆತ್ಮನ ಸಂಪೂರ್ಣತೆಯು ಕರ್ತನಾದ ಯೇಸುವಿನ ಮೇಲೆ ನಿಂತಿದೆ. ಒಂದು ಪ್ರಿಸ್ಮ್ ಬೆಳಕನ್ನು ರೂಪಿಸುವ ಏಳು ವಿಭಿನ್ನ ಬಣ್ಣಗಳನ್ನು ಪ್ರತಿಬಿಂಬಿಸುವಂತೆಯೇ, ನಮ್ಮ ಕರ್ತನು ಆತ್ಮನ ಎಲ್ಲಾ ವೈವಿಧ್ಯಮಯ ಆದರೆ ಏಕೀಕೃತ ಕಾರ್ಯಾಚರಣೆಗಳನ್ನು ವ್ಯಕ್ತಪಡಿಸಿದ್ದಾನೆ.
ನಾನು ಈ ದೇಶದಾದ್ಯಂತ ಮತ್ತು ಪ್ರಪಂಚದ ಕೆಲವು ಭಾಗಗಳಿಗೆ ಹೋದಲ್ಲೆಲ್ಲಾ. ಒಂದೇ ಪವಿತ್ರಾತ್ಮನು ವಿಭಿನ್ನ ಜನರಿಗೆ ವಿಭಿನ್ನ ರೀತಿಯಲ್ಲಿ ಸೇವೆ ಮಾಡುವುದನ್ನು ನಾನು ನೋಡುತ್ತೇನೆ. ಕೆಲವರಿಗೆ, ಆತನು ಬಲಪರಾಕ್ರಮದಿಂದ ಸೇವೆ ಮಾಡಿ - ಅವರು ಗುಣಪಡಿಸುತ್ತಾನೆ,ಪುನಃ ಸ್ಥಾಪಿಸುತ್ತಾನೆ. ಇತ್ಯಾದಿ. ಕೆಲವರಿಗೆ, ಆತನು ವಿವೇಕವನ್ನೂ, ಕೆಲವು ತಿಳುವಳಿಕೆಯನ್ನು ನೀಡುತ್ತಾನೆ. ನೀವು "ದೇವರ ಏಳು ಆತ್ಮಗಳ" 'ಸಂಪೂರ್ಣತೆಯನ್ನು' ಪಡೆಯಲು ಬಯಸಿದರೆ, ನೀವು ಮಾಡಬೇಕಾಗಿರುವುದು ಒಂದೇ ಆತನಲ್ಲಿ ಬೇಡಿಕೊಳ್ಳುವಂತದ್ದು. (ಲೂಕ 11:13 ಓದಿ)
Bible Reading: Jeremiah 19-22
Confession
ಕರ್ತನ ಆತ್ಮವು ನನ್ನ ಮೇಲೆ ನೆಲೆಗೊಂಡಿದೆ, ಜ್ಞಾನ ಮತ್ತು ತಿಳುವಳಿಕೆಯ ಆತ್ಮ, ಆಲೋಚನೆಯ ಮತ್ತು ಬಲಪರಾಕ್ರಮದ ಆತ್ಮ, ಜ್ಞಾನ ಮತ್ತು ಕರ್ತನ ಭಯದ ಆತ್ಮವು ಯೇಸುನಾಮದಲ್ಲಿ ನನ್ನಲ್ಲಿದೆ.
ಆ ಕರ್ತನ ಭಯದಲ್ಲಿ ನನಗೆ ಸಂತೋಷವಿರುವುದರಿಂದ ನಾನು ನೋಡುವುದರ ಮೂಲಕ ನಿರ್ಧರಿಸುವುದಿಲ್ಲ ಅಥವಾ ನನ್ನ ಕಿವಿಯಿಂದ ಕೇಳುವುದರ ಮೂಲಕ ನಿರ್ಣಯಿಸುವುದಿಲ್ಲ (ಯೆಶಾಯ 11:2-3)
Join our WhatsApp Channel

Most Read
● ಸಭೆಯಲ್ಲಿ ಐಕ್ಯತೆಯನ್ನು ಕಾಪಾಡಿಕೊಳ್ಳುವುದು● ಕರ್ತನಾದ ಯೇಸುವಿನ ಮುಖಾಂತರ ಕೃಪೆ
● ಸಮರುವಿಕೆಯ ಕಾಲ- 3
● ದುರಾತ್ಮಗಳ ಪ್ರವೇಶವನ್ನು ಮುಚ್ಚುವ ಅಂಶಗಳು- I
● ಬಲವಾದ ಮೂರುಹುರಿಯ ಹಗ್ಗ
● ಹಣಕಾಸಿನ ಅವ್ಯವಸ್ಥೆಯಿಂದ ಪಾರಾಗುವುದು ಹೇಗೆ?
● ದೇವರ 7 ಆತ್ಮಗಳು: ತಿಳುವಳಿಕೆಯ ಆತ್ಮ
Comments