हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ನೀವು ಯೇಸುವನ್ನು ಹೇಗೆ ದೃಷ್ಟಿಸುವಿರಿ?
Daily Manna

ನೀವು ಯೇಸುವನ್ನು ಹೇಗೆ ದೃಷ್ಟಿಸುವಿರಿ?

Friday, 9th of February 2024
2 2 588
Categories : ದೇವರವಾಕ್ಯ ( Word of God )
ಯೇಸುವನ್ನೇ ದೃಷ್ಟಿಸುವಂತದ್ದು  ಕ್ರೈಸ್ತ ನಂಬಿಕೆಯ ಮೂಲಭೂತ ನಿಯಮವಾಗಿದ್ದು, ಕರ್ತನ ಹಾಗೂ ಆತನ ವಾಕ್ಯದ ಮೇಲೆಯೇ ನಮ್ಮ ಆಲೋಚನೆಯನ್ನೂ, ಲಕ್ಷ್ಯವನ್ನೂ  ಹೃದಯವನ್ನೂ ಇಡಬೇಕೆಂದೇ ನಾವು ಆಹ್ವಾನಿಸಲ್ಪಟ್ಟವರಾಗಿದ್ದೇವೆ. ಈ ಒಂದು ಸತ್ಯವನ್ನು ನಾವು ಅರಿತುಕೊಂಡರೆ ಅದು ನಮ್ಮ ಆತ್ಮಿಕ ಪ್ರಯಾಣವನ್ನು ರೂಪಾಂತರಪಡಿಸಿ ನಾವು ಆತನನ್ನೇ ನಿಜವಾಗಿ ನಂಬುತ್ತಾ ಜೀವಿಸುವ ಜೀವಿತಕ್ಕೆ ನಮ್ಮನ್ನು ನಡೆಸುತ್ತದೆ.

ಯೇಸುವನ್ನೇ ದೃಷ್ಟಿಸುವುದು ಎಂಬುದರ ಅರ್ಥವೇನು?

ಯೇಸುವನ್ನೇ ದೃಷ್ಟಿಸುವುದು ಎಂದರೆ ನಮ್ಮ ದೃಷ್ಟಿಯನ್ನು ಆತನು ಏನಾಗಿದ್ದಾನೋ, ಅಂದರೆ ಆತನನ್ನು ಪ್ರತಿಬಿಂಬಿಸುವ ದೇವರ ವಾಕ್ಯಕ್ಕೆ ಒಡಂಬಟ್ಟು ನಡೆಯುವುದು ಎಂದರ್ಥ. ಯೋಹಾನ 1:1 "ಆದಿಯಲ್ಲಿ ವಾಕ್ಯವಿತ್ತು; ಆ ವಾಕ್ಯವು ದೇವರ ಬಳಿಯಲ್ಲಿತ್ತು; ಆ ವಾಕ್ಯವು ದೇವರಾಗಿತ್ತು." ಎಂದು ನಮಗೆ ಹೇಳುತ್ತದೆ. ಈ ವಾಕ್ಯವು ದೇವರ ವಾಕ್ಯ ಮತ್ತು ಕರ್ತನಾದ ಯೇಸುವಿನ ನಡುವಿನ ಐಕ್ಯತೆಯನ್ನು ಎತ್ತಿ ಹೇಳುತ್ತದೆ. ಕನ್ನಡಿಯು ನಮ್ಮ ಬಾಹ್ಯ ತೋರಿಕೆಯನ್ನು ತೋರಿಸುವ ಪ್ರಕಾರವೇ ದೇವರ ವಾಕ್ಯವು ನಮ್ಮ ಆತ್ಮಿಕ ಮನುಷ್ಯನ ಸ್ಥಿತಿ-ಗತಿಯನ್ನು ಪ್ರಕಟಿಸುತ್ತದೆ. (ಯಾಕೋಬ 1:23-24.  ನಾವು ದೇವರ ವಾಕ್ಯವನ್ನು ಅಧ್ಯಯನಿಸುವಾಗ ಕೇವಲ ಪಠ್ಯವನ್ನು ಮಾತ್ರ ನಾವು  ಓದುತ್ತಾ ಹೋಗುವುದಿಲ್ಲ. ಬದಲಾಗಿ ನಮ್ಮನ್ನು ನಾವು ಯೇಸುಕ್ರಿಸ್ತನೊಂದಿಗೆ ತೊಡಗಿಸಿಕೊಂಡು  ಆತನ ಕಣ್ಣಿನಲ್ಲಿ ನಮ್ಮನ್ನೇ ನಾವು ನೋಡಿಕೊಳ್ಳುವವರಾಗಿದ್ದೇವೆ.

ದೇವರ ವಾಕ್ಯವನ್ನು ಪ್ರತಿಬಿಂಬಿಸುವಂತದ್ದು.

ದೇವರ ವಾಕ್ಯದಲ್ಲಿ ನಮ್ಮನ್ನು ನಾವು ಹೇಗೆ  ತೊಡಗಿಸಿಕೊಳ್ಳಬೇಕು ಎಂಬುದಕ್ಕೆ  ಯಾಕೋಬ 1:25 ನಮಗೆ ಮೂರು ಹಂತದ ಮಾರ್ಗದರ್ಶನವನ್ನು ನೀಡುತ್ತದೆ.

1.ಓದಿರಿ: "ಸರ್ವೋತ್ತಮವಾದ ಧರ್ಮಶಾಸ್ತ್ರವನ್ನು ಲಕ್ಷವಿಟ್ಟು ನೋಡಿ ".. ಎಂಬುದು ಸಂಪೂರ್ಣವಾದ ಗಮನವನ್ನು ಕೊಟ್ಟು ಸತ್ಯವೇದವನ್ನು ಅಧ್ಯಯನಿಸುತ್ತಾ ಅದರಲ್ಲಿನ ಆಳವಾದ ಅರ್ಥವನ್ನು ಮತ್ತು ಅದರಲ್ಲಿನ ಸಮೃದ್ಧಿಯನ್ನು ಹುಡುಕುವಂತದ್ದಾಗಿದೆ. ಓದುವುದೆಂದರೆ ಕೇವಲ ವಾಕ್ಯದ ಮೇಲೆ ಕಣ್ಣಾಡಿಸಿಕೊಂಡು ಹೋಗುವಂತದ್ದಲ್ಲ. ಬದಲಾಗಿ ಶಾಸ್ತ್ರವು ಏನು ಹೇಳುತ್ತದೆಯೋ ಅದನ್ನು ನಮ್ಮ ಜೀವಿತಕ್ಕೆ ಹೇಗೆ ಅನ್ವಯಿಸಿಕೊಳ್ಳಬೇಕು ಎಂಬುದನ್ನು ಆಳವಾಗಿ ಪರಿಶೀಲಿಸುವಂತದ್ದಾಗಿದೆ.

2. ಪರಿಶೋಧಿಸಿರಿ: ನಿರಂತರವಾಗಿ ವಾಕ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು. "ನಿರಂತರವಾಗಿ ಹೀಗೆ ಮಾಡುತ್ತೀರಿ" ಎನ್ನುವಂತದ್ದು ಸತ್ಯವೇದವನ್ನು ಒಂದು ಬಾರಿ ಮಾತ್ರ  ಓದಿ ಮುಚ್ಚಿಡುವಂಥದ್ದಲ್ಲ ಎಂಬುದನ್ನು ಒತ್ತಿ ಹೇಳುತ್ತದೆ. ಆದರೆ ಪುನರಾವರ್ತಿತವಾಗಿ ಶಾಸ್ತ್ರದೊಂದಿಗೆ ಪರಸ್ಪರ ಸಂವಹನದಲ್ಲಿ ಇರುವಂತದ್ದಾಗಿದೆ ಎಂದರ್ಥ. ಈ ರೀತಿ ಪುನರಾವರ್ತನೆ ಮಾಡಿದಾಗ ಅದು ದೇವರ ವಾಕ್ಯದ  ಸತ್ಯಗಳನ್ನು ನಮ್ಮ ಹೃದಯದಲ್ಲೂ ಮನಸ್ಸಿನಲ್ಲೂ ಅಚ್ಚಾಗುವಂತೆ ಮಾಡಲು ಸಹಾಯ ಮಾಡುತ್ತದೆ.

3.ಜ್ಞಾಪಕದಲ್ಲಿಟ್ಟುಕೊಳ್ಳಿ: 'ನೀವು ಕೇಳಿದ್ದನ್ನು ಮರೆತು ಬಿಡದೆ' ಎನ್ನುವ ವಾಕ್ಯವು ಶಾಸ್ತ್ರವನ್ನು ಬಾಯಿಪಾಠ ಅಥವಾ ಮನನ ಮಾಡಿಕೊಳ್ಳುವುದರ ಮೌಲ್ಯವನ್ನು ಎತ್ತಿ ಹಿಡಿಯುತ್ತದೆ. ಈ ವಾಕ್ಯಗಳನ್ನು ಓದುವಾಗ ನಮಗೆ ಇದನ್ನು ನೆನಪಿನಲ್ಲಿಟ್ಟುಕೊಳ್ಳಲು  ಸಾಧ್ಯವಿಲ್ಲ ಅನಿಸುತ್ತದೆ. ಆದರೆ ಅವು ನಮ್ಮೊಳಗೆ ಉಳಿದು ನಮಗೆ ಯಾವಾಗ ಒಂದು ಉತ್ತೇಜನದ, ಒಂದು ಮಾರ್ಗದರ್ಶನದ ಅಗತ್ಯ ಇದೆ ಎಂದು ಎನಿಸುವಾಗ ಪವಿತ್ರಾತ್ಮನ ಪ್ರೇರಣೆಯ ಮೂಲಕ ನಮ್ಮ ಮನದೊಳಗಿಂದ ಅದು ಹೊರಹೊಮ್ಮಲು ಸಿದ್ಧವಾಗಿರುತ್ತದೆ.

ವಾಕ್ಯವನ್ನು ಅಳವಡಿಸಿಕೊಳ್ಳುವಂಥದ್ದು.
ವಾಕ್ಯವನ್ನು ಓದುವುದು, ಪರಿಶೋಧಿಸುವುದು ಮಾತ್ರವೇ  ಯೇಸುವನ್ನು ದೃಷ್ಟಿಸಲು ಇರುವ ಕೀಲಿಕೈಗಲಾಗಿರದೇ, ನಮ್ಮ ಜೀವಿತದಲ್ಲಿ ಆ ವಾಕ್ಯವು ಕಾರ್ಯ ಮಾಡುವಂತೆ ನಾವು ಎದುರು ನೋಡುವಂತದ್ದೂ ಸಹ ಯೇಸುವನ್ನು ದೃಷ್ಟಿಸಲು ಇರುವ ಕೀಲಿಕೈ ಆಗಿದೆ. ‭‭1 ಕೊರಿಂಥದವರಿಗೆ‬ ‭9:24‬ ರ ‭"ರಂಗಸ್ಥಾನದಲ್ಲಿ ಓಡುವದಕ್ಕೆ ಗೊತ್ತಾದವರೆಲ್ಲರೂ ಓಡುತ್ತಾರಾದರೂ ಒಬ್ಬನು ಮಾತ್ರ ಬಿರುದನ್ನು ಹೊಂದುತ್ತಾನೆ ಎಂಬದು ನಿಮಗೆ ತಿಳಿಯದೋ? ಅವರಂತೆ ನೀವೂ ಬಿರುದನ್ನು ಪಡಕೊಳ್ಳಬೇಕೆಂತಲೇ ಓಡಿರಿ." ಎಂಬ ವಾಕ್ಯವು ನಮ್ಮನ್ನು ಹೀಗೆ ಮಾಡಲು ಉತ್ತೇಜಿಸುತ್ತದೆ. ಈ ಒಂದು ವಾಕ್ಯ ಭಾಗವು ನಮ್ಮ ಜೀವನವನ್ನು ಒಂದು ಉದ್ದೇಶದಿಂದಲೂ ಗುರಿಯಿಂದಲೂ ನಮ್ಮ ಆತ್ಮಿಕ ಜೀವಿತವನ್ನು ಅತ್ಯುತ್ತಮವಾಗಿ ನಾವು ಜೀವಿಸುವಂತೆ  ಶ್ರಮಿಸುತ್ತೇವೆ ಎಂಬ ನಂಬಿಕೆಯಿಂದ ನಾವು ಜೀವಿಸಬೇಕು ಎಂದು ನಮ್ಮನ್ನು ಒತ್ತಾಯ ಪಡಿಸುತ್ತದೆ.

ಯೇಸುವನ್ನೇ ದೃಷ್ಟಿಸಿ ನಡೆಯಲು ಇರುವ ಕೆಲವು ಪ್ರಾಯೋಗಿಕ ಹೆಜ್ಜೆಗಳು.

1.ನಿಯಮಿತವಾದ ವಾಕ್ಯ ಧ್ಯಾನದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ.
ಪ್ರತಿದಿನ ಸತ್ಯವೇದವನ್ನು ಓದುವ ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಜೀವನದ ಪ್ರಸ್ತುತ ಸ್ಥಿತಿಗತಿಗೆ ಹೋಲುವ ವಾಕ್ಯ ಭಾಗದಿಂದ ನಿಮ್ಮ ಸತ್ಯವೇದದ ಅಧ್ಯಯನವನ್ನು ಆರಂಭಿಸಿ ಅಥವಾ ಒಂದು ಅಧ್ಯಾಯ ಆದ ಮೇಲೆ ಮತ್ತೊಂದು ಅಧ್ಯಾಯದಂತೆ ಪ್ರತಿಯೊಂದು ಸತ್ಯವೇದ ಪುಸ್ತಕಗಳನ್ನು ಓದಲಾರಂಭಿಸಿ

2. ನಿಮ್ಮ ಮನ ಮುಟ್ಟಿದ ವಾಕ್ಯಗಳನ್ನು ಧ್ಯಾನಿಸಿರಿ.
 ವಾಕ್ಯವನ್ನು ಓದಿ ಮುಗಿಸಿದ ಮೇಲೆ ನೀವು ಓದಿದ ವಾಕ್ಯವನ್ನು ಧ್ಯಾನಿಸಲು ಸ್ವಲ್ಪ ಸಮಯವನ್ನು ಮೀಸಲಿಡಿ. ದೇವರು ಈ ವಾಕ್ಯಗಳ ಮೂಲಕ ಏನು ಹೇಳುತ್ತಿದ್ದಾರೆ ಅದನ್ನು ನಿಮ್ಮ ಜೀವಿತಕ್ಕೆ ಹೇಗೆ ಅನ್ವಯಿಸಿಕೊಳ್ಳಬಹುದು ಎಂಬುದಾಗಿ ನಿಮ್ಮನ್ನು ನೀವೇ ಕೇಳಿಕೊಳ್ಳಿ

3. ವಾಕ್ಯಗಳನ್ನು ಕಂಠಪಾಠ ಮಾಡಿರಿ.
 ವಾರಕ್ಕೊಂದು ವಾಕ್ಯವನ್ನು ತೆಗೆದುಕೊಂಡು ಅದನ್ನು ಕಂಠಪಾಠ ಮಾಡಿರಿ.ಅದನ್ನು ಬರೆದಿಟ್ಟುಕೊಳ್ಳಿ ಇಲ್ಲವೇ ನಿಮ್ಮ ಮೊಬೈಲ್ ಫೋನ್ನಲ್ಲಿ ಹಾಕಿಕೊಳ್ಳಿ ಅಥವಾ ಪ್ರತಿದಿನ ನೀವು ನೋಡಬಹುದಾದ ಸ್ಥಳದಲ್ಲಿ ಪೋಸ್ಟರ್ ಬರೆದು ಅಂಟಿಸಿಕೊಳ್ಳಿ ಹೀಗೆ ನೀವು ಆ ವಾಕ್ಯದಲ್ಲೇ ಮುಳುಗಲು ಇವು ನಿಮಗೆ ಸಹಾಯ ಮಾಡುತ್ತದೆ.

4. ನೀವು ಓದಿ ಏನು ಕಲಿತುಕೊಂಡಿರೋ ಅದನ್ನು ನಿಮ್ಮ ಜೀವಿತದಲ್ಲಿ ಅಳವಡಿಸಿಕೊಳ್ಳಿರಿ.
ನೀವು ಓದಿ,  ಧ್ಯಾನಿಸಿ,  ಕಂಠಪಾಠ ಮಾಡಿ, ಪರಿಶೋಧಿಸಿದ ವಾಕ್ಯಗಳನ್ನು ನಿಮ್ಮ ಜೀವಿತದಲ್ಲಿ ಅಳವಡಿಸಿಕೊಳ್ಳಲು ಸೂಕ್ತ ಅವಕಾಶಗಳನ್ನು ಎದುರು ನೋಡಿರಿ. ಅದು ಕರುಣೆ ತೋರಿಸುವಂತದ್ದು  ಆಗಿರಬಹುದು, ಕ್ಷಮಿಸುವಂಥದ್ದಾಗಿರಬಹುದು ಅಥವಾ ಸಂಕಷ್ಟದ ಸಮಯದಲ್ಲಿ ನಂಬಿಕೆಯಲ್ಲಿ ಸ್ಥಿರವಾಗಿ ನಿಲ್ಲುವಂಥದ್ದಾಗಿರಬಹುದು. ದೇವರ ವಾಕ್ಯವೇ ನಿಮ್ಮ ನಡೆನುಡಿಗಳನ್ನು ಮಾರ್ಗದರ್ಶಿಸಲಿ

 5. ವಾಕ್ಯವನ್ನು ಹಂಚಿಕೊಳ್ಳಿ:
ನೀವು ವಾಕ್ಯದ ತಿಳುವಳಿಕೆಯಲ್ಲಿ ಬೆಳೆದಂತೆಲ್ಲಾ, ನೀವು ಏನನ್ನು ಕಲಿತುಕೊಂಡಿರೋ ಅದನ್ನು ಇತರರೊಂದಿಗೆ ಹಂಚಿಕೊಳ್ಳಿ. ಇದನ್ನು ಸ್ನೇಹಿತರೊಂದಿಗಿನ ಮಾತುಕತೆಯ ಸಮಯದಲ್ಲೋ ಇಲ್ಲವೇ ಸಾಮಾಜಿಕ ಜಾಲತಾಣಗಳ ಮೂಲಕವೋ ಮಾಡಬಹುದು.

ನೆನಪಿಡಿ: ಯೇಸುವನ್ನೇ ಲಕ್ಷಿಸುವಂತದ್ದು ಆಂತರ್ಯದಲ್ಲಿರುವ ಕ್ರಿಸ್ತನನ್ನು ಬಾಹ್ಯದಲ್ಲಿ ಪ್ರಕಟ ವಾಗುವಂತೆ ನಮ್ಮಲ್ಲಾಗುವಂಥಹ  ರೂಪಾಂತರದ ಪಯಣವಾಗಿದೆ. ಇದು ನಮ್ಮ ಆಲೋಚನೆಗಳನ್ನು ನಡತೆಯನ್ನು ನಡೆನುಡಿಗಳನ್ನು ದೇವರ ಚಿತ್ತಕ್ಕನುಗುಣವಾಗಿ ರೂಪಿಸುವಂತದ್ದಾಗಿದೆ. ‭‭ಇಬ್ರಿಯರಿಗೆ‬ ‭12:2‬ ರ ವಾಕ್ಯವು ಹೇಳುವಂತೆ "ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡೋಣ."
ಆತನನ್ನೇ ಲಕ್ಷಿಸುವ ಮೂಲಕ ನಾವು ನಮ್ಮ ಓಟವನ್ನು ಉತ್ತಮವಾಗಿ ಓಡುವಂತ ಬಲವನ್ನು,  ಮಾರ್ಗದರ್ಶನವನ್ನು,  ಉತ್ತೇಜನವನ್ನು ಕಂಡುಕೊಂಡು ಅಂತಿಮವಾಗಿ ಆತನಲ್ಲಿ ಇರುವಂತಹ ನಿತ್ಯಜೀವವೆಂಬ ಬಿರುದನ್ನು ಹೊಂದಿಕೊಳ್ಳೋಣ
Prayer
1. ತಂದೆಯೇ, ಯೇಸುಕ್ರಿಸ್ತನಲ್ಲಿರುವ ಪ್ರೀತಿ ಮತ್ತು ಆತನಲ್ಲಿರುವ ದೀರ್ಘ ತಾಳ್ಮೆಯತ್ತ ಸಾಗುವಂತೆ ನಮ್ಮ ಹೃದಯವನ್ನು ಯೇಸುನಾಮದಲ್ಲಿ ಮಾರ್ಗದರ್ಶಿಸು.

2. ತಂದೆಯೇ.ಒಳ್ಳೆಯ ಹೋರಾಟವನ್ನು ಮಾಡಿ ನಮ್ಮ ಓಟವನ್ನು ಉತ್ತಮವಾಗಿ ಓಡಿಮುಗಿಸುವಂತೆಯೂ- ನಂಬಿಕೆಯಲ್ಲಿ ಸ್ಥಿರವಾಗಿ ನಿಲ್ಲುವಂತೆಯೂ ಯೇಸು ನಾಮದಲ್ಲಿ ನಮಗೆ ಸಹಾಯ ಮಾಡಿರಿ ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇವೆ. ಆಮೇನ್.

Join our WhatsApp Channel


Most Read
● ದಿನ 07 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಸ್ತ್ರೀ ಪುರುಷರು ಏಕೆ ಪತನಗೊಳ್ಳುವರು- 5
● ದೇವರು ತಾಯಂದಿರನ್ನು ವಿಶೇಷವಾಗಿ ಇರಿಸಿದ್ದಾನೆ
● ದೇವರ ಕನ್ನಡಿ
● ಉದ್ಯೋಗದ ಸ್ಥಳದಲ್ಲಿ ಮಿಂಚುವ ತಾರೆಯಾಗುವುದ -I
● ದೂರದಿಂದ ಹಿಂಬಾಲಿಸುವುದು
● ಇದು ನಿಮಗಾಗಿ ಬದಲಾಗುತ್ತಿದೆ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login