हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಪಾಪದ ಕುಷ್ಠರೋಗದೊಂದಿಗೆ ವ್ಯವಹರಿಸುವುದು.
Daily Manna

ಪಾಪದ ಕುಷ್ಠರೋಗದೊಂದಿಗೆ ವ್ಯವಹರಿಸುವುದು.

Friday, 25th of April 2025
2 1 118
Categories : ಪಾಪ (sin) ರೂಪಾಂತರ(transformation)
ಪ್ರಾಚೀನ ಇಬ್ರಿಯರ ಸಂಸ್ಕೃತಿಯಲ್ಲಿ, ಮನೆಯ ಒಳಗಿನ ಗೋಡೆಗಳ ಮೇಲೆ ಹಸಿರು ಮತ್ತು ಹಳದಿ ಗೆರೆಗಳು ಕಾಣಿಸಿಕೊಳ್ಳುವುದು ಗಂಭೀರ ಸಮಸ್ಯೆಯ ಸಂಕೇತವಾಗಿತ್ತು. ಇದು ಮನೆಯಲ್ಲಿ ಒಂದು ರೀತಿಯ ಕುಷ್ಠರೋಗ ಹರಡುತ್ತಿದೆ ಎಂಬುದರ ಸೂಚನೆಯಾಗಿತ್ತು. ಅದನ್ನು ನಿಯಂತ್ರಿಸದಿದ್ದರೆ, ಕುಷ್ಠರೋಗವು ಮನೆಯಾದ್ಯಂತ ಹರಡಿ ಗೋಡೆಗಳು, ನೆಲಹಾಸುಗಳು ಮತ್ತು ಛಾವಣಿಗೂ ಸಹ ಭೌತಿಕವಾಗಿ ಹಾನಿಯನ್ನುಂಟುಮಾಡಬಹುದಿತ್ತು. ಇದಲ್ಲದೆ, ಮನೆಯೊಳಗೆ ವಾಸಿಸುವವರ ಆರೋಗ್ಯ ಮತ್ತು ಯೋಗಕ್ಷೇಮವೂ ಅಪಾಯದಲ್ಲಿದೆ ಎನ್ನುವುದನ್ನು ಅದು ಸೂಚಿಸುತಿತ್ತು.

ಕಲುಷಿತ ಗೋಡೆಗಳು ಮತ್ತು ನೆಲಹಾಸುಗಳ ಕುರಿತ ಈ ವಿಚಾರವನ್ನು  ತಕ್ಷಣವೇ ಯಾಜಕರಿಗೆ ತಿಳಿಸಬೇಕಾಗಿತ್ತು, ಅವರು ಬಂದು ಆ ಮನೆಯನ್ನು ಪರೀಕ್ಷಿಸಿ ಅದನ್ನು ಪ್ರತ್ಯೇಕಪಡಿಸಿ ಶುದ್ಧೀಕರಿಸಬೇಕೇ ಇಲ್ಲವೇ  ಎಂಬುದನ್ನು ನಂತರ ನಿರ್ಧರಿಸುತ್ತಿದ್ದರು. (ಯಾಜಕಕಾಂಡ 14 ಓದಿ). 

ಈ ಪ್ರಕ್ರಿಯೆಯು ಪಾಪದ ತೀವ್ರತೆ ಮತ್ತು ಅದರ ಹಾನಿಕಾರಕ ಪರಿಣಾಮಗಳ ಹರಡುವಿಕೆಯನ್ನು  ತಡೆಯಲು ತೆಗೆದುಕೊಳ್ಳಬೇಕಾದ  ತ್ವರಿತ ಕ್ರಮದ ಅಗತ್ಯವನ್ನು ನೆನಪಿಸುತ್ತದೆ. ಹಳೆಯ ಒಡಂಬಡಿಕೆಯಲ್ಲಿ, ಕುಷ್ಠರೋಗವು ಒಂದು ಭಯಾನಕ ಕಾಯಿಲೆಯಾಗಿದ್ದು ಅದು ಹೆಚ್ಚಿನ ಭಯ ಮತ್ತು ಪ್ರತ್ಯೇಕತೆಯನ್ನು ಉಂಟುಮಾಡುವುದಾಗಿತ್ತು. ಕುಷ್ಠರೋಗದಿಂದ ಬಳಲುತ್ತಿರುವವರನ್ನು ಅಶುದ್ಧರೆಂದು ಪರಿಗಣಿಸಿ ಅವರನ್ನು  ಪಟ್ಟಣದ ಹೊರಗೆ, ಅವರ ಕುಟುಂಬಗಳು ಮತ್ತು ಸಮುದಾಯಗಳಿಂದ ದೂರದಲ್ಲಿ  ವಾಸಿಸಬೇಕಾಗಿತ್ತು. (ಯಾಜಕಕಾಂಡ 13:46). ಕುಷ್ಠರೋಗವು ಪಾಪದ ಸಂಕೇತವಾಗಿದ್ದು, ಅದು ನಮ್ಮನ್ನು ದೇವರು ಮತ್ತು ಇತರ ಜನರಿಂದ ಬೇರ್ಪಡಿಸುವಂತದ್ದಾಗಿದೆ.

ಕುಷ್ಠರೋಗವು ಸಣ್ಣ ರೋಗಲಕ್ಷಣಗಳಿಂದ ಪ್ರಾರಂಭವಾಗಿ ವೇಗವಾಗಿ  ವ್ಯಾಪಿಸುವಂತೆ, ಪಾಪವೂ ಸಹ ವ್ಯಾಪಕವಾಗಿ ಬೆಳೆಯುತ್ತದೆ. ಒಂದು  ಪಾಪವು ಕಣ್ಣೀನಾಸೆಯಿಂದ ಪ್ರಾರಂಭಿಸಿ ಅಂತಿಮವಾಗಿ ವ್ಯಭಿಚಾರ ಮತ್ತು ನರಹತ್ಯೆ ಮಾಡಿಬಿಡುವಂತ ಪಾಪಕ್ಕೆ ಗುರಿಯಾದ ಅರಸನಾದ ದಾವೀದನ ಕಥೆಯಲ್ಲಿ ನಾವು ಇದನ್ನು ನೋಡುತ್ತೇವೆ (2 ಸಮುವೇಲ 11). ನಾವು ಅದನ್ನು ನಿಗ್ರಹಿಸಲು ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಆ ಪಾಪವು ನಮ್ಮ ಕೈಮೀರಿ ಹೋಗಬಹುದು. 

ಕುಷ್ಠರೋಗದ ಪರಿಣಾಮಗಳಂತೆ ಪಾಪದ ಪರಿಣಾಮಗಳು ಸಹ  ತೀವ್ರವಾಗಿರುತ್ತವೆ. ಕುಷ್ಠರೋಗವು ನರಗಳಿಗೆ ಹಾನಿ ಮತ್ತು ವಿಕಾರತೆಯನ್ನು  ಉಂಟುಮಾಡಿ ದೇಹವನ್ನು ನಾಶಪಡಿಸುತ್ತದೆ. ಹಾಗೆಯೇ ಪಾಪವು ಆತ್ಮವನ್ನು ನಾಶಪಡಿಸಿ, ನಮ್ಮನ್ನು ದೇವರಿಂದ ಬೇರ್ಪಡಿಸಿ  ನಮ್ಮನ್ನು ವಿನಾಶದ ಹಾದಿಗೆ ಕರೆದೊಯ್ಯುತ್ತದೆ. ಯಾಜಕಕಾಂಡ 13-14 ಅಧ್ಯಾಯಗಳಲ್ಲಿ, ಕುಷ್ಠರೋಗಿಯು ಶುದ್ಧನೆಂದು ಘೋಷಿಸಲು ಯಾವ ಪ್ರಕ್ರಿಯೆಯನ್ನು ಎದುರಿಸಬೇಕಾಗಿತ್ತು ಎಂಬುದನ್ನು ನಾವು ನೋಡುತ್ತೇವೆ. ಯಾಜಕನು ವ್ಯಕ್ತಿಯನ್ನು ಪರೀಕ್ಷಿಸಿ ಅವರು ಇನ್ನೂ ಅಶುದ್ಧರಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತಿದ್ದರು. ಅವರು ಹಾಗೆ ಇದ್ದರೆ, ಅವರು ಗುಣಮುಖರಾಗುವವರೆಗೆ ಅವರನ್ನು  ಪಾಳೆಯದ ಹೊರಗೆ ಇಡಲಾಗುತಿತ್ತು. ಅವರು ಶುದ್ಧರೆಂದು ಘೋಷಿಸಲ್ಪಟ್ಟ ನಂತರವೇ  ಅವರನ್ನು ಮತ್ತೆ ಸಮುದಾಯದೊಳಗೆ  ಸೇರಿಸಿಕೊಳ್ಳಲಾಗುತ್ತಿತ್ತು. 

ಅದೇ ರೀತಿ, ಪಾಪದಿಂದ ಶುದ್ಧರಾಗಲು, ನಾವು ನಮ್ಮ ಪಾಪಗಳನ್ನು ಒಪ್ಪಿಕೊಳ್ಳಬೇಕು ಮತ್ತು ಕ್ಷಮೆ ಕೇಳಬೇಕು. "ನಾವು ನಮ್ಮ ಪಾಪಗಳನ್ನು ಒಪ್ಪಿಕೊಂಡರೆ, ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ ನಮ್ಮ ಪಾಪಗಳನ್ನು ಕ್ಷಮಿಸಿ ಎಲ್ಲಾ ಅನೀತಿಯಿಂದ ನಮ್ಮನ್ನು ಶುದ್ಧೀಕರಿಸುವನು." ಎಂದು 1 ಯೋಹಾನ 1:9 ಹೇಳುತ್ತದೆ.ನಾವು ನಮ್ಮ ಪಾಪಗಳನ್ನು ಒಪ್ಪಿಕೊಂಡು ಅವುಗಳಿಗೆ  ಹಿಮ್ಮುಖರಾಗಬೇಕು.

ಮಾರ್ಕ 1:40-45 ರಲ್ಲಿ ಯೇಸು ಕುಷ್ಠರೋಗಿಯನ್ನು ಗುಣಪಡಿಸಿದ ಕಥೆಯು ಯೇಸು ದೈಹಿಕವಾಗಿ ಮತ್ತು ಆತ್ಮೀಕಾವಾಗಿಯೂ  ಹೇಗೆ ಗುಣಪಡಿಸಬಲ್ಲನು  ಎಂಬುದಕ್ಕೆ ಒಂದು ಪ್ರಬಲ ಉದಾಹರಣೆಯಾಗಿದೆ. ಕುಷ್ಠರೋಗಿಯು ಸ್ವಸ್ತತೆಗಾಗಿ ಬೇಡುತ್ತಾ ಯೇಸುವಿನ ಬಳಿಗೆ ಬಂದಾಗ  ಯೇಸು ಮೊದಲು  ಅವನನ್ನು ಮುಟ್ಟಿ, "ನನಗೆ ಮನಸ್ಸಿದೆ. ಶುದ್ಧನಾಗು!" ಎಂದು ಹೇಳಿದನು. ತಕ್ಷಣವೇ, ಆ ಮನುಷ್ಯನು ಗುಣಮುಖನಾದನು. 

ಯಾಜಕಕಾಂಡದ ಪ್ರಕಾರ, ಕುಷ್ಠರೋಗಿಯು ಶುದ್ಧನೆಂದು ಘೋಷಿಸಲು ಯಾಜಕನಿಗೆ ತನ್ನನ್ನು ತೋರಿಸಿಕೊಳ್ಳುವುದು ಮತ್ತು ಯಜ್ಞವನ್ನು  ಅರ್ಪಿಸುವುದು ಅಗತ್ಯವಾಗಿತ್ತು. ಮಾರ್ಕ 1 ರಲ್ಲಿ, ಕರ್ತನಾದ ಯೇಸು ಕುಷ್ಠರೋಗಿಗೆ ಅವನಿಗಾದ ಸ್ವಸ್ಥತೆಯ ಸಾಕ್ಷಿಯಾಗಿ ಹೋಗಿ ಯಾಜಕನಿಗೆ ತನ್ನನ್ನು  ತೋರಿಸಿಕೊಳುವಂತೆ ಸೂಚಿಸುತ್ತಾನೆ.

ಯಾಜಕಕಾಂಡದ ಪ್ರಕಾರ , ಒಬ್ಬ ಕುಷ್ಠರೋಗಿಯು ಶುದ್ಧನೆಂದು ಘೋಷಿಸಲ್ಪಟ್ಟ ನಂತರವೇ ಅವನು ತನ್ನ  ಸಮುದಾಯಕ್ಕೆ ಮತ್ತೆ ಸೇರಲು ಸಾಧ್ಯವಾಗುತ್ತಿತ್ತು. ಮಾರ್ಕ 1 ರಲ್ಲಿ, ಕರ್ತನಾದ ಯೇಸು ವಾಸಿಯಾದ ಕುಷ್ಠರೋಗಿಗೆ ತನ್ನನ್ನು ಯಾಜಕನಿಗೆ ತೋರಿಸಿಕೊಂಡು ಧರ್ಮಶಾಸ್ತ್ರದಲ್ಲಿ  ಸೂಚಿಸಲಾದ ಯಜ್ಞಬಲಿಯನ್ನು ಅರ್ಪಿಸುವಂತೆ ಯೇಸು ಅವನಿಗೆ ಸೂಚಿಸಿದನು, ಅದು ಅವನನ್ನು ಸಮುದಾಯದಲ್ಲಿ  ಪುನಃಸ್ಥಾಪಿಸಲು ಅನುವು ಮಾಡಿಕೊಡುತ್ತದೆ.

ಆದ್ದರಿಂದ  ನೋಡಿ, ಕರ್ತನಾದ ಯೇಸುವೇ  ನಮ್ಮ ಕಟ್ಟ ಕಡೆಯ ಸ್ವಸ್ಥತೆಗಾರನು , ಆತನೇ ನಮ್ಮ ದೈಹಿಕ ಮತ್ತು ಆತ್ಮೀಕ ಕಾಯಿಲೆಗಳನ್ನು ಗುಣಪಡಿಸಬಲ್ಲಾತನು. ಆತನು ಪಾಪದ ಅವಮಾನ ಮತ್ತು ಬಹಿಷ್ಕಾರವನ್ನು ತೆಗೆದುಹಾಕಿ ಮತ್ತೆ ನಮ್ಮ ತಂದೆಯೊಂದಿಗೂ  ಮತ್ತು ಇತರರೊಂದಿಗೂ ನಮ್ಮ  ಸಂಬಂಧವನ್ನು  ಪುನಃ ಸ್ಥಾಪಿಸಬಲ್ಲನು. ಆದ್ದರಿಂದ ಇಂದು ಮತ್ತು ಯಾವಾಗಲೂ ಕ್ಷಮೆ ಮತ್ತು ಪುನಃಸ್ಥಾಪನೆಗಾಗಿ ನಮ್ಮ ಅಂತಿಮ ಸ್ವಸ್ಥತೆಗಾರನಾದ ಯೇಸುವಿನ ಕಡೆಗೆ ತಿರುಗಿಕೊಳ್ಳಿ.


Bible Reading: 1 kings 8
Prayer
ಪ್ರೀತಿಯ ತಂದೆಯೇ, ಕುಷ್ಠರೋಗಿಯು ನಿಮ್ಮ ಸ್ಪರ್ಶದಿಂದ ಗುಣಮುಖನಾದಂತೆಯೇ, ನನ್ನನ್ನು ಸ್ಪರ್ಶಿಸಿ ನನ್ನನ್ನೂ ಗುಣಪಡಿಸಿ ಮತ್ತು ಸ್ವಸ್ಥಪಡಿಸಿ.ತನ್ಮೂಲಕ ನಾನು ನಿಮ್ಮ ಸಮುದಾಯದಲ್ಲಿ ಸರಿಯಾದ ಸ್ಥಾನವನ್ನು ಕಂಡುಕೊಂಡು ನಿಮ್ಮ ಬಲ ಮತ್ತು ಮಹಿಮೆಗೆ ಸಾಕ್ಷಿಯಾಗಿರುವಂತಾಗಲಿ ಎಂದು ಯೇಸುನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ. ಆಮೆನ್.


Join our WhatsApp Channel


Most Read
● ಭೂರಾಜರುಗಳ ಒಡೆಯನು
● ಕೆಟ್ಟ ಆಲೋಚನೆಗಳ ಹೋರಾಟವನ್ನು ಗೆಲ್ಲುವುದು
● ನಂಬಿಕೆಯಿಂದ ಹೊಂದಿಕೊಳ್ಳುವುದು
● ಉತ್ತಮ ಹಣ ನಿರ್ವಹಣೆ
● ದೇವರ ವಾಕ್ಯದಲ್ಲಿರುವ ನಂಬಿಗಸ್ಥಿಕೆ
● ಅಭಿಷೇಕಕ್ಕಿರುವ ಪ್ರಪ್ರಥಮ ಶತೃ
● ಅಪ್ಪನ ಮಗಳು - ಅಕ್ಷಾ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login