ನಡೆಯಿರಿ ಏದೆನ್ ತೋಟಕ್ಕೆ ಹೋಗೋಣ - ಎಲ್ಲವೂ ಆರಂಭವಾಗಿದ್ದು ಇಲ್ಲಿಂದಲೇ .
"ಆ ಮನುಷ್ಯನು - ನನ್ನ ಜೊತೆಯಲ್ಲಿರುವದಕ್ಕೆ ನೀನು ಕೊಟ್ಟ ಸ್ತ್ರೀಯು ಆ ಮರದ ಹಣ್ಣನ್ನು ನನಗೆ ಕೊಟ್ಟಳು; ನಾನು ತಿಂದೆನು ಎಂದು ಹೇಳಿದನು. ಯೆಹೋವದೇವರು ಸ್ತ್ರೀಯನ್ನು - ಇದೇನು ನೀನು ಮಾಡಿದ್ದು ಎಂದು ಕೇಳಲು ಸ್ತ್ರೀಯು - ಸರ್ಪವು ನನ್ನನ್ನು ವಂಚಿಸಿತು, ನಾನು ತಿಂದೆನು ಎಂದು ಉತ್ತರ ಕೊಟ್ಟಳು ." (ಆದಿಕಾಂಡ 3:12-13)
ಪುರುಷನು ಸ್ತ್ರೀಯನ್ನು ದೂಷಿಸಿದನು, ನಂತರ ಸ್ತ್ರೀ ಪ್ರತಿಯಾಗಿ ಸರ್ಪವನ್ನು ದೂಷಿಸಿದಳು. ಮನುಷ್ಯನು ಪಾಪ ಮಾಡಿದ ತಕ್ಷಣವೇ ಮನುಷ್ಯನು ಇತರರನ್ನು ದೂಷಿಸಲು ಪ್ರಾರಂಭಿಸಿದನು. (ನಾನು ಮನುಷ್ಯ ಎಂದು ಹೇಳಿದಾಗ, ದಯವಿಟ್ಟು ಅದು ಸ್ತ್ರೀಯನ್ನು ಸಹ ಒಳಗೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ).
ಪಾಪದ ದುಃಖಕರ ಪರಿಣಾಮಗಳಲ್ಲಿ ಒಂದು ನಮ್ಮ ಕ್ರಿಯೆಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳುವುದನ್ನು ನಿರಾಕರಿಸುವುದು. ಇದು ಇಂದು ಒಂದು ಶಿಶುವಿನಿಂದ ಹಿರಿಯರವರೆಗೆ ತುಂಬಾ ಪ್ರಚಲಿತದಲ್ಲಿರುವ ಮನೋಭಾವವಾಗಿದೆ.
ಜನರು ತಾವು ಮಾಡಿದ ಪ್ರಮಾದಗಳಿಗೆ ಇತರರನ್ನು ಏಕೆ ದೂಷಿಸುತ್ತಾರೆ?
ಅವರು ತಮ್ಮ ಪ್ರಮಾದಗಳಿಂದ ಉಂಟಾಗುವ ಅಪರಾಧಿ ಭಾವನೆಯೊಂದಿಗೆ ಬದುಕಲು ಬಯಸುವುದಿಲ್ಲ ಅವರು ತಮ್ಮ ಕ್ರಿಯೆಗಳ ಪರಿಣಾಮಗಳನ್ನು ಅನುಭವಿಸಲು ಬಯಸುವುದಿಲ್ಲ.
ದೋಷರೋಪಣೆ ವರ್ಗಾಯಿಸುವುದರಿಂದ ಆಗುವ ಪರಿಣಾಮ:
ತಮ್ಮ ತಪ್ಪುಗಳಿಗೆ ಇತರರನ್ನು ದೂಷಿಸುವ ಜನರು ಎಂದಿಗೂ ಆ ಸಮಸ್ಯೆಯನ್ನು ಜಯಿಸಲಾರರು.
ಅವರು ಸಮಸ್ಯೆಯಿಂದ ಸಮಸ್ಯೆಗೆ ಚಲಿಸುತ್ತಾ ಅವರು ತಮ್ಮ ಸಮಸ್ಯೆಗೆ ಮತ್ತೊಬ್ಬರೇ ಕಾರಣವೆಂದು ದೂಷಿಸುವುದು ಬಹಳ ಸುಲಭ ಮಾರ್ಗವೆಂದು ಕಂಡುಕೊಳ್ಳುತ್ತಾರೆ.
ಅಂತಹ ಜನರಂತೆ ನೀವು ಇರಬೇಡಿ.
ನಿಮ್ಮ ಪರಿಪೂರ್ಣನಾದ ದೇವರು ನಿಮಗೆ ನೀಡಿದ ಸಾಮರ್ಥ್ಯದ ಪರಿಪೂರ್ಣತೆಗೆ ತಲುಪಲು, ನೀವು ಯಾವಾಗಲೂ ನಿಮ್ಮನ್ನು ನೀವು ಸುಧಾರಿಸಿಕೊಳ್ಳಲು ಇರುವ ಮಾರ್ಗಗಳನ್ನು ಕಂಡುಕೊಳ್ಳಬೇಕು, ಮತ್ತು ನೀವು ಮಾಡಿದ ನಿಮ್ಮ ಪ್ರಮಾದಗಳಿಗೆ ನೀವೇ ಜವಾಬ್ದಾರಿಯನ್ನು ತೆಗೆದುಕೊಳ್ಳದೇ ಹೋದರೆ ನಿಮ್ಮ ತಪ್ಪುಗಳಿಂದ ನೀವು ಕಲಿಯದಿದ್ದರೆ ನೀವು ನಿಮ್ಮನ್ನು ಸುಧಾರಿಸಿಕೊಳ್ಳಲು ಸಾಧ್ಯವಿಲ್ಲ.
ದುರ್ಬಲ ನಾಯಕನ ಲಕ್ಷಣಗಳಲ್ಲಿ ಒಂದು ಯಾವುದೆಂದರೆ:
"ಸೌಲನು - ಜನರು ನಿನ್ನ ದೇವರಾದ ಯೆಹೋವನಿಗೋಸ್ಕರ ಯಜ್ಞಸಲ್ಲಿಸುವದಕ್ಕಾಗಿ ಅಮಾಲೇಕ್ಯರ ಕುರಿದನಗಳಲ್ಲಿ ಮೇಲ್ತರದವುಗಳನ್ನು ಉಳಿಸಿ ತಂದಿದ್ದಾರೆ; ವಿುಕ್ಕಾದವುಗಳನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿದೆವು ಎಂದು ಉತ್ತರಕೊಟ್ಟನು."(1 ಸಮುವೇಲ 15:15)
ನಾಯಕನು ತನ್ನ ಜನರಿಗೆ ಜವಾಬ್ದಾರನಾಗಿರುತ್ತಾನೆ ಹೊರತು ಆದಂತಹ ಪ್ರಮಾದಗಳಿಗೆ ಅವನು ಜನರ ಮೇಲೆ ಆಪಾದನೆಯನ್ನು ಹೊರಿಸಲು ಸಾಧ್ಯವಿಲ್ಲ. ಸೌಲನು ಒಬ್ಬ ದುರ್ಬಲ ನಾಯಕನಾಗಿದ್ದು ಕರ್ತನ ಆಜ್ಞೆಯನ್ನು ಪಾಲಿಸಲು ವಿಫಲವಾದದ್ದಕ್ಕಾಗಿ ತನ್ನ ಜನರನ್ನು ದೂಷಿಸುತ್ತಾನೆ.
ದುರ್ಬಲ ನಾಯಕನು ತಮ್ಮ ವೈಫಲ್ಯಗಳಿಗೆ/ಅಸಮರ್ಥತೆಗಳಿಗೆ ಇತರರನ್ನು, ಸಂದರ್ಭಗಳನ್ನು, ವಿಧಿಯನ್ನು ಅಥವಾ ಅವಕಾಶವನ್ನು ಹೆಚ್ಚಾಗಿ ದೂಷಿಸುತ್ತಾನೆ.
ದೇವರವಾಕ್ಯ ಹೇಳುತ್ತದೆ' ನಿಬಂಧನದ್ರೋಹಿಗಳು ಅವನ ನಯನುಡಿಗಳಿಂದ ಕೆಟ್ಟುಹೋಗುವರು; ತಮ್ಮ ದೇವರನ್ನು ಅರಿತವರೋ ದೃಢಚಿತ್ತರಾಗಿ ಎದುರಿಸಿ ಸಫಲರಾಗುವರು." ಎಂದು (ದಾನಿಯೇಲ 11:32)
ಇಲ್ಲಿ ಕುತೂಹಲಕಾರಿ ಸಂಗತಿಯೆಂದರೆ: ಆದಾಮನು ತನ್ನ ತಪ್ಪನ್ನು ಹೆಂಡತಿಯ ಮೇಲೆ ಆಪಾದನೆ ಹೊರಿಸಿದರೂ ಮತ್ತು ಹವ್ವಳು ಆ ಆಪಾದನೆಯನ್ನು ಸರ್ಪಕ್ಕೆ ವರ್ಗಾಯಿಸಿದರೂ, ದೇವರು ಅವರ ಕ್ರಿಯೆಗಳಿಗೆ ಅವರನ್ನು ಹೊಣೆಗಾರರನ್ನಾಗಿ ಮಾಡಿ ಅವರು ಅವರ ಅವಿಧೇಯತೆಗೆ ಭಾರಿ ಬೆಲೆ ತೆರುವಂತೆ ಮಾಡಿದನು.
ಸರ್ಪಕ್ಕೆ...... ನಂತರ ಸ್ತ್ರೀಗೆ........ಮತ್ತು ಪುರುಷನಿಗೆ - ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಫಲವನ್ನು ನೀನು ತಿಂದ ಕಾರಣ....(ಆದಿಕಾಂಡ 3:17)
ನ್ಯಾಯತೀರ್ಪಿನ ದಿನದಂದು, ಆಪಾದನೆಯನ್ನು ಬೇರೊಬ್ಬರ ಮೇಲೆ ವರ್ಗಾಯಿಸಲು ಯಾವುದೇ ಅವಕಾಶಗಳಿರುವುದಿಲ್ಲ. ಆದ್ದರಿಂದ ನಮ್ಮಲ್ಲಿ ಪ್ರತಿಯೊಬ್ಬರೂ ತನ್ನ ಬಗ್ಗೆ ದೇವರಿಗೆ ಲೆಕ್ಕ ಕೊಡಬೇಕು [ತೀರ್ಪಿನ ಉಲ್ಲೇಖದಲ್ಲಿ ಉತ್ತರವನ್ನು ನೀಡಬೇಕು].
" ಹೀಗಿರಲಾಗಿ ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರ ಮುಂದೆ ಉತ್ತರಕೊಡಬೇಕು. ಆದಕಾರಣ ಇನ್ನು ಮೇಲೆ ಒಬ್ಬರ ವಿಷಯದಲ್ಲೊಬ್ಬರು ತೀರ್ಪುಮಾಡದೆ ಇರೋಣ. ಅದಕ್ಕೆ ಬದಲಾಗಿ ಸಹೋದರನ ಎದುರಿಗೆ ಅಡ್ಡಿಯನ್ನಾಗಲಿ ಎಡತಡೆಯನ್ನಾಗಲಿ ಹಾಕಬಾರದೆಂದು ತೀರ್ಮಾನಿಸಿಕೊಳ್ಳಿರಿ."(ರೋಮನ್ನರು 14:12-13)
Bible Reading: Ecclesiastes 7-10
Prayer
ತಂದೆಯೇ, ನಾನು ನನ್ನನ್ನು ಸಮರ್ಥಿಸಿಕೊಳ್ಳಲು ಬೇರೆ ಜನರನ್ನು ಹೆಚ್ಚಾಗಿ ದೂಷಿಸಿದ್ದೇನೆ ಎಂಬುದನ್ನು ಯೇಸುನಾಮದಲ್ಲಿ ಒಪ್ಪಿಕೊಳ್ಳುತ್ತೇನೆ. ದಯವಿಟ್ಟು ಈ ಅಡ್ಡಿಯನ್ನು ಜಯಿಸಲು ನನಗೆ ಯೇಸುನಾಮದಲ್ಲಿ ಸಹಾಯ ಮಾಡಿ. ಆಮೆನ್.
Join our WhatsApp Channel

Most Read
● ಮತ್ತೊಬ್ಬ ಯೇಸು, ಬೇರೊಂದು ಆತ್ಮ, ಮತ್ತು ಬೇರೊಂದು ಸುವಾರ್ತೆ-1● ಅಶ್ಲೀಲತೆಯಿಂದ ಬಿಡುಗಡೆ ಕಡೆಗಿನ ಪಯಣ
● ಹೊಸ ಒಡಂಬಡಿಕೆಯ ನಡೆದಾಡುವ ದೇವಾಲಯ.
● ಬಾಗಿಲನ್ನು ಮುಚ್ಚಿರಿ.
● ದಿನ 01 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದಿನ 19:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಕರ್ತನಾದ ಯೇಸುಕ್ರಿಸ್ತನನ್ನು ಅನುಕರಣೆ ಮಾಡುವುದು ಹೇಗೆ
Comments