हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಕ್ಷಿಪ್ರವಾಗಿ ವಿಧೇಯರಾಗುವುದರಲ್ಲಿರುವ ಬಲ
Daily Manna

ಕ್ಷಿಪ್ರವಾಗಿ ವಿಧೇಯರಾಗುವುದರಲ್ಲಿರುವ ಬಲ

Tuesday, 30th of April 2024
3 2 659
Categories : ವಿಧೇಯತೆ (Obedience)
ಜೀವನದ ಸವಾಲುಗಳು ಮತ್ತು ಅನಿಶ್ಚಿತತೆಯ ಮದ್ಯದಲ್ಲೂ ದೇವರ ಸ್ವರವನ್ನು ಕೇಳಿ ತಿಳಿದುಕೊಂಡು ಅದರಂತೆ ನಡೆಯುವಂತದ್ದು ಕಷ್ಟಸಾಧ್ಯ. ಆತನಿಂದ ಹೊಂದಿಕೊಂಡ ವಾಗ್ದಾನಗಳಿಗೆ ತದ್ವಿರುದ್ಧವಾದ ಸನ್ನಿವೇಶವನ್ನು ನಾವು ಹಾದು ಹೋಗುವಾಗ ನಿಜವಾಗಿ ನಾವು ಕೇಳಿದ್ದು ದೇವರ ಸ್ವರವೋ ಎಂಬ ಪ್ರಶ್ನೆಯು ಉದ್ಭವಿಸುವಂತೆ ಮಾಡುತ್ತದೆ.
ಆದಾಗಿಯೂ ಆದಿ ಕಾಂಡ 26ನೇ ಅಧ್ಯಾಯದಲ್ಲಿನ ಇಸಾಕನ ಕಥೆಯು ನಮ್ಮ ಮಿತವಾದ ದೃಷ್ಟಿಕೋನಕ್ಕೆ  ಅರ್ಥವಾಗದಿದ್ದರೂ ವಿದೇಯತೆಯನ್ನು ತೋರುವುದರ ಪ್ರಾಮುಖ್ಯತೆ ಬಗ್ಗೆ ಒಂದು ಬಲವಾದ ಪಾಠವನ್ನು ಕಲಿಸುತ್ತದೆ.

ಇಸಾಕನು ಬರಗಾಲದ ಸಮಯದಲ್ಲಿ ಒಂದು ಕಠಿಣ ನಿರ್ಧಾರಕ್ಕೆ ಬಂದಿದ್ದನು. ತರ್ಕಬದ್ಧವಾಗಿ ಆಲೋಚಿಸಿ ನೋಡುವಾಗ ಅವನು ಸಾಕಷ್ಟು ಆಹಾರ -ಸಂಪನ್ಮೂಲಗಳು ಲಭ್ಯವಿದ್ದಂತಹ ಐಗುಪ್ತಕ್ಕೆ ಹೋಗುವುದು ಉತ್ತಮವಾದದ್ದೆ. ಆದರೆ ದೇವರು ಅವನಿಗೆ ಗೇರಾರ್ ದೇಶದಲ್ಲಿ ಉಳಿದುಕೊಂಡು ಇಸಾಕನ ತಂದೆಯಾದ ಅಬ್ರಹಾಮನಿಗೆ ಮಾಡಿದಂತಹ ವಾಗ್ದಾನದಲ್ಲಿ ನೆಲೆಗೊಳ್ಳುವಂತೆ ಸೂಚಿಸಿದನು. ಕಾಣುತ್ತಿರುವ ಸಂಕಷ್ಟಗಳು ಮತ್ತು ಭವಿಷ್ಯದಲ್ಲಿ ಮುಂದೆ ಏನಾಗುತ್ತದೆ ಎಂಬ ಅನಿಶ್ಚಿತತೆಯ ನಡುವೆಯೂ ಇಸಾಕನು ದೇವರ ಧ್ವನಿಗೆ ವಿಧೇಯನಾಗುವ ಆಯ್ಕೆಯನ್ನು ಮಾಡಿಕೊಂಡನು.

ವಿಶೇಷವಾಗಿ ಆತನ ಸೂಚನೆಗಳು ನಮ್ಮ ಸ್ವಾಭಾವಿಕ ಬಯಕೆಗಳಿಗೂ ಪ್ರಾಪಂಚಿಕವಾದ ಬುದ್ದಿವಂತಿಕೆಗೂ ವಿರುದ್ಧವಾಗಿ ತೋರುತ್ತಿರುವಾಗ ಅದಕ್ಕೆ ವಿಧೇಯರಾಗುವಂತದ್ದು ಒಂದು ಸವಾಲೇ ಆಗಿರುತ್ತದೆ.ಆದರೆ ಪ್ರವಾದಿಯಾದ ಯೆಶಾಯನು ನಮಗೆ ನೆನಪಿಸುವಂತೆ ‭ "ಯೆಹೋವನು ಹೀಗನ್ನುತ್ತಾನೆ - ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ. [9] ಭೂವಿುಯ ಮೇಲೆ ಆಕಾಶವು ಎಷ್ಟು ಉನ್ನತವೋ ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ."

ನಾವು ದೇವರ ಉನ್ನತವಾದ ಆಲೋಚನೆಗಳನ್ನು ಮತ್ತು ಆತನ ಉನ್ನತವಾದ ಮಾರ್ಗಗಳನ್ನು ವಿಶ್ವಾಸಿಸುವಾಗ ಅದನ್ನು ಗ್ರಹಿಸಲು ಕಷ್ಟವಾಗಿದ್ದರೂ ನಾವು ಅದಕ್ಕೆ ವಿಧೇಯರಾದಾಗ ನಾವು ಆತನಿಂದ ಆಶೀರ್ವಾದಗಳನ್ನು ಸಕಲ ಸೌಭಾಗ್ಯಗಳನ್ನು ಹೊಂದಿಕೊಳ್ಳುವ ಸ್ಥಾನವನ್ನು ಪಡೆಯುತ್ತೇವೆ.ಬರಗಾಲದ ಸಂಕಷ್ಟದ ನಡುವೆಯೂ ದೇವರ ಸ್ವರಕ್ಕೆ ವಿದೇಯನಾದ ಇಸಾಕನು ಆ ವರ್ಷದಲ್ಲಿ ನೂರರಷ್ಟು ಬೆಳೆಯನ್ನು ದೇವರ ಆಶೀರ್ವಾದವನ್ನು ಹೊಂದಿಕೊಂಡನು (ಆದಿ 26:12).ದೇವರು ಅವನ ನಂಬಿಕೆಯನ್ನೂ  ಬದ್ಧತೆಯನ್ನೂ ಸನ್ಮಾನಿಸಿ,  ವಿಧೇಯತೆಯೇ ದೈವಿಕ ದಯೆ ಮತ್ತು ಸಮೃದ್ಧಿಯನ್ನು ಹೊಂದಿಕೊಳ್ಳಲಿರುವ ದ್ವಾರವೆಂಬುದನ್ನು ಪ್ರದರ್ಶಿಸಿದನು.

ಇದೇ ರೀತಿಯಲ್ಲಿಯೇ ಕಾನಾ ಊರಿನಲ್ಲಾದ ಮದುವೆಯಲ್ಲಿ ಮರಿಯಳು ಸೇವಕರಿಗೆ ಯೇಸು ಹೇಳಿದಂತೆ ಮಾಡಲು ಸೂಚಿಸಿದಳು. ದ್ರಾಕ್ಷಾ ರಸವನ್ನು ಸಂಗ್ರಹಿಸಲು ಬಾನಿಗಳಿಗೆ  ನೀರು ತುಂಬುವಂತೆ ಆತನು ಕೊಟ್ಟ ಸೂಚನೆಯು  ಅಸಾಮಾನ್ಯವಾದದ್ದು, ಅಸಂಬದ್ಧವಾದದ್ದೂ ಎನಿಸಿದರೂ  ಸೇವಕರು ಅದಕ್ಕೆ ಕ್ಷಿಪ್ರವಾಗಿ ವಿಧೇಯರಾದರು. (ಯೋಹಾನ 2:5). ಆ ಒಂದು ಘಳಿಗೆಯಲ್ಲಿ ಆ ಸೇವಕರು ಆತನ ಕೊಟ್ಟ ಸೂಚನೆಗೆ ತಕ್ಷಣವೇ ವಿಧೇಯ ರಾಗುವಂಥದ್ದು ಬಹಳ ನಿರ್ಣಾಯಕ ಅಂಶವಾಗಿತ್ತು. ಆಕಸ್ಮಾತ್ ಅವರು ಆಲಸ್ಯ ಮಾಡಿದ್ದರೆ ಅದು ಅನವಶ್ಯಕ ಗೊಂದಲಕ್ಕೂ ಅವಮಾನಕ್ಕೂ ಆ ಸಂಭ್ರಮವನ್ನು ಹಾಳು ಮಾಡುವುದಕ್ಕೂ ದಾರಿ ಮಾಡಿಕೊಡುತ್ತಿತ್ತು
ಅವರ ಆ ಕ್ಷಿಪ್ರವಾದ ಕ್ರಿಯೆಯು ಯೇಸುವು ನೀರನ್ನು ಉತ್ಕೃಷ್ಟವಾದ ದ್ರಾಕ್ಷಾ ರಸವನ್ನಾಗಿ ಮಾರ್ಪಡಿಸಿ ಮತ್ತು ತನ್ಮೂಲಕ ದೇವರ ಮಹಿಮೆಯನ್ನು ಪ್ರಕಟಗೊಳಿಸುವಂತ  ಮೊದಲ ಅದ್ಭುತ ಮಾಡಲು ಅನುವು ಮಾಡಿಕೊಟ್ಟಿತು.

ಆ ಒಂದು ಕ್ಷಣದಲ್ಲಿ ಸೇವಕರು ಆತನು ಕೊಟ್ಟ ಸೂಚನೆಗೆ ವಿಧೇಯರಾಗಲು ಹಿಂದೂ-ಮುಂದೂ ನೋಡಿದ್ದರೆ ಅಥವಾ ಯೇಸುವನ್ನು ಹೇಗಾದೀತು ಎಂದು ಪ್ರಶ್ನೆ ಮಾಡುತ್ತಾ ಕುಳಿತಿದ್ದರೆ, ಅವರು ಆತನ ಅದ್ಭುತ ಬಲದ ಪ್ರಕಟಣೆಯನ್ನು ನೋಡುವ ಹಾಗೂ ಅದಕ್ಕೆ ಸಾಕ್ಷಿಯಾಗುವ ಸೌಭಾಗ್ಯದಿಂದ ವಂಚಿತರಾಗುತ್ತಿದ್ದರು ಮತ್ತು ದ್ರಾಕ್ಷಾ ರಸದ ಕೊರತೆಯೂ ಇಡೀ ಮದುವೆಯ ಸಂಭ್ರಮವನ್ನು ಆವರಿಸಿಕೊಂಡು ವಧು-ವರ ಮತ್ತು ಅವರ ಕುಟುಂಬದವರು ಯಾತನೆಗೆ ಈಡಾಗುವಂತೆ ಮಾಡಿ ಬಿಡುತ್ತಿತ್ತು.ಆದರೆ ಆ ಸೇವಕರು ತಕ್ಷಣವೇ ವಿಧೇಯರಾದ್ದರಿಂದ ದೇವರ ಒದಗಿಸುವಿಕೆಯು ಸಮೃದ್ಧಿಯಾಗಿ ಒದಗಿ ಬಂದು ಆ ಸಮಾರಂಭವು ಅದ್ದೂರಿಯಾಗಿ ಜರುಗಿತು.

ನಾವಿಲ್ಲಿ ಕಲಿಯಬೇಕಾದಂತ ಪಾಠಗಳು ಸ್ಪಷ್ಟವಾಗಿದೆ. ಆಲಸ್ಯ ಮಾಡಿ ತೋರಿದ ವಿಧೇಯತೆಯು ಅವಿಧೇಯತೆಯೇ ಆಗಿದೆ. ನಾವು ದೇವರ ವಾಕ್ಯವನ್ನು ಅನುಸರಿಸಲು ಸಾವಕಾಶ ಮಾಡಿದರೆ ಅಥವಾ ಆತನ ಸೂಚನೆಯನ್ನು  ತಕ್ಷಣವೇ ಕಾರ್ಯಗತಗೊಳಿಸದೇ ಹೋದರೆ ನಾವು ನಮ್ಮನ್ನು ಆತನು ನಮಗಾಗಿ ಇಟ್ಟಿರುವ ಆಶೀರ್ವಾದಗಳನ್ನು ಕಳೆದುಕೊಳ್ಳುವ ಅಪಾಯಕ್ಕೆ ಈಡು ಮಾಡಿಕೊಳ್ಳುತ್ತೇವೆ.

ಆಲಸ್ಯವು ಅವಕಾಶ ವಂಚಿತವಾಗುವುದಕ್ಕೂ ಅನಗತ್ಯ ಹೋರಾಟಗಳಿಗೂ ಮತ್ತು ದೀರ್ಘಕಾಲದ ಕಷ್ಟಗಳಿಗೂ ಗುರಿ ಮಾಡಬಲ್ಲದು.

ನಾನು ನನ್ನ ಜೀವಿತದಲ್ಲಿ ಕ್ಷಿಪ್ರವಾಗಿ ತೋರಬೇಕಾದ ವಿಧೇಯತೆಗಿರುವ ಮೌಲ್ಯದ ಪಾಠವನ್ನು ಪ್ರಾಯೋಗಿಕವಾದ ಅನುಭವದಿಂದ ಕಲಿತಿದ್ದೇನೆ. ಕೆಲವೊಂದು ಸಮಯದಲ್ಲಿ ದೇವರು ಮಾತನಾಡಿ ಕೆಲವು ವಿಚಾರಗಳಿಗಾಗಿ ನಿರ್ದಿಷ್ಟವಾದ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆಯೂ ಅಥವಾ ನಿರ್ದಿಷ್ಟವಾದ ನಿರ್ಧಾರವನ್ನು ಕೈಗೊಳ್ಳುವಂತೆಯೂ ನನ್ನನ್ನು ಒತ್ತಾಯ ಪಡಿಸುತ್ತಿದ್ದನು.
ಆ ಕ್ಷಣದಲ್ಲಿ ನಾನು ಆಲಸ್ಯ ಮಾಡುತ್ತಿದ್ದೆ  ಅಥವಾ ಮತ್ತೊಂದಾವರ್ತಿ ಆತರ ಮಾರ್ಗದರ್ಶನ ಬೇಡಲು ಕಾಯುತ್ತಿದ್ದರಿಂದಾಗಿ ನಾನು ಮತ್ತಷ್ಟು ಸವಾಲುಗಳನ್ನು ಎದುರಿಸುವಂತಹ ಸಂಕಷ್ಟಕ್ಕೆ ಸಿಲುಕಿದೆ. ನಾನು ಸುಮ್ಮನೆ ಆತನ ಸ್ವರಕ್ಕೆ ವಿಧೇಯನಾಗಿದ್ದರೆ ಅದೆಷ್ಟೋ ನೋವುಗಳನ್ನು ಅನುಭವಿಸುವುದರಿಂದ ತಪ್ಪಿಸಿಕೊಳ್ಳಬಹುದಾಗಿತ್ತು.

 ಅಂತಹ ಒಂದು ಸಂದರ್ಭ ನನ್ನ ನೆನಪಿಗೆ ಬರುತ್ತಿದೆ. ಒಂದು ಸಾರಿ ದೇವರು ಸಂಕಷ್ಟಕ್ಕೊಳಗಾಗಿದ್ದ ನನ್ನ ಸ್ನೇಹಿತನನ್ನು ಪ್ರೋತ್ಸಾಹದ ನಾಲ್ಕು ಮಾತುಗಳನ್ನು ಆಡುವಂತೆ ಒತ್ತಾಯ ಪಡಿಸಿದನು. ನಾನು ಇದಕ್ಕೆ ತಕ್ಷಣವೇ ಸ್ಪಂದಿಸಬೇಕೆಂದು ನನಗೆ ಗೊತ್ತಿದ್ದರೂ ನನ್ನ ಅವಿಶ್ರಾಂತ ವೇಳಾಪಟ್ಟಿಯ ಮಧ್ಯದಲ್ಲಿ ಸಿಲುಕಿಕೊಂಡು ಕಡೆಗೇ ಒಂದು ಸಾರಿ ನನ್ನ ಸ್ನೇಹಿತನಿಗೆ ಕರೆ ಮಾಡಿದೆ. ಆದರೆ ಅಷ್ಟರಲ್ಲಿ ನನ್ನ ಸ್ನೇಹಿತನು ಆಗಲೇ ಹತಾಶೆಯ ಆಳವಾದ ಸ್ಥಿತಿಯನ್ನು ತಲುಪಿಬಿಟ್ಟಿದ್ದ ಇದರಿಂದಾಗಿ ನನ್ನ ಪ್ರೋತ್ಸಾಹದ ಮಾತುಗಳ ಪ್ರಭಾವವು ಕಡಿಮೆಯಾಯಿತು. ಆದರೆ ದೇವರು ಹೇಳಿದ ತಕ್ಷಣವೇ ವಿಧೇಯನಾಗಿದ್ದರೆ ನಾನು ದೇವರ ಪ್ರೀತಿ ಮತ್ತು ಸ್ಪೂರ್ತಿಯನ್ನು ಹಂಚುವ ಪರಿಣಾಮಕಾರಿಯಾದ ಪಾತ್ರೆಯಾಗುತ್ತಿದ್ದೆ. ಅವನೀಗ ಆರಾಮವಾಗಿ ಇದ್ದಾನೆ ಅದಕ್ಕಾಗಿ ನಾನು ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ.

ನಮ್ಮ ಅನಿಶ್ಚಿತತೆ ಸವಾಲುಗಳ ಮಾರ್ಗದಲ್ಲಿಯೂ ದೇವರ ವಾಕ್ಯಕ್ಕೆ ತಕ್ಷಣವೇ ವಿಧೇಯರಾಗುವಂಥದ್ದು ದೇವರಲ್ಲಿ ನಾವಿಟ್ಟಿರುವ ವಿಶ್ವಾಸಕ್ಕೆ ಮತ್ತು ಆತನ ಪರಿಪೂರ್ಣ ಚಿತ್ತಕ್ಕೆ ಶರಣಾಗುವ ನಮ್ಮ ಮನೋ ಬಯಕೆಗೂ ಅದು ಗುರುತಾಗಿದೆ. ಅದು ಆತನ ಒಳ್ಳೆಯತನ, ಜ್ಞಾನ ಹಾಗೂ ನಂಬಿಗಸ್ತಿಕೆಯ ಮೇಲೆ ನಾವಿಟ್ಟಿರುವ ನಂಬಿಕೆಯನ್ನು ಪ್ರದರ್ಶಿಸುತ್ತದೆ. ನಾವು ಕ್ಷಿಪ್ರವಾಗಿ ವಿಧೇಯರಾಗುವ  ಹೃದಯವನ್ನು ಬೆಳೆಸಿಕೊಳ್ಳುವಾಗ ನಾವು ದೇವರ ಯೋಜನೆಗಳೊಂದಿಗೆ ನಮ್ಮನ್ನು ಒಗ್ಗೂಡಿಸಿಕೊಂಡು ಆತನು ನಮ್ಮ ಜೀವಿತಕ್ಕಾಗಿ ಇಟ್ಟಿರುವ ಎಲ್ಲಾ ಮೇಲುಗಳನ್ನು ಅನುಭವಿಸುವವರಾಗುತ್ತೇವೆ.
Prayer
ತಂದೆಯೇ, ವಿದೇಯತೆಯೇ ಎಲ್ಲಾ ಯಜ್ಞಗಳಿಗಿಂತಲೂ ಶ್ರೇಷ್ಠವಾದದ್ದು ಎಂಬುವಂತೆ ನಿನ್ನ ವಾಕ್ಯಕ್ಕೆ ಕ್ಷಿಪ್ರವಾಗಿ ವಿಧೇಯತೆ ತೋರುವ ಹೃದಯವನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸು. ಆಮೆನ್.


Join our WhatsApp Channel


Most Read
● ಪುರುಷರು ಏಕೆ ಪತನಗೊಳ್ಳುವರು -3
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಆ ಸಂಗತಿಗಳನ್ನು ಸಕ್ರಿಯ ಗೊಳಿಸಿ
● ಅತ್ಯುತ್ತಮ ದೇವರು ನೀಡಿದ ಸಂಪನ್ಮೂಲ
● ನೀವು ಯಾರೊಂದಿಗೆ ನಡೆಯುತ್ತಿದ್ದೀರಿ?
● ಆತ್ಮೀಕ ಬಾಗಿಲುಗಳನ್ನು ಮುಚ್ಚುವುದು
● ಕರ್ತನನ್ನು ಮೆಚ್ಚಿಸಲಿರುವ ಖಚಿತವಾದ ಮಾರ್ಗ.
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login