Daily Manna
4
1
885
ದಿನ 02 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
Saturday, 23rd of November 2024
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ಸೈತಾನನ ಮಿತಿಗಳನ್ನು ಮುರಿಯುವುದು
"ಅದಕ್ಕೆ ಫರೋಹನು ಅವರಿಗೆ, “ನಿಮ್ಮ ದೇವರಾದ ಯೆಹೋವನಿಗೆ ಅರಣ್ಯದಲ್ಲಿ ಯಜ್ಞಮಾಡುವಂತೆ ನಾನು ನಿಮಗೆ ಅಪ್ಪಣೆ ಕೊಡುತ್ತೇನೆ. ಆದರೆ ಬಹಳ ದೂರ ಹೋಗಬಾರದು. ನನಗೋಸ್ಕರ ಪ್ರಾರ್ಥನೆ ಮಾಡಿರಿ” ಎಂದನು. (ವಿಮೋಚನಕಾಂಡ 8:28 )
ಇಂದಿನ ವಾಕ್ಯಧ್ಯಾನವು ಇಸ್ರಾಯೇಲ್ಯರನ್ನು ಫರೋಹನು ಹೇಗೆ ಗುಲಾಮರನ್ನಾಗಿ ಮಾಡಿಕೊಂಡಿದ್ದನೆಂದು ತಿಳಿಸುತ್ತದೆ. ಫರೋಹನು ಅವರ ಮೇಲೆ ಬಹಳವಾಗಿ ಮಿತಿಯನ್ನು ವಿಧಿಸಿ ಅವರು ಹೆಚ್ಚು ದೂರ ಹೋಗಕೂಡದೆಂದು ಎಂದು ಆಜ್ಞಾಪಿಸಿದ್ದನು. ದುರದೃಷ್ಟವಶಾತ್, ಇಂದು ಕೂಡ ಅನೇಕ ಕ್ರೈಸ್ತರು ತಮ್ಮ ಜೀವನದ ಮೇಲೆ ಇರಿಸಲಾಗಿರುವ ಸೈತಾನನ ಮಿತಿಗಳ ಕಾರ್ಯಾಚರಣೆಯ ಕುರಿತು ಜ್ಞಾನವಿಲ್ಲದವರಾಗಿದ್ದಾರೆ.
ಸೈತಾನನ ಮಿತಿಗಳು ಯಾವುವು?
ಸೈತಾನನ ಮಿತಿ ಎನ್ನುವಂತದ್ದು ಒಬ್ಬ ವ್ಯಕ್ತಿ, ನಿರ್ದಿಷ್ಟ ಸ್ಥಳ ಅಥವಾ ನಿರ್ದಿಷ್ಟ ಸಂಗತಿಗಳ ಮೇಲೆ ನಿರ್ಬಂಧಗಳನ್ನು ಹೇರುವಂತಾದ್ದಾಗಿದೆ. ಅದು ಒಬ್ಬ ವ್ಯಕ್ತಿಗೆ ಒಳ್ಳೆಯ ಸಂಗತಿಗಳು ದೊರಕದಂತೆ ತಡೆಯುವಂತದ್ದಾಗಿದೆ . ಸೈತಾನನ ಈ ಕಾರ್ಯಾಚರಣೆಯು ಒಬ್ಬ ವ್ಯಕ್ತಿಯ ಪ್ರಗತಿಯನ್ನು ನಿಲ್ಲಿಸಬಹುದು ಅಥವಾ ನಿಧಾನಗೊಳಿಸಬಹುದು.
ಹಾಗಾಗಿ ನಾವು ಸೈತಾನನ ಯೋಜನೆಗಳ ಬಗ್ಗೆ ಅಜ್ಞಾನಿಗಳಾಗಬಾರದು ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ. (2 ಕೊರಿಂಥ 2:11)
ಅಲ್ಲದೆ, ಸೈತಾನನ ಕಾರ್ಯಗಳನ್ನು ನಾಶಪಡಿಸಲೆಂದೆ ಯೇಸುಕ್ರಿಸ್ತನು ಪ್ರತ್ಯಕ್ಷವಾದನು (1 ಯೋಹಾನ 3:8).ಆದ್ದರಿಂದ, ನಾವು ಸೈತಾನನ ಕಾರ್ಯಾಚರಣೆಗಳ ಬಗ್ಗೆ ಮಾತನಾಡುವಾಗ, ಅದು ಸೈತಾನನನ್ನು ವೈಭವೀಕರಿಸಲು ಹೇಳದೇ ಅವನ ಕುರಿತು ಕ್ರೈಸ್ತರಿಗೆ ಜ್ಞಾನೋದಯವಾಗಿ ಅವುಗಳನ್ನು ನಾಶಮಾಡುವಂತದ್ದಾಗಿರುತ್ತದೆ. ನಿಮ್ಮ ಉದ್ಯೋಗ , ಆರೋಗ್ಯ, ಕುಟುಂಬ ಅಥವಾ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಯಾವುದೇ ಸೈತಾನನ ಮಿತಿಗಳು ಇಂದು ಯೇಸುನಾಮದಲ್ಲಿ ನಾಶವಾಗಿ ಹೋಗಲಿ.
ಸೈತಾನನ ಮಿತಿಗಳಲ್ಲಿ ಪ್ರಮುಖ 3 ವಿಧಗಳು
1. ವೈಯಕ್ತಿಕ ಮಿತಿ:
ಒಬ್ಬ ವ್ಯಕ್ತಿಯನ್ನು ನಿರ್ಬಂಧಿಸುವ ಮಿತಿ ಇದು. ಈ ಮಿತಿಯು ಸ್ವಯಂ ಪ್ರೇರಿತವಾಗಿರಬಹುದು (ಅಜ್ಞಾನದಿಂದ) ಅಥವಾ ಸೈತಾನನ ಶಕ್ತಿಗಳಿಂದ ಉಂಟಾಗಬಹುದು .
ಒಮ್ಮೆ ಒಬ್ಬ ವ್ಯಕ್ತಿ ಭಾರತದಲಿನ ಇನ್ನೊಂದು ರಾಜ್ಯದಲ್ಲಿ ಸುವಾರ್ತೆ ಕಾರ್ಯಕ್ರಮಕ್ಕೆ ಹಾಜರಾಗಲು ಪ್ರವಾಸದಲ್ಲಿ ನಮ್ಮೊಂದಿಗೆ ಸೇರಿಕೊಂಡರು. ನಾವು ನಮ್ಮ ಚೆಕ್-ಇನ್ ಮತ್ತು ಇತರ ವಿಧಿವಿಧಾನಗಳನ್ನು ಮುಗಿಸಿ ವಿಮಾನ ಹತ್ತಲು ಕಾಯುತ್ತಿದ್ದೆವು. ಇನ್ನೇನು ವಿಮಾನ ಹತ್ತುವ ಸಮಯ ಬರುವಾಗ , ಈ ವ್ಯಕ್ತಿಗೆ ಇದ್ದಕ್ಕಿದ್ದಂತೆ ಉಸಿರುಗಟ್ಟಿದಂತಾಗಿ , ಅವನಿಗೆ ಏನಾಗುತ್ತಿದೆ ಎಂದು ಅರಿಯದೇ ನಾವು ಅವನನ್ನು ಅವನ ಹೆಂಡತಿಯೊಂದಿಗೆ ಬಿಟ್ಟು ಅವನಿಗೆ ಬೇಕಾದ ಕೆಲವು ವೃತ್ತಿಪರ ವೈದ್ಯಕೀಯ ಜನರ ಸಹಾಯಕ್ಕಾಗಿ ಏರ್ಪಾಟು ಮಾಡಿ ನಾವು ಹೊರೆಟೆವು. ಅದೊಂದು ಸಣ್ಣ ವಿಮಾನಯಾನವಾಗಿದ್ದು , ನಾವು ನಮ್ಮ ನಿಲ್ದಾಣಕ್ಕೆ ತಲುಪಿದ ಕೂಡಲೇ ನಾನು ಅವನ ಹೆಂಡತಿಗೆ ಕರೆ ಮಾಡಿ ಆ ವ್ಯಕ್ತಿ ಹೇಗಿದ್ದಾರೆ ಎಂದು ವಿಚಾರಿಸಿದೆ. ಆದರೆ ನನಗೆ ಆಶ್ಚರ್ಯವಾಗುವಂತೆ, ಆ ವ್ಯಕ್ತಿಯೇ ಫೋನ್ ಎತ್ತಿಕೊಂಡು , "ಫ್ಲೈಟ್ ಟೇಕ್ ಆಫ್ ಆದ ತಕ್ಷಣ, ನಾನು ಆಶ್ಚರ್ಯಕರವಾಗಿ ಸರಿಯಾಗಿದ್ದೇನೆ." ಎಂದು ಹೇಳಿದರು
ಮುಂದೆ ನಮ್ಮ ವಿಮೋಚನಾ ಸಭೆಯೊಂದರಲ್ಲಿ, ಈ ವ್ಯಕ್ತಿಯು ಸಂಪೂರ್ಣವಾಗಿ ಬಿಡುಗಡೆ ಹೊಂದಿಕೊಂಡರು. ಅವರ ಕುಟುಂಬದಲ್ಲಿ ಅದುವರೆಗೂ ಯಾರೂ ವಿಮಾನದಲ್ಲಿ ಪ್ರಯಾಣಿಸಿರಲಿಲ್ಲ ಎಂದು ದೇವರ ಆತ್ಮನು ಆ ಸಭೆಯಲ್ಲಿ ಬಹಿರಂಗಪಡಿಸಿದನು ಮತ್ತು ಅದುವೇ ಆ ವ್ಯಕ್ತಿಯ ಜೀವನದ ಮೇಲೆ ಸೈತಾನನು ಹೇರಿದ್ದ ಮಿತಿಯಾಗಿತ್ತು.
2. ಸಾಮೂಹಿಕ ಮಿತಿ:
ಇದು ಕುಟುಂಬ, ಗ್ರಾಮ, ಪಟ್ಟಣ ಅಥವಾ ಒಂದು ಜನಾಂಗದ ಜನರ ಗುಂಪಿನ ಮೇಲೆ ಹೇರುವ ನಿರ್ಬಂಧದ ಕುರಿತಾದ್ದಾಗಿರುತ್ತದೆ.
“ಆ ನಂತರ ಅರಾಮ್ಯರ ಅರಸನಾದ ಬೆನ್ಹದದನು ತನ್ನ ಎಲ್ಲಾ ಸೈನ್ಯವನ್ನು ಕೂಡಿಸಿಕೊಂಡು ಬಂದು ಸಮಾರ್ಯಕ್ಕೆ ಮುತ್ತಿಗೆ ಹಾಕಿದನು. ಆಗ ಸಮಾರ್ಯ ಪಟ್ಟಣದಲ್ಲಿ ಘೋರವಾದ ಬರವಿದ್ದಿತು. ಮುತ್ತಿಗೆಯ ದೆಸೆಯಿಂದ ಅದು ಮತ್ತಷ್ಟು ಘೋರವಾಗಿದ್ದುದರಿಂದ ಒಂದು ಕತ್ತೆಯ ತಲೆಗೆ ಎಂಭತ್ತು ರೂಪಾಯಿಗಳೂ, ಅರ್ಧ ಸೇರು ಪಾರಿವಾಳದ ಮಲವು ಐದು ರೂಪಾಯಿಗಳಿಗೂ ಮಾರಲ್ಪಟ್ಟವು." (2 ಅರಸುಗಳು 6:24-25)
3. ಹಣಕಾಸಿನ ಅಥವಾ ಆರ್ಥಿಕತೆ ಮೇಲಿನ ಮಿತಿ :
ಆರ್ಥಿಕತೆ ಮೇಲಿನ ಮಿತಿಗಳ ಲಕ್ಷಣಗಳೆಂದರೆ ನಿರುದ್ಯೋಗ, ಬಡತನ, ಮರುಕಳಿಸುವ ಹಣಕಾಸಿನ ಸಾಲಗಳು ಮತ್ತು ಬಿಕ್ಕಟ್ಟುಗಳು. ದೇವರ ಶಕ್ತಿಯಿಂದ, ನಿಮ್ಮ ಜೀವನದ ವಿರುದ್ಧ ಇರುವ ಎಲ್ಲಾ ಸೈತಾನನ ಮಿತಿಗಳನ್ನು ಯೇಸುವಿನ ಹೆಸರಿನಲ್ಲಿ ಪವಿತ್ರಾತ್ಮದ ಬೆಂಕಿಯಿಂದ ನಾಶಪಡಿಸಬೇಕೆಂದು ನಾನು ನಿಮ್ಮ ಜೀವನದ ಮೇಲೆ ಆದೇಶಿಸುತ್ತೇನೆ.
ಸೈತಾನನ ಮಿತಿಗಳಿಗೆ ಸತ್ಯವೇದದಲ್ಲಿನ ಉದಾಹರಣೆಗಳು
1. ಯೆಹೋಶುವ ಮತ್ತು ಇಸ್ರಾಯೇಲ್ಯರು
"ಯೆರಿಕೋವಿನವರು ಇಸ್ರಾಯೇಲ್ಯರಿಗೆ ಹೆದರಿ ತಮ್ಮ ಪಟ್ಟಣದ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿಕೊಂಡರು. ಯಾರೂ ಒಳಗೆ ಹೋಗಲಿಲ್ಲ; ಹೊರಗೆ ಬರಲಿಲ್ಲ. ಆಗ ಯೆಹೋವನು ಯೆಹೋಶುವನಿಗೆ “ನೋಡು, ನಾನು ಯೆರಿಕೋವನ್ನೂ ಅದರ ಅರಸನನ್ನೂ ಹಾಗೂ ಯುದ್ಧವೀರರನ್ನೂ ನಿನ್ನ ಕೈಗೆ ಒಪ್ಪಿಸಿದ್ದೇನೆ.... ಎಂದನು" (ಯೆಹೋಶುವ 6:1-2)
ಇಸ್ರಾಯೇಲ್ಯರು ಇಲ್ಲಿ ಗಮನಾರ್ಹ ಹಿನ್ನಡೆಯನ್ನು ಎದುರಿಸಿದ್ದರು. ಏಕೆಂದರೆ ಯೆರಿಕೋ ಕೋಟೆಯನ್ನು ಭೇದಿಸಲು ಅವರಿಂದ ಸಾಧ್ಯವಾಗಿರಲಿಲ್ಲ ಏಕೆಂದರೆ ಕೋಟೆಯ ಕದಗಳು ಬಂಧಿಸಲ್ಪಟ್ಟಿದ್ದವು ಮತ್ತು ಆ ಕೋಟೆಯಪೌಳಿ ಗೋಡೆಯು ಅಸಾಧಾರಣವಾಗಿತ್ತು. ದೇವರ ಸಹಾಯವಿಲ್ಲದೆ ಆ ಮಿತಿಯನ್ನು ನಾಶಮಾಡಲು ಸಾಧ್ಯವೇಇಲ್ಲದ್ದಾಗಿತ್ತು; ಅದು ದೈತ್ಯ ಮಿಲಿಟರಿ ಶಕ್ತಿಯನ್ನೂ ಮೀರಿತ್ತು.
2. ಯೆಹೂದದ ವಿರುದ್ಧವಾಗಿ ಎದ್ದಿದ್ದ ಕೊಂಬುಗಳು
"ಅನಂತರ ಯೆಹೋವನು ನನಗೆ ನಾಲ್ಕು ಮಂದಿ ಕಮ್ಮಾರರನ್ನು ತೋರಿಸಿದನು. ಆಗ ನಾನು, “ಇವರು ಏನು ಮಾಡುವುದಕ್ಕೆ ಬಂದಿದ್ದಾರೆ?” ಎಂದು ಕೇಳಲು ಅವನು, “ಈ ಕೊಂಬುಗಳು ಯೆಹೂದದವರಲ್ಲಿ ಯಾರೂ ತಲೆಯೆತ್ತದಂತೆ ಅವರನ್ನು ಚದುರಿಸಿವೆಯಷ್ಟೆ; ಇವರಾದರೋ ಯೆಹೂದ ದೇಶದವರನ್ನು ಚದುರಿಸಬೇಕೆಂದು ತಲೆಯೆತ್ತಿದ ಜನಾಂಗಗಳ ಕೊಂಬುಗಳನ್ನು ಹೆದರಿಸಿ ಕೆಡುವುದಕ್ಕೆ ಬಂದಿದ್ದಾರೆ” ಎಂದು ಹೇಳಿದನು. (ಜೆಕರ್ಯಾ 1: 20-21)
ಸೈತಾನನ ಕೊಂಬುಗಳು ಜನರನ್ನು ಏಳಿಗೆಯಾಗದಂತೆ ತಡೆಯುತ್ತವೆ; ಈ ಮಿತಿಗಳೇ ಜನರ ಭವಿಷ್ಯತನ್ನು ಸೀಮಿತಗೊಳಿಸುವಂತಾವುಗಳಾಗಿವೆ. ಆತ್ಮಿಕ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ ಮತ್ತು ಜನರು ತಮ್ಮ ಆರ್ಥಿಕತೆ, ಆರೋಗ್ಯ ಮತ್ತು ವೃತ್ತಿಜೀವನದಲ್ಲಿ ದೈಹಿಕವಾಗಿ ಏಕೆ ಹೋರಾಡುತ್ತಿದ್ದಾರೆ ಎಂಬುದನ್ನು ದೇವರು ದೈವಿಕವಾಗಿ ಪ್ರವಾದಿಗೆ ಇಲ್ಲಿ ತೋರಿಸಿದನು. ದೈವಿಕ ಪ್ರಕಟಣೆ ಇಲ್ಲದೆ, ಸೈತಾನನ ಮಿತಿಗಳ ಕಾರ್ಯಾಚರಣೆಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರ.
Bible Reading Plan : Matthew 8-12
Prayer
ಪ್ರತಿಯೊಂದು ಪ್ರಾರ್ಥನಾ ಕ್ಷಿಪಣಿಯನ್ನು ಕನಿಷ್ಠ 2 ನಿಮಿಷಗಳ ಕಾಲ ಅಥವಾ ನಿಮ್ಮ ಆತ್ಮದಲ್ಲಿ ಬಿಡುಗಡೆಯನ್ನು ಅನುಭವಿಸುವವರೆಗೆ ಪ್ರಾರ್ಥಿಸಿ.
1. ದೇವರನ್ನು ಸ್ತುತಿಸಿ ಮತ್ತು ಆರಾಧಿಸಿ. (ನಿಮ್ಮನ್ನು ಆತ್ಮೀಕ ಆಯಾಮಕ್ಕೆ ಕೊಂಡೋಯ್ಯಲು ಸಹಾಯ ಮಾಡುವಂತ ಆತ್ಮೀಕ ಆರಾಧನೆ ಸಂಗೀತವನ್ನು ನೀವು ಕೇಳಬಹುದು )
2. ನನ್ನ ಹಣಕಾಸು, ಆರೋಗ್ಯ ಮತ್ತು ಪ್ರಗತಿಗೆ ವಿರುದ್ಧವಾಗಿ ಇರಿಸಲಾದ ಯಾವುದೇ ಮಿತಿಯನ್ನು ಯೇಸುನಾಮದಲ್ಲಿ ಪವಿತ್ರಾತ್ಮನ ಅಗ್ನಿಯು ಸುಟ್ಟು ಬೂದಿ ಮಾಡಲಿ. (ಯೆಶಾಯ 54:17, ನಹೂಮ 1:9)
3. ಕರ್ತನೇ, ನನ್ನ ಜೀವನದ ವಿರುದ್ಧ ಕೆಲಸ ಮಾಡುವ ಯಾವುದೇ ಗುಪ್ತ ಮಿತಿಯನ್ನು ಯೇಸುನಾಮದಲ್ಲಿ ಪ್ರಕಟಪಡಿಸು . (ಯೋಬ 12:22, ಲೂಕ 8:17)
4. ನನ್ನ ಜೀವನದ ವಿರುದ್ಧ ಕೆಲಸ ಮಾಡುವ ಎಲ್ಲಾ ಸೈತಾನನ ಮಿತಿಯನ್ನು ಯೇಸುವಿನ ರಕ್ತದಿಂದ, ಯೇಸುವಿನ ಹೆಸರಿನಲ್ಲಿ ನಾನು ಮುರಿದು ಹಾಕುತ್ತೇನೆ. (ಪ್ರಕಟನೆ 12:11, ಕೊಲೊಸ್ಸೆ 2:14-15)
5. ನನ್ನ ಪ್ರಗತಿಯನ್ನು ತಡೆಯುವ ಎಲ್ಲಾ ಸಂಗತಿಯನ್ನು ದೇವರ ಆತ್ಮದಿಂದ, ಯೇಸುನಾಮದಲ್ಲಿ ನಾನು ಚದುರಿಸುತ್ತೇನೆ. (ಯೆಶಾಯ 59:19, ಜೆಕರ್ಯಾ 4:6-7)
6. ಉತ್ತಮವಾದವುಗಳನ್ನು ನನ್ನ ಬಳಿಗೆ ಬರದಂತೆ ತಡೆಯುವ ಎಲ್ಲಾ ಸಂಗತಿಗಳನ್ನು ಈಗಲೇ ಪವಿತ್ರಾತ್ಮನ ಅಗ್ನಿ ಮೂಲಕ ಯೇಸುನಾಮದಲ್ಲಿ ನಾಶಪಡಿಸುತ್ತೇನೆ. (ಧರ್ಮೋಪದೇಶಕಾಂಡ 28:12, ಕೀರ್ತನೆ 84:11)
7. ಕರ್ತನೇ, ನಾನು ಓಡಿದರೂ ಬಳಲಿಹೋಗದಂತೆ , ನಡೆದರೂ ದಣಿದು ಹೋಗದಂತೆ ನನಗೆ ಬಲವನ್ನು ಯೇಸುನಾಮದಲ್ಲಿ ಅನುಗ್ರಹಿಸು . (ಯೆಶಾಯ 40:29-31, ಫಿಲಿಪ್ಪಿ 4:13)
8. ಎಲ್ಲಾ ಅಡೆತಡೆಗಳು ಮತ್ತು ಮಿತಿಗಳನ್ನು ಭೇದಿಸಲು ನಾನು ಯೇಸುನಾಮದಲ್ಲಿ ಅಲೌಕಿಕ ಶಕ್ತಿಯನ್ನು ಹೊಂದಿಕೊಳ್ಳುತ್ತೇನೆ . (ಮಿಕಾ 2:13, ಎಫೆಸ 6:10)
9. ನಾನು ಮುನ್ನಡೆ ಸಾಧಿಸುವುದನ್ನು ತಡೆಯಲು ಏರ್ಪಟಾಗಿರುವ ಪ್ರತಿಯೊಂದು ಬಲಿಪೀಠವನ್ನೂ ಮತ್ತು ದುರಾತ್ಮನ ಧ್ವನಿಗಳನ್ನು ನಾನು ಯೇಸುವಿನ ರಕ್ತದ ಮೂಲಕ ಯೇಸುನಾಮದಲ್ಲಿ ನಿಶ್ಯಬ್ದಗೊಳಿಸುತ್ತೇನೆ. (ಇಬ್ರಿಯ 12:24, 1 ಅರಸುಗಳು 18:38-39)
10. ಕನಿಷ್ಠ 10 ನಿಮಿಷಗಳ ಕಾಲವಾದರೂ ಅನ್ಯಭಾಷೆಯಲ್ಲಿ ಪ್ರಾರ್ಥಿಸಿ.

Join our WhatsApp Channel
Most Read
● ನೀವು ಯೇಸುವನ್ನು ಹೇಗೆ ದೃಷ್ಟಿಸುವಿರಿ?● ಧನ್ಯನಾದ ಮನುಷ್ಯ
● ಅತಿ ದೀರ್ಘವಾದ ರಾತ್ರಿಯ ನಂತರವಾಗುವ ಸೂರ್ಯೋದಯ
● ಯೇಸು ಕುಡಿದ ದ್ರಾಕ್ಷಾರಸ
● ತಂದೆಯ ಹೃದಯ
● ಯಾರೂ ವಿನಾಯಿತಿ ಹೊಂದಿದವರಿಲ್ಲ.
● ದುಃಖದಿಂದ ಕೃಪೆಯ ಕಡೆಗೆ ಸಾಗುವುದು
Comments