हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3.  ದಿನ 24:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
Daily Manna

 ದಿನ 24:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ

Sunday, 15th of December 2024
3 0 218
Categories : ಉಪವಾಸ ಮತ್ತು ಪ್ರಾರ್ಥನೆ (Fasting and prayer)

ನನ್ನನ್ನು ವಿಶೇಷವಾಗಿ ಆಶೀರ್ವಧಿಸು

‭‭ ‭"ಯಾಬೇಚನು ಇಸ್ರಾಯೇಲ್ ದೇವರಿಗೆ - ನೀನು ನನ್ನನ್ನು ವಿಶೇಷವಾಗಿ ಆಶೀರ್ವದಿಸಿ ನನ್ನ ಪ್ರಾಂತವನ್ನು ವಿಸ್ತರಿಸಿ ನಿನ್ನ ಹಸ್ತದಿಂದ ನನ್ನನ್ನು ಹಿಡಿದು ಯಾವ ವೇದನೆಯೂ ಉಂಟಾಗದಂತೆ ನನ್ನನ್ನು ರಕ್ಷಿಸಬಾರದೇ ಎಂದು ಮೊರೆಯಿಡಲು ದೇವರು ಅವನ ಮೊರೆಯನ್ನು ಲಾಲಿಸಿದನು."(1 ಪೂರ್ವಕಾಲವೃತ್ತಾಂತ‬ ‭4:10).

ಆಶೀರ್ವಾದ ಎನ್ನುವಂತದ್ದು ಪ್ರತ್ಯಕ್ಷವಾಗಿ ಕಾಣಬಹುದಾದ ಆತ್ಮೀಕ ಪ್ರಭಾವವಾಗಿದ್ದು ಲೌಕಿಕವಾಗಿ ಬಹುಪ್ರಯೋಜನವನ್ನು ಪ್ರತಿಫಲವನ್ನು ಫಲಿಸುವಂತಾದ್ದಾಗಿದೆ. ನಮ್ಮ ನಂಬಿಕೆಯ ಪಿತೃಗಳು ಈ ಆಶೀರ್ವಾದದಲ್ಲಿರುವ ಶಕ್ತಿಯನ್ನು ಅರಿತಿದ್ದರು. ಅದಕ್ಕಾಗಿಯೇ ಅವರ ಜೀವಿತದಲ್ಲಿ ಆಶೀರ್ವಾದಕ್ಕೆ ಮುಖ್ಯವಾದ ಪ್ರಾಶಸ್ತ್ಯವಿತ್ತು.ಹಾಗಾಗಿ ಅವರು ಅದಕ್ಕಾಗಿ ದಾಹಪಡುತ್ತಿದ್ದರು, ಪ್ರಾರ್ಥಿಸುತ್ತಿದ್ದರು ಮತ್ತು ಯಾಕೋಬನ ಹಾಗೆ ಗುದ್ದಾಡಿ ಹೋರಾಡುತ್ತಿದ್ದರು.

ದುರಾದೃಷ್ಟವಶಾತ್, ಈ ದಿನಮಾನಗಳಲ್ಲಿ ಯಾವುದಾದರೂ ಕಾಣುವಂತ ಆಶೀರ್ವಾದಗಳಿದ್ದರೆ ಅವುಗಳಿಗೆ ಸ್ವಲ್ಪ ಲಕ್ಷ್ಯ ಕೊಡುವ ಸ್ಥಿತಿ ಬಂದಿದೆ.ಪ್ರತಿಯೊಬ್ಬರೂ ಸಹ ತಾತ್ಕಾಲಿಕವಾದ ಖಾಲಿ ಪ್ರದರ್ಶನದ ಹಿಂದೆ ಓಡುತ್ತಿದ್ದಾರೆ. ಪ್ರತಿಯೊಬ್ಬ ವಿಶ್ವಾಸಿಯೂ ಆಶೀರ್ವಾದಕ್ಕಾಗಿರುವ  ಪ್ರಾರ್ಥನೆಯನ್ನು ಪ್ರಾರ್ಥಿಸಬೇಕು.ನಮ್ಮ ಜೀವನದಲ್ಲಿ ನಮ್ಮನ್ನು ನಾವು ಕಂಡುಕೊಳ್ಳಲು ಪ್ರತಿಯೊಂದು ಹೊಸದಾದ ಹಂತಕ್ಕೂ ಹೊಸದಾದ ಆಶೀರ್ವಾದವು ನಮಗೆ ಅಗತ್ಯವಾಗಿ ಬೇಕು.

ಯಾರು ಆಶೀರ್ವಧಿಸಬಹುದು?

ಮೂರು ವಿಧದ ವ್ಯಕ್ತಿಗಳು ಆಶೀರ್ವಧಿಸಬಹುದು.

1. ದೇವರು:ದೇವರು ಎಲ್ಲವನ್ನೂ ಸೃಷ್ಟಿಸಿದ ನಂತರ ಎಲ್ಲವನ್ನೂ ಆಶೀರ್ವಧಿಸಿದನು.ಪಾಪವು ಮನುಷ್ಯನನ್ನು ಅವನಿಗಿರುವ ಪೂರ್ಣ ಆಶೀರ್ವಾದವನ್ನು ಅನುಭವಿಸದಂತೆ ತಡೆಯುತ್ತಿದ್ದರೂ,ಅದರ ಪ್ರಭಾವವು ಇಂದಿನ ದಿನದವರೆಗೂ ಹಾಗೆಯೇ ಇದೆ.
"ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡಿ ಆಶೀರ್ವದಿಸಿ ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು."(ಆದಿಕಾಂಡ‬ ‭12:2‬).

2.ಉನ್ನತ ಸ್ಥಾನದಲ್ಲಿರುವ ವ್ಯಕ್ತಿ:ಆತ್ಮೀಕ ಆಯಾಮದಲ್ಲಿ ಉನ್ನತ ಶ್ರೇಣಿಯಲ್ಲಿರುವ ವ್ಯಕ್ತಿಯು ಗೌರವನ್ವಿತರಾಗಿರುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ದೇವರು ನಿಮ್ಮ ತಂದೆತಾಯಿಗಳನ್ನು ಸನ್ಮಾನಿಸಿ ಎಂದು ಆಜ್ಞಾಪಿಸಿದಾಗ ಆ ತಂದೆತಾಯಿಗಳು ಮಕ್ಕಳಿಗಿಂತ ಉನ್ನತ ಶ್ರೇಣಿಯಲ್ಲಿದ್ದು ಅವರನ್ನು ಆಶೀರ್ವಧಿಸಲು ಮತ್ತು ಶಪಿಸಲು ಸಾಮರ್ಥ್ಯ ಹೊಂದಿರುತ್ತಾರೆ. ರೂಬೆನನು ತನ್ನ ತಂಡೆಯಿಂದ ಶಪಿಸಲ್ಪಟ್ಟನು.(ಆದಿಕಾಂಡ 49:3-4). ಯಾಕೋಬನು ತನ್ನ ಇತರ ಮಕ್ಕಳನ್ನು ಆಶೀರ್ಧಿಸಲು ಮುಂದಾಗಿ ಹೋದನು. ಯಾಕೋಬನು ತಾನೊಬ್ಬ ತಂದೆಯಾಗಿ ತನ್ನ ಮಕ್ಕಳನ್ನು ಆಶೀರ್ವಧಿಸಬೇಕಾದ ಶ್ರೇಣಿಯಲ್ಲಿ ತಾನಿದ್ದೇನೆ ಎಂಬುದನ್ನು ಅವನು ಅರಿತುಕೊಂಡಿದ್ದನು.

"ನಿನ್ನ ತಂದೆಯ ಆಶೀರ್ವಾದಗಳು ಆದಿಯಿಂದಿದ್ದ ಪರ್ವತಗಳಿಂದುಟಾಗುವ ಮೇಲುಗಳಿಗಿಂತಲೂ ಸದಾಕಾಲವಾಗಿರುವ ಬೆಟ್ಟಗಳಿಂದುಂಟಾಗುವ ಉತ್ತಮ ವಸ್ತುಗಳಿಗಿಂತಲೂ ವಿಶೇಷವಾಗಿವೆ. ಇವೆಲ್ಲಾ ಯೋಸೇಫನ ಪಾಲಿಗೆ ಬರಲಿ; ಅಣ್ಣತಮ್ಮಂದಿರಲ್ಲಿ ಪ್ರಭುವಾಗಿರುವವನ ಶಿರಸ್ಸಿನ ಮೇಲುಂಟಾಗಲಿ.
ಇವರೆಲ್ಲರೂ ಇಸ್ರಾಯೇಲನಿಂದುಂಟಾದ ಹನ್ನೆರಡು ಕುಲಗಳು. ಇದೇ ಅವರ ತಂದೆ ಅವರಿಗೆ ಹೇಳಿದ ಆಶೀರ್ವಾದ. ಒಂದೊಂದು ಕುಲಕ್ಕೆ ಒಂದೊಂದು ಆಶೀರ್ವಚನವನ್ನು ನುಡಿದನು."(ಆದಿಕಾಂಡ‬ ‭49:26,28‬)

3. ದೇವರಿಂದ ಕಳುಹಿಸಲ್ಪಟ್ಟ ಪ್ರತಿನಿಧಿಗಳು: ದೇವರ ಸೇವಕರೂ ಸಹ ನಿಮ್ಮನ್ನು ಆಶೀರ್ವಧಿಸಬಹುದು. ನಿಮ್ಮ ಸಭಾ ನಾಯಕರು, ಪ್ರವಾದಿಗಳು ಪಂಚಮಡಿಕೆಯ ಸೇವಾಕಾರ್ಯದಲ್ಲಿರುವ ಯಾರೇ ಆಗಲಿ ಅವರು ಆಶೀರ್ವಧಿಸ ಬಹುದು ಅಥವಾ ಆತ್ಮೀಕ ಸ್ತರದಲ್ಲಿ ನಿಮಗಿಂತ ಉನ್ನತ ಶ್ರೇಣಿಯಲ್ಲಿರುವರು ಸಹ ನಿಮ್ಮನ್ನು ಆಶೀರ್ವಧಿಸಬಹುದು. ಆತ್ಮೀಕವಾದ ಅಧಿಕಾರವುಳ್ಳವರಿಂದ ಆಶೀರ್ವಾದಗಳು ಬಿಡುಗಡೆಯಾಗುತ್ತವೆ.

4. ಯಾರು ಆಶೀರ್ವಧಿಸಲ್ಪಟ್ಟಿದ್ದಾರೋ ಅವರು ಇತರರನ್ನು ಆಶೀರ್ವಧಿಸಬಹುದು:ನಿಮ್ಮ ಬಳಿ ಏನು ಇರುತ್ತದೋ ಅದನ್ನು ಮಾತ್ರ ನೀವೂ ಕೊಡಲು ಸಾಧ್ಯ. ಒಬ್ಬ ಮನುಷ್ಯನು ಆಶೀರ್ವಧಿಸಲ್ಟಟ್ಟಿದ್ದರೆ ಕೂಡಲೇ ಆ ವ್ಯಕ್ತಿಯು ಇತರರನ್ನು ಆಶೀರ್ವಧಿಸುವ ಸಾಮರ್ಥ್ಯ ಹೊಂದಿಕೊಳ್ಳುತ್ತಾನೆ.
‭‭
"ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡಿ ಆಶೀರ್ವದಿಸಿ ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು."(ಆದಿಕಾಂಡ‬ ‭12:2‬)

ನಾವು ಆಶೀರ್ವಧಿಸುವ ಆಶೀರ್ವಾದವನ್ನು ಹೊಂದಿದವರಾಗಿದ್ದೇವೆ.ನಾವು ದೇವರಿಂದ ಹೊಂದಿದ ಪ್ರತಿಯೊಂದು ಆಶೀರ್ವಾದಗಳೂ ನಾವು ಇತರರನ್ನು ಆಶೀರ್ವಧಿಸುವಂತೆ ನಮ್ಮನ್ನು ಸಶಕ್ತಗೊಳಿಸುತ್ತದೆ ಎಂಬುದನ್ನು ನಾವು ಎಂದಿಗೂ ಮರೆಯಬಾರದು. ನಾವು ಇತರರನ್ನು ಆಶೀರ್ವಧಿಸಲು ವಿಫಲರಾದರೆ ನಮಗೆ ಬರಬೇಕಾದ ಆಶೀರ್ವಾದದ ಹರಿವೂ ಸಹ ನಿಂತು ಹೋಗುತ್ತದೆ. ನಾವು ದೇವರ ಆಶೀರ್ವಾದವನ್ನು ಹಂಚುವ ದೇವರ ಮನೆವಾರ್ತೆಯವರಾಗಿದ್ದೇವೆ ಆದ್ದರಿಂದ ನಾವು ಬಹಳ ಜಾಗರೂಕತೆಯಿಂದ ಆತನು ನಮ್ಮ ಬಳಿಗೆ ಕಳುಹಿಸಿ ಕೊಟ್ಟವರಿಗೆ ಅದನ್ನು ಸರಿಯಾಗಿ ಹಂಚಬೇಕು. ಇಂದು ನಾವು ದೇವರು ನಮಗಾಗಿ ಇಟ್ಟಿರುವ ಆಶೀರ್ವಾದಗಳನ್ನು ಇಟ್ಟಂತಹ ಸ್ಥಿತಿಗೆ ತಲುಪಬೇಕು ಎಂದು ಈ ಉಪವಾಸ ಪ್ರಾರ್ಥನೆಯಲ್ಲಿ ಬೇಡಿಕೊಳ್ಳೋಣ.

Bible Reading Plan : Romans 5-10
Prayer
ಈ ಪ್ರಾರ್ಥನಾ ಕ್ಷಿಪಣಿಗಳು ನಿಮ್ಮ ಹೃದಯದ ಆಳದಿಂದ ಬರುವವರೆಗೂ ಪುನರಾವರ್ತನೆ ಮಾಡಿರಿ. ಆನಂತರವೇ ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗಿರಿ. ಒಂದೊಂದು ಪ್ರಾರ್ಥನಾ ಅಂಶಗಳನ್ನು ವ್ಯಕ್ತಿಗತ ಮಾಡಿಕೊಂಡು ಪ್ರತಿಯೊಂದಕ್ಕೂ ಕನಿಷ್ಠ ಪಕ್ಷ ಒಂದೊಂದು ನಿಮಿಷವಾದರೂ ಮುಡಿಪಾಗಿಡಿ. ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗುವ ಮೊದಲು ನಿಜವಾಗಿಯೂ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೀರಿ ಎಂದು ಖಚಿತ ಪಡಿಸಿಕೊಳ್ಳಿ.

1. ನಾನು ಹೊರಗೆ ಹೋಗುವಾಗಲೂ ಒಳಗೆ ಬರುವಾಗಲೂ ಮತ್ತು ನಾನು ಕೈಹಾಕಿದ ಎಲ್ಲದರಲ್ಲೂ ನನಗೆ ಯೇಸುನಾಮದಲ್ಲಿ ಆಶೀರ್ವಾದ. (ಧರ್ಮೋಪದೇಶಕಾಂಡ 28:6)

2. ನನ್ನ ಆಶೀರ್ವಾದಕ್ಕೆ ಮುಖ್ಯವಾಗಿ ಅಡ್ಡಿಯಾಗಿರುವ ಪ್ರತಿಯೊಂದು ಪಾಪವೂ ಯೇಸುನಾಮದಲ್ಲಿ ಯೇಸುವಿನ ರಕ್ತದ ಮೂಲಕ ತೊಳೆಯಲ್ಪಡಲಿ. (ಯಾಕೋಬ 5:16)

3. ನನ್ನ ಆಶೀರ್ವಾದವನ್ನು ವಿರೋಧಿಸಲು ಕಲ್ಪಿಸಿದ ಯಾವುದೇ ಆಯುಧಗಳಾದರೂ ಅದು ಯೇಸುನಾಮದಲ್ಲಿ ಜಯಹೊಂದದು. (ಯೇಶಾಯ 54:17)

4. ನನಗೂ ನನ್ನ ಕುಟುಂಬಕ್ಕೂ ನನ್ನ ವ್ಯವಹಾರಗಳಿಗೂ ಮತ್ತು ನನಗೆ ಸಂಬಂದಿಸಿದ ಎಲ್ಲದಕ್ಕೂ ಯೇಸುನಾಮದಲ್ಲಿ ದೇವರ ಆಶೀರ್ವಾದವು ಹರಿದುಬರಲಿ. (ಕೀರ್ತನೆ 90:17)

5. ತಂದೆಯೇ, ನನಗೆ ವಿರುದ್ಧವಾಗಿ ಮಾಡಿರುವ ಎಲ್ಲಾ ಶಾಪಗಳು ಯೇಸುನಾಮದಲ್ಲಿ ಆಶೀರ್ವಾದಗಳಾಗಿ ಮಾರ್ಪಡಲಿ. (ನೆಹಮಿಯ 13:2)

6. ನಾನು ಹೂಡಿದ ಹೂಡಿಕೆಗಳೆಲ್ಲದರಲ್ಲಿಯೂ ಮತ್ತು ನಾನು ಕಷ್ಟ ಪಟ್ಟ ಎಲ್ಲಾ ಕಾರ್ಯಗಳಲ್ಲಿಯೂ ಯೇಸುನಾಮದಲ್ಲಿ ಕರ್ತನ ಆಶೀರ್ವಾದದಿಂದಾಗಿ ಹೆಚ್ಚು ಹೆಚ್ಚಾದ ಸಫಲತೆಯನ್ನು ಹೊಂದುವೆನು. (ಕೀರ್ತನೆ 90:17)

7. ನನ್ನ ಜೀವಿತಕ್ಕೆ ವಿರೋಧವಾಗಿ ಕಾರ್ಯ ಮಾಡುತ್ತಿರುವ ಯಾವುದೇ ಆಶೀರ್ವಾದ ನಿರೋಧಕ ಒಡಂಬಡಿಕೆಗಳಾಗಲೀ ಅಂಧಕಾರದ ಶಕ್ತಿಯಾಗಲೀ ಅವುಗಳನ್ನು ಯೇಸುನಾಮದಲ್ಲಿ ನಾಶ ಮಾಡುತ್ತೇನೆ. (ಕೊಲಸ್ಸೆ 2:14-15)

8.ನನ್ನ ಜೀವಿತದ ಆಶೀರ್ವಾದಗಳನ್ನು ಮತ್ತು ಮಹಿಮೆಯನ್ನು ನುಂಗಿಹಾಕುವ ನುಂಗುಬಾಕನನ್ನು ಯೇಸುನಾಮದಲ್ಲಿ ನಿಷೇಧಿಸುತ್ತೇನೆ. (ಮಲಾಕಿ 3:11)

9. ಕರ್ತನೇ, ಪರಲೋಕದ ದ್ವಾರಗಳನ್ನು ತೆರೆದು ಸ್ಥಳ ಹಿಡಿಸಲಾರದಷ್ಟು ಆಶೀರ್ವಾದಗಳನ್ನು ಯೇಸುನಾಮದಲ್ಲಿ ನನ್ನ ಮೇಲೆ ಸುರಿಸು. (ಮಲಾಕಿ 3:10)

10. ತಂದೆಯೇ, ಕ್ರಿಸ್ತನಲ್ಲಿ ನನಗಾಗಿ ಇರುವ ಎಲ್ಲಾ ಆಶೀರ್ವಾದಗಳನ್ನು ನಾನು ಹೊಂದಿಕೊಳ್ಳುವ ಮಾರ್ಗದಲ್ಲಿ ನಾನು ನಡೆಯುವಂತೆ ಯೇಸುನಾಮದಲ್ಲಿ ನನಗೆ ವಿವೇಕವನ್ನು ದಯಪಾಲಿಸು. (ಯಾಕೋಬ 1:5)

Join our WhatsApp Channel


Most Read
● ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ಕೊಟ್ಟನು
● ಮದಲಿಂಗನನ್ನು ಭೇಟಿ ಮಾಡಲು ಸಿದ್ದರಾಗಿರಿ.
● ದೇವರವಾಕ್ಯವನ್ನು ನಿಮ್ಮ ಹೃದಯದಾಳದಲ್ಲಿ ಬಿತ್ತಿರಿ.
● ದಿನ 37 :40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಪ್ರೀತಿಯ ಭಾಷೆ
● ಅನಂತವಾದ ಕೃಪೆ
● ಆರಾಧನೆಯ ಪರಿಮಳ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login