हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ನೀತಿಯ ವಸ್ತ್ರ
Daily Manna

ನೀತಿಯ ವಸ್ತ್ರ

Tuesday, 4th of February 2025
2 1 206
Categories : ಎಸ್ತರ್ ರಹಸ್ಯಗಳು: ಸರಣಿ (Secrets of Esther: Series)
"ದೇಹದ ಆಶೆಗಳನ್ನು ಪೂರೈಸುವದಕ್ಕಾಗಿ ಚಿಂತಿಸದೆ ಕರ್ತನಾದ ಯೇಸು ಕ್ರಿಸ್ತನನ್ನು ಧರಿಸಿಕೊಳ್ಳಿರಿ." (ರೋಮ 13:14)

ವಸ್ತ್ರಗಳು ಎಂದರೆ ಕೇವಲ ದೇಹವನ್ನು ಮುಚ್ಚುವ ಬಟ್ಟೆಯಷ್ಟೇ ಅಲ್ಲ; ಅದು ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದನ್ನೂ ಸಹ ಸೂಚಿಸುತ್ತದೆ. ಒಬ್ಬ ವ್ಯಕ್ತಿಯನ್ನು ಅವನು ಧರಿಸಿದ ಉಡುಪಿನಿಂದಲೆ ಅವನು ಎಲ್ಲಿಗೆ ಹೋಗುತ್ತಿದ್ದಾನೆಂದು ನೀವು ಊಹಿಸಬಹುದು. ನಿರ್ದಿಷ್ಟ ವಸ್ತ್ರ ಸಂಹಿತೆಯಿರುವಂತ  ಕೆಲವು ಕಾರ್ಯಕ್ರಮಗಳನ್ನೂ,  ವಿಶೇಷವಾಗಿ ಕಾರ್ಪೊರೇಟ್ ಸೆಟ್ಟಿಂಗ್‌ಗಳಲ್ಲಿ ನಾವು ಹೊಂದಿದ್ದೇವೆ ಎಂಬುದನ್ನು ನೀವು ಸಹ ನನ್ನೊಂದಿಗೆ ಒಪ್ಪುತ್ತೀರಿ.ಈ ವಿಶೇಷ ಸಮಾರಂಭಕೆ ಈ ವಿಶೇಷ ರೀತಿಯ ವಸ್ತ್ರ ಧರಿಸಿರುವವರಿಗೆ ಮಾತ್ರ ಸಭಾಂಗಣಕ್ಕೆ ಅವಕಾಶ ನೀಡಲಾಗುವುದು ಎಂಬುದನ್ನು ಸಹ ಅವು ಸೂಚಿಸಿರುತ್ತದೆ. ಕಾರ್ಯಕ್ರಮಗಳಿಗೆ ತಕ್ಕಂತೆ ನಾವು ಪ್ರಭುಗಳ ಮುಂದೆ ಕಾಣಿಸಿಕೊಳ್ಳಲು ಕೆಲವು ಉಡುಪುಗಳನ್ನು ಹೊಂದಿದ್ದೇವೆ. 

ಎಸ್ತರ್ ಮತ್ತು  ಇತರೆ ಸ್ತ್ರೀಯರು ಅವರು ಇಷ್ಟಪಡುವ ವಸ್ತ್ರಗಳನ್ನು ಧರಿಸಿಕೊಳ್ಳದೆ;  ಅವರು ರಾಜನ ಮುಂದೆ ಕಾಣಿಸಿಕೊಳ್ಳುವುಕ್ಕಾಗಿಯೇ ಅವರನ್ನು ಅಲಂಕರಿಸಲು ಅರಸನಿಂದ ನಿಯೋಜಿತನಾದ ಕಂಚುಕಿಯನ್ನು ತಮ್ಮೊಂದಿಗೆ ಹೊಂದಿದ್ದರು. ಅರಸನ ಕಂಚುಕಿ ಹೇಳಿದ ಹಾಗೆ ಆ ಸ್ತ್ರೀಯರು ಅರಮನೆಯ ವಸ್ತ್ರಸಂಹಿತೆಗೆ ಬದ್ಧವಾಗಿರುವುದನ್ನು ಖಚಿತಪಡಿಸಿಕೊಂಡರು. ಆದರೆ ಎಸ್ತರ್ ಸಂಗತಿಯಲ್ಲಿ ಯಾವುದು ಭಿನ್ನವಾಗಿತ್ತು? ಆಕೆ ಕೇವಲ ವಸ್ತ್ರಸಂಹಿತೆಯ ವಸ್ತ್ರವಷ್ಟೇ ಧರಿಸದೆ ; ಆಕೆಯ ಹೃದಯವು ನೀತಿಯ ವಸ್ತ್ರವನ್ನು ಸಹ ಧರಿಸಿಕೊಂಡಿತು.

ಸತ್ಯವೆಂದರೆ ಸ್ವನೀತಿಯಿಂದ ಬಂದ ವಸ್ತ್ರವನ್ನು ಕ್ರಿಸ್ತನಲ್ಲಿ ದೊರೆತ ದೇವರ ನೀತಿಯವಸ್ತ್ರಕ್ಕೆ ಎಂದಿಗೂ ಹೋಲಿಸಲಾಗುವುದಿಲ್ಲ. ಸಾಮಾನ್ಯವಾಗಿ, ನಮ್ಮ ಸ್ವ-ನೀತಿಯಿಂದಾಗಿ ನಾವು ದೇವರಿಗೆ ಸ್ವೀಕಾರಾರ್ಹರಾಗಿದ್ದೇವೆ ಎಂದು ನಾವು ಭಾವಿಸಿಕೊಳ್ಳುತ್ತೇವೆ. ಆದರೆ ಇದಕ್ಕೆ ವಿರುದ್ಧವಾಗಿ, ನಾವು ಕ್ರಿಸ್ತನ ಮೂಲಕ ನೀತಿಯನ್ನು ಧರಿಸಿದಾಗ ಮಾತ್ರವೇ ದೇವರು ನಮ್ಮನ್ನು ಸ್ವೀಕರಿಸುತ್ತಾನೆ. ಎಸ್ತರಳು ತಾನಾಗಿಯೇ ಅರಸನಿಂದ ಸ್ವೀಕಾರಾರ್ಹಳಾಗಲಿಲ್ಲ. ಅಂದರೆ ಅವಳು ಅಶುದ್ಧಳಾಗಿದ್ದಳು ಇಲ್ಲವೇ ದುರ್ವಾಸನೆ ಹೊಂದಿದ್ದಳು ಎನ್ನುವ ಅರ್ಥವಲ್ಲ. ಆದರೆ ಅವಳಲ್ಲಿನ ಅತ್ಯುತ್ತಮವಾದವುಗಳು ರಾಜನಿಗೆ ಸಲ್ಲತಕ್ಕoತದ್ದು ಆಗಿರದ ಕಾರಣ ಎಸ್ತೆರಳು ಅರಸನಿಗೆ ಹಾಗೆ ಒಪ್ಪಿಸಿಬಿಡಲಿಲ್ಲ.ಅರಸನ ಸಾನಿಧ್ಯಕ್ಕೆ ತೆರಳಲು ಅವಳು ಅರಸನಿಗೆ ಸಲ್ಲತಕ್ಕ ವಿಭಿನ್ನ ಸುವಾಸನೆಯನ್ನು ತನ್ನಲ್ಲಿ ಹೊಂದಬೇಕಾಯಿತು. ನೀವಿಂದು ಯಾವ ವಸ್ತ್ರವನ್ನು ಧರಿಸಿಕೊಂಡಿದ್ದೀರಿ ?

ಕರ್ತನಾದ ಯೇಸು ಮತ್ತಾಯ 22: 8-14 ರಲ್ಲಿ ಹೇಳಿದ ಒಂದು ಸಾಮ್ಯವನ್ನು ಸತ್ಯವೇದ ಹೀಗೆ ವಿವರಿಸುತ್ತದೆ."ಆಗ ತನ್ನ ಆಳುಗಳಿಗೆ - ಮದುವೆಗೆ ಸಿದ್ಧವಾಗಿದೆ ಸರಿ, ಆದರೆ ಕರೆಯಲ್ಪಟ್ಟವರು ಯೋಗ್ಯರಾಗಿರಲಿಲ್ಲ. ನೀವು ಈಗ ನಾಲ್ಕು ಹಾದಿಗಳು ಕೂಡುವ ಸ್ಥಳಗಳಿಗೆ ಹೋಗಿ ಕಂಡವರನ್ನೆಲ್ಲಾ ಮದುವೆಯ ಊಟಕ್ಕೆ ಕರೆಯಿರಿ ಎಂದು ಹೇಳಿದನು. ಆ ಆಳುಗಳು ಹಾದಿಗಳಿಗೆ ಹೋಗಿ ಕೆಟ್ಟವರು ಒಳ್ಳೆಯವರು ಅನ್ನದೆ ಕಂಡವರನ್ನೆಲ್ಲಾ ಕೂಡಿಸಿ ಕರಕೊಂಡು ಬಂದರು. ಹೀಗೆ ಮನೆತುಂಬ ಊಟಕ್ಕೆ ಕೂತರು. ಆಮೇಲೆ ಅರಸನು ಕೂತವರನ್ನು ನೋಡುವದಕ್ಕೆ ಒಳಕ್ಕೆ ಬರಲಾಗಿ ಮದುವೇಬಟ್ಟೆಯನ್ನು ಹಾಕಿಕೊಳ್ಳದ ಒಬ್ಬನನ್ನು ಕಂಡು  ಅವನನ್ನು - ಏನಪ್ಪಾ, ಮದುವೆಯ ಬಟ್ಟೆ ಇಲ್ಲದೆ ನೀನಿಲ್ಲಿ ಹೇಗೆ ಒಳಕ್ಕೆ ಬಂದಿ ಎಂದು ಕೇಳಲು ಅವನು ಸುಮ್ಮನಿದ್ದನು.  ಆಮೇಲೆ ಅರಸನು ಸೇವಕರಿಗೆ - ಅವನ ಕೈಕಾಲು ಕಟ್ಟಿ ಅವನನ್ನು ಹೊರಗೆ ಕತ್ತಲೆಗೆ ನೂಕಿರಿ ಎಂದು ಹೇಳಿದನು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲುಕಡಿಯೋಣವೂ ಇರುವವು. ಹೀಗೆ ಕರೆಯಲ್ಪಟ್ಟವರು ಬಹು ಜನ, ಆಯಲ್ಪಟ್ಟವರು ಸ್ವಲ್ಪ ಜನ ಅಂದನು."

ಅರಸನು ಒಂದು ಔತಣಕೂಟವನ್ನು ಏರ್ಪಡಿಸಿ ತಾನು ಮಾಡಿಸಿದ ರುಚಿಕರವಾದ ಭೋಜನವನ್ನು ತಿನ್ನಲು ಬಹು ಜನರನ್ನು ಕರೆದನು. ಪರ್ಷಿಯಾದ ರಾಜನು ವಿವಿಧ ಪ್ರದೇಶಗಳ ಮತ್ತು ಹಿನ್ನೆಲೆಯುಳ್ಳ ಸ್ತ್ರೀಯರಿಗೆ ತನ್ನ ರಾಣಿಗಾಗಲು ಸ್ಪರ್ಧೆಯನ್ನು ತೆರೆದಂತೆಯೇ, ಅರಸನ ಸೇವಕರು ಜನರನ್ನು ವಿವಾಹಕ್ಕೆ ಆಹ್ವಾನಿಸಿದರು. ಆದರೆ ಒಬ್ಬ ವ್ಯಕ್ತಿ ಮೊದಲು ಪ್ರವೇಶಕ್ಕೆ ಬೇಕಾದ ಬಟ್ಟೆ ಬಗ್ಗೆ ಗಮನ ಹರಿಸದೆ ವಿವಾಹಕ್ಕೆ ಬಂದನು. ರಾಜನ ಮುಂದೆ ತನಗೆ ಇಷ್ಟವಾದುದನ್ನು ಧರಿಸಿ ಕಾಣಿಸಿಕೊಳ್ಳಬಹುದೆಂದು ಅವನು ಭಾವಿಸಿದ್ದನು. ಆದರೆ ದುರದೃಷ್ಟವಶಾತ್, ಅಂತವರೆಲ್ಲರು ರಾಜನ ಉಪಸ್ಥಿತಿಯಿಂದ ಹೊರಹಾಕಲ್ಪಟ್ಟರು. ಹೌದು, ಬಹುಜನರನ್ನು  ಕರೆಯಲಾಗಿತ್ತು, ಆದರೆ ನೀತಿಯ ವಸ್ತ್ರವನ್ನು ಹೊಂದಿರುವವರು ಮಾತ್ರವೇ ರಾಜನ ಮುಂದೆ ನಿಲ್ಲಲು ಆಯ್ಕೆಯಾಗುತ್ತಾರೆ. 

ನನ್ನ ಸ್ನೇಹಿತರೆ, ನೀವು ಯಾವ ರೀತಿಯ ಉಡುಪನ್ನು ಹಾಕುತ್ತಿದ್ದೀರಿ? ನೀವು ಸ್ವನೀತಿ ಅಥವಾ ಹೆಮ್ಮೆಯ ವಸ್ತ್ರ ಧರಿಸಿದ್ದೀರಾ? ಅಥವಾ ಶುದ್ಧತೆ ಮತ್ತು ಪ್ರಾಮಾಣಿಕತೆಯ ವಸ್ತ್ರವೋ ಅಥವಾ ಕಿಡಿಗೇಡಿತನದ ವಸ್ತ್ರವೋ? 

ಲೂಕ ಅಧ್ಯಾಯ 18 ರಲ್ಲಿ, ಕರ್ತನ ಮುಂದೆ ಬಂದ ಇಬ್ಬರು ವ್ಯಕ್ತಿಗಳ ಕುರಿತು ಬೈಬಲ್ ಹೇಳುತ್ತದೆ." ಅದೇನಂದರೆ - ಪ್ರಾರ್ಥನೆಮಾಡಬೇಕೆಂದು ಇಬ್ಬರು ಮನುಷ್ಯರು ದೇವಾಲಯಕ್ಕೆ ಹೋದರು; ಒಬ್ಬನು ಫರಿಸಾಯನು, ಒಬ್ಬನು ಸುಂಕದವನು. ಫರಿಸಾಯನು ನಿಂತುಕೊಂಡು ಪ್ರಾರ್ಥಿಸುವಾಗ ತನ್ನೊಳಗೆ - ದೇವರೇ, ಸುಲುಕೊಳ್ಳುವವರೂ ಅನ್ಯಾಯಗಾರರೂ ಹಾದರಮಾಡುವವರೂ ಆಗಿರುವ ಉಳಿದ ಜನರಂತೆ ನಾನಲ್ಲ, ಈ ಸುಂಕದವನಂತೆಯೂ ಅಲ್ಲ; ಆದದರಿಂದ ನಿನಗೆ ಸ್ತೋತ್ರಮಾಡುತ್ತೇನೆ. ವಾರಕ್ಕೆ ಎರಡಾವರ್ತಿ ಉಪವಾಸ ಮಾಡುತ್ತೇನೆ; ನಾನು ಸಂಪಾದಿಸುವ ಎಲ್ಲಾದರಲ್ಲಿಯೂ ಹತ್ತರಲ್ಲೊಂದು ಪಾಲು ಕೊಡುತ್ತೇನೆ ಅಂದುಕೊಂಡನು." ಆದರೆ ಆ ಸುಂಕದವನು ದೂರದಲ್ಲಿ ನಿಂತು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವದಕ್ಕೂ ಮನಸ್ಸಿಲ್ಲದೆ ಎದೆಯನ್ನು ಬಡುಕೊಳ್ಳುತ್ತಾ - ದೇವರೇ, ಪಾಪಿಯಾದ ನನ್ನನ್ನು ಕರುಣಿಸು ಅಂದನು. ಇವನು ನೀತಿವಂತನೆಂದು ನಿರ್ಣಯಿಸಲ್ಪಟ್ಟವನಾಗಿ ತನ್ನ ಮನೆಗೆ ಹೋದನು, ಆ ಫರಿಸಾಯನು ಅಂಥವನಾಗಿ ಹೋಗಲಿಲ್ಲ" ಲೂಕ 18:12-14

ನನಗೆ ಈ ಸ್ತುತಿಪದ ಎಂದರೆ ಬಹಳ ಇಷ್ಟ.
"ಆತ್ಮವನ್ನು ಶುದ್ಧೀಕರಿಸುವ ಕುರಿಮರಿಯ ರಕ್ತ..
ನೀವು ಈ  ರಕ್ತದಲ್ಲಿ ತೊಳೆಯಲ್ಪಟ್ಟಿದ್ದೀರಾ? 
ನಿಮ್ಮ ಉಡುಪುಗಳು ನಿರ್ಮಲವಾಗಿದೆಯೇ?
ಅವು ಹಿಮದಂತೆ ಬೆಳ್ಳಗಿವೆಯೇ?
ನೀವು ಕುರಿಮರಿಯ ರಕ್ತದಲ್ಲಿ ತೊಳೆಯಲ್ಪಟ್ಟಿದ್ದೀರಾ?"

ಹಾಗೆಯೇ, ರಾಜನ ಸನ್ನಿಧಿಗೆ ಪ್ರವೇಶಿಸಲು, ನೀವು ಯೇಸುವಿನ ರಕ್ತದಲ್ಲಿ ತೋಯಿಸಿದಂತ ವಸ್ತ್ರವನ್ನು ಧರಿಸಬೇಕು. ಪಾಪದ ವಸ್ತ್ರವನ್ನು ಕಳಚಿ ಕರ್ತನಾದ ಯೇಸುವನ್ನು ಧರಿಸಿಕೊಳ್ಳಬೇಕು.

Bible Reading: Leviticus 7-9
Prayer
ತಂದೆಯೇ, ನಿಮ್ಮ ಕೊನೆಯೇ ಇಲ್ಲದ ಕರುಣೆಗಾಗಿ ಯೇಸುನಾಮದಲ್ಲಿ ನಾನು ನಿಮಗೆ ಸ್ತೋತ್ರ ಸಲ್ಲಿಸುತ್ತೇನೆ. ನಾನು ನಾನಾಗಿಯೇ ನಿಮ್ಮ ಬಳಿಗೆ ಬರುತ್ತೇನೆ ಆದ್ದರಿಂದ ನೀವು ನನ್ನನ್ನು ಶುದ್ಧೀಕರಿಸಿ ನನ್ನನ್ನು ಸಕಲ ಅನೀತಿಗಳಿಂದ ಶುದ್ಧೀಕರಿಸಬೇಕೆಂದು ಯೇಸುನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ. ನಾನು ಇಂದು ನನ್ನ ಸ್ವನೀತಿಯ ವಸ್ತ್ರವನ್ನು ನಿಮ್ಮ ಮುಂದೆ ಇಟ್ಟು ನಿಮ್ಮ ಅಮೂಲ್ಯವಾದ ರಕ್ತವು ನನ್ನನ್ನು ಶುದ್ಧೀಕರಿಸಲಿ ಮತ್ತು ನನ್ನನ್ನು ಸ್ವಸ್ಥಪಡಿಸಲಿ ಎಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ಇಂದಿನಿಂದ, ಇನ್ನೆಂದಿಗೂ ಅರಸನ ಮುಂದೆ ತಿರಸ್ಕರಿಸಲ್ಪಡದೇ, ನಾನು ಎಸ್ತರ್‌ನಂತೆಯೇ ಯೇಸುನಾಮದಲ್ಲಿ ಪ್ರೇಕ್ಷಕರನ್ನು ಗಳಿಸುತ್ತೇನೆ. ಆಮೆನ್.

Join our WhatsApp Channel


Most Read
● ಶರಣಾಗತಿಯಲ್ಲಿರುವ ಸ್ವಾತಂತ್ರ್ಯ
● ಕಾಮದ ದುರಿಚ್ಛೆಗಳಿಂದ ಹೊರಬರುವುದು
● ಒಂದು ಜನಾಂಗವನ್ನು ಉಳಿಸಿದ ಕಾಯುವಿಕೆ
● ಪವಿತ್ರಾತ್ಮನಿಗಿರುವ ಹೆಸರುಗಳು ಮತ್ತು ಬಿರುದುಗಳು
● ನಿಮ್ಮ ರೂಪಾಂತರವು ಶತ್ರುವಿಗೆ ಭಯತರುತ್ತದೆ.
● ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿಕೊಳ್ಳುವುದು ಹೇಗೆ-2
● ಉಪವಾಸದ ಮೂಲಕ ದೇವದೂತರ ಸಂಚಲನೆಯನ್ನು ಉಂಟು ಮಾಡುವುದು.
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login