हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಶತ್ರುವಿನ ಮಾರ್ಗ ರಹಸ್ಯವಾಗಿದೆ
Daily Manna

ಶತ್ರುವಿನ ಮಾರ್ಗ ರಹಸ್ಯವಾಗಿದೆ

Friday, 21st of February 2025
2 0 361
Categories : ಎಸ್ತರ್ ರಹಸ್ಯಗಳು: ಸರಣಿ (Secrets of Esther: Series)
"ಸ್ವಸ್ಥರಾಗಿರಿ, ಜಾಗರೂಕರಾಗಿರಿ; ಏಕೆಂದರೆ ನಿಮ್ಮ ವಿರೋಧಿಯಾದ ಸೈತಾನನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಬೇಕೆಂದು ಹುಡುಕುತ್ತಿದ್ದಾನೆ." (1 ಪೇತ್ರ 5:8) 

ಆಕೆಯು - ನಮ್ಮನ್ನು ಬಾಧಿಸಬೇಕೆಂದಿರುವ ಹಗೆಗಾರನು ಈ ದುಷ್ಟ ಹಾಮಾನನೇ ಅಂದಳು. ಇದನ್ನು ಕೇಳಿದೊಡನೆ ಹಾಮಾನನು ಅರಸನ ಮತ್ತು ರಾಣಿಯ ಮುಂದೆ ಬೆಪ್ಪಾದನು.  ( ಎಸ್ತೇರಳು7: 6) ಎಂದು ಸತ್ಯವೇದ ಹೇಳುತ್ತದೆ.

ಎಸ್ತೇರಳು ಹಾಮಾನನು ಅರಸನಿಗೆ ನಂಬಿಗಸ್ತನಾದ ಸೇವಕನಾಗಿರಲಿಲ್ಲ, ಬದಲಾಗಿ ಅವನು ವಿರೋಧಿ ಮತ್ತು ಶತ್ರು ವಾಗಿದ್ದು ಅವನು ಅರಸನ ಹಿತಾಸಾಕ್ತಿಗಿಂತ  ಅವನ ಸ್ವಂತ ಖ್ಯಾತಿ ಮತ್ತು ಸ್ಥಾನಮಾನದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾನೆ ಎಂಬುದರ  ಕುರಿತ ಸತ್ಯವನ್ನು ಬಹಿರಂಗಪಡಿಸಿದಳು. ಅದಕ್ಕಾಗಿ ಅರಸನಾದ ಆಹಾಶ್ವರೋಷನು , "ಯಾರವನು  ಮತ್ತು ಅವನು ಎಲ್ಲಿದ್ದಾನೆ? ಎಂದು ಕೇಳಿದನು.

ರಾಜನು ಎಷ್ಟೇ ಶಕ್ತಿಶಾಲಿಯಾದ ಗೂಡಚಾರ ವ್ಯವಸ್ಥೆ ಹೊಂದಿದ್ದರೂ   ಅನೇಕ ರಹಸ್ಯವಾದ  ನಿಜವಾದ ಶತ್ರುಗಳ ಬಗ್ಗೆ ಬಹುಶಃ ರಾಜನಿಗೆ ಇನ್ನೂ ತಿಳಿದಿರಲಿಲ್ಲ. ಶತ್ರು ಎಷ್ಟು ರಹಸ್ಯವಾಗಿರುತ್ತಾನೆ ಎಂಬುದನ್ನು ಇದು ತೋರಿಸಿಕೊಡುತ್ತದೆ. ರಾಜನು ಸಾಮಾನ್ಯವಾಗಿ ದೇವ ಜನರ ವಿರೋಧಿಯೊಂದಿಗೆನೇ  ಊಟ ಮಾಡುತ್ತಿದ್ದರೂ  ಅದು ಅವನಿಗೆ ತಿಳಿದಿರಲಿಲ್ಲ. ಅವನು ರಾಜನಿಗೆ ಯೋಜನೆಯ ಸಂಪೂರ್ಣ ವಿವರಗಳನ್ನು ತಿಳಿಸದೆ ಯಹೂದಿಗಳನ್ನು ಕೊಲ್ಲುವ ಆಜ್ಞೆಗೆ  ರಾಜನನ್ನು ವಂಚಿಸಿ ಸಹಿ ಹಾಕುವಂತೆ ಮಾಡಿದ್ದನು . ಅವನ ಎಲ್ಲಾ ಯೋಜನೆಗಳು ಸ್ವಾರ್ಥತೆ ಯಿಂದ ಕೂಡಿದ್ದು  ಅವನು ತನ್ನ ಅಧಿಕಾರವನ್ನು ಅನೇಕ  ವರ್ಷಗಳಿಂದಲೂ ದುರುಪಯೋಗ ಪಡಿಸಿಕೊಂಡಿದ್ದನು.

ನಾವಂತೂ ಬಹಳ ಜಾಗರೂಕರಾಗಿರಬೇಕು. ಶತ್ರುಗಳು ರಾಜನನ್ನು ಸುತ್ತುವರೆದಿದ್ದರೂ ಅದು ಅವನಿಗೆ ತಿಳಿದಿರಲಿಲ್ಲ. ನೀವು ಈಗಾಗಲೇ ಶತ್ರುಗಳಿಂದ ಸುತ್ತುವರೆದಿರುವಿರಿ ಆದರೂ ನೀವು ಅವರನ್ನು  ನನ್ನ ಆತ್ಮೀಯರು ಮತ್ತು ಆಪ್ತ ಸಹಾಯಕರು ಅಥವಾ ಹಿತೈಷಿಗಳು ಎಂದು ಕರೆಯಬಹುದೇ? ನಿಜ ಹೇಳಬೇಕೆಂದರೆ ನಿಜವಾದ ಎದುರಾಳಿ ಮನುಷ್ಯರಲ್ಲ, ಆದರೆ ಅವನು ಮನುಷ್ಯರಾಗಿ ನಮ್ಮ ಬಳಿಗೆ ಬರುತ್ತಾನೆ . ಸೈತಾನನೇ ನಮ್ಮ ನಿಜವಾದ ವಿರೋಧಿಯಾಗಿದ್ದಾನೆ. ಮೇಲಿನ ನಮ್ಮ ಇಂದಿನ ದೇವರವಾಕ್ಯಭಾಗವು ಹೇಳುವಂತೆ  "ನಿಮ್ಮ ವಿರೋಧಿ , ಸೈತಾನನು ." ಹೇಗೂ , ಅವನು ನಮ್ಮ ಸುತ್ತಲಿನ ಜನರನ್ನು ನಮ್ಮ ಮೇಲೆ ಆಕ್ರಮಣ ಮಾಡಲು ತೊಡಗಿಸಿಕೊಳ್ಳುತ್ತಾನೆ. ಅವನು ನಮ್ಮ ಜೀವನದ ಸುತ್ತಲೇ  ರಹಸ್ಯವಾಗಿ ಅಡಗಿಕೊಂಡಿದ್ದು ನಮ್ಮನ್ನು  ಚದುರಿಸಲು ಸ್ಥಳವಕಾಶ ಹುಡುಕುತ್ತಿರುತ್ತಾನೆ. "ನಾವು ಹೋರಾಡುವದು ಮನುಷ್ಯ ಮಾತ್ರದವರ ಸಂಗಡವಲ್ಲ; ರಾಜತ್ವಗಳ ಮೇಲೆಯೂ ಅಧಿಕಾರಿಗಳ ಮೇಲೆಯೂ ಈ ಅಂಧಕಾರದ ಲೋಕಾಧಿಪತಿಗಳ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ." ಎಂದು  ಎಫೆಸ 6:12 ಹೇಳುತ್ತದೆ.

ಅವನು ಪೇತ್ರನನ್ನು ಹೊಕ್ಕು  ಯೇಸುವಿನ ಮೇಲೆಯೇ   ದಬ್ಬಾಳಿಕೆ ನಡೆಸಲು ನೋಡಿದನು ಆದರೆ ಆಗ ಯೇಸು ಪೇತ್ರನನ್ನು ನೋಡಿ  "ಸೈತಾನನೇ  ನನ್ನ ಬಿಟ್ಟು ತೊಲಗು "ಎಂದು  ಗದರಿಸಿದನು.  ಆದ್ದರಿಂದ ನಾವು ಶತ್ರವಿನ  ಯೋಜನೆಗಳನ್ನು ಜಯಿಸಲು ಯಾವಾಗಲೂ ಉತ್ಸಾಹದಿಂದ  ಸಂವೇದನಾಶೀಲರಾಗಿರಬೇಕು.

ನೆಹೆಮಿಯಾ 6:10-13 ರಲ್ಲಿ, "ಒಂದು ದಿವಸ ನಾನು ಮೆಹೇಟಬೇಲನ ಮೊಮ್ಮಗನೂ ದೆಲಾಯನ ಮಗನೂ ಆದ ಶೆಮಾಯನ ಮನೆಗೆ ಹೋದೆನು. ಅವನು ಅಲ್ಲಿ ಅಡಗಿಕೊಂಡಿದ್ದನು. ಅವನು ನನಗೆ - ನಿನ್ನನ್ನು ಕೊಲ್ಲುವದಕ್ಕೆ ಬರುತ್ತಾರೆ, ಈ ರಾತ್ರಿಯೇ ಬರುತ್ತಾರೆ. ಆದದರಿಂದ ನಾವಿಬ್ಬರೂ ದೇವಾಲಯಕ್ಕೆ ಹೋಗಿ ಪವಿತ್ರಸ್ಥಾನವನ್ನು ಪ್ರವೇಶಿಸಿ ಅದರ ಕದಗಳನ್ನು ಮುಚ್ಚಿಕೊಳ್ಳೋಣ ಬಾ ಎಂದು ಹೇಳಿದನು. ನಾನು - ನನ್ನಂಥ ಪುರುಷನು ಓಡಿಹೋಗುವದು ಯೋಗ್ಯವೋ? ಇದಲ್ಲದೆ ನನ್ನಂಥವನು ಪ್ರಾಣ ರಕ್ಷಣೆಗಾಗಿ ಪವಿತ್ರಸ್ಥಾನವನ್ನು ಪ್ರವೇಶಿಸುವನೇ? ನಾನು ಬರುವದಿಲ್ಲ ಎಂದು ಉತ್ತರಕೊಟ್ಟೆನು.  ನಾನು ಸೂಕ್ಷ್ಮವಾಗಿ ವಿಚಾರಮಾಡಿದಾಗ ನನ್ನ ವಿಷಯವಾಗಿ ಆ ಕಾಲಜ್ಞಾನವಚನವನ್ನು ಉಚ್ಚರಿಸುವದಕ್ಕೆ ಇವನನ್ನು ಪ್ರೇರಿಸಿದವನು ದೇವರಲ್ಲ, ಟೋಬೀಯನೂ ಸನ್ಬಲ್ಲಟನೂ ಇವನಿಗೆ ಲಂಚಕೊಟ್ಟು ಹಾಗೆ ಹೇಳಿಸಿದರು ಎಂದು ನನಗೆ ಗೊತ್ತಾಯಿತು. ನಾನು ಅಂಜಿಕೊಂಡು ಇವನ ಮಾತಿನಂತೆ ನಡೆದು ದೋಷಿಯಾಗಿ ತಮ್ಮ ನಿಂದೆಗೂ ಕೆಟ್ಟ ಹೆಸರಿಗೂ ಒಳಗಾಗಲಿ ಎಂದು ಅವರು ಇವನಿಗೆ ಲಂಚಕೊಟ್ಟಿದ್ದರು." 

ನೆಹೆಮಿಯಾನ ಶತ್ರುಗಳು ಒಬ್ಬ ಗೂಢಚಾರನನ್ನು ಅವನ ಬಳಿಗೆ ಒಬ್ಬ  ಸಾಮಾನ್ಯ ಪ್ರಜೆಯ  ರೂಪದಲ್ಲಿ ಕಳುಹಿಸಿದನು. ಶೇಮಾಯನು ನೆಹಮಿಯನನ್ನು ದಾರಿತಪ್ಪಿಸಲು ಹಲವಾರು ಮಾರ್ಗಗಳಲ್ಲಿ  ಪ್ರಯತ್ನಿಸಿದರು, ಆದರೆ ನೇಹೇಮಿಯಾನು ಅವೆಲ್ಲವನ್ನು ನಿರಾಕರಿಸಿದನು, ಅವರು ಶೆಮಯ್ಯನನ್ನು ನೇಮಿಸಿ ಲಂಚ ಕೊಟ್ಟು  ಅವನ ಬಳಿಗೆ ಕಳುಹಿಸಿದ್ದರು. ಆದರೆ ನೆಹೆಮಿಯಾ ಆತ್ಮದಲ್ಲಿ ಸಂವೇದನಾಶೀಲನಾಗಿದ್ದರಿಂದ, ಅವನು ಶತ್ರುಗಳ ಬಲೆಗೆ ಬೀಳಲಿಲ್ಲ. ಅವನು ತಪ್ಪಿಸಿಕೊಂಡು ತನ್ನ ನಿಯೋಜನೆಯನ್ನು ಮುಂದುವರೆಸಿದನು.

ನೀವು ಸೂಕ್ಷ್ಮಗ್ರಾಹಿಗಳಾಗಿರದ  ಕಾರಣ ನೀವು ಎಷ್ಟು ಬಾರಿ ಶತ್ರುಗಳ ಬಲೆಗೆ ಬಿದ್ದಿದ್ದೀರಿ ? ನಿಮ್ಮ ಮನಸ್ಸಿನೊಳಗೆ ನುಸುಳಲು ಮತ್ತು ನಿಮ್ಮ ಕ್ರಿಯೆಗಳನ್ನು ನಿಯಂತ್ರಿಸಲು ನೀವು ಎಷ್ಟು ಬಾರಿ ಶತ್ರುವಿಗೆ  ಅನುಮತಿಸಿದ್ದೀರಿ? ಅವನ ವಿರುದ್ಧ ಅಸಾಧಾರಣ ರಕ್ಷಣಾಕೋಟೆಯನ್ನು  ಅಭಿವೃದ್ಧಿಪಡಿಸುವ ಸಮಯ ಇದಾಗಿದೆ. ದೇವರಿಂದ ಯಾವುದನ್ನೂ ಮರೆಮಾಡಲು ಸಾಧ್ಯವಿಲ್ಲ. ಆದ್ದರಿಂದ ದೇವರೊಂದಿಗೆ ಸಂಪರ್ಕದಲ್ಲಿರಿ. ನಿಮ್ಮ ಸುತ್ತಲಿರುವ ಶತ್ರುವನ್ನು ಪ್ರಕಟಪಡಿಸಬೇಕೆಂದು  ದೇವರನ್ನು ಕೇಳಿಕೊಳ್ಳಿ ಇದರಿಂದ ನೀವು ಅವನ ಯೋಜನೆಗೆ ಬಲಿಯಾಗುವುದಿಲ್ಲ. 

"ನನ್ನ ಶತ್ರು ದುಷ್ಟನೆಂದು ಪ್ರಕಟಗೊಳ್ಳಲಿ, ನನ್ನ ವಿರೋಧಿಯೇ ತಪ್ಪಿತಸ್ಥನೆಂದು ಸಾಬೀತಾಗಲಿ "ಎಂದು ಯೋಬ  27:7 (MSG) ರಲ್ಲಿ ಸತ್ಯವೇದ ಹೇಳುತ್ತದೆ. ಹಾಗಾಗಿ ದೇವರು ನಿಮ್ಮ ಜೀವನದಲ್ಲಿ ನಿಮ್ಮ  ವಿರುದ್ಧ ಕಾರ್ಯಮಾಡುತ್ತಿರುವ  ಎಲ್ಲಾ ವಿರೋಧಿಗಳನ್ನು ಪ್ರಕಟ ಪಡಿಸಲಿ  ಎಂದು ನಾನು ಪ್ರವಾದನೆ ನುಡಿಯುತ್ತೇನೆ. 


Bible Reading: Numbers 18-20
Prayer
ತಂದೆಯೇ, ನಾನು ನನ್ನನ್ನು ನಿಮಗೆ ಒಪ್ಪಿಸಿಕೊಟ್ಟು ನೀವು ನನ್ನನ್ನು ಸಕಲ ವೈರಿಗಳಿಂದ ರಕ್ಷಿಸಬೇಕೆಂದು ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸುತ್ತೇನೆ. ಶತ್ರುವು  ನನ್ನ ವಿರುದ್ಧ ಸಂಚು ಹೂಡಿ ಹುಟ್ಟುಹಾಕುವ ಪ್ರಲೋಭನೆಗಳಿಗೆ ನಾನು  "ಇಲ್ಲ" ಎಂದು ಹೇಳುವ ಕೃಪೆಯನ್ನು ಅನುಗ್ರಹಿಸಬೇಕೆಂದು ಪ್ರಾರ್ಥಿಸುತ್ತೇನೆ. ನನ್ನ ಜೀವನದ ಸುತ್ತ ನಡೆಯುತ್ತಿರುವ  ಶತ್ರುವಿನ  ಕ್ರಿಯೆಗಳನ್ನು ಕಾಣುವಂತೆ  ನೀವು ನನ್ನ ಕಣ್ಣುಗಳನ್ನು ತೆರೆಯಬೇಕೆಂದು ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸುತ್ತೇನೆ.ಆಮೆನ್.

Join our WhatsApp Channel


Most Read
● ವ್ಯಸನಗಳನ್ನು ನಿಲ್ಲಿಸುವುದು
● ಇದು ನಿಮಗಾಗಿ ಬದಲಾಗುತ್ತಿದೆ
● ಯೇಸು ಮಾಡುವ ಕಾರ್ಯಗಳಿಗಿಂತ ದೊಡ್ಡ ಕಾರ್ಯಗಳನ್ನು ಮಾಡುವುದರ ಅರ್ಥವೇನು?
● ದಿನ 16:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದಿನ 34:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಆಲಸ್ಯದ ದೈತ್ಯನನ್ನು ಕೊಲ್ಲುವುದು
● ಕೃಪೆಯನ್ನು ತೋರಿಸುವ ಪ್ರಾಯೋಗಿಕ ವಿಧಾನ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login