हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಭೂಮಿಗೆ ಉಪ್ಪೋ ಅಥವಾ ಉಪ್ಪಿನ ಸ್ತಂಭವೋ
Daily Manna

ಭೂಮಿಗೆ ಉಪ್ಪೋ ಅಥವಾ ಉಪ್ಪಿನ ಸ್ತಂಭವೋ

Sunday, 13th of April 2025
2 0 100
Categories : ಪಶ್ಚಾತ್ತಾಪ (Repentance) ಬಿಡುಗಡೆ (Deliverance)
"ಲೋಟನ ಹೆಂಡತಿಯನ್ನು ಜ್ಞಾಪಕ ಮಾಡಿಕೊಳ್ಳಿರಿ." ಲೋಟನ ಹೆಂಡತಿಗೆ ಏನಾಯಿತು ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು; ಈ ಪೀಳಿಗೆಯಲ್ಲಿ ಕ್ರಿಸ್ತನ ದೇಹವಾದ ಸಭೆಗೆ ಕರ್ತನು ಕೊಡುವ ದಾರಿದೀಪ ಇದಾಗಿದೆ. ಅವಳಿಗೆ ಸೋದೋಮನ್ನು ಬಿಡಲು  ಇಷ್ಟವಿರಲಿಲ್ಲ. ಅವಳ ಹೃದಯವು ಇನ್ನೂ ಸೋದೋಮ್  ಜೀವನದ ವಿಷಯಗಳಿಗೆ ಅಂಟಿಕೊಂಡಿತ್ತು ಮತ್ತು ವಿನಾಶದ ಪಟ್ಟಣದ ಮೇಲೆಯೇ ಅವಳ ದೃಷ್ಟಿ  ನೆಟ್ಟಿತ್ತು ಹಾಗಾಗಿ ಅದನ್ನು  ಬಿಟ್ಟು ಬರಲು ಅವಳು  ಸಿದ್ಧಳಿರಲಿಲ್ಲ. (ಲೂಕ 9:62).

 ನಮ್ಮ ಹೃದಯಗಳು ವಿನಾಶದ ಪಟ್ಟಣದ ವಿಷಯಗಳಲ್ಲಿ ವಿಭಜನೆಯಾಗಿ ಸಿಕ್ಕಿಹಾಕಿಕೊಂಡಾಗ, ಲೋಟನ ಹೆಂಡತಿಯ ಕುರಿತು ಇರುವ ಈ ಎಚ್ಚರಿಕೆಯನ್ನು ನಾವು ನೆನಪಿಗೆ ತೆಗೆದು ಕೊಳ್ಳಬೇಕು. ಲೋಟನ ಹೆಂಡತಿ ಒಬ್ಬ  ಕ್ರೈಸ್ತಳಾಗಿದ್ದಳು, ಆದರೆ ಅರ್ಧ ಮಾತ್ರ. "ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ." ಎಂದು  ಅಪೊಸ್ತಲನಾದ  ಪೌಲನು ಬರೆದಂತೆ (ಫಿಲಿಪ್ಪಿ 3:14)ನಾವು ಈ ಲೋಕದ ವಿಷಯಗಳನ್ನು ಬಿಟ್ಟು ಪೂರ್ಣ ಹೃದಯದ ಬದ್ಧತೆಯೊಂದಿಗೆ ಕರ್ತನನ್ನು ಅನುಸರಿಸಲು ಸಿದ್ಧರಾಗಿರಬೇಕು. 

ನಮ್ಮ ಸ್ವಂತ ಜೀವನದಲ್ಲಿ, ನಾವೂ  ಸಹ ಈ ಲೋಕದ ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ದೇವರು ಮತ್ತು ಲೋಕ ಎರಡನ್ನೂ ಸೇವಿಸಲು ಪ್ರಯತ್ನಿಸುತ್ತಾ ನಮ್ಮ ಹೃದಯಗಳು ವಿಭಜನೆಯಾಗಲು ನಾವು ಬಿಟ್ಟು ಕೊಡಬಹುದು. ಆದರೆ ಯೇಸು ಎಚ್ಚರಿಸಿದಂತೆ, ನಾವು ಎಂದಿಗೂ ಇಬ್ಬರೂ  ಯಜಮಾನರಿಗೆ ಸೇವೆ ಸಲ್ಲಿಸಲು ಸಾಧ್ಯವಿಲ್ಲ (ಮತ್ತಾಯ 6:24). ನಾವು ಹಿಂತಿರುಗಿ ನೋಡದಂತೆ  ಪೂರ್ಣ ಹೃದಯದಿಂದ ಆತನನ್ನು ಅನುಸರಿಸುವುದನ್ನು ಆರಿಸಿಕೊಳ್ಳಬೇಕು. 

ಬಡ ಕುಟುಂಬದಲ್ಲಿ ಬೆಳೆದ ಮರಿಯ (ಹೆಸರು ಬದಲಾಯಿಸಲಾಗಿದೆ) ಎಂಬ ಮಹಿಳೆ ಯಾವಾಗಲೂ ಯಶಸ್ವಿ ಉದ್ಯಮಿಯಾಗುವ ಮತ್ತು ತನ್ನ ಕುಟುಂಬಕ್ಕೆ ಉತ್ತಮ ಜೀವನವನ್ನು ಒದಗಿಸುವ ಕನಸು ಕಾಣುತ್ತಿದ್ದರು. ಅನೇಕ ಅಡೆತಡೆಗಳು ಮತ್ತು ಹಿನ್ನಡೆಗಳ ಹೊರತಾಗಿಯೂ, ಮರಿಯ ಇನ್ನೂ ಕರುಣಾ ಸದನ ಸೇವೆಗಳಲ್ಲಿ ಕರ್ತನ ಸೇವೆ ಸಲ್ಲಿಸುತ್ತಿದ್ದರು. ಅವರು ಮನೆಯಲ್ಲಿ ತಯಾರಿಸಿದ ಕರಕುಶಲ ವಸ್ತುಗಳು, ಉಪ್ಪಿನಕಾಯಿ ಮತ್ತು ಒಣ ಮೀನುಗಳನ್ನು ಮಾರಾಟ ಮಾಡುವ ಸಣ್ಣ ವ್ಯವಹಾರವನ್ನು ಪ್ರಾರಂಭಿಸಿದ್ದರು.

ಮರಿಯಾಳ ವ್ಯವಹಾರ ಬೆಳೆದಂತೆ, ಸೇವೆಗಳಿಗೆ ಹಾಜರಾಗಲು ಅಥವಾ ಕರ್ತನ ಸೇವೆ ಮಾಡಲು ಅವಳಿಗೆ ಸಮಯ ಸಾಲದಾಯಿತು. ಅವಳ ಈ ಹೊಸ ಯಶಸ್ಸಿನ ಜೊತೆಜೊತೆಗೆ  ಈ ಲೋಕದ ಪ್ರಲೋಭನೆಗಳು ಮತ್ತು ಸಂತೋಷಗಳು ಬಂದವು.

 ಮರಿಯಾ ದೇವರ ಚಿತ್ತವನ್ನು ಮಾಡುವ ಬದಲು ತನ್ನ ಸ್ವಂತ ಸೌಕರ್ಯ ಮತ್ತು ಸಂತೋಷದ ಮೇಲೆ ಹೆಚ್ಚು ಗಮನಹರಿಸಲು ಪ್ರಾರಂಭಿಸಿದಳು. ಒಂದು ದಿನ, ಮರಿಯಾ ಕರುಣಾ ಸದನದ  ದೂರದರ್ಶನ ನೇರ ಪ್ರಸಾರ ಒಂದರಲ್ಲಿ ಲೋಟನ ಹೆಂಡತಿಯ ಕಥೆ ಮತ್ತು ಈ ಲೋಕದ ವಿಷಯಗಳಿಗೆ ಅಂಟಿಕೊಳ್ಳುವ ಅಪಾಯದ ಬಗ್ಗೆ ಮಾತನಾಡುವ ಪ್ರಸಂಗವನ್ನು ಕೇಳಿದಳು.
ಪವಿತ್ರಾತ್ಮನ  ಕರಗಳು ಅವಳನ್ನು ಮುಟ್ಟಿ ಆಕೆಯಲ್ಲಿ ತನ್ನ ತಪ್ಪನ್ನು ತೋರಿಸಿದಂತೆ  ಆಕೆ ಭಾವಿಸಿ  ತಾನು ಲೋಟನ ಹೆಂಡತಿಯಂತೆ ಆಗಿದ್ದೇನೆ  ಈ ಲೋಕದ ವಿಷಯಗಳನ್ನು ಹಿಂತಿರುಗಿ ನೋಡುತ್ತಾ ಅವುಗಳಲ್ಲಿಯೇ  ಸಿಕ್ಕಿಹಾಕಿಕೊಂದಿದ್ದೇನೆ  ಎಂಬುದನ್ನು ಅರಿತುಕೊಂಡಳು.

 ಇಂದು, ಮರಿಯಾ ಒಂದು ನಿರ್ದಿಷ್ಟ ಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದಾಳೆ. ಆದರೆ ಅವಳು ಇನ್ನೂ ತನ್ನ ವ್ಯವಹಾರವನ್ನು ಮುಂದುವರಿಸುತ್ತಿದ್ದಾಳೆ, ಆದರೆ ಅವಳು ತನ್ನ ಹಳ್ಳಿಯ ಅನೇಕ ಯುವಜನರಿಗೆ ಶಿಕ್ಷಣ ಮತ್ತು ಉದ್ಯೋಗ ತರಬೇತಿಯನ್ನು ಬೆಂಬಲಿಸಲು ತನ್ನ ವ್ಯವಹಾರದ ಆದಾಯವನ್ನು ಬಳಸುತ್ತಾಳೆ.

ಲೋಟನ ಹೆಂಡತಿಯ  ಪೀಳಿಗೆಯಲ್ಲಿ, ಲೋಟನ ಹೆಂಡತಿಯನ್ನು ಜೀವಸ್ವರೂಪ ದೇವರನ್ನು ಅನುಸರಿಸುವವರಲ್ಲಿ ಒಬ್ಬಳೆಂದು ಪರಿಗಣಿಸಲಾಗಿತ್ತು. ಅವಳು ನೀತಿವಂತನಾದ  ಪುರುಷನೊಂದಿಗೆ, ಅಂದರೆ ತನ್ನ ಗಂಡನೊಂದಿಗೆ ವಾಸಿಸುತ್ತಿದ್ದಳು, ಆದರೆ ಅವಳು ಎರಡು ಮಾನದಂಡದ ಜೀವಿತ ಜೀವಿಸುತ್ತಿದ್ದಳು. ಅವಳ ಹೃದಯದ ಮೇಲೆ ಬಲವಾದ ಹಿಡಿತ ಹೊಂದಿದ್ದ ಸೊದೋಮಿನ ಸುಖಗಳಿಂದ ಅವಳ ಹೃದಯ ಎಂದಿಗೂ ಬೇರ್ಪಟ್ಟಿರಲಿಲ್ಲ. ನಗರವು ಬೆಂಕಿ ಮತ್ತು ಗಂಧಕದಿಂದ ನಾಶವಾಗಲಿದೆ ಎಂದು ಅವಳು ತಿಳಿದಿದ್ದರೂ, ಅವಳು ಬಿಟ್ಟು ಹೋಗುತ್ತಿರುವ ವಸ್ತುಗಳ ಮೇಲೆ ತನ್ನ  ಕೊನೆಯ ನೋಟವನ್ನು ನೆಟ್ಟಿದ್ದಳು.ಅದರ  ಪರಿಣಾಮವಾಗಿ, ಅವಳು ಭೂಮಿಯ ಉಪ್ಪಾಗುವ ಬದಲು ಉಪ್ಪಿನ ಕಂಬವಾದಳು. 

Bible Reading: 2 Samuel 3-5
Prayer
ತಂದೆಯೇ, ನನ್ನ ಜೀವನ, ನನ್ನ ಕುಟುಂಬ ಮತ್ತು ಕಲುಷಿತ ಸಂಗತಿಗಳು ಮತ್ತು ವಿಷಯಗಳ ಜೊತೆಗೆ ಬೆಸೆದು ಕೊಂಡಿರುವ ಪ್ರತಿಯೊಂದು ಭಕ್ತಿಹೀನ ಬಂಧನವು ಯೇಸುನಾಮದಲ್ಲಿ  ಮುರಿಯಲ್ಪಡಲಿ ಎಂದು ನಾನು ಪ್ರಾರ್ಥಿಸುತ್ತೇನೆ.

ನನ್ನೊಂದಿಗೆ ಸಂಪರ್ಕ ಹೊಂದಿದ ಪ್ರತಿಯೊಬ್ಬ ವ್ಯಕ್ತಿ ಮತ್ತು ವಸ್ತುವಿನ ಮೇಲೆ ನಾನು ಯೇಸುವಿನ ರಕ್ತವನ್ನು ಪ್ರೊಕ್ಷಿಸಿ  ಎಲ್ಲಾ ದುಷ್ಟತನದಿಂದ ಅವುಗಳಿಗೆ  ರಕ್ಷಣೆ ಮತ್ತು ವಿಮೋಚನೆಯನ್ನು  ಉಂಟಾಗಲೆಂದು ಘೋಷಿಸುತ್ತೇನೆ.

ಕರ್ತನೇ ನನ್ನ ಮೇಲಿನ ನಿಮ್ಮ ಪ್ರೀತಿ ಮತ್ತು ಕರುಣೆಗಾಗಿ ಸ್ತೋತ್ರ . ಯೇಸುನಾಮದಲ್ಲಿ  ಪ್ರಾರ್ಥಿಸುತ್ತೇನೆ. ಆಮೆನ್.


Join our WhatsApp Channel


Most Read
● ನಿಮ್ಮ ದೌರ್ಬಲ್ಯಗಳನ್ನು ದೇವರಿಗೆ ಒಪ್ಪಿಸಿ
● ನಿಮ್ಮ ಗತಿಯನ್ನು ಹಾಳು ಮಾಡಿಕೊಳ್ಳಬೇಡಿರಿ!
● ಬೀಜದಲ್ಲಿರುವ ಶಕ್ತಿ -3
● ಪುರುಷರು ಏಕೆ ಪತನಗೊಳ್ಳುವರು -3
● ದಿನ 28:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನಿಮ್ಮ ಮಾರ್ಗದರ್ಶಕರು ಯಾರು - |
● ನಿಮ್ಮ ಮನಸ್ಸಿಗೆ ಉಣಬಡಿಸಿರಿ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login