ಅನುದಿನದ ಮನ್ನಾ
4
1
116
ಮಹಿಮೆ ಮತ್ತು ಶಕ್ತಿಯ ಭಾಷೆ - ಅನ್ಯಭಾಷೆ
Saturday, 19th of July 2025
Categories :
ಅನ್ಯಭಾಷೆಯನ್ನಾಡುವುದು (Speak in Tongues)
ಸತ್ತವರೊಳಗಿಂದ ಪುನರುತ್ಥಾನಗೊಂಡ ನಂತರ, ಕರ್ತನಾದ ಯೇಸು ತನ್ನನ್ನು ನಂಬುವವರಲ್ಲಿ ಇಂತಹ ಸೂಚಕಕಾರ್ಯಗಳು ಕಾಣಬರುತ್ತವೆ ಎಂದು ಘೋಷಿಸಿದನು.
”ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ನನ್ನ ಹೆಸರನ್ನು ಹೇಳಿ ದೆವ್ವಗಳನ್ನು ಬಿಡಿಸುವರು; ಹೊಸಭಾಷೆಗಳಿಂದ ಮಾತಾಡುವರು; ಹಾವುಗಳನ್ನು ಎತ್ತುವರು; ವಿಷಪದಾರ್ಥವನ್ನೇನಾದರೂ ಕುಡಿದರೂ ಅವರಿಗೆ ಯಾವ ಕೇಡೂ ಆಗುವದಿಲ್ಲ; ಅವರು ರೋಗಿಗಳ ಮೇಲೆ ಕೈಯಿಟ್ಟರೆ ಅವರಿಗೆ ಗುಣವಾಗುವದು ಎಂದು ಹೇಳಿದನು." (ಮಾರ್ಕ್ 16:17-18)
ಕರ್ತನಾದ ಯೇಸು ಕ್ರಿಸ್ತನನ್ನು ತಮ್ಮ ಕರ್ತ, ದೇವರು ಮತ್ತು ರಕ್ಷಕ ಎಂದು ನಂಬುವವರಲ್ಲಿ ಈ ಸೂಚಕಕಾರ್ಯಗಳು ಅನುಸರಿಸುತ್ತವೆ.
1. ಅವರು ದೆವ್ವಗಳನ್ನು ಬಿಡಿಸುತ್ತಾರೆ - ಅಲೌಕಿಕ ಅಧಿಕಾರ
2. ಅವರು ಹೊಸ ಭಾಷೆಗಳಲ್ಲಿ ಮಾತನಾಡುತ್ತಾರೆ - ಅಲೌಕಿಕ ಭಾಷೆ
3. ಅವರು ಸರ್ಪಗಳನ್ನು ಎತ್ತುತ್ತಾರೆ - ಅಲೌಕಿಕ ರಕ್ಷಣೆ
4. ಅವರು ಮಾರಕವಾದ ಯಾವುದನ್ನಾದರೂ ಕುಡಿದರೂ, ಅದು ಅವರಿಗೆ ಹಾನಿ ಮಾಡುವುದಿಲ್ಲ - ಅಲೌಕಿಕ ಸಂರಕ್ಷಣೆ
5.ಅವರು ರೋಗಿಗಳ ಮೇಲೆ ಕೈಯಿಡುವಾಗ, ರೋಗಿಗಳು ಗುಣಮುಖರಾಗುತ್ತಾರೆ - ಅಲೌಕಿಕ ಶಕ್ತಿ
ಮೇಲಿನ ವಾಕ್ಯದಲ್ಲಿ, ಅನ್ಯಭಾಷೆಗಳಲ್ಲಿ ಮಾತನಾಡುವುದನ್ನೂ ಇತರ ಅಲೌಕಿಕ ಸೂಚಕಕಾರ್ಯಗಳಂತೆಯೇ ಅದೇ ಮಟ್ಟದಲ್ಲಿ ಇರಿಸಲಾಗಿದೆ ಎಂಬುದನ್ನು ಗಮನಿಸಿ. ಅನ್ಯಭಾಷೆಗಳಲ್ಲಿ ಮಾತನಾಡುವುದು ಮನುಷ್ಯನ ಅಲೌಕಿಕ ಸ್ವಭಾವದ ಸೂಚನೆಯಾಗಿದೆ ಎಂಬುದನ್ನು ಇದು ಸೂಚಿಸುತ್ತದೆ.
ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಿದ್ದ ನನ್ನನ್ನು ಕರ್ತನು ನಾಟಕೀಯ ರೀತಿಯಲ್ಲಿ ರಕ್ಷಿಸಿದನು. ಬೀದಿಯಲ್ಲಿ ಯಾರೋ ನನ್ನೊಂದಿಗೆ ಸುವಾರ್ತೆಯನ್ನು ಹಂಚಿಕೊಂಡರು. (ನಾನು ಸುವಾರ್ತಾಬೋಧನೆಯ ಕುರಿತು ತುಂಬಾ ಉತ್ಸುಕನಾಗಿರಲು ಇದೂ ಒಂದು ಕಾರಣ). ನಂತರ ನಾನು ಯೇಸುವಿನ ಕುರಿತು ಉತ್ಸಾಹಭರಿತರಾಗಿದ್ದ ಒಂದು ಯುವಕರ ಗುಂಪನ್ನು ಸೇರಿಕೊಂಡೆ.
ಒಂದು ರಾತ್ರಿ, ಬಹಳ ತಡವಾಗಿ, ನಾವು (ನಮ್ಮಲ್ಲಿ ಕೆಲವರು) ಪ್ರಾರ್ಥಿಸುತ್ತಿದ್ದಾಗ, ಬೆಳಗಿನ ಜಾವ 2:30 ರ ಸುಮಾರಿಗೆ, ನನ್ನ ದೇಹದಾದ್ಯಂತ ಬೆಂಕಿಯಂತೆ ದೇವರ ಶಕ್ತಿಯನ್ನು ಅನುಭವಿಸಿದೆ. ಅದು ಬಿಸಿಯಾಗಿ ಉರಿಯುತ್ತಿತ್ತು. ನಾನು ಅನಿಯಂತ್ರಿತವಾಗಿ ಅಳಲು ಪ್ರಾರಂಭಿಸಿದೆ. ಅದೇ ಸಮಯದಲ್ಲಿ, ನನ್ನ ದೇಹಕ್ಕೆ ಏನೋ ಹೆಚ್ಚಿನ ತೀವ್ರತೆಯಿಂದ ಪಂಪ್ ಮಾಡಲಾಗಿದೆ ಎಂದು ನನಗೆ ಅನಿಸಿತು. ಇದೆಲ್ಲವೂ ನಡೆಯುತ್ತಿರುವಾಗ, ನನ್ನ ಬಾಯಿ ನಡುಗುತ್ತಿತ್ತು, ಮತ್ತು ನನ್ನ ತುಟಿಗಳು ಅಸಾಮಾನ್ಯ ತೀವ್ರತೆಯಿಂದ ಕಂಪಿಸುತ್ತಿದ್ದವು.
ನಾನು ದೇವರನ್ನು ಸ್ತುತಿಸಲು ಪ್ರಯತ್ನಿಸಿದೆ, ಮತ್ತು ದೇವರವಾಕ್ಯವು ಹೇಳುವಂತೆ, "ನಿನ್ನ ಬಾಯಿಯನ್ನು ಅಗಲವಾಗಿ ತೆರೆಯಿರಿ, ನಾನು ಅದನ್ನು ತುಂಬುತ್ತೇನೆ." (ಕೀರ್ತನೆ 81:10). ಕರ್ತನು ನನ್ನ ಬಾಯಿಯನ್ನು ಹೊಸ ಭಾಷೆಯಿಂದ ತುಂಬಿಸಿದನು -ಅದು ಮಹಿಮೆಯ ಭಾಷೆಯಿಂದ.
ನಾನು ಪವಿತ್ರಾತ್ಮನಲ್ಲಿ ಮಹಿಮೆಯಿಂದ ದೀಕ್ಷಾಸ್ನಾನ ಪಡೆದೆ. ದೇವರು ವ್ಯಕ್ತಿಗಳನ್ನು ಗೌರವಿಸುವವನಲ್ಲ.ಪಕ್ಷಪಾತಿಯಲ್ಲ ಆತನು ನನಗಾಗಿ ಮಾಡಿದ್ದನ್ನು, ಆತನು ನಿಮಗೂ ಮಾಡಬಲ್ಲನು. (ಅ. ಕೃ 10:34)
Bible Reading: Proverbs 25-28
ಅರಿಕೆಗಳು
ನನ್ನ ನಾಲಿಗೆಯು ಯೇಸುನಾಮದಲ್ಲಿ ದೇವರ ಚಿತ್ತವನ್ನು ಸ್ಥಾಪಿಸುತ್ತದೆ ಮತ್ತು ಅಂಧಕಾರದ ಕಾರ್ಯಗಳನ್ನು ದಹಿಸಿಬಿಡುತ್ತದೆ. ಆಮೆನ್ (ಯೆರೆಮೀಯ 5:14)
Join our WhatsApp Channel

Most Read
● ಯೇಸು ಮಾಡುವ ಕಾರ್ಯಗಳಿಗಿಂತ ದೊಡ್ಡ ಕಾರ್ಯಗಳನ್ನು ಮಾಡುವುದರ ಅರ್ಥವೇನು?● ನಿಮ್ಮ ಬಿಡುಗಡೆಯನ್ನು ಕಾಪಾಡಿಕೊಳ್ಳುವುದು ಹೇಗೆ
● ಸಿಟ್ಟಿನ ಬಲೆಯಿಂದ ದೂರ ಉಳಿಯುವುದು
● ಸತ್ತವರೊಳಗಿಂದ ಮೊದಲು ಎದ್ದು ಬಂದವನು.
● ಜಯಿಸುವ ನಂಬಿಕೆ
● ಸಮರುವಿಕೆಯ ಕಾಲ - 2
● ಕರ್ತನ ಸೇವೆ ಮಾಡುವುದು ಎಂದರೇನು-I
ಅನಿಸಿಕೆಗಳು