ನಿಮ್ಮಲ್ಲಿ ಅನೇಕರಿಗೆ ನಾನು ತುಂಬಾ ಸರಳ ಕುಟುಂಬದಿಂದ ಬಂದಿದ್ದೇನೆಂದು ತಿಳಿದಿದೆ.ಆಗ ಪರಿಸ್ಥಿತಿ ಸುಲಭವಾಗಿರುತ್ತಿರಲಿಲ್ಲ, ಆದರೆ ನನ್ನ ತಂದೆ ಮತ್ತು ತಾಯಿ, ಮೂವರು ಮಕ್ಕಳಾದ ನಮ್ಮನ್ನು ನಿರ್ವಹಿಸುವಲ್ಲಿ ಉತ್ತಮ ಕೆಲಸ ಮಾಡಿದ್ದರು. ಒಂದು ಹುಟ್ಟುಹಬ್ಬದಂದು ನಾನು ನನ್ನ ತಾಯಿಗೆ ನನಗಾಗಿ ಭೂತಗನ್ನಡಿಯನ್ನು ಖರೀದಿಸಿ ಕೊಡಬೇಕೆಂದು ಕೇಳಿದ್ದು ನನಗೆ ನೆನಪಿದೆ. ಇಂದು, ಇಂದಿನ ಮಕ್ಕಳಿಗೆ ಅಷ್ಟೇನೂ ಹೊಸತನದ ಮೌಲ್ಯವನ್ನು ಹೊಂದಿಲ್ಲದಿರಬಹುದು, ಆದರೆ ಆ ದಿನಗಳಲ್ಲಿ, ಅದು ನಮಗೆ ವಿಶಿಷ್ಟವಾದ ಸಂಗತಿಯಾಗಿತ್ತು.
ನಾನು ನನ್ನ ಭೂತಗನ್ನಡಿಯನ್ನು ತೆಗೆದುಕೊಂಡು ರಂಧ್ರಗಳಿಂದ ಹೊರಬರುವ ಇರುವೆಗಳನ್ನು ನೋಡುತ್ತಿದ್ದೆ. ಅವು ತುಂಬಾ ದೊಡ್ಡದಾಗಿ ಕಾಣುತ್ತಿದ್ದವು; ಅವು ತುಂಬಾ ವಿಭಿನ್ನವಾಗಿ ಕಾಣುತ್ತಿದ್ದವು. ನನಗೆ ಅವುಗಳ ಎಲ್ಲಾ ವಿವರಗಳು ಕಾಣಿಸುತ್ತಿದ್ದವು. ನನ್ನಂತಹ ಮಗುವಿಗೆ, ಅದು ಸಂಪೂರ್ಣ ಹೊಸ ಜಗತ್ತನ್ನು ತೆರೆದುಕೊಟ್ಟಿತ್ತು.
"ನನ್ನೊಡನೆ ಯೆಹೋವನನ್ನು ಕೊಂಡಾಡಿರಿ; ನಾವು ಒಟ್ಟಾಗಿ ಆತನ ಹೆಸರನ್ನು ಘನಪಡಿಸೋಣ.(ಕೀರ್ತನೆ 34:3)
ಕರ್ತನನ್ನು ಮಹಿಮೆಪಡಿಸುವ ಮೂಲಕ, ನೀವು ಆತನನ್ನು ಇರುವುದಕ್ಕಿಂತ ದೊಡ್ಡದಾಗಿ ಮಾಡುವುದಿಲ್ಲ. ಆದರೆ ಹೌದು! ಆತನು ನಿಮ್ಮ ಮನಸ್ಸಿನ ದೃಷ್ಟಿಕೋನವನ್ನು ತುಂಬಿಕೊಂಡು ಆತನು ನಿಮ್ಮ ಜೀವನದ ದೊಡ್ಡ ಭಾಗವಾಗುತ್ತಾನೆ.
ಹಾಗಾದರೆ ಕರ್ತನನ್ನು ಹೇಗೆ ಘನ ಪಡಿಸಬಹುದು?
ನೀವು ಯಾವುದಕ್ಕೆ ಗಮನ ಕೊಡುವಿರೋ ನಿಮ್ಮ ಮನಸ್ಸಿನಲ್ಲಿ ಅದು ಬೆಳೆಯುತ್ತದೆ. ದಾವೀದನು ದೇವರನ್ನು ಮಹಿಮೆಪಡಿಸಬೇಕೆಂದು ಬಯಸಿದನು.
ಅವನು ಅದನ್ನು ಹೇಗೆಂದು ಸಹ ಹಂಚಿಕೊಂಡನು:
"ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು; ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿ ಇರುವದು. ನನ್ನ ಮನಸ್ಸು ಯೆಹೋವನಲ್ಲಿ ಹಿಗ್ಗುತ್ತಿರುವದು; ಇದನ್ನು ದೀನರು ಕೇಳಿ ಸಂತೋಷಿಸುವರು". (ಕೀರ್ತನೆ 34:1–2)
ಇದು ಅಪಾಯಕಾರಿ ಸಮಯಗಳು, ಮತ್ತು ನಿಮ್ಮ ಜಯಶಾಲಿಯಾಗಿರುವ ಸ್ಥಾನವನ್ನು ಕಾಪಾಡಿಕೊಳ್ಳಲು, ನೀವು ಸರಿಯಾದ ವಿಷಯಗಳತ್ತ ಗಮನಹರಿಸಲು ಅಥವಾ ಅವುಗಳಿಗೆ ನಿಮ್ಮ ಗಮನವನ್ನು ನೀಡಲು ಸಹಕರಿಸುತ್ತದೆ; ಇಲ್ಲದಿದ್ದರೆ, ಅವು ನಿಮ್ಮ ನೋಟವನ್ನು ಮಸುಕುಗೊಳಿಸಬಹುದು.
ನೀವು ಕೆಲಸ ಮಾಡುತ್ತಿರುವಾಗಲೂ ಮನೆಯಲ್ಲಿ ಕೆಲವು ಹಿತವಾದ ಆರಾಧನಾ ಸಂಗೀತವನ್ನು ಕೇಳುತ್ತಿರಿ. ಆತನನ್ನು ಸ್ತುತಿಸುತ್ತಿರಿ, ದಿನವಿಡೀ ಆರಾಧನಾ ಹಾಡುಗಳನ್ನು ಹಾಡುತ್ತಿರಿ. ಆಗ ಇದು ನಿಮ್ಮ ಹೃದಯ ಮತ್ತು ಮನಸ್ಸನ್ನು ದೇವರ ಮೇಲೆಯೇ ಇರಿಸುತ್ತದೆ. ಮತ್ತು ನೀವು ಹೀಗೆ ಮಾಡುವಾಗ, ನೀವು ಆತನನ್ನು ಮಹಿಮೆಪಡಿಸುತ್ತಿರುತ್ತೀರಿ ಮತ್ತು ಘನಪಡಿಸುವವರಾಗುತ್ತೀರಿ. ಆಗ ದೇವರು ನಿಮ್ಮ ಜೀವನದ ದೊಡ್ಡ ಭಾಗವಾಗಿ ನಿಮ್ಮ ದಾರಿಯಲ್ಲಿ ನಿಲ್ಲುವ ಪ್ರತಿಯೊಂದು ಅಡೆತಡೆಗಳನ್ನು ಜಯಿಸಲು ನಿಮಗೆ ಅಧಿಕಾರ ದೊರಕಿಸಿಕೊಡುತ್ತಾನೆ.
Bible Reading: Isaiah 24-27
ಪ್ರಾರ್ಥನೆಗಳು
ತಂದೆಯಾದ ದೇವರೇ, ನೀವು ಇಡೀ ವಿಶ್ವದ ಸೃಷ್ಟಿಕರ್ತನು ಎಂದು ನಾವು ನಿನಗೆ ಕೃತಜ್ಞತೆ ಸಲ್ಲಿಸುತ್ತೇವೆ. ನೀನೇ ನಿತ್ಯನಾದ ದೇವರು. ನಿತ್ಯನಾದ ತಂದೆ. ಏಕೈಕ ನಿಜವಾದ ದೇವರು. ನಾವು ನಮ್ಮ ಹೃದಯಗಳು, ಮನಸ್ಸುಗಳು ಮತ್ತು ನಮ್ಮ ಕಣ್ಣುಗಳನ್ನು ನಿನ್ನ ಮೇಲೆ ಕೇಂದ್ರೀಕರಿಸಿದಾಗ, ನೀನು ಯಾರಾಗಿದ್ದೀಯ ಎಂಬುದನ್ನು ನಾವು ನೋಡುವವರಾಗುತ್ತೇವೆ ಎಂದು ನಾವು ಪ್ರಾರ್ಥಿಸುತ್ತೇವೆ. ನಾವು ನಿನ್ನನ್ನೇ ಘನಪಡಿಸುತ್ತೇವೆ ಮತ್ತು ಯೇಸುನಾಮದಲ್ಲಿ ನಿನಗೇ ಮಹಿಮೆ, ಗೌರವ ಮತ್ತು ಸ್ತುತಿಯನ್ನು ಸಲ್ಲಿಸುತ್ತೇವೆ. ಆಮೆನ್.
Join our WhatsApp Channel

Most Read
● ನೀವು ದೇವರನ್ನು ಎದುರಿಸುತ್ತಿದ್ದೀರಾ?● ಕೃಪೆಯಲ್ಲಿ ಬೆಳೆಯುವುದು
● ಸರ್ವಶಕ್ತನಾದ ದೇವರ ಅದ್ಬುತ ಸಮಾಗಮ.
● ಕರ್ತನು ಹೃದಯವನ್ನೇ ಶೋಧಿಸುವವನಾಗಿದ್ದಾನೆ.
● ಪ್ರೀತಿಯ ಭಾಷೆ
● ದಿನ 31:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ನಿಮ್ಮ ಪದೋನ್ನತಿಗಾಗಿ ಸಿದ್ಧರಾಗಿ
ಅನಿಸಿಕೆಗಳು