ಅನುದಿನದ ಮನ್ನಾ
2
0
84
ನಿಮ್ಮ ನಿಯೋಜನೆಯನ್ನು ಸೈತಾನನು ಹೇಗೆ ತಡೆಯಲೆತ್ನಿಸುತ್ತಾನೆ
Saturday, 2nd of August 2025
Categories :
ಸಂಬಂಧ (Relationship)
ದೇವರ ಜನರು ತಮ್ಮ ದೈವಿಕ ನಿಯೋಜನೆಯನ್ನು ಪೂರೈಸದಂತೆ ತಡೆಯಲು ವೈರಿಯು (ಸೈತಾನ) ಅವರ ವಿರುದ್ಧ ನಿಯೋಜಿಸುವ ಅತ್ಯಂತ ಯಶಸ್ವಿ ಸಾಧನಗಳಲ್ಲಿ ವ್ಯಾಕುಲತೆಯೂ ಒಂದು.
ಯೇಸು ಮಾರ್ಥಾಗೆ ಸ್ಪಷ್ಟಪಡಿಸಿದ್ದು ಇದನ್ನೇ, "ಆದರೆ ಬೇಕಾದದ್ದು ಒಂದೇ, ಮರಿಯಳು ಆ ಒಳ್ಳೆಯ ಭಾಗವನ್ನು ಆರಿಸಿಕೊಂಡಿದ್ದಾಳೆ" ಎಂಬುದು (ಲೂಕ 10:42)
ಶತ್ರು ಮಾಡುವ ಮೊದಲ ಕಾರ್ಯ ನಮ್ಮನ್ನು ಕರೆಯಲಾದ ಆ ಒಂದು ಪ್ರಾಥಮಿಕ ನಿಯೋಜನೆಯಿಂದ ನಮ್ಮ ದೃಷ್ಟಿಯನ್ನು ಬದಲಾಯಿಸುವುದು. ಆಗ ಶತ್ರುವು ಯಶಸ್ವಿಯಾಗಿ ನಮ್ಮ ಗಮನವನ್ನು ಹಲವಾರು ವಿಷಯಗಳಿಗೆ ವಿಕೇಂದ್ರೀಕರಿಸುವಂತೆ ಮಾಡಬಲ್ಲನು. ಇದು ನಮ್ಮಲ್ಲಿ ಬಹುತೇಕರು ಎಲ್ಲಾ ದಿಕ್ಕುಗಳಲ್ಲಿಯೂ ನಡೆಯಲು ಪ್ರಾರಂಭಿಸಿ ನಿರಾಶಾ ದಾಯಕವಾದ ಮತ್ತು ನಿರಾಶೆಗೊಂಡ ವೃತ್ತಗಳಲ್ಲಿ ತಮ್ಮ ಕರೆಯನ್ನು ಅಂತ್ಯಗೊಳಿಸಿಕೊಳ್ಳುವ ಸಮಯ.
ಈ ಅನೇಕ ವರ್ಷಗಳಲ್ಲಿ, ಶತ್ರುವಾದ ಸೈತಾನನು ಜನರನ್ನು ತಮ್ಮ ದೇವರು ತಮಗೆ ನೀಡಿದ ನಿಯೋಜನೆಯಿಂದ ಹೇಗೆ ವಿಚಲಿತಗೊಳಿಸುತ್ತಾನೆ ಎಂಬುದನ್ನು ನಾನು ನೋಡುತ್ತಾ ಬರುತ್ತಿದ್ದೇನೆ. ಕೆಲವರಿಗೆ, ಅವನು ಮದ್ಯವನ್ನು ನೀಡುತ್ತಾನೆ; ಕೆಲವರಿಗೆ, ಅವನು ಮಾದಕ ದ್ರವ್ಯಗಳು ಮತ್ತು ಇತರ ವಸ್ತುಗಳನ್ನು ನೀಡುತ್ತಾನೆ. ಕೆಲವರಿಗೆ, ಅವನು ದಿನಕ್ಕೆ ಗಂಟೆಗಳ ಕಾಲ ಜನರನ್ನು ಬಂಧಿಸಿಡುವ ನಿರುಪದ್ರವ-ತೋರಿಕೆಯ ಇಂಟರ್ನೆಟ್ ಆಟಗಳನ್ನು ನೀಡುತ್ತಾನೆ. ಹೀಗೆ ಫಲಪ್ರದವಲ್ಲದ ದಿನಗಳಾಗಿ ಮತ್ತು ವಾರಗಳಾಗಿ ಅವು ಕಳೆದು ಹೋಗಿರುತ್ತದೆ.
ಒಮ್ಮೆ ಒಬ್ಬ ಪಾಸ್ಟರ್ ತಮ್ಮ ಚರ್ಚ್‌ನಲ್ಲಿ ನಡೆದ ಒಂದು ಸತ್ಯ ಘಟನೆಯ ಕುರಿತು ನನ್ನೊಂದಿಗೆ ಹಂಚಿಕೊಂಡರು. ಕೆಲವು ವರ್ಷಗಳ ಹಿಂದೆ, ಒಬ್ಬ ಚಿಕ್ಕ ಹುಡುಗಿ ಅವರ ಸೇವೆಗಳಿಗೆ ನಿಯಮಿತವಾಗಿ ಹಾಜರಾಗುತ್ತಿದ್ದಳು. ಅವಳು ತುಂಬಾ ಪ್ರಾರ್ಥನಾಶೀಲಳಾಗಿದ್ದಳು ಮತ್ತು ಪವಿತ್ರಾತ್ಮಭರಿತಳಾಗಿದ್ದಳು. ಅವಳು ಗಾಯಕರ ತಂಡವನ್ನು ಮುನ್ನಡೆಸುತ್ತಿದ್ದಳು, ದೇವರ ವಾಕ್ಯವನ್ನು ಓದುತ್ತಿದ್ದಳು, ಜನರಿಗಾಗಿ ಪ್ರಾರ್ಥಿಸುತ್ತಿದ್ದಳು.
ಒಂದು ಒಳ್ಳೆಯ ದಿನದಲ್ಲಿ, ಒಬ್ಬ ಹುಡುಗ ಅವರ ಸೇವೆಗಳಿಗೆ ಹಾಜರಾಗಲು ಪ್ರಾರಂಭಿಸಿದನು. ಅವನಿಗೆ ಚರ್ಚ್‌ನಲ್ಲಿ ಸರಿಯಾಗಿ ಇನ್ನೂ ನೆಲೆಯೂ ಸಿಕ್ಕಿರರಲಿಲ್ಲ. ಶೀಘ್ರದಲ್ಲೇ ಈ ಹುಡುಗಿ ಅವನೊಂದಿಗೆ ಮಾತನಾಡಲು ಪ್ರಾರಂಭಿಸಿದಳು ನಂತರ ಸೇವೆಗಳನ್ನು ಬಿಟ್ಟು, ಕೆಲವು ನೆಪಗಳನ್ನು ನೀಡಿ ಸಭೆಗೆ ಗೈರಾಗುವುದನ್ನು ಕಲಿತಳು. ಇನ್ನೂ ಮೂರು ತಿಂಗಳೂ ಆಗಿರಲಿಲ್ಲ, ಆ ಹುಡುಗಿ ಮದುವೆಯಾಗಿದ್ದಾಳೆ ಎಂಬ ಸುದ್ದಿಯನ್ನು ಆ ಪಾಸ್ಟರ್ ಪಡೆದು ಕೊಂಡರು. ಆ ಚರ್ಚ್ ಅನ್ನು ಬಿಡಿ, ಆ ನಂತರ ನಗರದಾದ್ಯಂತ ಯಾವುದೇ ಕ್ರಿಶ್ಚಿಯನ್ ಕೂಟಗಳಲ್ಲಿಯೂ ಅವಳು ಕಾಣಿಸಿಕೊಂಡಿರಲಿಲ್ಲ. ಇದು ದುಃಖಕರ ಆದರೂ ನಿಜ!
ಜನರನ್ನು ಅವರ ನಿಯೋಜನೆಗಳಿಂದ ದೂರ ಸೆಳೆಯಲು ಸೈತಾನನು ಅನುಚಿತ ಸಂಬಂಧಗಳನ್ನು ಹೇಗೆ ಬಳಸಿಕೊಳ್ಳುತ್ತಾನೆ ಎಂದರೆ ಹೀಗೆಯೇ. ಈಗ ನಾನು ಎಲ್ಲಾ ಸಂಬಂಧಗಳು ತಪ್ಪು ಎಂದು ಹೇಳುತ್ತಿಲ್ಲ. ಆದಾಗ್ಯೂ, ತಪ್ಪಾದ ಸಮಯದಲ್ಲಿ ರೂಡಿಸಿಕೊಂಡ ಸರಿಯಾದ ಸಂಬಂಧ ಕೂಡ ವಿಪತ್ತಾಗಬಹುದು. ಶತ್ರುಗಳ ಬಲೆಗಳಲ್ಲಿ ಬೀಳುವುದನ್ನು ತಪ್ಪಿಸಲು ನಮಗೆ ವಿವೇಚನೆ ಮತ್ತು ಸರಿಯಾದ ಸಲಹೆ ಬೇಕು. "ಆದರೆ ಸಲಹೆಗಾರರು ಬಹುಸಂಖ್ಯೆಯಲ್ಲಿ, ಸುರಕ್ಷತೆ ಇದೆ." (ಜ್ಞಾನೋಕ್ತಿ 11:14)
ಸತ್ಯವೇದ ನಮಗೆ ಹೀಗೆ ಎಚ್ಚರಿಸುತ್ತದೆ: “ಎಚ್ಚರವಾಗಿರಿ ಮತ್ತು ಸ್ವಸ್ಥಚಿತ್ತರಾಗಿರಿ. ಶತ್ರುವಾದ ಸೈತಾನನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ” (1 ಪೇತ್ರ 5:8). ಎಂದು
Bible Reading: Isaiah 35-37
ಪ್ರಾರ್ಥನೆಗಳು
ತಂದೆಯೇ, ನಾನು ನಿನ್ನಲ್ಲಿ ವಿವೇಚನಾ ವರವನ್ನು ಯೇಸುನಾಮದಲ್ಲಿ ಬೇಡಿಕೊಳ್ಳುತ್ತೇನೆ. ನಿನ್ನ ಮಾರ್ಗಗಳಲ್ಲಿ ಬೆಳೆಯಲು ನನಗೆ ಸಹಾಯ ಮಾಡುವ ಸರಿಯಾದ ಜನರೊಂದಿಗೆ ನನ್ನನ್ನು ಸುತ್ತುವರೆಸು. ತಂದೆಯೇ, ನನ್ನ ದೈವಿಕ ನಿಯೋಜನೆಯಿಂದ ನನ್ನನ್ನು ತಡೆಯುವ ಪ್ರತಿಯೊಂದು ಗೊಂದಲದ ಆತ್ಮವನ್ನು ನಾನು ಯೇಸುನಾಮದಲ್ಲಿ ಬಂಧಿಸುತ್ತೇನೆ. ಆಮೆನ್.
Join our WhatsApp Channel

Most Read
● ಕ್ರಿಸ್ತನಲ್ಲಿ ನಿಮ್ಮ ದೈವಿಕ ಗಮ್ಯಸ್ಥಾನವನ್ನು ಪ್ರವೇಶಿಸುವುದು● ನಿಮಗೆ ಮಾರ್ಗದರ್ಶಕರು ಏಕೆ ಅವಶ್ಯ?
● ಸ್ತುತಿಯು ಸಮೃದ್ಧಿಯನ್ನುಂಟುಮಾಡುತ್ತದೆ
● ಆತನ ಬೆಳಕಿನಲ್ಲಿ ಸಂಬಂಧಗಳ ಪೋಷಣೆ
● ನೂತನ ಆತ್ಮೀಕ ವಸ್ತ್ರಗಳನ್ನು ಧರಿಸಿಕೊಳ್ಳಿ
● ನೀವು ಎಷ್ಟು ವಿಶ್ವಾಸಾರ್ಹರು?
● ದಿನ 14:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
ಅನಿಸಿಕೆಗಳು