“ನೀವು ಭೂಮಿಗೆ ಉಪ್ಪಾಗಿದ್ದೀರಿ. ಉಪ್ಪು ಸಪ್ಪಗಾದರೆ ಅದಕ್ಕೆ ಬೇರೆ ಯಾವುದರಿಂದ ಉಪ್ಪಿನ ರುಚಿಯನ್ನು ಕೊಡಲು ಸಾಧ್ಯ? ಜನರು ಅದನ್ನು ಹೊರಗೆಹಾಕಿ ದಾರಿಹೋಕರು ತುಳಿಯುವುದಕ್ಕೆ ಅದು ಯೋಗ್ಯವೇ ಹೊರತು ಮತ್ತ್ಯಾವ ಕೆಲಸಕ್ಕೂ ಬರುವುದಿಲ್ಲ. ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಬೆಟ್ಟದ ಮೇಲೆ ಕಟ್ಟಲ್ಪಟ್ಟಿರುವ ಊರು ಮರೆಯಾಗಿರಲಾರದು. ಮತ್ತು ಯಾರೂ ದೀಪವನ್ನು ಹತ್ತಿಸಿ ಕೊಳಗದೊಳಗೆ ಇಡುವುದಿಲ್ಲ; ದೀಪಸ್ತಂಭದ ಮೇಲೆಯೇ ಇಡುತ್ತಾರೆ. ಆಗ ಅದು ಮನೆಯಲ್ಲಿರುವವರೆಲ್ಲರಿಗೆ ಬೆಳಕು ಕೊಡುವುದು."
(ಮತ್ತಾಯ 5:13-16)
ನಾಯಕರು ಯಾರು?
ನಾಯಕನು ಎಂದರೆ ಒಂದು ನಿರ್ದಿಷ್ಟ ಬಿರುದನ್ನು ಹೊಂದಿರುವ ವ್ಯಕ್ತಿಯಲ್ಲ. ನಿಜವಾದ ನಾಯಕನು ಎಂದರೆ ಇತರರ ಮೇಲೆ ಸಕಾರಾತ್ಮಕ ಪ್ರಭಾವ ಬೀರುವ ವ್ಯಕ್ತಿಯಾಗಿರುತ್ತಾನೆ. ನಿಜವಾದ ನಾಯಕನು ಎಂದರೆ ಇತರರ ಜೀವನದಲ್ಲಿ ಬದಲಾವಣೆಯನ್ನು ತರುವವನಾಗಿರುತ್ತಾನೆ. ಈ ತಿಳುವಳಿಕೆಯಿರುವ ಗೃಹಿಣಿ, ಒಬ್ಬ ವಿದ್ಯಾರ್ಥಿ ಇತ್ಯಾದಿ ಕೂಡ ನಾಯಕರಾಗಿರುತ್ತಾರೆ.
ನಿಮ್ಮ ಸುತ್ತಲಿನ ಜನರನ್ನು ಸಕಾರಾತ್ಮಕವಾಗಿ ಪ್ರಭಾವಿಸುವ ಸ್ವಭಾವ ನಿಮ್ಮನ್ನು ನಾಯಕರು ಎಂದು ಕರೆಯಲು ನಿಮ್ಮನ್ನು ಅರ್ಹಗೊಳಿಸುತ್ತದೆ. ಪ್ರತಿದಿನ ನಿಮ್ಮ ಸುತ್ತಲಿನ ಜನರನ್ನು ಸಕಾರಾತ್ಮಕವಾಗಿ ಪ್ರಭಾವಿಸುವ ನಿಮ್ಮ ಶಕ್ತಿಯನ್ನು ಎಂದಿಗೂ ಕಡಿಮೆಯಾಗಿ ಅಂದಾಜು ಮಾಡಬೇಡಿ . ನಿಮಗೆ ಬಿರುದು ಇದೆಯೋ ಇಲ್ಲವೋ ಎಂಬುದು ನಿಜವಾಗಿಯೂ ಮುಖ್ಯವಲ್ಲ. ನಿಜವಾದ ನಾಯಕತ್ವ ಎಂದರೆ ಕರ್ತನ ನಾಮವನ್ನು ಮಹಿಮೆಪಡಿಸಲು ಜನರಿಗೆ ಸೇವೆ ಸಲ್ಲಿಸುವುದಾಗಿದೆ.
ಒಬ್ಬ ನಾಯಕನಾಗಿ, ನೀವು ಹಲವರ ಮೇಲೆ ಸಕಾರಾತ್ಮಕ ಪ್ರಭಾವ ಬೀರಲು ಬಯಸುವುದಾದರೆ, ನಿಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಶ್ರೇಷ್ಠತೆಯ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ.
ನಂತರ ನೀವು ನಿಮ್ಮ ಸುತ್ತಲಿನ ಇತರರನ್ನೂ ಸಹ ಅದೇ ರೀತಿ ಮಾಡುವಂತೆ ನೀವು ಪ್ರೇರೇಪಿಸಬಹುದು. ಇದು ನಿಮ್ಮ ನಾಯಕತ್ವದ ಮಟ್ಟದಲ್ಲಿ ನೀವು ಊಹಿಸುವುದಕ್ಕಿಂತ ವೇಗವಾಗಿ ಬೆಳೆಯುವಂತೆ ಮಾಡುತ್ತದೆ.
ಶ್ರೇಷ್ಠತೆಯು ಸಾಂಕ್ರಾಮಿಕವಾಗಿದೆ. ಅತ್ಯುತ್ತಮ J-12 ನಾಯಕ, ಅತ್ಯುತ್ತಮ ಪೋಷಕರು, ಅತ್ಯುತ್ತಮ ಸಂಗಾತಿ ಅಥವಾ ಅತ್ಯುತ್ತಮ ವಿದ್ಯಾರ್ಥಿಯಾಗಲು ಬದ್ಧರಾಗುವ ಮೂಲಕ, ನೀವು ನಿಮ್ಮ ಪ್ರೀತಿಪಾತ್ರರನ್ನು ಸಕಾರಾತ್ಮಕವಾಗಿ ಪ್ರಭಾವಿಸುವುದಲ್ಲದೆ, ದೇವರ ರಾಜ್ಯಕ್ಕೆ ಅತ್ಯುತ್ತಮ ಜಾಹೀರಾತಾಗುತ್ತೀರಿ.
ನೀವು ಉಪ್ಪಾಗಿರುವಿರಿ ಮತ್ತು ನಿಮ್ಮ ಸುತ್ತಲಿನ ಎಲ್ಲರಿಗೂ ಬೆಳಕಾಗುತ್ತೀರಿ. ಉಪ್ಪು ಮತ್ತು ಬೆಳಕು ಎರಡೂ ತಮ್ಮ ಸುತ್ತಲಿನ ವಸ್ತುಗಳ ಮೇಲೆ ಪರಿಣಾಮ ಬೀರುವ ಗುಣಗಳನ್ನು ಹೊಂದಿವೆ. ಉಪ್ಪನ್ನು ರುಚಿಯನ್ನು ಹೆಚ್ಚಿಸುವುದಕೋಸ್ಕರ ಬಳಸಲಾಗುತ್ತದೆ. ಬೆಳಕು ಎಂಬುದು ಅರಿವು, ಜ್ಞಾನ ಮತ್ತು ತಿಳುವಳಿಕೆಯ ಸಂಕೇತವಾಗಿದೆ.
ಶ್ರೇಷ್ಠತೆಯು ಆಕಸ್ಮಿಕವಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ, ಇದು ಕೇವಲ ಒಂದು ದಿನ ಸಂಭವಿಸುವುದಿಲ್ಲ. ಇದು ನಿಮ್ಮ ದೈನಂದಿನ ದಿನಚರಿಯಲ್ಲಿ ಉದ್ದೇಶಪೂರ್ವಕವಾಗಿ ಅಳವಡಿಸಿಕೊಳ್ಳಬೇಕಾದ ಅಭ್ಯಾಸವಾಗಿದೆ. ಶ್ರೇಷ್ಠತೆಯು ಜೀವಿತಾವಧಿಯ ಪ್ರತಿಫಲಗಳ ಸುಗ್ಗಿಯೊಂದಿಗೆ ನಡೆಯುತ್ತಿರುವ ಪ್ರಕ್ರಿಯೆಯಾಗಿದೆ.
ಪ್ರಾಯೋಗಿಕವಾಗಿ ಹೇಳುವುದಾದರೆ, ಶ್ರೇಷ್ಠತೆಯನ್ನು ಬೆಳೆಸಿಕೊಳ್ಳುವುದು ಎಂದರೆ ನಿಮ್ಮ ಕಾರ್ಯವೇಳಾ ಪಟ್ಟಿ ಯನ್ನು ನಿಯಮಿತವಾಗಿ ಸಮಯಕ್ಕೆ ಸರಿಯಾಗಿ ನೆರವೇರಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಅಥವಾ ನಿಗದಿತ ಸಮಯದಲ್ಲಿ ಪ್ರಾರ್ಥನೆಯಲ್ಲಿ ಸಮಯ ಕಳೆಯುವುದು ಇತ್ಯಾದಿ.
ಕೆಲವೊಮ್ಮೆ ನೀವು ಆ ಕೆಲವು ಕೆಲಸಗಳನ್ನು ಮಾಡುವಲ್ಲಿ ವಿಫಲರಾಗಬಹುದು ಆದರೆ ಅದು ನಿಮ್ಮನ್ನು ಅಸಮಾಧಾನಗೊಳಿಸಲು ಬಿಡಬೇಡಿ. ಎದ್ದೇಳಿ! ಧೂಳನ್ನು ಕೊಡವಿಕೊಂಡು ಮುಂದುವರಿಯಿರಿ.
"ಸತ್ಯವು ವಾದಿಸಿದಾಗ ಶಕ್ತಿಯುತವಾಗಿರುತ್ತದೆ, ಆದರೆ ಅದು ಪ್ರದರ್ಶಿಸಲ್ಪಟ್ಟಾಗ ಅದು ಇನ್ನೂ ಹೆಚ್ಚು ಶಕ್ತಿಯುತವಾಗಿರುತ್ತದೆ," ಎಂದು ಯಾರೋ ಒಬ್ಬರು ಹೇಳಿದ್ದಾರೆ.ನೀವು ಶ್ರೇಷ್ಠತೆಯಲ್ಲಿ ನಡೆಯುವಾಗ, ನೀವು ಸತ್ಯವನ್ನು ಪ್ರದರ್ಶಿಸಿಸುವವರಾಗಿರುತ್ತೀರಿ.
Bible Reading: Isaiah 52-56
ಅರಿಕೆಗಳು
ಪ್ರಿಯನಾದ ತಂದೆಯೇ, ನನ್ನ ಆತ್ಮದಲ್ಲಿ ನಿನ್ನ ಜೀವ ಮತ್ತು ಸ್ವಭಾವಕ್ಕಾಗಿಯೂ ಮತ್ತು ಕ್ರಿಸ್ತ ಯೇಸುವಿನಲ್ಲಿ ನಾನು ಹೊಂದಿರುವ ಶ್ರೇಷ್ಠತೆಯ ಜೀವನಕ್ಕಾಗಿಯೂ ನಾನು ನಿನಗೆ ಸ್ತೋತ್ರ ಸಲ್ಲಿಸುತ್ತೇನೆ. ನಾನು ನಿತ್ಯಕ್ಕೂ ವಿಜೇತ ಮತ್ತು ಜಯಶಾಲಿ. ನಾನು ಯೇಸುನಾಮದಲ್ಲಿ ನಿತ್ಯಕ್ಕೂ ಜಯಶಾಲಿ. ಆಮೆನ್.
Join our WhatsApp Channel

Most Read
● ಮುಂದಿನ ಹಂತಕ್ಕೆ ಹೋಗುವುದು● ನಂಬಿಕೆಯಿಂದ ಹೊಂದಿಕೊಳ್ಳುವುದು
● ದಿನ 36:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದೇವರನ್ನು ವೈಭವೀಕರಿಸಿ ಮತ್ತು ನಿಮ್ಮ ನಂಬಿಕೆಯನ್ನು ಉತ್ತೇಜನಪಡಿಸಿಕೊಳ್ಳಿ.
● ಮರೆತುಹೋದ ಆಜ್ಞೆ.
● ದಿನ 02:40 ದಿನಗಳ ಉಪವಾಸ ಪ್ರಾರ್ಥನೆ ದಿನಗಳು
● ನಿಮ್ಮ ಮಾರ್ಗದರ್ಶಕರು ಯಾರು - II
ಅನಿಸಿಕೆಗಳು