ಅನುದಿನದ ಮನ್ನಾ
1
0
115
ಶುಭ ಸುದ್ದಿಯನ್ನು ಸಾರುವವರು
Thursday, 11th of September 2025
Categories :
ಗಾಸಿಪ್ (Gossip)
ನ್ಯಾಯಸ್ಥಾಪಕರು ತೀರ್ಪು ನೀಡುತ್ತಿದ್ದ ದಿನಗಳಲ್ಲಿ, ದೇಶದಲ್ಲಿ ಕ್ಷಾಮ ಉಂಟಾಯಿತು. (ರೂತಳು 1:1)
ಇಸ್ರಾಯೇಲ್ ಮಕ್ಕಳು ತನ್ನ ವಾಕ್ಯಕ್ಕೆ ವಿಧೇಯರಾಗಿದ್ದರೆ ವಾಗ್ದತ್ತ ದೇಶದಲ್ಲಿ ಯಾವಾಗಲೂ ಸಮೃದ್ಧಿ ಇದ್ದೇ ಇರುತ್ತದೆ ಎಂದು ಕರ್ತನು ನಿರ್ದಿಷ್ಟವಾಗಿ ವಾಗ್ದಾನ ಮಾಡಿದ್ದನು. ಆದ್ದರಿಂದ, ಈಗ ದೇಶದಲ್ಲಿ ಕ್ಷಾಮವು ಉಂಟಾದರೆ, ಇಸ್ರೇಲ್ ಒಂದು ರಾಷ್ಟ್ರವಾಗಿ ಕರ್ತನಿಗೆ ವಿಧೇಯವಾಗಿಲ್ಲ ಎಂದೇ ಅರ್ಥ. (ಧರ್ಮೋಪದೇಶಕಾಂಡ 11:13-17).
ಹೀಗೆ, ಉಂಟಾದ ಕ್ಷಾಮದಿಂದಾಗಿ ಎಲಿಮೆಲೆಕನು, ಅವನ ಹೆಂಡತಿ ನವೋಮಿ ಮತ್ತು ಕುಟುಂಬ ಮೋವಾಬ್ ದೇಶಕ್ಕೆ ಸ್ಥಳಾಂತರಗೊಂಡರು. ಆದಾಗ್ಯೂ, ಕರ್ತನು ತನ್ನ ಜನರಿಗೆ ರೊಟ್ಟಿಯನ್ನು ಕೊಡುವ ಮೂಲಕ ದರ್ಶಿಸಿದ್ದಾನೆ ಎನ್ನುವ ಸುವಾರ್ತೆಯನ್ನು ನವೋಮಿ ಕೇಳಿದಾಗ, ಮೋವಾಬ್ (ಶಾಪಗ್ರಸ್ತ ಭೂಮಿ) ಯಿಂದ ಬೆಥ್ ಲೆಹೆಮ್ ಗೆ ಹೋಗಲು ನಿರ್ಧರಿಸಿದಳು. ಅರೇಬಿಕ್
ಭಾಷೆಯಲ್ಲಿ ಬೆಥ್ ಲೆಹೆಮ್ ಎಂದರೆ "ಮಾಂಸದ ಮನೆ". ಹೀಬ್ರೂ
ಭಾಷೆಯಲ್ಲಿ ಬೆಥ್ ಲೆಹೆಮ್ ಎಂದರೆ "ರೊಟ್ಟಿಯ ಮನೆ".
"ಯೋಸೇಫನು ಇನ್ನೂ ಜೀವದಿಂದಿದ್ದಾನೆ; ಅವನು ಐಗುಪ್ತದೇಶದ ಸರ್ವಾಧಿಕಾರಿಯಾಗಿದ್ದಾನೆ ಎಂದು ತಿಳಿಸಲು ಅವನು ಸ್ತಬ್ಧನಾಗಿ ನಂಬಲಿಲ್ಲ.ತರುವಾಯ ಯೋಸೇಫನು ಹೇಳಿಕಳುಹಿಸಿದ್ದ ಎಲ್ಲಾ ಮಾತುಗಳನ್ನು ಕೇಳಿ ತನ್ನ ಪ್ರಯಾಣಕ್ಕೋಸ್ಕರ ಯೋಸೇಫನ ಕಡೆಯಿಂದ ಬಂದ ರಥಗಳನ್ನು ನೋಡಿ ಇಸ್ರಾಯೇಲನೆನಿಸಿಕೊಳ್ಳುವ ಅವರ ತಂದೆ ಯಾಕೋಬನು ಚೇತರಿಸಿಕೊಂಡನು - "(ಆದಿಕಾಂಡ 45:26-27)
ಯಾಕೋಬನ ಮಕ್ಕಳು ಯೋಸೇಫನು (ಅವನ ಮಗ) ಜೀವಂತವಾಗಿದ್ದಾನೆ ಮತ್ತು ಆ ಇಡೀ ಐಗುಪ್ತ ದೇಶದ ಮೇಲೆ ಅವನು ರಾಜ್ಯಪಾಲನಾಗಿದ್ದಾನೆ ಎಂದು ಅವನಿಗೆ ಹೇಳಿದಾಗ, ಅವನು ಕೇಳಿದ್ದನ್ನು ನಂಬಲು ಸಾಧ್ಯವಾಗಲಿಲ್ಲ. ಅದು ನಿಜವಾಗಲು ತುಂಬಾ ಒಳ್ಳೆಯಸುದ್ದಿಯಾಗಿತ್ತು. ಆದಾಗ್ಯೂ, ಅವರು ಯೋಸೇಫನ ಮಾತುಗಳನ್ನು ಅವನಿಗೆ ಹೇಳಿದಾಗ ಮತ್ತು ಯಾಕೋಬನು ಯೋಸೇಫನು ಕಳುಹಿಸಿದ ಒಳ್ಳೆಯ ವಿಷಯಗಳಿಂದ ತುಂಬಿದ ಬಂಡಿಗಳನ್ನು ನೋಡಿದಾಗ, ಅವನು ಶುಭ ಸುದ್ದಿಯ ಸಂದೇಶವನ್ನು ನಂಬಿದನು.
ಅದೇ ರೀತಿ, ನಾವು ಯಹೂದಿಗಳು ಮತ್ತು ಅನ್ಯಜನರಿಗೆ ಸುವಾರ್ತೆಯನ್ನು (ಶುಭ ಸುದ್ದಿ) ಸಾರುವಾಗ, ನಾವು ಅವರಿಗೆ ಬಹಳ ವೈಯಕ್ತಿಕವಾದ ಮತ್ತು ಅವರ ಹೃದಯದೊಟ್ಟಿಗೆ ಮಾತನಾಡುವ ಸಂದೇಶವನ್ನು ಸಾರಬೇಕು. ಅಲ್ಲದೆ, ಅವರು ಆಶೀರ್ವಾದಗಳನ್ನು ನೋಡಬೇಕು ಮತ್ತು ಅನುಭವಿಸಬೇಕು. ಆಗ ಅವರ ಕುಗ್ಗಿದ ಆತ್ಮಗಳು ಪುನರುಜ್ಜೀವನಗೊಳ್ಳುತ್ತವೆ.
ಅದುವೇ ಶುಭ ಸುದ್ದಿಯಲ್ಲಿರುವ ಶಕ್ತಿ.
ನೀವು ನಿರಂತರವಾಗಿ ಯಾವ ಸುದ್ದಿಯನ್ನು ಕೇಳುತ್ತಿದ್ದೀರಿ?
ಯಾರಾದರೂ ನಿಮ್ಮ ಬಳಿಗೆ ಬಂದು, "ಒಬ್ಬರು ನಿನ್ನ ಬಗ್ಗೆ ಏನು ಹೇಳಿದನೆಂದು ನಾನು ನಿಮಗೆ ಹೇಳಲು ಬಯಸುತ್ತೇನೆ ಎಂದರೆ ಅವರಿಗೆ ತುಂಬಾ ಧನ್ಯವಾದಗಳು ಎಂದು ಹೇಳಿ; ನಾನು ನಂತರ ಮಾತನಾಡುತ್ತೇನೆ" ಎಂದು ನೀವು ಹೇಳಿದರೂ ಇವನು ಹೇಳಿದ ಮಾತು ಮತ್ತು ಆ ವ್ಯಕ್ತಿ ನಿನ್ನ ಬಗ್ಗೆ ಹೇಳಿದ್ದನ್ನು ಕೇಳಬೇಕು ಎನ್ನುವ ಬಯಕೆ ನಿಮಗಿದ್ದರೆ, ಅದರರ್ಥ ನಿಮ್ಮೊಳಗೆ ಯಾವುದೋ ಒಂದು ರೀತಿಯ ಅಭದ್ರತೆ ಇದೆ ಎಂದರ್ಥ.
ಕ್ರಿಸ್ತನಲ್ಲಿರುವ ನಿಮ್ಮ ಗುರುತಿನಲ್ಲಿ ನೀವು ಸುರಕ್ಷಿತನಾಗಿರಬೇಕು. ಆದ್ದರಿಂದ ಅಂತಹ ಜನರಿಂದ ದೂರವಿರಿ, ಇಲ್ಲದಿದ್ದರೆ ಅವರು ನಿಮಗೆ ನೀಡುವ ಕೆಟ್ಟ ಸುದ್ದಿ ನಿಮ್ಮಲ್ಲಿ ಕಹಿತನಕ್ಕೆ ಮತ್ತು ಖಿನ್ನತೆಗೆ ಒಳಪಡಿಸುತ್ತದೆ. ಅಂತಿಮವಾಗಿ, ಅದು ನಿಮ್ಮನ್ನು ದೇವರಿಂದ ದೂರ ಮಾಡುತ್ತದೆ.
ಎರಡನೆಯದಾಗಿ, ನಿಮ್ಮ ಬಾಯಿಂದ ಯಾವ ಮಾತುಗಳು ಹೊರಬರುತ್ತಿವೆ?
ನಾನು ಮಾತನಾಡಲಿರುವ ಮಾತುಗಳು ಸಂಬಂಧವನ್ನು ಬೆಳೆಸುತ್ತವೆಯೇ ಅಥವಾ ನಾಶಮಾಡುತ್ತವೆಯೇ ಎಂದು ನಿಮ್ಮನ್ನು ಕೇಳಿಕೊಳ್ಳಿ. ನಿಮ್ಮ ಮಾತುಗಳಲ್ಲಿ ನೀವು ಅಜಾಗರೂಕರಾಗಿದ್ದರೆ, ಅದು ಸ್ಪಷ್ಟವಾಗಿ ಪ್ರಬುದ್ಧತೆಯ ಕೊರತೆಯನ್ನು ತೋರಿಸುತ್ತದೆ. ಜೀವನ ಮತ್ತು ಮರಣ ನಾಲಿಗೆಯ ಶಕ್ತಿಯಲ್ಲಿದೆ ಎಂದು ಬೈಬಲ್ ಸ್ಪಷ್ಟವಾಗಿ ಹೇಳುತ್ತದೆ. (ಜ್ಞಾನೋಕ್ತಿ 18:21)
ಗಾಳಿಮಾತು ಹರಡುವ ವ್ಯಾಪಾರಿಗಳಾಗಬೇಡಿ. ನಿರ್ಧಾರ ತೆಗೆದುಕೊಳ್ಳಿ ಮತ್ತು "ನಾನು ಒಳ್ಳೆಯ ಸುದ್ದಿಯನ್ನು ಹರಡುವವನು/ಳು. ನಾನು ಮಾತನಾಡುವ ಮಾತುಗಳು ಜನರನ್ನು ಮೇಲಕ್ಕೆತ್ತುತ್ತವೆಯೇ, ಹೊರತು ಅವರನ್ನು ಕೆಳಗಿಳಿಸುವುದಿಲ್ಲ. ನನ್ನ ನಾಲಿಗೆ ಜೀವದ ಒರತೆ."ಎಂದು ಅರಿಕೆ ಮಾಡುತ್ತಲೇ ಇರಿ, ನೆನಪಿಡಿ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಸುವಾರ್ತೆಯು ಒಳ್ಳೆಯ ಸುದ್ದಿಯಾಗಿದ್ದು ನೀವು ಈ ಒಳ್ಳೆಯ ಸುದ್ದಿಯನ್ನು ಪ್ರಪಂಚದಾದ್ಯಂತ ಪ್ರಚಾರಮಾಡಲು ಕರೆಯಲ್ಪಟ್ಟಿದ್ದೀರಿ. ನಾನು ಹಂಚಿಕೊಂಡದ್ದಕ್ಕೆ ಅನುಗುಣವಾಗಿ ನೀವು ನಡೆದರೆ, ರಾಷ್ಟ್ರಗಳನ್ನು ಆಶೀರ್ವದಿಸಲು ಕರ್ತನು ನಿಮ್ಮನ್ನು ಬಳಸುತ್ತಾನೆ.
Bible Reading: Ezekiel 28-30
ಪ್ರಾರ್ಥನೆಗಳು
ನನ್ನ ಬಾಯಿಂದ ಯಾವುದೇ ಭ್ರಷ್ಟ ಅಥವಾ ಅಹಿತಕರ ಮಾತುಗಳು ಹೊರಡಲು ನಾನು ಬಿಡುವುದಿಲ್ಲ, ಆದರೆ ಕೇಳುವ ಎಲ್ಲರಿಗೂ ನಾನು ಆಶೀರ್ವಾದವಾಗುವಂತೆ ಇತರರ ಅಗತ್ಯಗಳಿಗೆ ಅನುಗುಣವಾಗಿ ಅವರ ಭಕ್ತಿವೃದ್ಧಿಗಾಗಿ ಒಳ್ಳೆಯದನ್ನು ಮಾತ್ರ ಆ ಮಾತುಗಳನ್ನಾಡಲು ಅನುಮತಿಸುತ್ತೇನೆ. (ಎಫೆಸ 4:29)
Join our WhatsApp Channel

Most Read
● ತಡೆಗಳನ್ನೊಡ್ಡುವ ಗೋಡೆ● ಧೈರ್ಯವಾಗಿರಿ.!
● ಮೊಗ್ಗು ಬಿಟ್ಟಂತಹ ಕೋಲು
● ಎಚ್ಚರಿಕೆಯನ್ನು ಗಮನಿಸಿ
● ಬದಲಾವಣೆಯ ಸಮಯ
● ಜೀವಬಾದ್ಯರ ಪುಸ್ತಕ
● ಚಿಕ್ಕ ಸಂಗತಿಗಳೂ ಸಹ ಮಹತ್ತರ ಉದ್ದೇಶಗಳನ್ನು ಪೂರೈಸಬಲ್ಲವು.
ಅನಿಸಿಕೆಗಳು