ಅನುದಿನದ ಮನ್ನಾ
2
1
220
ಚಿತ್ತ ಚಂಚಲತೆಯ ಅಪಾಯಗಳು
Tuesday, 16th of September 2025
Categories :
ಚಿತ್ತಚಂಚಲತೆ(Distraction)
ಅಭ್ಯಾಸಗಳು ನಮ್ಮ ದೈನಂದಿನ ಜೀವನದ ಆಧಾರಸ್ತಂಭವಾಗಿವೆ. ನಾವೇ ನಮ್ಮ ದೈನಂದಿನ ಅಭ್ಯಾಸಗಳನ್ನು ನಿರ್ಮಿಸುವವರಾಗಿದ್ದು ಅಂತಿಮವಾಗಿ, ನಮ್ಮ ಅಭ್ಯಾಸಗಳೇ ಮತ್ತು ದಿನಚರಿಗಳೇ ನಮ್ಮನ್ನು ರೂಪಿಸುತ್ತವೆ ಮತ್ತು ನಮ್ಮನ್ನು ನಾವಾಗಿಸುತ್ತವೆ.
ಚಿತ್ತ ಚಂಚಲತೆ ನಿಮ್ಮ ಗಮನವನ್ನು ಲಕ್ಷಾಂತರ ದಿಕ್ಕುಗಳಿಗೆ ಸೆಳೆಯುತ್ತದೆ. ನೀವು ಚಿತ್ತಚಂಚಲತೆಗೆ ಮಣಿಯಲು ಒಗ್ಗಿಕೊಂಡು ಬಿಟ್ಟರೆ, ಏನಾಗುತ್ತದೆ? ಅದರ ಪರಿಣಾಮಗಳ ನಾನು ಕುರಿತು ನಿಮಗೆ ಎಚ್ಚರಿಕೆ ನೀಡಬಯಸುತ್ತೇನೆ.
1. ಚಿತ್ತ ಚಂಚಲಗೊಳಿಸುವ ವಿಷಯಗಳು ನಿಮ್ಮ ಪ್ರಗತಿಗೆ ಅಡ್ಡಿಯಾಗಬಹುದು.
ನಾವು ಅಪೊಸ್ತಲರ ಕೃತ್ಯಗಳು 3 ಅನ್ನು ಓದಿದರೆ, ಒಂದು ಮಧ್ಯಾಹ್ನ ಅಪೊಸ್ತಲರು, ಪೇತ್ರ ಮತ್ತು ಯೋಹಾನರು ಪ್ರಾರ್ಥನೆಗಾಗಿ ದೇವಾಲಯಕ್ಕೆ ಹೋದರು. ಸುಂದರ ದ್ವಾರ ಎಂಬ ಪ್ರವೇಶದ್ವಾರದಲ್ಲಿ. ಹುಟ್ಟಿನಿಂದಲೇ ಕುಂಟನಾಗಿದ್ದ ಒಬ್ಬ ಭಿಕ್ಷುಕ ಅಲ್ಲಿ ಭಿಕ್ಷೆ ಬೇಡುತ್ತಿದ್ದನು. ಪೇತ್ರ ಮತ್ತು ಯೋಹಾನನು ದೇವಾಲಯಕ್ಕೆ ಹೋಗುವುದನ್ನು ಅವನು ಗಮನಿಸಿದಾಗ, ಅವನು ಅವರಿಂದ ಹಣವನ್ನು ಬೇಡಿದನು. ಪೇತ್ರ ಯೋಹಾನರಿಬ್ಬರೂ ಅವನನ್ನು ದೃಷ್ಟಿಸಿ ನೋಡಿದರು. ಪೇತ್ರನು - ನಮ್ಮನ್ನು ನೋಡು ಅಂದನು. ಅವನು ಅವರಿಂದ ಏನಾದರೂ ದೊರಕೀತೆಂದು ನಿರೀಕ್ಷಿಸಿ ಅವರನ್ನು ಲಕ್ಷ್ಯವಿಟ್ಟು ನೋಡಿದನು. . (ಅಪೊಸ್ತಲರ ಕೃತ್ಯಗಳು 3:4-5)
ನೀವು ಎಚ್ಚರಿಕೆಯಿಂದ ಗಮನಿಸಬೇಕೆಂದು ನಾನು ಬಯಸುತ್ತೇನೆ; ಪೇತ್ರನು ಕುಂಟ ಭಿಕ್ಷುಕನಿಗೆ, "ನಮ್ಮನ್ನು ನೋಡು" ಎಂದು ಹೇಳಿದನು ಮತ್ತು ಭಿಕ್ಷುಕನು ಪೇತ್ರನನ್ನು ದೃಷ್ಟಿಸಿ ನೋಡಿದನು. ಆಗ ಆ ಪವಾಡ ಸಂಭವಿಸಿತು.ನಿಮ್ಮ ಪ್ರಗತಿಯನ್ನು ಪಡೆಯಲು, ನೀವು ಸರಿಯಾದ ವಿಷಯಗಳ ಮೇಲೆ ಗಮನಹರಿಸಬೇಕು. ಚಿತ್ತಚಂಚಲತೆ ನಿಮ್ಮ ಪ್ರಗತಿಯನ್ನು ಕಸಿದುಕೊಳ್ಳುತ್ತದೆ.ಎಂದು ನನಗಿದು ಹೇಳುತ್ತಿದೆ
2. ನಮ್ಮ ಜೀವನದಲ್ಲಿ ಮತ್ತು ಲೋಕದಲ್ಲಿ ದೇವರು ಮಾಡುತ್ತಿರುವ ಕಾರ್ಯವನ್ನು ನೋಡದಂತೆ ಚಿತ್ತ ಚಂಚಲತೆ ನಮ್ಮನ್ನು ತಡೆಯುತ್ತವೆ.
ಅಷ್ಟರಲ್ಲಿ ದೋಣಿಯು ಭೂವಿುಗೆ ಬಹು ದೂರ ಹೋಗಿತ್ತು. ಮತ್ತು ಎದುರುಗಾಳಿ ಬೀಸುತ್ತಿದ್ದದರಿಂದ ತೆರೆಗಳ ಬಡಿತಕ್ಕೆ ಸಿಕ್ಕಿ ಒದ್ದಾಡುತ್ತಿತ್ತು.ರಾತ್ರಿಯ ನಾಲ್ಕನೆಯ ಜಾವದಲ್ಲಿ ಯೇಸು ಸಮುದ್ರದ ಮೇಲೆ ನಡೆದು ಅವರ ಕಡೆಗೆ ಬಂದನು. ಸಮುದ್ರದ ಮೇಲೆ ನಡೆಯುವ ಆತನನ್ನು ಶಿಷ್ಯರು ನೋಡಿ ಭೂತವೆಂದು ತತ್ತರಿಸಿ ಭಯದಿಂದ ಕೂಗಿದರು.(ಮತ್ತಾಯ 14:24-26)
ಇಂದು ವಿಜ್ಞಾನದಲ್ಲಿ ಎಷ್ಟೇ ಪ್ರಗತಿಯಾಗಿದ್ದರೂ, ನಾವು ಇನ್ನೂ ನೀರಿನ ಮೇಲೆ ನಡೆಯಲು ಸಾಧ್ಯವಿಲ್ಲ. ಇಲ್ಲಿ ಯೇಸು ನೀರಿನ ಮೇಲೆ ನಡೆಯುತ್ತಿದ್ದನು. ಅವರ ಕಣ್ಣುಗಳ ಮುಂದೆಯೇ ಇಂಥ ಒಂದು ದೊಡ್ಡ ಪವಾಡ ನಡೆಯುತ್ತಿತ್ತು ಆದರೂ ಗಾಳಿ, ಚಂಡಮಾರುತ ಮತ್ತು ಅಲೆಗಳ ಕಾರಣದಿಂದಾಗಿ, ಯೇಸು ನೀರಿನ ಮೇಲೆ ನಡೆಯುವುದನ್ನು ಅವರು ನೋಡಲಿಲ್ಲ. ಗಾಳಿ ಮತ್ತು ಚಂಡಮಾರುತವು ಅವರ ಜೀವನದಲ್ಲಿ, ಅವರ ಲೋಕದಲ್ಲಿ ಯೇಸು ಕಾರ್ಯ ಮಾಡುತ್ತಿರುವುದನ್ನು ನೋಡದಂತೆ ತಡೆಯುವ ಒಂದು ಚಿತ್ತಚಂಚಲತೆಯ ವಿಷಯವಾಗಿತ್ತು
Bible Reading: Ezekiel 40-42
ಪ್ರಾರ್ಥನೆಗಳು
ತಂದೆಯೇ, ಯೇಸುವಿನ ಹೆಸರಿನಲ್ಲಿ, ಪ್ರತಿಯೊಂದು ಚಿತ್ತ ಚಂಚಲತೆಯನ್ನು ದಾಟಲು ಅಂತ್ಯವಿಲ್ಲದ ಅಲೌಕಿಕ ಶಕ್ತಿಯನ್ನು ಒದಗಿಸುವಂತೆ ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ. ಆಮೆನ್.
Join our WhatsApp Channel
Most Read
● ಕ್ರಿಸ್ತನಲ್ಲಿ ನಿಮ್ಮ ದೈವಿಕ ಗಮ್ಯಸ್ಥಾನವನ್ನು ಪ್ರವೇಶಿಸುವುದು● ದೇವರ ಆಲಯದಲ್ಲಿರುವ ಸ್ತಂಭಗಳು
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಯುದ್ಧಕ್ಕಾಗಿ ತರಬೇತಿ - II
● ನಡೆಯುವುದನ್ನು ಕಲಿಯುವುದು
● ಇಸ್ಕಾರಿಯೋತಾ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು - 1
● ಮೊಗ್ಗು ಬಿಟ್ಟಂತಹ ಕೋಲು
ಅನಿಸಿಕೆಗಳು
