ಅನುದಿನದ ಮನ್ನಾ
2
2
165
ಆತ್ಮಗಳನ್ನು ಗೆಲ್ಲುವುದು - ಅದು ಎಷ್ಟು ಮುಖ್ಯ?
Thursday, 18th of September 2025
Categories :
ಧರ್ಮಪ್ರಚಾರ (Evangelism)
"ನೀತಿವಂತರ ಫಲವು ಜೀವವೃಕ್ಷ; ಆತ್ಮಗಳನ್ನು ಗೆಲ್ಲುವವನು ಜ್ಞಾನಿಯಾಗಿದ್ದಾನೆ."(ಜ್ಞಾನೋಕ್ತಿ 11:30)
ಒಬ್ಬ ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ಯೋಜಿಸುತ್ತಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಇದ್ದಕ್ಕಿದ್ದಂತೆ, ಅನಿರೀಕ್ಷಿತವಾಗಿ, ಇನ್ನೊಬ್ಬ ಯುವಕ ಅವನ ಪಕ್ಕದಲ್ಲಿ ನಡೆದುಕೊಂಡು ಬಂದ. ಕರ್ತನಾದ ಯೇಸು ಕ್ರಿಸ್ತನನ್ನು ಅನುಸರಿಸಿದ ನಂತರ ತನ್ನ ಜೀವನವು ಹೇಗೆ ಬದಲಾಯಿತು ಎಂಬುದರ ಕುರಿತು ಅವನು ತನ್ನ ಸಾಕ್ಷ್ಯವನ್ನು ಹಂಚಿಕೊಳ್ಳಲು ಪ್ರಾರಂಭಿಸಿದನು.
ಇದರಿಂದ ಆಕರ್ಷಿತನಾದ ಈ ಯುವಕನು ತಾನು ಆಹ್ವಾನಿಸಲ್ಪಟ್ಟ ಸೇವೆಗೆ ಹೋದನು. ಸೇವೆಯು ಬಹಳ ಚಿಕ್ಕ ಕೋಣೆಯಲ್ಲಿ ನಡೆಯುತಿತ್ತು ಅಲ್ಲಿ ಬಹಳ ಕಡಿಮೆ ಜನರಿದ್ದರು, ಆದರೆ ಅದು ಪವಿತ್ರಾತ್ಮನು ಈ ಯುವಕನನ್ನು ಮುಟ್ಟುವುದನ್ನು ತಡೆಯಲಿಲ್ಲ. ಆದ್ದರಿಂದ ಆ ರಾತ್ರಿ, ಕರ್ತನು ಈ ಯುವಕನನ್ನು ಮುಟ್ಟಿದನು, ಆಗಲೇ ಅವನ ಎಲ್ಲಾ ಆತ್ಮಹತ್ಯೆಯ ಆಲೋಚನೆಗಳು ಕಣ್ಮರೆಯಾಯಿತು.
ಈ ಯುವಕ ಯಾರೆಂದು ನೀವು ತಿಳಿದುಕೊಳ್ಳಲು ಬಯಸುವಿರಾ - ಅದು ನಾನೇ. ನಾನು ಯಾವಾಗಲೂ ಕೆಲವೊಮ್ಮೆ ಊಹಿಸುತ್ತೇನೆ, "ಈ ಹುಡುಗ ಯೇಸುವಿನ ಬಗ್ಗೆ ನನಗೆ ಹೇಳದಿದ್ದರೆ ಏನಾಗುತ್ತಿತ್ತು? ನಾನು ಈಗ ಎಲ್ಲಿರುತ್ತಿದ್ದೆ?"
ನಮ್ಮ ಸ್ವಂತ ಹಿತಾಸಕ್ತಿಗಳಲ್ಲಿ ಮುಳುಗುವುದು ತುಂಬಾ ಸುಲಭ, ಹೀಗೆ ಮಾಡುತ್ತಾ ನಾವು ಶಾಶ್ವತತೆ ಮತ್ತು ನಮ್ಮ ಸುತ್ತಲಿನ ನಾಶವಾಗುತ್ತಿರುವ ಆತ್ಮಗಳ ದೃಷ್ಟಿಯನ್ನು ಕಳೆದುಕೊಳ್ಳುತ್ತೇವೆ. ಆತ್ಮಗಳನ್ನು ಗೆಲ್ಲುವ ಒಂದು ಮಾರ್ಗವೆಂದರೆ ನಿಮ್ಮ ಸುತ್ತಲಿನ ಜನರೊಂದಿಗೆ ನಿಮ್ಮ ಸಾಕ್ಷ್ಯವನ್ನು ಹಂಚಿಕೊಳ್ಳುವುದು.
ಪ್ರತಿದಿನ, ದೇವರು ನಿಮ್ಮ ಜೀವನದಲ್ಲಿ ಏನು ಮಾಡಿದ್ದಾನೆಂದು ಇತರರೊಂದಿಗೆ ಹಂಚಿಕೊಳ್ಳಲು ಅವಕಾಶಗಳಿಗಾಗಿ ದೇವರನ್ನು ಕೇಳಿಕೊಳ್ಳಿ.
ನಿಮ್ಮ ಸಾಕ್ಷ್ಯವು ಎಷ್ಟೇ ಚಿಕ್ಕದಾಗಿದ್ದರೂ, ಜನರನ್ನು ಆತನ ರಾಜ್ಯಕ್ಕೆ ತರುವ ದೇವರ ಶಕ್ತಿಯನ್ನು ಅದು ಹೊಂದಿದೆ. ಆತ್ಮಗಳನ್ನು ಗೆಲ್ಲುವ ಇನ್ನೊಂದು ಮಾರ್ಗವೆಂದರೆ ಸುವಾರ್ತೆಯನ್ನು ಹರಡಲು ನಿಮ್ಮ ಸಮಯ, ಪ್ರತಿಭೆ ಮತ್ತು ನಿಧಿಯನ್ನು ನೀಡಲು ಸಿದ್ಧರಿರುವುದು.
ನೀವು ಯಾರನ್ನಾದರೂ ಕರ್ತನ ಬಳಿಗೆ ಕರೆದೊಯ್ದಿದ್ದರೆ, ಬೆಳೆಯಲು ಸರಿಯಾದ ಮಾರ್ಗವನ್ನು ಕಂಡುಕೊಳ್ಳಲು ಅವರನ್ನು ಏಕಾಂಗಿಯಾಗಿ ಬಿಡಬೇಡಿ. ಅವರನ್ನು ಸತ್ಯವೇದ ಓದಲು ಪ್ರೋತ್ಸಾಹಿಸಿ. ಅವರನ್ನು ಸಭೆಗೆ ಆಹ್ವಾನಿಸಿ, ಅಥವಾ ಸತ್ಯವೇದ ಏನನ್ನು ಬೋದಿಸುತ್ತದೆ ಎಂಬುದರ ಕುರಿತು ಹೆಚ್ಚಿನದನ್ನು ಕೇಳಲು ಅವರ ಹತ್ತಿರವಿರುವ ಉತ್ತಮ ಸಭೆಯನ್ನು ಅವರಿಗೆ ಸೂಚಿಸಿ. (ಮತ್ತಾಯ 28:19-20 ಓದಿ)
Bible Reading: Ezekiel 45-46
ಪ್ರಾರ್ಥನೆಗಳು
ತಂದೆಯೇ, ಯೇಸುವಿನ ಹೆಸರಿನಲ್ಲಿ, ನನ್ನನ್ನು ಆತ್ಮ ಗೆಲ್ಲುವವನ / ಳನ್ನಾಗಿ ಮಾಡಿದಕ್ಕಾಗಿ ನಾನು ನಿಮಗೆ ಸ್ತೋತ್ರ ಸಲ್ಲಿಸುತ್ತೇನೆ. ನಿಮ್ಮ ರಾಜ್ಯಕ್ಕೆ ಆತ್ಮಗಳನ್ನು ಗೆಲ್ಲಲು ನಿಮ್ಮ ಆತ್ಮದಿಂದ ನನಗೆ ಅಧಿಕಾರ ನೀಡಿ. ರಕ್ಷಣೆಯ ಸುವಾರ್ತೆಯನ್ನು ನನಗೆ ವಹಿಸಿಕೊಟ್ಟಿದ್ದಕ್ಕಾಗಿ ನಾನು ನಿಮಗೆ ಸ್ತೋತ್ರ ಸಲ್ಲಿಸುತ್ತೇನೆ. ಆಮೆನ್.
Join our WhatsApp Channel

Most Read
● ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಂಥದ್ದು ಆಂತರಿಕ ಸ್ವಸ್ಥತೆಯನ್ನು ತರುತ್ತದೆ.● ಚಿಕ್ಕ ವಯಸ್ಸಿನಲ್ಲಿಯೇ ಅವರನ್ನು ಹಿಡಿಯಿರಿ
● ದಿನ 11:40 ದಿನಗಳ ಉಪವಾಸ ಪ್ರಾರ್ಥನೆ.
● ದೇವರ ವಾಕ್ಯವನ್ನು ಓದುವುದರಿಂದಾಗುವ 5 ಪ್ರಯೋಜನಗಳು
● ದೋಷರೋಪದ ವರ್ಗಾವಣೆ
● ದೈವೀಕ ಶಿಸ್ತಿನ ಸ್ವರೂಪ: 2
● ಆತ್ಮನ ಫಲವನ್ನು ಹೇಗೆ ಬೆಳೆಸಿಕೊಳ್ಳುವುದು -2
ಅನಿಸಿಕೆಗಳು