ಅನುದಿನದ ಮನ್ನಾ
3
2
154
ಅಭಿಷೇಕ ಆದ ನಂತರ ಏನಾಗುತ್ತದೆ?
Friday, 19th of September 2025
Categories :
ಪರಿಶೋಧನೆ (Testing)
ಲೂಕ 12:48 KSB " ಯಾವನಿಗೆ ಹೆಚ್ಚು ಕೊಡಲಾಗಿದೆಯೋ, ಅವನಿಂದ ಹೆಚ್ಚು ಕೇಳಲಾಗುವುದು; ಯಾವನಿಗೆ ಹೆಚ್ಚಾಗಿ ಒಪ್ಪಿಸಿರುವುದೋ, ಅವನಿಂದ ಹೆಚ್ಚಾಗಿಯೇ ಕೇಳಲಾಗುವುದು."(ಲೂಕ 12:48 NLT)
ಒಬ್ಬ ವ್ಯಕ್ತಿಯು ಹೆಚ್ಚಿನ ಜವಾಬ್ದಾರಿಯನ್ನು ಹೊಂದಿದ್ದರೆ ದೇವರು ಮತ್ತು ಆತನ ಜನರ ಮುಂದೆ ಅವನ ಜವಾಬ್ದಾರಿ ಹೆಚ್ಚಾಗುತ್ತದೆ. ದೇವರು ಒಬ್ಬ ವ್ಯಕ್ತಿಯನ್ನು ಅಭಿಷೇಕಿಸಿ ನಾಯಕತ್ವದ ಸ್ಥಾನಕ್ಕೆ ಕರೆದಾಗ, ಒಬ್ಬ ವ್ಯಕ್ತಿಯ ಜೀವನದಲ್ಲಿ ನಿರ್ದಿಷ್ಟ ಸಮಯಗಳಲ್ಲಿ ಪರೀಕ್ಷೆಯ ಮಾದರಿಯು ನಡೆಯುತ್ತದೆ.
ದೇವರು ಸಾಮಾನ್ಯವಾಗಿ ಒಬ್ಬ ನಾಯಕನನ್ನು ಮೂರು ಪ್ರಮುಖ ಪರೀಕ್ಷೆಗಳ ಮೂಲಕ ಕರೆದೊಯ್ಯುತ್ತಾನೆ, ಆ ವ್ಯಕ್ತಿಯು ತನ್ನ ಜೀವನದಲ್ಲಿ ದೇವರ ಅಂತಿಮ ಕರೆಯನ್ನು ಸಾಧಿಸುತ್ತಾನೆಯೇ ಎಂದು ನಿರ್ಧರಿಸುತ್ತಾನೆ. ಈ ಪರೀಕ್ಷೆಗಳಿಗೆ ಒಬ್ಬ ವ್ಯಕ್ತಿಯು ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದು ದೇವರ ರಾಜ್ಯದಲ್ಲಿ ಮುಂದಿನ ಹಂತದ ಜವಾಬ್ದಾರಿಗೆ ಮುನ್ನಡೆಯಬಹುದೇ ಎಂಬುದರಲ್ಲಿ ನಿರ್ಣಾಯಕ ಅಂಶವಾಗಿದೆ.
ಅಭದ್ರತೆ: ಅಭದ್ರತೆ ಮೊದಲ ಪರೀಕ್ಷೆಗಳಲ್ಲಿ ಒಂದಾಗಿದೆ. ಸೌಲನು ರಾಜನಾಗಿ ತನ್ನ ಹೆಚ್ಚಿನ ಸಮಯವನ್ನು ಇತರರು ತನ್ನ ಬಳಿ ಇದ್ದದ್ದನ್ನು ಯಾರೂ ತೆಗೆದುಕೊಂಡು ಹೋಗದಂತೆ ಕಾಪಾಡಿಕೊಳ್ಳಳೆಂದೇ ಪ್ರಯತ್ನಿಸುತ್ತಿದ್ದನು.
ಸೌಲನು ದೇವರೊಂದಿಗೆ ಸಂಪೂರ್ಣವಾಗಿ ಕರ್ತನ ಮೇಲೆ ಅವಲಂಬಿತನಾಗುವ ಸ್ಥಾನಕ್ಕೆ ಎಂದಿಗೂ ಬರಲಿಲ್ಲ. ಸೌಲನು ಧಾರ್ಮಿಕ ಅಭದ್ರತೆಯಲ್ಲಿದ್ದನು. ಈ ಅಭದ್ರತೆಯೇ ಅವಿಧೇಯತೆಗೆ ಕಾರಣವಾಗಿ ಅಂತಿಮವಾಗಿ ದೇವರಿಂದ ತಿರಸ್ಕರಿಸಲ್ಪಟ್ಟಿತು.
ಒಂದೇ ತಲಾಂತನ್ನು ಹೊಂದಿದ್ದ ಮನುಷ್ಯನು ಕರ್ತನ ಸಾಮರ್ಥ್ಯವನ್ನು ಅವಲಂಬಿಸದೇ ಅವನಿಗೆ ಸರಿ ಎಂದು ಭಾವಿಸಿದ್ದನ್ನು ಮಾಡಿದನು. ದೇವರು ಅಂತಹ ಪಾತ್ರೆಯನ್ನು ಬಳಸಲು ಸಾಧ್ಯವಿಲ್ಲ. (ಮತ್ತಾಯ 25:18 ಓದಿ)
ಕಹಿತನ: ಇದು ಎರಡನೇ ಪರೀಕ್ಷೆ. ಸತ್ಯವೇದದಲ್ಲಿರುವ ಪ್ರತಿಯೊಂದು ಪ್ರಮುಖ ಪಾತ್ರಗಳೂ ಒಂದಲ್ಲ ಒಂದು ಸಮಯದಲ್ಲಿ ಇನ್ನೊಬ್ಬ ವ್ಯಕ್ತಿಯಿಂದ ನೊಂದುಕೊಂಡವರೇ.
ವಿಶ್ವಾಸಾರ್ಹ ಅನುಯಾಯಿಯಾದ ಯೂದನು ತನಗೆ ದ್ರೋಹ ಮಾಡಿದಾಗ ಕರ್ತನಾದ ಯೇಸು ಸ್ವತಃ ತೀವ್ರವಾಗಿ ನೊಂದುಕೊಂಡನು. ಇದು ಸಂಭವಿಸುತ್ತದೆ ಎಂದು ತಿಳಿದಿದ್ದರೂ, ಯೇಸು ಯೂದನ ಪಾದಗಳನ್ನು ತೊಳೆಯುವಾಗ ಇದರ ಕುರಿತು ಪ್ರತಿಕ್ರಿಯಿಸಿದನು.
ಪ್ರತಿಯೊಬ್ಬ ಅಭಿಷಿಕ್ತ ನಾಯಕನು ತನ್ನ ಜೀವನದಲ್ಲಿ ಒಂದಲ್ಲ ಒಂದು ಸಮಯದಲ್ಲಿ ಯೂದನ ಅನುಭವವನ್ನು ಹೊಂದಿರುತ್ತಾನೆ. ಈ ಪರೀಕ್ಷೆಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ನೋಡಲು ದೇವರು ನಮ್ಮನ್ನು ಗಮನಿಸುತ್ತಿರುತ್ತಾನೆ. ನಾವು ಆ ನೋವನ್ನು ಅರಗಿಸಿಕೊಳ್ಳುತ್ತೇವೆಯೇ? ನಾವು ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆಯೇ? ಇದು ಹಾದುಹೋಗುವುದಕ್ಕೆ ಅತ್ಯಂತ ಕಷ್ಟಕರವಾದ ಪರೀಕ್ಷೆಗಳಲ್ಲಿ ಒಂದಾಗಿದೆ.
ತಮ್ಮ ತಲಾಂತುಗಳನ್ನು ಹೆಚ್ಚಿಸಿಕೊಂಡವರಿಗೆ ಏನು ಪ್ರತಿಫಲ ಸಿಕ್ಕಿತು? "ಆನಂದದಲ್ಲಿ ಪ್ರವೇಶಿಸಿ" ಎಂಬುದು ಇದು ಕಹಿಗೆ ವಿರುದ್ಧವಾಗಿದೆ. (ಮತ್ತಾಯ 25:14-30 ಓದಿ)
ದುರಾಸೆ: ಮೂರನೇ ಪರೀಕ್ಷೆ ತುಂಬಾ ಕಷ್ಟಕರವಾದದ್ದು. ಹಣವು ಒಳ್ಳೆಯದಕ್ಕಾಗಿ ಅಥವಾ ಕೆಟ್ಟದ್ದಕ್ಕಾಗಿ ಎರಡಕ್ಕೂ ಹೆಚ್ಚು ಪ್ರಭಾವ ಬೀರುವ ಸಾಮರ್ಥ್ಯವನ್ನು ಹೊಂದಿದೆ. ಅದು ನಮ್ಮ ಜೀವನದಲ್ಲಿ ಏಕೈಕ ಕೇಂದ್ರಬಿಂದುವಾಗಿದ್ದಾಗ, ಅದು ವಿನಾಶದ ಸಾಧನವಾಗುತ್ತದೆ. ಅದು ಜೀವನದ ಉಪ-ಉತ್ಪನ್ನ ಎಂದು ಭಾವಿಸುವಾಗ, ಅದು ದೊಡ್ಡ ಆಶೀರ್ವಾದವಾಗಬಹುದು.
ಅನೇಕ ನಾಯಕರು ಉತ್ತಮವಾಗಿ ತಮ್ಮ ಸೇವೆಯನ್ನು ಪ್ರಾರಂಭಿಸಿದರು, ಆದರೆ ಸಮೃದ್ಧಿಯು ಅವರ ಜೀವನದ ಭಾಗವಾದ ನಂತರ ಮಾತ್ರ ಹಳಿತಪ್ಪಿಹೋದರು. ಕಷ್ಟದ ಸಮಯದಲ್ಲಿ ಆತ್ಮೀಕವಾಗಿ ಅರಳಬಲ್ಲ ಸಾವಿರಾರು ಜನರಿದ್ದಾರೆ; ಆದಾಗ್ಯೂ, ಕೆಲವರು ಮಾತ್ರವೇ ಸಮೃದ್ಧಿಯ ಅಡಿಯಲ್ಲಿಯೂ ಆತ್ಮೀಕವಾಗಿ ಅಭಿವೃದ್ಧಿ ಹೊಂದಬಹುದು.
Bible Reading: Ezekiel 47-48, Daniel 1
ಪ್ರಾರ್ಥನೆಗಳು
ತಂದೆಯೇ, ಪರೀಕ್ಷೆಯ ಸಮಯದಲ್ಲಿ ನೇರವಾಗಿ ನಡೆಯುವಂತೆಯೂ ಮತ್ತು ನಿಮಗೆ ಹತ್ತಿರವಾಗುವಂತೆಯೂ ಬೇಕಾದ ಕೃಪೆಯನ್ನು ಯೇಸುನಾಮದಲ್ಲಿ ಬೇಡುತ್ತೇನೆ. ಬೇಸರ ತರಿಸುವ ಅಪವಾಧದಿಂದಲೂ ಮತ್ತು ಹಣದ ಪ್ರೀತಿಯಿಂದಲೂ ಯೇಸುನಾಮದಲ್ಲಿ ನನ್ನನ್ನು ರಕ್ಷಿಸಿ. ಆಮೆನ್
Join our WhatsApp Channel

Most Read
● ಮನುಷ್ಯನ ಹೃದಯ● ಯೇಸುವನ್ನೇ ದೃಷ್ಟಿಸುವುದು.
● ಜನರು ನೆಪಗಳನ್ನು ಹೇಳಲು ಇರುವ ಕಾರಣಗಳು - ಭಾಗ 1
● ಕೃಪೆಯನ್ನು ತೋರಿಸುವ ಪ್ರಾಯೋಗಿಕ ವಿಧಾನ.
● ನರಕ ಎನ್ನುವುದು ನಿಜವಾಗಿ ಇರುವಂಥ ಸ್ಥಳ
● ಶುಭ ಸುದ್ದಿಯನ್ನು ಸಾರುವವರು
● ಮಳೆಯಾಗುತ್ತಿದೆ
ಅನಿಸಿಕೆಗಳು