ನಮ್ಮ ತಂತ್ರಜ್ಞಾನ-ಚಾಲಿತ ಜಗತ್ತಿನಲ್ಲಿ, ನಮ್ಮ ಫೋನ್‌ಗಳಲ್ಲಿ ಲೋ -ಬ್ಯಾಟರಿ ಎಚ್ಚರಿಕೆಯು ಆಗಾಗ್ಗೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಪ್ರಚೋದಿಸುತ್ತದೆ. ಆದರೆ ನಮಗೆ ಬರುವ ಆಳವಾದ, ಆತ್ಮೀಕ ಎಚ್ಚರಿಕೆಗಳಿಗೆ ನಾವು ಅದೇ ರೀತಿ ಸ್ಪಂದಿಸುತ್ತೇವೆಯೇ? ತಂತ್ರಜ್ಞಾನದ ಆಗಮನವು ನಮ್ಮ ನಡವಳಿಕೆಗಳು ಮತ್ತು ಪ್ರತಿಕ್ರಿಯೆಗಳನ್ನು ಹೇಗೆ ಮರುರೂಪಿಸಿದೆ ಎಂಬುದನ್ನು ನೋಡುವುದು ಆಕರ್ಷಕವಾಗಿದೆ. ಇವುಗಳಲ್ಲಿ, ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ಒಂದು ವಿಷಯವೆಂದರೆ ನಮ್ಮ ಫೋನ್ " "ಬ್ಯಾಟರಿ ಕ್ಷೀಣಿಸುತ್ತಿದೆ " ಎಂಬ ಅಪಾಯ ಎಚ್ಚರಿಕೆಯನ್ನು ಫ್ಲ್ಯಾಷ್ ಮಾಡಿದಾಗ ಚಾರ್ಜರ್ ಅನ್ನು ಹುಡುಕುವ ಆತುರ ನಮ್ಮಲ್ಲಿ ಹೇಗಿರುತ್ತದೆ ಅಲ್ಲವೇ.
ತಂತ್ರಜ್ಞಾನವು ನಮ್ಮ ದೈನಂದಿನ ಜೀವನದಲ್ಲಿ ಎಷ್ಟು ಬೇರೂರಿದೆ ಎಂಬುದನ್ನು ಇದು ನಮ್ಮಲ್ಲಿ ಹಲವರಿಗೆ ನೆನಪಿಸುತ್ತದೆ. ಈ ತಕ್ಷಣದ ಪ್ರತಿಕ್ರಿಯೆಯು ಒಂದು ಕುತೂಹಲಕಾರಿ ಪ್ರತಿಬಿಂಬವನ್ನು ಪ್ರೇರೇಪಿಸುತ್ತದೆ: ನಮ್ಮ ಜೀವನದಲ್ಲಿ ಆತ್ಮೀಕ ಮತ್ತು ನೈತಿಕ ಎಚ್ಚರಿಕೆಗಳಿಗೆ ನಾವು ಇದಕ್ಕೆ ಸಮಾನವಾದ ತುರ್ತುಸ್ಥಿತಿಯಿಂದ ಪ್ರತಿಕ್ರಿಯಿಸುತ್ತೇವೆಯೇ?
ದೇವರವಾಕ್ಯದ ಎಚ್ಚರಿಕೆಗಳು: ಆತ್ಮೀಕ ಮನುಷ್ಯನ ಎಚ್ಚರಿಕೆ ಗಂಟೆ
ಬೈಬಲ್‌ನಾದ್ಯಂತ, ಹಲವಾರು ಎಚ್ಚರಿಕೆಗಳು ಮತ್ತು ಸೂಚನೆಗಳಿವೆ. ವಿಶೇಷವಾಗಿ ಜ್ಞಾನೋಕ್ತಿಗಳು ಅವುಗಳಿಂದ ತುಂಬಿವೆ:" ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು, ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು."(ಜ್ಞಾನೋಕ್ತಿ 22:3). ಫೋನ್‌ನ ಲೋ- ಬ್ಯಾಟರಿ ಸೂಚಕವು ಅದು ಇನ್ನೇನು ನಿಕ್ರಿಯ ವಾಗುತ್ತದೆ ಎನ್ನುವುದಕ್ಕೆ ಪೂರ್ವಗಾಮಿಯಾಗಿರುವಂತೆ, ಈ ದೇವರವಾಕ್ಯದ ಎಚ್ಚರಿಕೆಗಳನ್ನು ಆತ್ಮೀಕ ಮತ್ತು ನೈತಿಕ ಪತನವನ್ನು ತಡೆಯಲು ವಿನ್ಯಾಸಗೊಳಿಸಲಾಗಿದೆ.
ಹೊಸ ಒಡಂಬಡಿಕೆಯಲ್ಲಿ,ಅಪೊಸ್ತಲ ಪೌಲನು ಕೊಲೊಸ್ಸೆ 2:8 ರಂತಹ ಹಲವಾರು ಎಚ್ಚರಿಕೆಗಳನ್ನು ನೀಡುತ್ತಾನೆ: "ತತ್ವಜ್ಞಾನವೂ ನಿರರ್ಥಕವೂ ವಂಚನೆಯೂ ಆಗಿರುವ ಮನುಷ್ಯರ ಸಂಪ್ರದಾಯದಿಂದ ನಿಮ್ಮಲ್ಲಿ ಯಾರಾದರೂ ಬಂದು ನಿಮ್ಮನ್ನು ವಶಪಡಿಸಿಕೊಳ್ಳದಂತೆ ಎಚ್ಚರಿಕೆಯಿಂದಿರಿ. ಅಂಥವರು ಕ್ರಿಸ್ತ ಯೇಸುವನ್ನು ಅನುಸರಿಸದೆ, ಪ್ರಾಪಂಚಿಕ ಬಾಲಬೋಧನೆಗಳನ್ನೂ ಅನುಸರಿಸುವವರಾಗಿದ್ದಾರೆ." . ಫೋನ್‌ನ ಕಡಿಮೆ ಬ್ಯಾಟರಿ ಎಚ್ಚರಿಕೆಯನ್ನು ನಿರ್ಲಕ್ಷಿಸುವುದರಿಂದ ಕರೆಯನ್ನು ಕಳೆದುಕೊಳ್ಳಬಹುದು , ಮಾರ್ಗದರ್ಶನ ದಿಕ್ಕು ದರ್ಶನ ಕಳೆದುಕೊಳ್ಳಬಹುದು ಅಥವಾ ಸಂವಹನ ನಡೆಸುವ ಅಸಮರ್ಥತೆಗೆ ಕಾರಣವಾಗಬಹುದು ಎಂಬುದನ್ನು ನಿರ್ವಿವಾದವಾಗಿ ಹೇಳಬಹುದು. ಅದೇ ರೀತಿ, ಆತ್ಮೀಕ ಎಚ್ಚರಿಕೆಗಳನ್ನು ನಿರ್ಲಕ್ಷಿಸುವುದರಿಂದ ನಮ್ಮ ನೈತಿಕ ಮಾರ್ಗದಿಂದ ದಾರಿ ತಪ್ಪುವುದು, ದೇವರೊಂದಿಗಿನ ನಮ್ಮ ಸಂಬಂಧವನ್ನು ದುರ್ಬಲಗೊಳಿಸುವುದು ಅಥವಾ ಸೇವೆ ಮಾಡಲು ಮತ್ತು ಬೆಳೆಯಲು ಅವಕಾಶಗಳನ್ನು ಕಳೆದುಕೊಳ್ಳುವುದು ಮುಂತಾದ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು.
ಯೋನನ ಕಥೆಯು ಒಂದು ಎದ್ದುಕಾಣುವ ಉದಾಹರಣೆಯಾಗಿದೆ. ದೇವರಿಂದ ಎಚ್ಚರಿಸಲ್ಪಟ್ಟ ಅವನು ದೈವಿಕ ಸೂಚನೆಗಳನ್ನು ನಿರ್ಲಕ್ಷಿಸುವುದನ್ನೇ ಆರಿಸಿಕೊಂಡನು, ಇದು ಅವನ ಜೀವನದಲ್ಲಿ ಮಾತ್ರವಲ್ಲದೆ ಅವನ ಸುತ್ತಲಿನವರ ಮೇಲೂ ಅವ್ಯವಸ್ಥೆಗೆ ಕಾರಣವಾಯಿತು.
ಚಾರ್ಜ್ ಆಗಿ ಉಳಿದು ಕೊಳ್ಳುವುದು:
ಆತ್ಮೀಕ ಜಾಗರೂಕತೆ ನಮ್ಮ ಫೋನ್‌ಗಳು ಚಾರ್ಜ್ ಆಗಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಪೋರ್ಟಬಲ್ ಚಾರ್ಜರ್‌ಗಳು, ಪವರ್ ಬ್ಯಾಂಕ್‌ಗಳು ಮತ್ತು ವಿವಿಧ ಸಾಧನಗಳನ್ನು ಹೊಂದಿರುವಂತೆಯೇ, ನಮ್ಮ ಆತ್ಮೀಕ ಜೀವನವು ಜಾಗರೂಕರಾಗಿಸುವಂತ ಸಂಪನ್ಮೂಲಗಳನ್ನು ಹೊಂದಿದೆ. ದೈನಂದಿನ ಪ್ರಾರ್ಥನೆ, ವಾಕ್ಯದ ನಿಯಮಿತ ಅಧ್ಯಯನ, ವಿಶ್ವಾಸಿಗಳೊಂದಿಗೆ ಅನ್ಯೋನ್ಯತೆ ಮತ್ತು ನಿಯಮಿತವಾಗಿ ಸಭೆಗೆ ಹಾಜರಾಗುವ ಕಾರ್ಯಗಳು ನಮ್ಮ ಆತ್ಮೀಕ ಜೀವನದ ಚಾರ್ಜರ್‌ಗಳಿಗೆ ಹೋಲುತ್ತದೆ. ಕೀರ್ತನೆ 119:105 ಸುಂದರವಾಗಿ ವಿವರಿಸುವಂತೆ, "ದೇವರ ವಾಕ್ಯವು ನನ್ನ ಪಾದಕ್ಕೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ."
ಇದಲ್ಲದೆ, "ನಿಮ್ಮಲ್ಲಿ ಯಾರೂ ಪಾಪದಿಂದ ಮೋಸಹೋಗಿ ಕಠಿಣರಾಗದಂತೆ, “ಈ ಹೊತ್ತು” ಎಂಬುದು ಇರುವವರೆಗೆ ಪ್ರತಿದಿನವೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ." ಎಂದು ಇಬ್ರಿಯ 3:13 ಸಲಹೆ ನೀಡುತ್ತದೆ. ನಾವು ಒಬ್ಬ ಸ್ನೇಹಿತನಿಂದ ಚಾರ್ಜರ್ ಕೇಳುವ ರೀತಿಯಲ್ಲಿಯೇ, ನಮ್ಮ ನಂಬಿಕೆಯನ್ನು ಚಾರ್ಜ್ ಆಗಿಯೂ ಮತ್ತು ಚೈತನ್ಯದಿಂದ ಇರಿಸಿಕೊಳ್ಳಲು ನಾವು ನಮ್ಮ ಆತ್ಮೀಕ ಸಮುದಾಯದ ಮೇಲೆ ಅವಲಂಬಿತರಾಗಬೇಕು. ನಮ್ಮ ಡಿಜಿಟಲ್ ಯುಗದಲ್ಲಿ, ಪೂರ್ವಭಾವಿಯಾಗಿರುವಿಕೆಯು ಮುಖ್ಯವಾಗಿದೆ. ಬ್ಯಾಟರಿ ಖಾಲಿಯಾಗುವವರೆಗೂ ನಾವು ಕಾಯುವುದಿಲ್ಲ; ಬದಲಾಗಿ ನಾವು ಮುಂಚಿತವಾಗಿ ಅದನ್ನು ಚಾರ್ಜ್ ಮಾಡುತ್ತೇವೆ, ನಾವು ಪವರ್ ಬ್ಯಾಂಕ್‌ಗಳನ್ನು ಒಯ್ದು ನಮ್ಮ ಸಾಧನಗಳು ಅತ್ಯುತ್ತಮ ಕಾರ್ಯಕ್ಷಮತೆಗಾಗಿ ನವೀಕರಿಸಲ್ಪಟ್ಟಿವೆ ಎಂಬುದನ್ನು ಆಗಾಗ್ಗೆ ನಾವು ಖಚಿತಪಡಿಸಿಕೊಳ್ಳುತ್ತಿರುತ್ತೇವೆ.
ಅಂತೆಯೇ, ನಮ್ಮ ನಂಬಿಕೆಯ ಪ್ರಯಾಣಕ್ಕೆ ಪೂರ್ವಭಾವಿಯಾಗಿ ತಯಾಗಿರುರುವಿಕೆಯ ಅಗತ್ಯವಿದೆ. ದೇವರನ್ನು ಹುಡುಕಲು ಆತ್ಮೀಕ ಬಿಕ್ಕಟ್ಟು ಒದಗುವವರೆಗೂ ಕಾಯಬೇಡಿ. ಪ್ರತಿದಿನ ಆತನನ್ನು ಹಿಂಬಾಲಿಸಿ. ಜವಾಬ್ದಾರಿ ಹೊಂದಿಕೊಳ್ಳಲು ನೈತಿಕ ವೈಫಲ್ಯ ಆಗುವವರೆಗೂ ಕಾಯಬೇಡಿ; ಸಹ ವಿಶ್ವಾಸಿಗಳೊಂದಿಗೆ ಬಲವಾದ, ಪಾರದರ್ಶಕ ಸಂಬಂಧಗಳನ್ನು ಬೆಳೆಸಿಕೊಳ್ಳಿ.
"ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ. ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ." ಎಂದು 1 ಪೇತ್ರ 5:8 ಎಚ್ಚರಿಸುತ್ತದೆ. ಇದು ಆತ್ಮೀಕ ಜಾಗರೂಕತೆಯು ಕೇವಲ ಪ್ರಯೋಜನಕಾರಿಯಾದದಷ್ಟೇ ಅಲ್ಲ ಆದರೆ ಅತ್ಯಗತ್ಯ ಎಂಬುದನ್ನು ನೆನಪಿಸುತ್ತದೆ.
Bible Reading: John 7
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಮ್ಮ ಜೀವನದಲ್ಲಿ ನಿಮ್ಮ ಎಚ್ಚರಿಕೆಗಳನ್ನು ಗುರುತಿಸಿ ಅದಕ್ಕೆ ಗಮನ ಕೊಡುವಂತೆ ನಮಗೆ ವಿವೇಚನೆಯನ್ನು ನೀಡಿ. ನಾವು ನಮ್ಮ ಸಾಧನಗಳಿಗೆ ಆದ್ಯತೆ ನೀಡುವಂತೆಯೇ, ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮೊಂದಿಗಿನ ನಮ್ಮ ಸಂಬಂಧಕ್ಕೆ ಆದ್ಯತೆ ನೀಡಲು ನಮಗೆ ಸಹಾಯ ಮಾಡಿ. ನಮ್ಮ ಆತ್ಮೀಕ ಜಾಗರೂಕತೆಯನ್ನು ಬಲಪಡಿಸಿ. ಯೇಸುವಿನ ಹೆಸರಿನಲ್ಲಿ ಬೇಡಿದ್ದೇವೆ. ಆಮೆನ್.
Join our WhatsApp Channel
Most Read
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.● ಆಲಸ್ಯದ ದೈತ್ಯನನ್ನು ಕೊಲ್ಲುವುದು
● ಕೆಲವು ನಾಯಕರು ಪಾಪದಲ್ಲಿ ಬಿದ್ದು ಹೋದದರಿಂದ ನಾವು ಸಹ ನಂಬಿಕೆಯನ್ನು ತ್ಯಜಿಸಬೇಕೆ?
● ವರ್ಗಗಳು : ದೇವರ ಹೆಸರುಗಳು
● ದೈನಂದಿನ ಮನ್ನಾ
● ನೀವು ದೇವರನ್ನು ಎದುರಿಸುತ್ತಿದ್ದೀರಾ?
● ದೈವೀಕ ಅನುಕ್ರಮ -2
ಅನಿಸಿಕೆಗಳು
