english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ನಿಮ್ಮ ಹೋರಾಟಗಳೇ ನಿಮ್ಮ ಗುರುತಾಗಲು ಬಿಡಬೇಡಿ -2
ಅನುದಿನದ ಮನ್ನಾ

ನಿಮ್ಮ ಹೋರಾಟಗಳೇ ನಿಮ್ಮ ಗುರುತಾಗಲು ಬಿಡಬೇಡಿ -2

Monday, 22nd of September 2025
3 2 105
Categories : ಕ್ರಿಸ್ತನಲ್ಲಿ ನಮ್ಮ ಗುರುತು (our identity in Christ) ಭಾವನೆ (Emotion)
ಹಲವು ಬಾರಿ, ಜನರು ತಮ್ಮ ಒಂದು ಸಮಸ್ಯೆಯನ್ನು ತಮ್ಮ ಗುರುತಾಗಲು, ಅದುವೇ ತಮ್ಮ ಜೀವನವಾಗಲು ಬಿಟ್ಟು ಕೊಡುತ್ತಾರೆ. ಅದುವೇ ಅವರು ಯೋಚಿಸುವ, ಹೇಳುವ ಮತ್ತು ಮಾಡುವ ಎಲ್ಲವನ್ನೂ ವ್ಯಾಖ್ಯಾನಿಸುತ್ತಿರುತ್ತದೆ. ಅವರ ಎಲ್ಲಾ ಅಸ್ತಿತ್ವವು ಅದರ ಸುತ್ತವೇ ಕೇಂದ್ರೀಕೃತವಾಗಿರುತ್ತದೆ. 

ನಮ್ಮ ಹೋರಾಟವನ್ನು ನಮ್ಮ ಗುರುತಿನೊಂದಿಗೆ ಸಂಯೋಜಿಸುವುದರಿಂದ ಜೀವನದಲ್ಲಿ ಅನೇಕ ಸಮಸ್ಯೆಗಳು ಉಂಟಾಗಬಹುದು.
1. ಅದು ಒಬ್ಬ ವ್ಯಕ್ತಿಯನ್ನು ತೀರಾ ಖಿನ್ನತೆಗೆ ಒಳಪಡಿಸಬಹುದು 
2. ಒಬ್ಬ ವ್ಯಕ್ತಿಯು ಹಿಂತಿರುಗಲಾಗದ ಹಂತಕ್ಕೆ ಸಂಪೂರ್ಣವಾಗಿ ಭರವಸೆಯನ್ನು ಕಳೆದುಕೊಳ್ಳಬಹುದು.

ನಿಮ್ಮ ಪರಿಸ್ಥಿತಿಗೆ ಬಲಿಪಶುವಾಗಬೇಡಿ ಎಂದು ನಾನು ವಿನಮ್ರವಾಗಿ ನಿಮ್ಮನ್ನು ಒತ್ತಾಯಿಸುತ್ತೇನೆ. ಇಂದು, ನಿಮ್ಮ ಹೋರಾಟದಲ್ಲಿ ಕರ್ತನು ನಿಮಗೆ ಜಯವನ್ನು ನೀಡಲು ಬಯಸುತ್ತಾನೆ. ನೀವು ಅವಮಾನ ಪಟ್ಟ ಸ್ಥಳದಲ್ಲಿಯೇ ಆತನು ನಿಮಗೆ ಎರಡು ಪಟ್ಟು ಸನ್ಮಾನವನ್ನು ನೀಡಲು ಬಯಸುತ್ತಾನೆ.

ಆ ಸಮಸ್ಯೆಗಳಿಂದ ಒಂದೊಂದಾಗಿ ಬಿಡಿಸಿಕೊಂಡು ವಿಜಯದತ್ತ ನಿಮ್ಮನ್ನು ಕರೆದೊಯ್ಯುವಾಗ ನೀವು ಆತನನ್ನು ನಂಬಿ ಆತನೊಂದಿಗೆ ಸಹಕರಿಸಬೇಕೆಂದು ಆತನು ಬಯಸುತ್ತಾನೆ. 

ನಿಮ್ಮ ವಿಜಯೋತ್ಸವದ ಮೆರವಣಿಗೆಗೆ ಇರುವ ಕೆಲವು ಹಂತಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಅನುಮತಿಸಿ.

 1. ಗಮನ ಅಥವಾ ಸಹಾನುಭೂತಿ ಅಥವಾ ಕರುಣೆಯನ್ನು ಪಡೆಯುವ ಸಾಧನವಾಗಿ ನಿಮ್ಮ ಸಮಸ್ಯೆಯನ್ನು ಬಳಸಲು ಪ್ರಯತ್ನಿಸಬೇಡಿ.

 2. ನಿಮ್ಮ ಸಮಸ್ಯೆಯ ಕುರಿತು ಎಲ್ಲರಿಗೂ ಅಥವಾ ಸಿಕ್ಕ ಸಿಕ್ಕವರೊಂದಿಗೆ ಮಾತನಾಡುವುದನ್ನು ನಿಲ್ಲಿಸಿ. ನೀವು ಹಂಚಿಕೊಳ್ಳಬಹುದಾದ ಸರಿಯಾದ ಜನರು ಮಾತ್ರವೇ ನಿಮ್ಮನ್ನು ಸುತ್ತುವರೆದಿರಬೇಕೆಂದು ಕರ್ತನನ್ನು ಬೇಡಿಕೊಳ್ಳಿ. 

3. ನಿಮಗೆ ಹೇಗೆ ಅನಿಸುತ್ತಿದೆ ಅಥವಾ ನೀವು ಯಾವುದನ್ನು ಹಾದು ಹೋಗುತ್ತಿದ್ದೀರಿ ಎಂಬುದನ್ನು ಸಾಮಾಜಿಕ ಮಾಧ್ಯಮದಲ್ಲಿ  ಪೋಸ್ಟ್ ಮಾಡುವುದನ್ನು ನಿಲ್ಲಿಸಿ 

4. ನಿಮ್ಮ ಪರಿಸ್ಥಿತಿಯ ಕುರಿತು ಜನರು ಪ್ರಾರ್ಥಿಸುವಂತೆ ಕೇಳಿಕೊಳ್ಳಿ ಹಾಗೆಯೇ, ನೀವು ಸಹ ಪ್ರಾರ್ಥಿಸಬೇಕು ಹೌದು! ಭೂಮಿಯ ಮೇಲಿರುವ ಎಲ್ಲರಿಗೂ ತಮ್ಮ ಪ್ರಾರ್ಥನೆ ವಿನಂತಿಗಳನ್ನು ಕಳುಹಿಸುವ ಕೆಲವು ಜನರಿದ್ದಾರೆ, ಆದರೆ ಅವರು ಎಂದಿಗೂ ಪ್ರಾರ್ಥಿಸುವುದಿಲ್ಲ ಎಂಬುದು ಅವರಿಗೆ ಗೊತ್ತಿಲ್ಲ.


5. ರೋಮನ್ನರು 12:2 ರ ಪ್ರಕಾರ " ನಿಮ್ಮ ಸುತ್ತಲಿನ ಸಂಸ್ಕೃತಿಯ ಆದರ್ಶಗಳು ಮತ್ತು ಅಭಿಪ್ರಾಯಗಳನ್ನು ಅನುಕರಿಸುವುದನ್ನು ನಿಲ್ಲಿಸಿ, ಆದರೆ ನಿಮ್ಮ ಮನಸ್ಸನ್ನು ನೂತನ ಪಡಿಸಿಕೊಂಡು ನೀವು ಹೇಗೆ ಯೋಚಿಸುತ್ತೀರಿ ಎಂಬುದನ್ನು ಸಂಪೂರ್ಣ ಸುಧಾರಿಸಿಕೊಳ್ಳುವ ಮೂಲಕ ಪವಿತ್ರಾತ್ಮನ ಸಹಾಯದಿಂದ ಆಂತರಿಕವಾಗಿ ರೂಪಾಂತರಗೊಳ್ಳಿ. ನೀವು ಸುಂದರವಾದ ಜೀವನವನ್ನು ನಡೆಸುವಾಗ, ಆತನ ದೃಷ್ಟಿಯಲ್ಲಿ ತೃಪ್ತಿಕರ ಮತ್ತು ಪರಿಪೂರ್ಣ ಜೀವನವನ್ನು ನಡೆಸುವಾಗ ದೇವರ ಚಿತ್ತವನ್ನು ಗ್ರಹಿಸಲು ಇದು ನಿಮಗೆ ಅಧಿಕಾರ ನೀಡುತ್ತದೆ. (ರೋಮನ್ನರು 12:2 TPT) 

2 ಕೊರಿಂಥದಲ್ಲಿ, ಪೌಲನು ತನ್ನ ಹೋರಾಟಗಳಲ್ಲಿ ಒಂದನ್ನು ದೂರಮಾಡಲಾಗುತ್ತಿಲ್ಲ ಎಂದು ಹೇಳುತ್ತಾನೆ. ಅವನು ಅದನ್ನು ತನ್ನ 'ಶರೀರದಲ್ಲಿ ಹೊಕ್ಕಿರುವ  ಶೂಲ ' ಎಂದು ಕರೆಯುತ್ತಾನೆ. (2 ಕೊರಿಂಥ 12:7-10) ಪೌಲನ 'ಶರೀರದಲ್ಲಿ ಹೊಕ್ಕಿದ್ದ ಶೂಲ ' ಏನೆಂದು ಯಾರಿಗೂ ತಿಳಿದಿಲ್ಲ. ಕೆಲವರು ಅದನ್ನು ದೈಹಿಕ ಕಾಯಿಲೆ ಎಂದು ಭಾವಿಸುತ್ತಾರೆ. ಇತರರು ಅದನ್ನು ನೈತಿಕ ಸಮಸ್ಯೆ ಎಂದು ಭಾವಿಸುತ್ತಾರೆ. ಬೈಬಲ್ ಅದು ಏನೆಂದು ಹೇಳದಿರುವುದು ನನಗೆ ನಿಜಕ್ಕೂ ಇಷ್ಟ. ಏಕೆಂದರೆ ಈಗ ನಮ್ಮಲ್ಲಿ ಪ್ರತಿಯೊಬ್ಬರೂ ಅದರೊಂದಿಗೆ ಸಂಬಂಧ ಹೊಂದಬಹುದು. ನಮ್ಮಲ್ಲಿ ಪ್ರತಿಯೊಬ್ಬರ ಹೋರಾಟಗಳು ವಿಭಿನ್ನವಾಗಿವೆ, ಆದರೆ ಸತ್ಯವೆಂದರೆ ನಾವೆಲ್ಲರೂ ಯಾವುದೋ ಒಂದು ವಿಷಯದೊಂದಿಗೆ ಹೋರಾಡುತ್ತಿರುತ್ತೇವೆ.

ಆದರೆ, ಪೌಲನು ತನ್ನ ಹೋರಾಟವೇ ತನ್ನ ಗುರುತಾಗಲು ಬಿಡಲಿಲ್ಲ. ತನ್ನ ಹೋರಾಟವೇ ತಾನು ಯಾರೆಂಬುದನ್ನು ವ್ಯಾಖ್ಯಾನಿಸಲು ಬಿಟ್ಟು ಕೊಡಲಿಲ್ಲ. ದೇವರು ಅವನನ್ನು ಕರೆದ ಕೆಲಸವನ್ನು ಮಾಡುವುದನ್ನು ತಡೆಯುವಂತೆ ಅವನು ತನ್ನ ಹೋರಾಟಗಳಿಗೆ ಅವಕಾಶ ಕೊಡಲಿಲ್ಲ. ಹಾಗಾಗಿ ನೀವೂ ಸಹ ಅವಕಾಶ ಕೊಡಬಾರದು! 

Bible Reading: Daniel 6-7
ಅರಿಕೆಗಳು
ದೇವರ ಶಕ್ತಿ ನನ್ನ ಮೇಲೆ ನೆಲೆಯಾಗಿದೆ. ಆತನ ಕೃಪೆಯೇ ನನಗೆ ಸಾಕು. ನನ್ನ ಹೋರಾಟಗಳು, ನನ್ನ ನೋವುಗಳು ನಾನು ಯಾರಾಗಿದ್ದೇನೆ ಎಂಬುದನ್ನು ವ್ಯಾಖ್ಯಾನಿಸದೇ - ದೇವರು ನಾನು ಯಾರಾಗಿದ್ದೇನೆ ಎಂಬುದನ್ನು ಯೇಸುನಾಮದಲ್ಲಿ ವ್ಯಾಖ್ಯಾನಿಸುತ್ತಾನೆ. ಆಮೆನ್.

Join our WhatsApp Channel


Most Read
● ಮರೆತುಹೋದ ಆಜ್ಞೆ.
● ಆತನ ಬೆಳಕಿನಲ್ಲಿ ಸಂಬಂಧಗಳ ಪೋಷಣೆ
● ಪ್ರಬುದ್ಧತೆಯು ಜವಾಬ್ದಾರಿಯಿಂದ ಆರಂಭವಾಗುತ್ತದೆ.
● ದೇವರು ದರ್ಶನಕೊಡುವ ಸಮಯವನ್ನು ಗುರುತಿಸಿಕೊಳ್ಳುವುದು
● ಪುರುಷರು ಏಕೆ ಪತನಗೊಳ್ಳುವರು -3
● ನೀವು ಪಾವತಿಸಬೇಕಾದ ಬೆಲೆ
● ಈ ದಿನಗಳಲ್ಲಿ ಇದನ್ನು ಮಾಡಿರ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್