ಅನುದಿನದ ಮನ್ನಾ
3
2
118
ಕ್ರಮ ಕೈಗೊಳ್ಳಿ
Wednesday, 24th of September 2025
Categories :
ದೇವರವಾಕ್ಯ ( Word of God )
ನಮ್ರತೆ (Humility)
"ನಾನು ಈ ದೇಶವನ್ನೂ ನಿವಾಸಿಗಳನ್ನೂ ಶಾಪ ವಿಸ್ಮಯಗಳಿಗೆ ಗುರಿಮಾಡುವೆನೆಂಬದನ್ನು ನೀನು ಕೇಳಿದಾಗ ದುಃಖಪಟ್ಟು ನನ್ನ ಮುಂದೆ ತಗ್ಗಿಸಿಕೊಂಡದ್ದರಿಂದಲೂ ಬಟ್ಟೆಗಳನ್ನು ಹರಿದುಕೊಂಡು ಕಣ್ಣೀರು ಸುರಿಸಿದ್ದರಿಂದಲೂ ನಿನ್ನನ್ನು ಲಕ್ಷಿಸಿದೆನು".(2 ಅರಸುಗಳು 22:19)
ಅರಸನಾದ ಯೋಷೀಯನು ದೇವರ ವಾಕ್ಯವನ್ನು ಕೇಳಿದಾಗ, ಅವನು ಹೃದಯದಾಳದಿಂದ ತಾನು ಅಪರಾಧಿ ಎಂದು ತನ್ನನ್ನು ನಿರ್ಣಯಿಸಿಕೊಂಡು ಪಶ್ಚಾತ್ತಾಪದ ಸಂಕೇತವಾಗಿ ತನ್ನ ಬಟ್ಟೆಗಳನ್ನು ಹರಿದುಕೊಂಡನು.ಆಗ ಕರ್ತನು ಪ್ರವಾದಿನಿಯಾದ ಹುಲ್ದಾಳ ಮೂಲಕ ಮಾತನಾಡುತ್ತಾ. "ನಾನು ಈ ಸ್ಥಳದ ವಿರುದ್ಧ ಮಾತನಾಡುವುದನ್ನು ನೀವು ಕೇಳಿದಾಗ" ಎಂಬ ವಾಕ್ಯವನ್ನು ಗಮನಿಸಿ.
ಇಲ್ಲಿ ಆಸಕ್ತಿದಾಯಕ ವಿಷಯವೆಂದರೆ ಯೋಷೀಯನು ಯಾವ ದೇವದೂತರನ್ನು ನೋಡಲಿಲ್ಲ ಅಥವಾ ಯಾವುದೇ ಶ್ರವ್ಯ ಧ್ವನಿಯನ್ನು ಕೇಳಲಿಲ್ಲ. ಅವನು ಶಾಸ್ತ್ರಿಯಾದ ಶಾಫಾನನು ಗಟ್ಟಿಯಾಗಿ ಓದುತ್ತಿದ್ದ ಪದವನ್ನು ಕೇಳುತ್ತಿದ್ದನು, ಆದರೆ ಕರ್ತನು, "ನಾನು ಮಾತನಾಡುವುದನ್ನು ನೀವು ಕೇಳಿದಾಗ" ಎಂದು ಹೇಳಿದನು.
ನಾವು ದೇವರ ವಾಕ್ಯವನ್ನು ಓದುವಾಗ ಅಥವಾ ವಾಕ್ಯವನ್ನು ಕೇಳುವಾಗಲೆಲ್ಲಾ, ಅದು ಕರ್ತನು ನಮ್ಮೊಂದಿಗೆ ನೇರವಾಗಿ ಮಾತನಾಡುತ್ತಿರುವ ಮಾತಾಗಿರುತ್ತದೆ ಎಂದು ಇದು ನನಗೆ ಹೇಳುತ್ತದೆ. ನಮಗೆ ಯಾವುದೇ ವಿಶೇಷ ನಾಟಕಗಳ ಅಗತ್ಯವಿಲ್ಲ; ಅದು ಕರ್ತನೇ ಮಾತನಾಡುತ್ತಿರುವ ಮಾತಾಗಿರುವುದರಿಂದ ನಾವು ಈ ಸಂಗತಿಯನ್ನು ಗಮನಿಸಬೇಕಾಗಿರುತ್ತದೆ.
ಇದಲ್ಲದೆ, ಕರ್ತನು ಪ್ರವಾದಿನಿಯಾದ ಹುಲ್ದಾಳ ಮೂಲಕ ಮಾತನಾಡುತ್ತಾ, "ನೀನು ನಿನ್ನ ಬಟ್ಟೆಗಳನ್ನು ಹರಿದುಕೊಂಡು ಅತ್ತಾಗ, ನಾನು ನಿನ್ನ ಮೊರೆಯನ್ನು ಕೇಳಿದೆ" ಎಂದು ಹೇಳಿದನು. ಮತ್ತೊಮ್ಮೆ, ಯೋಷೀಯನು ಮಾಡಿದ ಯಾವುದೇ ವಿಶೇಷ ಪ್ರಾರ್ಥನೆಯನ್ನು ಬೈಬಲ್ ದಾಖಲಿಸುವುದಿಲ್ಲ.
ಅವನು ಅಳುತ್ತಾ ತನ್ನ ಬಟ್ಟೆಗಳನ್ನು ಹರಿದುಕೊಂಡನು (ಆಳವಾದ ಪಶ್ಚಾತ್ತಾಪದ ಸಂಕೇತ). ಕ್ರಿಯೆಗಳು ಪದಗಳಿಗಿಂತ ಜೋರಾಗಿ ಮಾತನಾಡುತ್ತವೆ ಎಂದು ನಮಗೆಲ್ಲರಿಗೂ ತಿಳಿದಿದೆ. ದೇವರ ವಾಕ್ಯವನ್ನು ಆಧರಿಸಿದ ನಮ್ಮ ಕ್ರಿಯೆಗಳು ಕರ್ತನು ನಮ್ಮ ಮೊರೆಯನ್ನು ಕೇಳಿಸಿಕೊಳ್ಳುವಂತೆ ಮಾಡುತ್ತದೆ ಎಂದು ಇದು ನನಗೆ ಹೇಳುತ್ತದೆ.
ಕೆಲವು ಜನರ ಪ್ರಾರ್ಥನೆಗಳು ಉತ್ತರಿಸದೆ ಇರುವುದಕ್ಕೆ ಇದು ಇನ್ನೊಂದು ಕಾರಣವಾಗಿರಬಹುದೇ? ಅವೆಲ್ಲವೂ ಬರೀ ಮಾತಾಗಿದ್ದು ಕ್ರಿಯೆಯಲ್ಲಿರುವುದಿಲ್ಲ ಎನಿಸುತ್ತದೆ. ನಂಬಿಕೆಯ ನನ್ನ ವ್ಯಾಖ್ಯಾನ ಏನೆಂದರೆ: ದೇವರ ವಾಕ್ಯಕ್ಕೆ ಅನುಸಾರವಾದ ನಡವಳಿಕೆ. ನನ್ನ ಸ್ನೇಹಿತನೇ, ನಿಮ್ಮ ಪ್ರಾರ್ಥನೆಗಳು ಬೇಗನೆ ಉತ್ತರಿಸಲ್ಪಡುವುದನ್ನು ನೀವು ನೋಡಬೇಕಾದರೆ, ನೀವು ಕೇಳಿಸಿಕೊಳ್ಳುವ ವಾಕ್ಯದ ಆಧಾರದ ಮೇಲೆ ಕ್ರಮ ಕೈಗೊಳ್ಳಬೇಕೆಂದು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ.
ಉದಾಹರಣೆಗೆ, ನಿಮಗೆ ಬಿಡುಗಡೆ ಬೇಕು.
ಯಾಕೋಬ 4:7 ಹೇಳುತ್ತದೆ, “ಆದ್ದರಿಂದ ದೇವರಿಗೆ ಒಳಗಾಗಿರಿ ಸೈತಾನನನ್ನು ಎದುರಿಸಿ, ಅವನು ನಿಮ್ಮಿಂದ ಓಡಿಹೋಗುವನು.” ಎಂದು ದೇವರ ವಾಕ್ಯಕ್ಕೆ ನೀವು ವಿಧೇಯರಾಗದಿದ್ದರೆ, ಸೈತಾನನು ನಿಮ್ಮನ್ನು ಬಿಟ್ಟು ಓಡಿಹೋಗುವುದಿಲ್ಲ.
ಆದರೆ ನೀವು (ಒಂದು ಕ್ರಿಯೆಯ ಮೂಲಕ) ವಿಧೇಯರಾದಾಗ, ಸೈತಾನನು ನಿಮ್ಮ ಜೀವನದಿಂದ ಏಕಮುಖ ಟಿಕೆಟ್ ತೆಗೆದುಕೊಳ್ಳುವುದನ್ನು ಬಿಟ್ಟು ಅವನಿಗೆ ಬೇರೆ ದಾರಿಯಿರುವುದಿಲ್ಲ.
Bible Reading: Daniel 10-11
ಅರಿಕೆಗಳು
ತಂದೆಯೇ, ಸತ್ಯವೇದವು ನನ್ನನ್ನು ಯಾರೆಂದು ಹೇಳುತ್ತದೋ ಅದೇ ನಾನಾಗಿದ್ದೇನೆ ಎಂಬುದಾಗಿ ಯೇಸುನಾಮದಲ್ಲಿ ನಾನು ಘೋಷಿಸುತ್ತೇನೆ. ಸತ್ಯವೇದ ನಾನು ಏನೆಲ್ಲಾ ಮಾಡಬಹುದು ಎಂದು ಹೇಳುತ್ತದೆಯೋ ಅದನ್ನೆಲ್ಲಾ ನಾನು ಮಾಡಬಲ್ಲೆ, ಮತ್ತು ಸತ್ಯವೇದವು ನಾನು ಏನೆಲ್ಲಾ ಹೊಂದಿಕೊಳ್ಳುವೆನು ಎಂದು ಹೇಳುತ್ತದೆಯೋ ಅದನ್ನೆಲ್ಲಾ ಯೇಸುನಾಮದಲ್ಲಿ ನಾನು ಹೊಂದಿಕೊಳ್ಳುವೆನು.
ತಂದೆಯೇ, ನಾನು ನೋಡುವವನಾಗಿ ನಡೆಯದೆ, ನಂಬವವನಾಗಿ ನಡೆಯುತ್ತೇನೆ ಎಂದು ಯೇಸುನಾಮದಲ್ಲಿ ಘೋಷಿಸುತ್ತೇನೆ. ಆಮೆನ್.
Join our WhatsApp Channel

Most Read
● ಮೂರ್ಖತನದಿಂದ ನಂಬಿಕೆಯನ್ನು ಪ್ರತ್ಯೇಕಿಸುವುದು● ನೀವು ದೇವರಿಂದ ನೇಮಿಸಲ್ಪಡುವ ಮುಂದಿನ ಬಿಡುಗಡೆ ನಾಯಕರು ನೀವಾಗಬಹುದು
● ತಾವಾಗಿಯೇ ಹೇರಿಕೊಂಡ ಶಾಪಗಳಿಂದ ವಿಮೋಚನೆ
● ಹೊಸ ಒಡಂಬಡಿಕೆಯ ನಡೆದಾಡುವ ದೇವಾಲಯ.
● ಪಂಚಾಶತ್ತಾಮ ದಿನಕ್ಕಾಗಿ ಕಾಯುವುದು. ವರ್ಗಗಳು : ಪಂಚ ಶತ್ತಾಮ ದಿನ.
● ದಿನ 19:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನಿರುತ್ಸಾಹ ಪಡಿಸುವ ಬಾಣಗಳನ್ನು ಜಯಿಸುವುದು-1
ಅನಿಸಿಕೆಗಳು