1. ಪವಿತ್ರೀಕರಣ ಎಂದರೆ ದೇವರೊಂದಿಗೆ ಗುಣಮಟ್ಟದ ಆತ್ಮೀಕ ನಡಿಗೆಯನ್ನು ಕಾಪಾಡಿಕೊಳ್ಳುವುದು ಮತ್ತು ನಿಮ್ಮ ಆತ್ಮೀಕ ಜೀವನವನ್ನು ಸರಿಯಾಗಿ ನೋಡಿಕೊಳ್ಳುವುದು.
2. ಪವಿತ್ರೀಕರಣ ಎಂದರೆ ದೇವರ ಭಯದಲ್ಲಿ ಬದುಕುವುದನ್ನೇ ಜೀವನಶೈಲಿಯಾಗಿ ಮಾಡಿಕೊಳ್ಳುವುದು.
ಪೋಟೀಫರನ ಹೆಂಡತಿ ಯೋಸೆಫನನ್ನು ಮೋಹಿಸಲು ಪ್ರಯತ್ನಿಸಿದಳು. ತನ್ನ ಪ್ರೀತಿಪಾತ್ರರು ಮತ್ತು ಕುಟುಂಬದಿಂದ ದೂರವಾಗಿದ್ದ ಯೋಸೆಫನು, ವಿದೇಶದಲ್ಲಿ ಏಕಾಂಗಿಯಾಗಿದ್ದದರಿಂದ ಅವನನ್ನು ಹೇಳುವವರು ಕೇಳುವವರು ಯಾರೂ ಇಲ್ಲದಿರುವಾಗ ಖಂಡಿತವಾಗಿಯೂ ಅವನು ತನ್ನ ನಡತೆಯಲ್ಲಿ ಹಿಂಜಾರುವ ಪ್ರಲೋಭನೆಗೆ ಒಳಗಾಗಬಹುದಿತ್ತು. ಆದರೆ ಅವನು... "ನೀನು ಅವನ ಧರ್ಮಪತ್ನಿಯಾದದರಿಂದ ನಿನ್ನನ್ನು ಮಾತ್ರ ನನ್ನ ಯಜಮಾನನು ನನಗೆ ಅಧೀನಮಾಡಲಿಲ್ಲ; ಹೀಗಿರುವಲ್ಲಿ ನಾನು ಇಂಥಾ ಮಹಾದುಷ್ಕೃತ್ಯವನ್ನು ನಡಿಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ ಎಂದು ತನ್ನ ದಣಿಯ ಹೆಂಡತಿಗೆ ಉತ್ತರಕೊಟ್ಟನು. " (ಆದಿಕಾಂಡ 39:9) ಯೋಸೆಫನ ಜೀವನವು ದೇವರ ಭಯದಿಂದ ನಿರ್ದೇಶಿಸಲ್ಪಡುತಿತ್ತು.
3. ಪವಿತ್ರೀಕರಣವು ಯಾವಾಗಲೂ ಎಲ್ಲಾ ಸಮಯದಲ್ಲೂ ದೇವರನ್ನು ಮೆಚ್ಚಿಸಲು ನೋಡುತ್ತಿರುತ್ತದೆ.
ಲೂಕ 6:26 ರ ಸಂದೇಶ ಅನುವಾದದಲ್ಲಿ, "ನೀವು ಇತರರ ಅನುಮೋದನೆಗಾಗಿ ಮಾತ್ರ ಬದುಕುವಾಗ ಅವರು ಹೊಗಳುವುದನ್ನೇ ಎದುರುನೋಡುವಾಗ, ಅವರನ್ನು ಮೆಚ್ಚಿಸುವುದನ್ನೇ ಮಾಡುವಾಗ ಮುಂದಿನ ದಿನಗಳಲ್ಲಿ ತೊಂದರೆಗೆ ಸಿಕ್ಕಿಕೊಳ್ಳುವಿರಿ. ಜನಪ್ರಿಯತೆಯ ಸ್ಪರ್ಧೆಗಳು ಸತ್ಯ ಸ್ಪರ್ಧೆಗಳಲ್ಲ - ನಿಮ್ಮ ಪೂರ್ವಜರು ಸಹ ಇಂತಹ ಎಷ್ಟು ದುಷ್ಟ ಬೋಧಕರನ್ನು ಅನುಮೋದಿಸಿದ್ದಾರೆಂದು ಒಮ್ಮೆ ನೋಡಿ! ಜನರಿಗೆ ಪ್ರಿಯವಾಗಿರುವುದು ನಿಮ್ಮ ಕೆಲಸವಲ್ಲ, ನಿಮ್ಮ ಕರ್ತವ್ಯ ಸತ್ಯವಂತರಾಗಿರುವಂತದ್ದು." ಎಂದು ಅದು ನಮಗೆ ಹೇಳುತ್ತದೆ.
ಒಬ್ಬ ಕ್ರೈಸ್ತ ಮಹಿಳೆಯು ನನಗೆ ಪತ್ರ ಬರೆದು, “ನನ್ನ ಮದುವೆಯಲ್ಲಿ ನಾನು ಬಂದ ಅತಿಥಿಗಳಿಗೆ ಮದ್ಯವನ್ನು ಕುಡಿಯಲು ಕೊಡದಿದ್ದರೆ, ಜನರು ನಮ್ಮ ಕುರಿತು ಏನಂದು ಕೊಳ್ಳುತ್ತಾರೆ?” ಎಂದರು. ನಾನು ಖಂಡಿತವಾಗಿಯೂ ಆಕೆಗೆ ಏನನ್ನೂ ಹೇಳಲಿಲ್ಲ. ನಿಮಗೆ ತಿಳಿದಿರುವಂತೆ, ದೇವರು ಏನು ಹೇಳುತ್ತಾನೆ ಎನ್ನುವುದಕ್ಕಿಂತ ಜನರು ಏನು ಹೇಳುತ್ತಾರೆ ಎನ್ನುವುದರ ಕುರಿತು ಹೆಚ್ಚು ಕಾಳಜಿ ವಹಿಸುವ ಜನರಿದ್ದಾರೆ.
ಆದರೆ "ನಾನು ಮನುಷ್ಯರನ್ನು ಮೆಚ್ಚಿಸುವವನಿಗಿಂತ ದೇವರನ್ನೇ ಮೆಚ್ಚಿಸುವವನಾಗಿರಲು ಬಯಸುತ್ತೇನೆ" ಎಂದು ಹೇಳುವ ಒಂದು ತಳಿಯೂ ಇದೆ (ಅದು ಅಲ್ಪ ಸಂಖ್ಯಾತವಾಗಿದೆ).
ಕರ್ತನಾದ ಯೇಸು ಕ್ರಿಸ್ತನ ಮಾತುಗಳಲ್ಲಿ ಪವಿತ್ರೀಕರಣವನ್ನು ವ್ಯಾಖ್ಯಾನಿಸುವಂತದ್ದು ಹೀಗಿದೆ. "ನೀತಿಗಾಗಿ ಹಸಿದು ಬಾಯಾರುವವರು ಧನ್ಯರು, ಅವರು ತೃಪ್ತಿ ಹೊಂದುತ್ತಾರೆ." (ಮತ್ತಾಯ 5:6).
ನೀತಿಗಾಗಿ ನಿಮಗಿರುವ ಹಸಿವು ಮತ್ತು ದಾಹವು ಲೋಕದ ವಸ್ತುಗಳ ಹಸಿವು ಮತ್ತು ದಾಹವನ್ನು ಮೀರಿದಾಗ, ನೀವು ಪವಿತ್ರೀಕರಣದಲ್ಲಿ ನಡೆಯುವಿರಿ.
ಈ ಹಸಿವು ಮತ್ತು ಬಾಯಾರಿಕೆಯನ್ನು ನಿಮಗೆ ಕರ್ತನು ಮಾತ್ರ ನೀಡಬಲ್ಲನು. ಹಾಗಾದರೆ, ಆತನ ಸಾನಿಧ್ಯಕ್ಕಾಗಿ, ಆತನ ಮಾರ್ಗಗಳಿಗಾಗಿ ಪ್ರತಿದಿನ ಆತನನ್ನು ಬೇಡುವುದನ್ನು ಒಂದು ಗುರಿಯನ್ನಾಗಿ ಮಾಡಿಕೊಳ್ಳಿ. ನೀವು ಇದನ್ನು ಮಾಡಿದಾಗ, ನೀವು ಪವಿತ್ರರಾಗುತ್ತೀರಿ ಮತ್ತು ಇನ್ನೂ ಹೆಚ್ಚು ಹೆಚ್ಚಾಗಿ ಆತನಂತೆ ರೂಪಾಂತರಗೊಳ್ಳುವಿರಿ.
ಪ್ರಾರ್ಥನೆಗಳು
ತಂದೆಯೇ, ನಿನ್ನನ್ನು ಇನ್ನೂ ಹೆಚ್ಚು ಹೆಚ್ಚಾಗಿ ತಿಳಿದುಕೊಳ್ಳುವ ಹಸಿವು ಮತ್ತು ದಾಹವನ್ನು ಯೇಸುನಾಮದಲ್ಲಿ ನನಗೆ ಅನುಗ್ರಹಿಸು ಆಮೆನ್.
Join our WhatsApp Channel

Most Read
● ನಿಮ್ಮ ಮನಸ್ಸಿಗೆ ಉಣಬಡಿಸಿರಿ● ಸಿಟ್ಟಿನ ಬಲೆಯಿಂದ ದೂರ ಉಳಿಯುವುದು
● ದಿನ 06: 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಸ್ತ್ರೀ ಪುರುಷರು ಏಕೆ ಪತನಗೊಳ್ಳುವರು- 5
● ಯಾವಾಗ ಸುಮ್ಮನಿರಬೇಕು ಮತ್ತು ಯಾವಾಗ ಮಾತನಾಡಬೇಕು
● ಮಧ್ಯಸ್ಥಿಕೆಯ ಕುರಿತ ಪ್ರವಾದನಾ ಪಾಠ - 2
● ದೇವರು ಒದಗಿಸುವನು
ಅನಿಸಿಕೆಗಳು