"ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು". (ಜ್ಞಾನೋಕ್ತಿ 22:6)
"ಚಿಕ್ಕ ವಯಸ್ಸಿನಲ್ಲಿಯೇ ಅವರನ್ನು ಹಿಡಿಯಿರಿ ಆಗ ಅವರು ಬೆಳೆಯುವುದನ್ನು ನೋಡುವಿರಿ" ಎಂಬುದು ಬೈಬಲ್‌ನಿಂದ ಎರವಲು ಪಡೆದ ಒಂದು ಕ್ಲೀಷೆಯಾಗಿದೆ.
ಮಕ್ಕಳಿಗೆ ಕರ್ತನ ವಿಷಯಗಳಲ್ಲಿ ತರಬೇತಿ ನೀಡುವುದು ಬಹಳ ಮುಖ್ಯ ಏಕೆಂದರೆ ಇದು ನಂತರದ ಜೀವನದಲ್ಲಿ ಅವರಿಗೆ ಅಡಿಪಾಯವನ್ನು ನೀಡುತ್ತದೆ. ಮಕ್ಕಳು ಕುಂಬಾರನ ಕೈಯಲ್ಲಿ ಮೃದುವಾದ ಜೇಡಿಮಣ್ಣಿನಂತಿದ್ದಾರೆ, ಆಗ ನೀವು ಅವರನ್ನು ಯಾವುದೇ ರೀತಿಯಲ್ಲಿ ರೂಪಿಸಿದರೂ, ಅವರು ಆ ನಿರ್ದಿಷ್ಟ ಆಕಾರವನ್ನು ಪಡೆಯುತ್ತಾರೆ.
"ಯೆಹೋವನು ಹೀಗನ್ನುತ್ತಾನೆ - ಇಸ್ರಾಯೇಲ್ ವಂಶದವರೇ, ಈ ಕುಂಬಾರನು ಮಾಡಿದಂತೆ ನಾನು ನಿಮ್ಮನ್ನು ಮಾಡಕೂಡದೋ? ಇಸ್ರಾಯೇಲ್ ಮನೆತನದವರೇ, ಜೇಡಿಮಣ್ಣು ಕುಂಬಾರನ ಕೈಯಲ್ಲಿ ಹೇಗೋ, ಹಾಗೆಯೇ ನೀವು ನನ್ನ ಕೈಯಲ್ಲಿದ್ದೀರಿ. (ಯೆರೆಮೀಯ 18:6 )
ನಮ್ಮ ಕರ್ತನಾದ ಯೇಸುವಿನ ಕಾಲದಲ್ಲಿಯೂ ಸಹ, ಪೋಷಕರು ತಮ್ಮ ಮಕ್ಕಳನ್ನು ಆತನಿಂದ ಆಶೀರ್ವದಿಸಲ್ಪಡಲು ಕರೆತಂದರು. ವಾಸ್ತವವಾಗಿ, ಶಿಷ್ಯರು ಅವರನ್ನು ತಡೆದಾಗ ಕರ್ತನು ಆ ಶಿಷ್ಯರ ಮೇಲೆ ಕೋಪಗೊಂಡನು.
ಈಗ ಕರ್ತನು ಬದಲಾಗಿದ್ದಾನೆಂದು ನೀವು ಭಾವಿಸುತ್ತೀರಾ? ಚಿಕ್ಕ ಮಕ್ಕಳು ಆರಾಧನೆ ಮತ್ತು ಪ್ರಾರ್ಥನೆಯಲ್ಲಿ ತನ್ನ ಬಳಿಗೆ ಬರಬೇಕೆಂದು ಆತನು ಇನ್ನೂ ಬಯಸುವವನಾಗಿದ್ದಾನೆ. ಮಕ್ಕಳಿಗೆ ವಿವಿಧ ಕ್ರಿಶ್ಚಿಯನ್ ಹಾಡುಗಳಿಗೆ ಹಾಡಲು, ಚಪ್ಪಾಳೆ ತಟ್ಟಲು ಮತ್ತು ನೃತ್ಯ ಮಾಡಲು ಕಲಿಸುವುದು ಅವರಲ್ಲಿ ಕರ್ತನನ್ನು ಆರಾಧಿಸುವ ಬಯಕೆಯನ್ನು ಉಂಟುಮಾಡುತ್ತದೆ.
ವಯಸ್ಕರಾದವರಿಗೆ ವ್ಯತಿರಿಕ್ತವಾಗಿ, ಮಕ್ಕಳು ಬೆಳಿಗ್ಗೆ ಎದ್ದಾಗ ತುಂಬಾ ತಾಜಾವಾಗಿರುತ್ತಾರೆ. ಅವರ ಅಗತ್ಯತೆಗಳನ್ನು ಮಾಡಿಕೊಳ್ಳಲು ಮತ್ತು ಕುಟುಂಬದ ಮೌಲ್ಯಗಳನ್ನು ಕಲಿಸಿ. ನೀವು ಯುವ ಸೈನಿಕನಿಗೆ ತರಬೇತಿ ನೀಡುತ್ತಿದ್ದೀರಿ ಎಂದು ನಿಮಗೆ ತಿಳಿದಿದೆಯೇ? ಅವರು ಎದ್ದ ತಕ್ಷಣ ಟಿವಿ ಹಾಕಬೇಡಿ. ನಿಮ್ಮ ಮನೆಯಲ್ಲಿ ಆರಾಧನೆಯ ವಾತಾವರಣವಿರಲಿ. ಆಗ, ಕರ್ತನು ಅವರನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಆಶೀರ್ವದಿಸುತ್ತಾನೆ ಎಂದು ನೀವು ಖಚಿತವಾಗಿ ಹೇಳಬಹುದು.
ನೀವು ಸಹ ಕಾಳಜಿ ವಹಿಸಬೇಕಾದ ಒಂದು ಪ್ರಮುಖ ವಿಷಯವಿದೆ. ನೀವು ನಿಮ್ಮನ್ನು ತರಬೇತಿ ಮಾಡಿಕೊಳ್ಳದಿದ್ದರೆ ನಿಮ್ಮ ಮಕ್ಕಳಿಗೆ ನೀವು ಹೇಗೆ ತಾನೇ ತರಬೇತಿ ನೀಡಬಹುದು? ನೀವು ಅವರಿಗೆ ಮಾಧರಿಯಾಗಲು ನಿಯಮಿತವಾಗಿ ಸಭೆ ಸೇವೆಗಳಿಗೆ ಹಾಜರಾಗುತ್ತಿದ್ದೀರಾ ಮತ್ತು ಕರ್ತನೊಂದಿಗೆ ವೈಯಕ್ತಿಕ ಸಮಯವನ್ನು ಕಳೆಯುತ್ತಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
Bible Reading: Amos 3-7
ಅರಿಕೆಗಳು
ನನ್ನ ಎಲ್ಲಾ ಮಕ್ಕಳು ಕರ್ತನಿಂದ ಬೋದಿಸಲ್ಪಡುವುದರಿಂದ ಯೇಸುನಾಮದಲ್ಲಿ ಅವರ ಸಮಾಧಾನ ದೊಡ್ಡದಾಗಿರುತ್ತದೆ. ಆಮೆನ್.
Join our WhatsApp Channel

Most Read
● ಸಮರುವಿಕೆಯ ಕಾಲ- 3● ನಿಮ್ಮ ಬಿಡುಗಡೆಯನ್ನು ಕಾಪಾಡಿಕೊಳ್ಳುವುದು ಹೇಗೆ
● ಭಯಪಡಬೇಡ.
● ಧಾರ್ಮಿಕತೆಯ ಆತ್ಮವನ್ನು ಗುರುತಿಸುವುದು
● ಆರಾಧನೆಯನ್ನು ಜೀವನಶೈಲಿಯನ್ನಾಗಿ ಮಾಡಿಕೊಳ್ಳುವುದು.
● ಮೂರ್ಖತನದಿಂದ ನಂಬಿಕೆಯನ್ನು ಪ್ರತ್ಯೇಕಿಸುವುದು
● ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
ಅನಿಸಿಕೆಗಳು