ಅನುದಿನದ ಮನ್ನಾ
2
1
142
ಅನಿಶ್ಚಿತತೆಯ ಸಮಯದಲ್ಲಿ ಮಾಡುವ ಆರಾಧನೆಗಿರುವ ಶಕ್ತಿ
Saturday, 11th of October 2025
Categories :
ಆರಾಧನೆ (Worship)
ಒಂದು ಪ್ರಶ್ನೆ
ಎಲ್ಲಾ ಸಮಸ್ಯೆಗಳ ನಡುವೆ, ದೇವರು ಎಲ್ಲಿದ್ದಾನೆ ಎಂದು ಪ್ರಶ್ನಿಸುವಷ್ಟು ಸವಾಲಿನ ಪರಿಸ್ಥಿತಿಯಲ್ಲಿ ನೀವು ಎಂದಾದರೂ ಸಿಲುಕಿದ್ದೀರಾ? ಕೆಲವೊಮ್ಮೆ, ಜೀವನದ ಬಿರುಗಾಳಿಗಳು ಎಷ್ಟು ತೀವ್ರವಾಗಿ ಉಬ್ಬುತ್ತವೆ ಎಂದರೆ ದೇವರ ಕೈ ಕೆಲಸವನ್ನು ನೋಡುವುದು ನಮಗೆ ಕಷ್ಟವಾಗುತ್ತದೆ. ಈ ಸಮಯದಲ್ಲಿ, ಈ ಕಾಲಾತೀತ ಸತ್ಯವನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ: ಆತನು ಏನು ಮಾಡುತ್ತಿದ್ದಾನೆಂದು ನೀವು ಆತನನ್ನು ಸ್ತುತಿಸಲು ಸಾಧ್ಯವಾಗದಿದ್ದರೆ, ಆತನು ಯಾರಾಗಿದ್ದಾನೋ ಅದಕ್ಕಾಗಿ ನೀವು ಯಾವಾಗಲೂ ಆತನನ್ನು ಆರಾಧಿಸಬಹುದು.
"ಆದದರಿಂದ ಆತನ ಮೂಲಕವಾಗಿಯೇ ದೇವರಿಗೆ ಸ್ತೋತ್ರಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ. ಆತನು ಕರ್ತನೆಂದು ಬಾಯಿಂದ ಪ್ರತಿಜ್ಞೆಮಾಡುವದೇ ನಾವು ಅರ್ಪಿಸುವ ಯಜ್ಞವಾಗಿದೆ. (ಇಬ್ರಿಯ 13:15)
ದೇವರ ಸ್ವಭಾವ
ಅಪೊಸ್ತಲನಾದ ಪೌಲನು ಸೆರೆವಾಸದಿಂದ ಹಡಗು ಧ್ವಂಸಗಳವರೆಗೆ ಹಲವಾರು ರೀತಿಯ ಹಿನ್ನಡೆಗಳನ್ನು ಎದುರಿಸಿದನು - ಆದರೂ, ದೇವರು ಯಾರೆಂಬುದನ್ನು ಅವನು ಮರೆತುಹೋಗಲಿಲ್ಲ.ಆದರಿಂದ ಅವನು 2 ಕೊರಿಂಥ 4:8-9 ರಲ್ಲಿ "ಸರ್ವವಿಧದಲ್ಲಿಯೂ ನಮಗೆ ಇಕ್ಕಟ್ಟು ಇದ್ದರೂ ನಾವು ಅತಿ ಸಂಕಟ ಪಡುವವರಲ್ಲ; ನಾವು ದಿಕ್ಕು ಕಾಣದವರಾಗಿದ್ದರೂ ಕೇವಲ ದೆಸೆಗೆಟ್ಟವರಲ್ಲ; ಹಿಂಸೆ ಪಡುವವರಾಗಿದ್ದರೂ ಕೈಬಿಡಲ್ಪಟ್ಟವರಲ್ಲ; ಕೆಡವಲ್ಪಟ್ಟವರಾಗಿದ್ದರೂ ಪ್ರಾಣನಷ್ಟಪಡುವವರಲ್ಲ; " ಎಂದು ಬರೆಯುತ್ತಾನೆ.
ಈ ಮಾತುಗಳು ನಮ್ಮ ಯಾವುದೇ ಸಂದರ್ಭಗಳನ್ನು ಲೆಕ್ಕಿಸದೆ ದೇವರ ಸ್ವಭಾವವು ಸ್ಥಿರವಾಗಿರುತ್ತದೆ ಎಂಬುದನ್ನು ನಮಗೆ ನೆನಪಿಸುತ್ತವೆ. ಆತನೇ ನಮ್ಮ ಜೀವನದಲ್ಲಿ ಎಂದಿಗೂ ಚಲಿಸದ ಆಧಾರ ಸ್ತಂಭವಾಗಿದ್ದಾನೆ.
ಸ್ತುತಿ ಮತ್ತು ಆರಾಧನೆಯು ಜೀವನವು ಸುಗಮವಾಗಿ ನಡೆಯುತ್ತಿರುವಾಗ - ಬಿಲ್‌ಗಳನ್ನು ಪಾವತಿಸಿಮುಗಿಸಿದ್ದಾಗ, ಆರೋಗ್ಯವು ಉತ್ತಮವಾಗಿದ್ದಾಗ ಮತ್ತು ಸಂಬಂಧಗಳು ಅಭಿವೃದ್ಧಿ ಹೊಂದುತ್ತಿರುವಾಗ - ದೇವರನ್ನು ಸ್ತುತಿಸುವುದು ಹೆಚ್ಚಾಗಿ ಸುಲಭವಾಗುತ್ತದೆ. ಆದರೂ, ರೋಮನ್ನರು 8:28 ನಮಗೆ ನೆನಪಿಸುವುದೇನೆಂದರೆ, "..ದೇವರ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟು ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಅನುಕೂಲವಾಗುತ್ತವೆ ಎಂದು ನಮಗೆ ಗೊತ್ತದೆ."
ನಾವು "ಒಳ್ಳೆಯದನ್ನು" ನೋಡಲಾಗದಿದ್ದರೂ ಸಹ, ನಾವು ದೇವರ ಬದಲಾಗದ ಸ್ವಭಾವದ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುವಂತ ಆಯ್ಕೆಯನ್ನು ನಾವು ಮಾಡಬಹುದು, ನಮ್ಮ ಆರಾಧನೆಯನ್ನು ಆತನಿಗೇ ಪ್ರೇಮ ನಿವೇದನಾ ಪತ್ರವಾಗಿ ಅರ್ಪಿಸಬಹುದು.
ಗಮನ ಬದಲಾಯಿಸುವುದು
ಮತ್ತಾಯ 14:29-31 ರಲ್ಲಿ, ಪೇತ್ರನು ಯೇಸುವಿನ ಕಡೆಗೆ ನೀರಿನ ಮೇಲೆ ನಡೆಯಲು ಪ್ರಾರಂಭಿಸಿದನು ಆದರೆ ಯೇಸುವಿನಿಂದ ತನ್ನ ಕಣ್ಣುಗಳನ್ನು ತೆಗೆದು ಬಿರುಗಾಳಿ ಮತ್ತು ಅಲೆಗಳ ಮೇಲೆ ಕೇಂದ್ರೀಕರಿಸಿದಾಗ ಅವನು ನೀರಿನಲ್ಲಿ ಮುಳುಗಲು ಪ್ರಾರಂಭಿಸಿದನು. ಇಲ್ಲಿ ಒಂದು ಪಾಠವಿದೆ ಎಂದು ನಾನು ನಂಬುತ್ತೇನೆ. ಯೇಸುವಿನಿಂದ ನಮ್ಮ ಗಮನವನ್ನು ಬದಲಾಯಿಸುವುದರಿಂದ ನಾವು ಮುಳುಗಬಹುದು, ನಂತರ ನಮ್ಮ ಸನ್ನಿವೇಶಗಳಿಂದ ಯೇಸುವಿನಲ್ಲಿರುವ ಮಾರ್ಪಡದ ಪ್ರೀತಿಸುವ ಸ್ವಭಾವದ ಕಡೆಗೆ ನಮ್ಮ ಗಮನವನ್ನು ಬದಲಾಯಿಸಿದರೆ, ನಾವು ನಮ್ಮ ಜೀವನದ ಅವ್ಯವಸ್ಥೆಯಲ್ಲಿಯೂ ಶಾಂತಿಯನ್ನು ಕಂಡುಕೊಳ್ಳಬಹುದು.
" ನನ್ನ ಸಹೋದರರೇ, ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ತಾಳ್ಮೆಯನ್ನುಂಟುಮಾಡುತ್ತದೆಂದು ತಿಳಿದು ನೀವು ನಾನಾವಿಧವಾದ ಕಷ್ಟಗಳಲ್ಲಿ ಬಿದ್ದಿರುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ಎಣಿಸಿರಿ. ಆ ತಾಳ್ಮೆಯು ಸಿದ್ಧಿಗೆ ಬರಲಿ; ಆಗ ನೀವು ಶಿಕ್ಷಿತರೂ ಸರ್ವಸುಗುಣವುಳ್ಳವರೂ ಏನೂ ಕಡಿಮೆಯಿಲ್ಲದವರೂ ಆಗಿರುವಿರಿ. (ಯಾಕೋಬ 1:2-4)
ಪರಿಶೋಧನೆಗಳು ನಮ್ಮನ್ನು ಪರಿಷ್ಕರಿಸಬಲ್ಲವು ಮತ್ತು ನಮ್ಮ ಸ್ವಭಾವವನ್ನು ಮರು ವ್ಯಾಖ್ಯಾನಿಸಬಲ್ಲವು. ಆರಾಧನೆಯ ಕ್ರಿಯೆಯೇ ಆತ್ಮೀಕ ಸ್ಥಿತಿಸ್ಥಾಪಕತ್ವವನ್ನು ಬೆಳೆಸುವ ಒಂದು ಸಾಧನವಾಗಿದೆ. ಆರಾಧನೆಯು ವಾಸ್ತವವನ್ನು ನಿರಾಕರಿಸುವುದಿಲ್ಲ ಆದರೆ ದೇವರ ಸಾರ್ವಭೌಮತ್ವದ ಮಸೂರದ ಮೂಲಕ ನಮ್ಮ ಪರಿಸ್ಥಿತಿಗಳನ್ನು ನೋಡುವ ಮಟ್ಟಕ್ಕೆ ನಮ್ಮನ್ನು ಉನ್ನತೀಕರಿಸುತ್ತದೆ.
ಆರಾಧನೆಯಲ್ಲಿ ಜೀವಿಸುವ ಜೀವನ
ತನ್ನ ಸಹೋದರರಿಂದ ಗುಲಾಮಗಿರಿಗೆ ಮಾರಲ್ಪಟ್ಟ ಯೋಸೆಫನು, ಆರಾಧನೆಯಿಂದ ತುಂಬಿದ ಜೀವನದ ಶಕ್ತಿಯ ಪ್ರಬಲ ಉದಾಹರಣೆಯನ್ನು ನೀಡುತ್ತಾನೆ. ಯಾವುದೇ ತಪ್ಪು ಮಾಡದೇ ಅನ್ಯಾಯವಾಗಿ ಸೆರೆಮನೆಗೆ ಹಾಕಲ್ಪಟ್ಟು ಮರೆತುಹೋದರೂ, ಅವನು ದೇವರನ್ನು ಆತನು ಯಾರಾಗಿದ್ದಾನೆಂದು ಆರಾಧಿಸುವುದನ್ನು ಮುಂದುವರೆಸಿದನು. ಈ ಮನೋಭಾವವು ಅಂತಿಮವಾಗಿ ಅವನನ್ನು ಗೌರವ ಮತ್ತು ಪ್ರಭಾವದ ಸ್ಥಳಕ್ಕೆ ಕರೆದೊಯ್ಯಿತು, ಇಡೀ ರಾಷ್ಟ್ರವನ್ನು ಕ್ಷಾಮದಿಂದ ರಕ್ಷಿಸಿತು (ಆದಿಕಾಂಡ 41).
ದೇವರು ಪರಿಸ್ಥಿತಿಗಳನ್ನು ಮಾರ್ಪಡಿಸಿದ ಕಥೆಗಳಿಂದ ಧರ್ಮಗ್ರಂಥವು ತುಂಬಿದೆ. ಆತನು ಲಾಜರನನ್ನು ಸತ್ತವರೊಳಗಿಂದ ಎಬ್ಬಿಸಿದನು (ಯೋಹಾನ 11:43-44), ತೀವ್ರ ಪರೀಕ್ಷೆಗಳ ನಂತರ ಯೋಬನ ಸಂಪತ್ತನ್ನು ಪುನಃಸ್ಥಾಪಿಸಿದನು (ಯೋಬಾ 42:10), ಮತ್ತು ಯೇಸುಕ್ರಿಸ್ತನು ಪುನರುತ್ಥಾನದ ಮೂಲಕ ಮರಣವನ್ನು ಜಯಿಸಿದನು(ಮತ್ತಾಯ 28:5-6). ಆತನು ನಿಜಕ್ಕೂ ಪುನರುತ್ಥಾನಗಳ ದೇವರು.
ಆರಾಧನೆಯು ಭಾನುವಾರ ಮಾತ್ರ ನಡೆಸಬೇಕಾದ ಒಂದು ಚಟುವಟಿಕೆಯಲ್ಲ ಆದರೆ ಅದು ಒಂದು ಜೀವನಶೈಲಿಯಾಗಿದೆ. ನಿಮ್ಮ ಜೀವನದಲ್ಲಿ ಪರಿಸ್ಥಿತಿ ಏನೇ ಇರಲಿ, ಆರಾಧನೆಯನ್ನು ನಿಮ್ಮ ದೈನಂದಿನ ಯಜ್ಞಬಲಿಯಾಗಿ ಅರ್ಪಿಸುವ ಅಭ್ಯಾಸ ಮಾಡಿಕೊಳ್ಳಿ, ಏಕೆಂದರೆ ನಾವು ನಿನ್ನೆ ಇದ್ದಹಾಗೆಯೇ ಇಂದಿಗೂ ಮತ್ತು ಎಂದೆಂದಿಗೂ ಇರುವ ದೇವರನ್ನು ಸೇವಿಸುತ್ತಿದ್ದೇವೆ (ಇಬ್ರಿಯ 13:8).
ಆದ್ದರಿಂದ, ನೀವು ಜೀವನದಲ್ಲಿ ಸಂಕೀರ್ಣತೆಗಳ ಮೂಲಕ ಸಾಗುವಾಗ, ಆತನು ಮಾಡುತ್ತಿರುವ ಕೆಲಸಗಳಿಗಾಗಿ ನೀವು ಇನ್ನೂ ಆತನನ್ನು ಸ್ತುತಿಸಲು ಸಾಧ್ಯವಾಗದಿದ್ದರೆ, ಆತನು ಯಾರಾಗಿದ್ದಾನೆಂದು ಅರಿತು ನೀವು ಯಾವಾಗಲೂ ಆತನನ್ನು ಆರಾಧಿಸಬಹುದು ಎಂಬುದನ್ನು ನೆನಪಿಡಿ.
Bible Reading: Matthew 8-9
ಪ್ರಾರ್ಥನೆಗಳು
ತಂದೆಯೇ, ನಮ್ಮ ಪರೀಕ್ಷೆಗಳ ಮಧ್ಯದಲ್ಲಿಯೂ, ನೀವು ಬದಲಾಗದವರಾಗಿರುತ್ತೀರಿ ಎಂಬುದನ್ನು ನೆನಪಿಟ್ಟುಕೊಳ್ಳಲು ನಮಗೆ ಸಹಾಯ ಮಾಡಿ. ನಾವು ನಿಮ್ಮ ಕೈಯನ್ನು ನೋಡಲಾಗದಿದ್ದಾಗ, ನಿಮ್ಮ ಹೃದಯದ ಭಾವವನ್ನು ನಾವು ಅನುಭವಿಸುವಂತೆ ಮಾಡಿ. ನೀವು ಏನು ಮಾಡಲಿದ್ದೀರಿ ಎಂಬುದಕ್ಕಾಗಿ ಮಾತ್ರವಲ್ಲದೆ, ನೀವು ಯಾರಾಗಿದ್ದೀರೋ ಅದಕ್ಕಾಗಿಬಿಡದೇ ನಿಮ್ಮನ್ನು ಆರಾಧಿಸುವಂತೆ ನಮಗೆ ಯೇಸುನಾಮದಲ್ಲಿ ಕಲಿಸಿ. ಆಮೆನ್!
Join our WhatsApp Channel
Most Read
● ಕೆಟ್ಟ ಆಲೋಚನೆಗಳ ಹೋರಾಟವನ್ನು ಗೆಲ್ಲುವುದು● ಅತಿ ದೀರ್ಘವಾದ ರಾತ್ರಿಯ ನಂತರವಾಗುವ ಸೂರ್ಯೋದಯ
● ಯಾವಾಗ ಸುಮ್ಮನಿರಬೇಕು ಮತ್ತು ಯಾವಾಗ ಮಾತನಾಡಬೇಕು
● ನಂಬಿಕೆಯ ಜೀವಿತ
● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - III
● ನಿಮ್ಮ ಭೂಮಿಯನ್ನು ಉತ್ತು ಹದಮಾಡಿರಿ
● ಇತರರಿಗೆ ಸೇವೆ ಸಲ್ಲಿಸುವ ಮೂಲಕ ನಾವು ಅನುಭವಿಸುವ ಆಶೀರ್ವಾದಗಳು
ಅನಿಸಿಕೆಗಳು
