english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಗಮನಿಸುವುದರಲ್ಲಿರುವ ವಿವೇಕ
ಅನುದಿನದ ಮನ್ನಾ

ಗಮನಿಸುವುದರಲ್ಲಿರುವ ವಿವೇಕ

Friday, 31st of October 2025
1 1 132
Categories : ಅನುಗ್ರಹ (Grace) ಜೀವನ ಪಾಠಗಳು (Life Lessons) ಬುದ್ಧಿವಂತಿಕೆ (Wisdom)
ಜೀವನವು ಸಾಮಾನ್ಯವಾಗಿ ಸೋಲು ಗೆಲುವಿನ ಅನುಭವಗಳ ರಂಗಭೂಮಿಯಾಗಿ ತೆರೆದುಕೊಳ್ಳುತ್ತದೆ. ವೀಕ್ಷಕರಾಗಿ, ನಮ್ಮ ಸುತ್ತಲೂ ನಡೆಯುವ ಕಥೆಗಳೊಂದಿಗೆ ನಾವು ಹೇಗೆ ತೊಡಗಿಸಿಕೊಳ್ಳುತ್ತೇವೆ ಎಂಬುದರಲ್ಲಿ ನಮಗೆ ಆಯ್ಕೆ ಇರುತ್ತದೆ.

ಕೆಲವರು ಇತರರ ದುರದೃಷ್ಟಗಳಲ್ಲಿ ಮನರಂಜನೆಯನ್ನು ಕಂಡುಕೊಂಡರೂ, ನಿಜವಾದ ವಿವೇಕವು ಅವುಗಳಿಂದ ಕಲಿಯಬೇಕಾದ ಪಾಠಗಳನ್ನು ಕಂಡುಕೊಳ್ಳುವುದರಲ್ಲಿ ಅಡಗಿದೆ. 

"ವಿವೇಕದಲ್ಲಿ ಬುದ್ಧಿಹೀನನಿಗೆ ಸಂತೋಷವಿಲ್ಲ; ಆದರೆ ತನ್ನ ಹೃದಯವನ್ನು ಹೊರಪಡಿಸಿಕೊಳ್ಳುವುದೇ ಅವನಿಗೆ ಸಂತೋಷ." (ಜ್ಞಾನೋಕ್ತಿ 18:2)

ಇನ್ನೊಬ್ಬ ವ್ಯಕ್ತಿಯ ಅವನತಿಯ ಕಥೆಗಳನ್ನು ನಾವು ಕೇಳುವಾಗ, ಗಾಳಿ ಸುದ್ದಿ ಹಬ್ಬಿಸುವವರ ವೃಂದಕ್ಕೆ ಸೇರುವುದು ಸುಲಭ. ಚರ್ಚಿಸಲು, ವಿಶ್ಲೇಷಿಸಲು ಮತ್ತು ತೀರ್ಪು ಮಾಡಲು ಇದು ಪ್ರಲೋಭನಕಾರಿಯಾಗಿದೆ. ಮೂರ್ಖ ವ್ಯಕ್ತಿಯು ಹೆಮ್ಮೆ ಅಥವಾ ಅಹಂಕಾರದಿಂದ ಪ್ರೇರೇಪಿಸಲ್ಪಟ್ಟ ಈ ಚರ್ಚೆಯಲ್ಲಿ ಯೋಚಿಸದೆ ಧುಮುಕುತ್ತಾನೆ, ಕೆಲವೊಮ್ಮೆ ತನ್ನ ಬಗ್ಗೆ ತಾನೇ ಉತ್ತಮ  ಎನ್ನುವ ಭಾವನೆ ಹೊಂದಿಕೊಳ್ಳುತ್ತಾನೆ. 

" ನಾಶನಕ್ಕೆ ಮುಂದಾಗಿ ಗರ್ವ ಹೋಗುತ್ತದೆ.
 ಬೀಳುವಿಕೆಯ ಮುಂದಾಗಿ ಜಂಬದ ಆತ್ಮವಿರುತ್ತದೆ." (ಜ್ಞಾನೋಕ್ತಿ 16:18)

ಆದಾಗ್ಯೂ, ಪ್ರತಿಯೊಬ್ಬ ವ್ಯಕ್ತಿಯ ಪ್ರಯಾಣವು, ಅವರ ಅಪಾಯಗಳನ್ನು ಒಳಗೊಂಡಂತೆ, ಅಮೂಲ್ಯವಾದ ಪಾಠವನ್ನು ನೀಡಬಹುದು ಎಂದು ಬುದ್ಧಿವಂತ ವ್ಯಕ್ತಿಯು ಅರ್ಥಮಾಡಿಕೊಳ್ಳುತ್ತಾನೆ. ಅವರು ಅದನ್ನು ಕೇವಲ ಗಾಸಿಪ್ ಮೇವಾಗಿ ನೋಡುವ ಬದಲು, ಅದನ್ನು ಕನ್ನಡಿಯಾಗಿ, ನಮ್ಮೆಲ್ಲರಲ್ಲೂ ಹುದುವಾಗಿರುವ ಮಾನವ ದೌರ್ಬಲ್ಯದ ಪ್ರತಿಬಿಂಬವಾಗಿ ನೋಡುತ್ತಾರೆ. ತಮ್ಮನ್ನು ಒಳಗೊಂಡಂತೆ ಪ್ರತಿಯೊಬ್ಬರೂ ತೀರ್ಪಿಗೆ ಗುರಿಯಾದವರೇ ಅಥವಾ ಕ್ರಿಯೆಯಲ್ಲಿ ದೋಷಗಳನ್ನು ಒಳಗೊಂಡವರೇ ಎಂಬುದನ್ನು ಅವರು ಗುರುತಿಸಿಕೊಳ್ಳುತ್ತಾರೆ.

"ಹೆಚ್ಚು ಕಡಿಮೆ ಏನೂ ಇಲ್ಲ ಎಲ್ಲರೂ ಪಾಪ ಮಾಡಿ ದೇವರ ಮಹಿಮೆಯನ್ನು ಹೊಂದದೇ ಹೋಗಿದ್ದಾರೆ"(ರೋಮನ್ನರು 3:23)

ಅಪೊಸ್ತಲ ಪೌಲನ ಪ್ರಯಾಣವು ಒಂದು ಪ್ರಬಲ ಉದಾಹರಣೆಯಾಗಿ ಕಾರ್ಯನಿರ್ವಹಿಸುತ್ತದೆ. ದಮಸ್ಕಕ್ಕೆ ಹೋಗುವ ದಾರಿಯಲ್ಲಿ ಕರ್ತನಾದ ಯೇಸುವಿನೊಂದಿಗೆ ಅವನ ರೂಪಾಂತರದ ಭೇಟಿಯ ಮೊದಲು, ಪೌಲ (ಆಗ ಸೌಲ) ಆರಂಭಿಕ ಕ್ರೈಸ್ತ ಸಭೆಯನ್ನು ಹಿಂಸಿಸುವವನಾಗಿದ್ದನು. ಆದಾಗ್ಯೂ, ಅವನ ಮಾನಸಾತರದ ನಂತರ , ಅವನ ಹಿಂದಿನ ತಪ್ಪುಗಳು ಅಂತ್ಯವಿಲ್ಲದ ಗಾಳಿಸುದ್ದಿಯ ಮೂಲವಾಗದೆ ದೇವರು ತರುವ ರೂಪಾಂತರದ ಶಕ್ತಿಗೆ ಸಾಕ್ಷಿಯಾದವು. 

"ಆದ್ದರಿಂದ ಯಾರಾದರೂ ಕ್ರಿಸ್ತ ಯೇಸುವಿನಲ್ಲಿದ್ದರೆ, ಅವರು ನೂತನ ಸೃಷ್ಟಿಯಾಗಿದ್ದಾರೆ: ಹಳೆಯದೆಲ್ಲವೂ ಹೋಗಿ ಎಲ್ಲಾ ನೂತನವಾಯಿತು". (2 ಕೊರಿಂಥ 5:17) 

ನಾವು ನೋಡುವ ಪ್ರತಿಯೊಂದು ಪತನವು ಯಾರೂ ತಪ್ಪು ಹೆಜ್ಜೆಗಳಿಂದ ಮುಕ್ತರಾಗಿಲ್ಲ ಎಂಬ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಗಾಳಿಸುದ್ದಿ ಹರಡುವ ಅಥವಾ ತೀರ್ಪುಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಬದಲು, ಆತ್ಮಾವಲೋಕನ ಮಾಡಿಕೊಳ್ಳುವಂತದ್ದು ವಿವೇಕಯುತ ಕಾರ್ಯವಾಗಿರುತ್ತದೆ. ನಾವು  ಇನ್ನು ಮುಂದೆ ಅದೇ ಹಾದಿಯಲ್ಲಿ ಸಾಗುವುದಿಲ್ಲ ಮತ್ತು ಜೀವನದ ಸಂಕೀರ್ಣತೆಗಳಿಂದ ಹೊರಬರಮಾಡಲು ದೇವರ ಮಾರ್ಗದರ್ಶನವನ್ನು ಪಡೆಯುವುದು ಖಚಿತವಾಗುತ್ತದೆ.

"ನಂಬಿಕೆಯಲ್ಲಿ ಇದ್ದೀರೋ, ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ. ನಿಮ್ಮನ್ನು ಪರಿಶೋಧಿಸಿಕೊಳ್ಳಿರಿ." (2 ಕೊರಿಂಥ 13:5) 

ಇತರರ ಚರಿತ್ರೆಗಳನ್ನು ಸಹಾನುಭೂತಿಯಿಂದ ಆಹ್ವಾನಿಸಬೇಕು. ತೀರ್ಪುಮಾಡುವ ಬದಲು ಪರಾನುಭೂತಿ ತೋರಬೇಕು. ಇನ್ನೊಬ್ಬರ ತಪ್ಪುಗಳ ಕುರಿತು ಮಾತನಾಡುವುದು ಸುಲಭ. ಆದಾಗ್ಯೂ, ದೇವರ ಕೃಪೆ ಇಲ್ಲದಿದ್ದರೆ, ಅದು ನಮಗೂ ಇದುವೇ ಆಗುತ್ತಿತ್ತೋ ಏನೋ ಎಂದು ಅರ್ಥೈಸಿಕೊಂಡು ನಮ್ಮ ಕೈ ಚಾಚಿ ಪ್ರಾರ್ಥನೆ ಸಲ್ಲಿಸಿ ಅಥವಾ ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ವಿವೇಕವಾಗಿದೆ.

ನಾವು ಜೀವನದ ಪ್ರಯಾಣದಲ್ಲಿ, ಇತರರ ಅನುಭವಗಳಿಂದ ನಾವು ಕಲಿಯುವ ಪಾಠಗಳನ್ನು ಹಿಡಿದಿಟ್ಟುಕೊಳ್ಳೋಣ. ನಮ್ಮ ಹೃದಯ ಮತ್ತು ಮನಸ್ಸುಗಳನ್ನು ಗಾಳಿಸುದ್ದಿಯಿಂದ ತುಂಬುವ ಬದಲು, ಅವುಗಳನ್ನು ಜ್ಞಾನ ಮತ್ತು ತಿಳುವಳಿಕೆಯಿಂದ ತುಂಬಿಸೋಣ. ಪ್ರತಿಯೊಂದು ಕಥೆ, ಪ್ರತಿಯೊಂದು ಪತನವು ಕಲಿಯಲು, ಬೆಳೆಯಲು ಮತ್ತು ನಮ್ಮ ಕರ್ತನಿಗೆ ಹತ್ತಿರವಾಗಲು ಒಂದು ಅವಕಾಶವಾಗಿದೆ ಎಂಬುದಾಗಿ ಅರಿತುಕೊಳ್ಳೋಣ.

"ಜ್ಞಾನಿಯ ಹೃದಯವು ಅವನ ಬಾಯಿಗೆ ಜಾಣತನವನ್ನೂ ಅವನ ತುಟಿಗಳಿಗೆ ಉಪದೇಶ ಶಕ್ತಿಯನ್ನೂ ಹೆಚ್ಚಿಸುವದು".(ಜ್ಞಾನೋಕ್ತಿ 16:23) 

ಆದ್ದರಿಂದ ಮುಂದಿನ ಬಾರಿ ನೀವು ಗಾಳಿಸುದ್ದಿ ಹರಡುವ ಗುಂಪಿಗೆ ಸೇರುವಾಗ ಅಥವಾ ಇನ್ನೊಬ್ಬರ ಪತನದಲ್ಲಿ ಆನಂದಿಸಲು ಪ್ರಚೋದಿಸಲ್ಪಟ್ಟಾಗ, ಒಂದು ನಿಮಿಷ ನಿಂತು  ಯೋಚಿಸಿ. , "ಇದರಿಂದ ನಾನೇನನ್ನು ಕಲಿಯಬಹುದು?"ಎಂದು ನಿಮ್ಮನ್ನು ಕೇಳಿಕೊಳ್ಳಿ. ಹಾಗೆ ಮಾಡುವುದರಿಂದ, ನೀವು ಜ್ಞಾನದಲ್ಲಿ ಬೆಳೆಯುವುದಲ್ಲದೆ, ಕೃಪೆ ಮತ್ತು ಕರುಣೆಯಿಂದ ತುಂಬಿದ ಹೃದಯವನ್ನು ಬೆಳೆಸಿಕೊಳ್ಳುತ್ತೀರಿ.

Bible Reading: Luke 9
ಪ್ರಾರ್ಥನೆಗಳು
ತಂದೆಯೇ, ಇತರರು ಗಾಳಿಸುದ್ದಿ ಹರಡುವುದನ್ನು ನೋಡುವಾಗ ನಾನು ಅದರಿಂದ ಯಾವ ಪಾಠಗಳನ್ನು ಕಲಿಯಬಹುದು ಎಂಬುದನ್ನು ನೋಡುವಂತ  ವಿವೇಚನೆಯನ್ನು ನನಗೆ ನೀಡಿ. ನಾವೆಲ್ಲರೂ  ಜೊತೆ ಪ್ರಯಾಣಿಕರೇ ಎಂದು ಅರ್ಥಮಾಡಿಕೊಳ್ಳುವ ಮೂಲಕ ನಾನು ಯಾವಾಗಲೂ ಇತರರನ್ನು ಸಹಾನುಭೂತಿಯಿಂದ ಸಂಪರ್ಕಿಸುವಂತಾಗಲಿ. ತಿಳುವಳಿಕೆ ಮತ್ತು ಕೃಪೆಯಲ್ಲಿ ಬೆಳೆಯಲು ನನಗೆ ಯೇಸುನಾಮದಲ್ಲಿ ಸಹಾಯ ಮಾಡಿ. ಆಮೆನ್.


Join our WhatsApp Channel


Most Read
● ಇದು ನಿಜಕ್ಕೂ ಮುಖ್ಯವಾದ ಸಂಗತಿಯಾ?
● ನಿಮ್ಮ ಜೀವನವನ್ನು ಬದಲಾಯಿಸಬೇಕೆಂದರೆ ಯಜ್ಞವೇಧಿಗೆ ಆದ್ಯತೆ ನೀಡಿ
● ಯೇಸುವನ್ನೇ ದೃಷ್ಟಿಸುವುದು.
● ಉತ್ತಮ ಹಣ ನಿರ್ವಹಣೆ
● ಹೊಟ್ಟೆಕಿಚ್ಚು ಎಂಬ ಪೀಡೆ.
● ಯಾರೂ ವಿನಾಯಿತಿ ಹೊಂದಿದವರಿಲ್ಲ.
● ಇದು ನಿಮಗಾಗಿ ಬದಲಾಗುತ್ತಿದೆ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್