english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಪ್ರತಿಭೆಗಿಂತ ಚಾರಿತ್ರ್ಯ ಮೇಲಾದದ್ದು
ಅನುದಿನದ ಮನ್ನಾ

ಪ್ರತಿಭೆಗಿಂತ ಚಾರಿತ್ರ್ಯ ಮೇಲಾದದ್ದು

Saturday, 8th of November 2025
0 0 94
Categories : ಆಯ್ಕೆಗಳು (Choices) ಗುಣ(character) ನಾಯಕತ್ವ (leadership) ಬದ್ಧತೆ (commitment) ಶಿಸ್ತು ( Discipline)
ಇತಿಹಾಸದ ದಾಖಲೆಗಳಲ್ಲಿ ನೋಡುವಾಗ, ಅಮೆರಿಕದ ಅತ್ಯಂತ ಪ್ರಕ್ಷುಬ್ಧ ಕಾಲದಲ್ಲಿ ಅಬ್ರಹಾಂ ಲಿಂಕನ್ಅವರ ನಾಯಕತ್ವಕ್ಕಾಗಿ ಮಾತ್ರವಲ್ಲದೆ, ಮಾನವ ಸ್ವಭಾವದ ಬಗ್ಗೆ ಅವರ ಆಳವಾದ ತಿಳುವಳಿಕೆಗಾಗಿ ಅವರು ಒಬ್ಬ ಅತ್ಯುನ್ನತ ವ್ಯಕ್ತಿಯಾಗಿ ನಿಲ್ಲುತ್ತಾರೆ.  "ಬಹುತೇಕ ಎಲ್ಲಾ ಮನುಷ್ಯರು ಪ್ರತಿಕೂಲತೆಯನ್ನು ತಡೆದುಕೊಳ್ಳಬಹುದು, ಆದರೆ ನೀವು ಮನುಷ್ಯನ ಗುಣವನ್ನು ಪರೀಕ್ಷಿಸಲು ಬಯಸಿದರೆ, ಅವನಿಗೆ ಅಧಿಕಾರ ನೀಡಿ" ಎಂಬ ಅವರ ಮಾತುಗಳು ಸದ್ಗುಣಶೀಲ ವ್ಯಕ್ತಿಯಾಗುವುದರ ಅರ್ಥವೇನೆಂದು ನಿಖರವಾಗಿ ಹೇಳುತ್ತವೆ. 

ಜಗತ್ತು ಸಾಮಾನ್ಯವಾಗಿ ಪ್ರತಿಭೆಯ ಪ್ರದರ್ಶನಗಳಿಂದ ನಮ್ಮನ್ನು ಬೆರಗುಗೊಳಿಸುತ್ತದೆ. ದಾಖಲೆಗಳನ್ನು ಮುರಿಯುವ ಕ್ರೀಡಾಪಟುಗಳಿಂದ ಹಿಡಿದು  ಹೃದಯಗಳನ್ನು ಕಲಕುವ ಸಂಗೀತಗಾರರವರೆಗೆ, ಪ್ರತಿಭೆಯನ್ನು ಸಂಭ್ರಮಿಸಲಾಗುತ್ತದೆ ಪ್ರದರ್ಶಿಸಲಾಗುತ್ತದೆ ಮತ್ತು ಅದನ್ನು ಆರಾಧಿಸಲಾಗುತ್ತದೆ. ಆದರೆ ಈ ಸಾಧನೆಗಳ ಹೊರ ಪದರದ ಕೆಳಗೆ ಹೆಚ್ಚು ಗಹನವಾದ, ಹೆಚ್ಚು ಶಾಶ್ವತವಾದ ಸಂಗತಿ ಅಡಗಿದೆ: ಅದುವೇ ಚಾರಿತ್ರ್ಯ.

"ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯದ ಮತ್ತು ಅಂತರಂಗದ ಸೌಂದರ್ಯ ನೋಡುವವನಾಗಿದ್ದಾನೆ" (1 ಸಮುವೇಲ 16:7) 

ಪ್ರತಿಭೆಯು ಬೆಳಕಿಗೆ ಬರುವಾಗ ಪ್ರಕಾಶಮಾನವಾಗಿಕಾಣ ಬಹುದು, ಆದರೆ ವ್ಯಕ್ತಿತ್ವವು ರಹಸ್ಯದಲ್ಲಿ ನಡೆಸುವ ಕಾರ್ಯದೊಂದಿಗೆ ಬೆಸೆದುಕೊಂಡಿರುತ್ತದೆ. ಯಾರೂ ನೋಡದಿದ್ದಾಗ ನಾವು ಮಾಡುವ ಆಯ್ಕೆಗಳು, ಪ್ರೇಕ್ಷಕರಿಲ್ಲದೆ ಇದ್ದರೂ ನಾವು ಸ್ವೀಕರಿಸುವ ತ್ಯಾಗಗಳು ಮತ್ತು ಯಾವುದೇ ಪ್ರಶಂಸೆಗಳು ಇಲ್ಲದರ ಹೊರತಾಗಿಯೂ ನಾವು ಎತ್ತಿಹಿಡಿಯುವ ಸಮಗ್ರತೆ ಇದಕ್ಕೆ ಕಾರಣ. ನಮ್ಮ ವರಗಳು ಮತ್ತು ಪ್ರತಿಭೆಗಳು ನಮಗೆ ಈ ಪ್ರಪಂಚದಲ್ಲಿ ವೇದಿಕೆಗಳನ್ನು ಅವಕಾಶಗಳನ್ನು ನೀಡಬಹುದಾದರೂ, ನಾವು ಅಲ್ಲಿ ಎಷ್ಟು ಕಾಲ ಇರುತ್ತೇವೆ? ಆದರೆ ನಾವು ಬಿಟ್ಟುಹೋಗುವ ಪರಂಪರೆಯನ್ನು ನಿರ್ಧರಿಸುವುದು ನಮ್ಮ ಚಾರಿತ್ರ್ಯ ಮಾತ್ರ. .

"ಬಹುಧನಕ್ಕಿಂತಲೂ ಒಳ್ಳೆಯ ಹೆಸರು ಉತ್ತಮ, ಬೆಳ್ಳಿ, ಬಂಗಾರಕ್ಕಿಂತಲೂ ಸತ್ಕೀರ್ತಿಯು ಅಮೂಲ್ಯ." (ಜ್ಞಾನೋಕ್ತಿ 22:1)

ನಮ್ಮ ಚಾರಿತ್ರ್ಯವು ನಮ್ಮ ಸಾಮರ್ಥ್ಯಗಳಿಗಿಂತ ಜೋರಾಗಿ ಮಾತನಾಡುತ್ತದೆ. ಅದು ನಮ್ಮ ನಿರ್ಧಾರಗಳನ್ನು ಮಾರ್ಗದರ್ಶಿಸುವ ದಿಕ್ಸೂಚಿಯೂ, ನಮ್ಮ ಜೀವಿತದ ಬಿರುಗಾಳಿಗಳಲ್ಲಿಯೂ ನಮಗೆ ಆಧಾರವೂ ಮತ್ತು ನಾವು ರವಾನಿಸುವ ಪರಂಪರೆಯೂ ಆಗಿದೆ. ಜ್ಞಾನೋಕ್ತಿಗಳ ಲೇಖಕನು ಹೇಳುವಂತೆ, "ನೀತಿಯಿಂದ ಬದುಕಿ, ಆಗ ನೀವು ಜೀವ ನೀಡುವ ಮರದಿಂದ ಫಲವನ್ನು ತಿನ್ನುವಿರಿ. ಮತ್ತು ನೀವು ವಿವೇಕದಿಂದ ವರ್ತಿಸಿದರೆ, ಇತರರು ನಿಮ್ಮನ್ನು ಅನುಸರಿಸಲು ಬರುತ್ತಾರೆ." (ಜ್ಞಾನೋಕ್ತಿ 11:30 CEV)ಎಂದು.ಸದ್ಗುಣದ ಫಲವು ನಮ್ಮನ್ನು ಮಾತ್ರವಲ್ಲದೆ ನಮ್ಮ ನಂತರ ಬರುವವರನ್ನೂ ಸಹ ಪೋಷಿಸುತ್ತದೆ. 

ಆದರೆ ನಾವು ಈ ಅಸಾಧಾರಣ ಚಾರಿತ್ರ್ಯವನ್ನು ಹೇಗೆ ನಿರ್ಮಿಸಿಕೊಳ್ಳಬಹುದು? 


ಚಾರಿತ್ರ್ಯವು ಹೆಚ್ಚಾಗಿ ಸವಾಲುಗಳ ಇಕ್ಕಳದಲ್ಲಿ ನಿರ್ಮಿಸಲ್ಪಡುತ್ತದೆ. ಕಠಿಣವಾದ ಸಮಯದಲ್ಲಿ ತಪ್ಪೆಸೆಗಿ ಸುಲಭವಾಗಿ ಅದರಿಂದ ತಪ್ಪಿಸಿಕೊಳ್ಳುವ ಸಮಯದಲ್ಲೂ ಸರಿಯಾದದನ್ನು ಆಯ್ಕೆ ಮಾಡುವ ಶಾಂತ ಕ್ಷಣಗಳಲ್ಲಿ ಇದು ತೊರ್ಪಡುತ್ತದೆ. ಲೋಕವು ಅಡ್ಡದಾರಿಗಳನ್ನು ನೀಡಿದಾಗಲೂ ಸಹ, ಜ್ಞಾನ ಮತ್ತು ತಿಳುವಳಿಕೆಯನ್ನು ಎದುರು ನೋಡುವಾಗ ಇದು ಕಂಡು ಬರುತ್ತದೆ. "ಆದರೆ ಮೇಲಿಂದ ಬರುವ ಜ್ಞಾನವು ಮೊದಲು ಪರಿಶುದ್ಧವಾದದ್ದು ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸಂತೋಷವಾಗಿ ಒಪ್ಪಿಕೊಳ್ಳುವಂಥದ್ದು, ಕರುಣೆ ಮತ್ತು ಒಳ್ಳೆ ಫಲಗಳಿಂದ ತುಂಬಿರುವಂಥದ್ದು, ಪಕ್ಷಪಾತವಿಲ್ಲದ್ದು, ಪ್ರಾಮಾಣಿಕವಾದ್ದದು ಆಗಿದೆ. (ಯಾಕೋಬ 3:17) ನಾವು ಜ್ಞಾನವನ್ನೂ ತಿಳುವಳಿಕೆಯನ್ನು ಅಂಗೀಕರಿಸಿಕೊಳ್ಳುವಾಗ ನಮ್ಮ ಚಾರಿತ್ರ್ಯವು ದೈವಿಕ ತತ್ವಗಳೊಂದಿಗೆ ಹೊಂದಿಕೆಯಾಗುತ್ತದೆ. ಇದು ವೈಫಲ್ಯಗಳು ಅಥವಾ ತಪ್ಪುಗಳೇ ಆಗದಂತೆ ಜೀವಿಸುವುದರ ಕುರಿತಾದಾದಲ್ಲ, ಆದರೆ ನಾವು ಬಿದ್ದಾಗಲೆಲ್ಲಾ ಮೇಲೇಳುವುದು, ಕಲಿಯುವುದು, ಬೆಳೆಯುವುದು ಮತ್ತು ದೇವರ ಕೃಪೆ ಕಡೆಗೆ ಒಲವು ತೋರುವುದರ ಕುರಿತಾದ್ದಾಗಿದೆ.

ನಾವು ಜೀವನದಲ್ಲಿ ಪ್ರಯಾಣಿಸುವಾಗ, ನಮ್ಮ ಕ್ಷೇತ್ರಗಳ ಶಿಖರವನ್ನು ತಲುಪುವುದು ಅಥವಾ ಮಹತ್ತರವಾದ ಮೈಲಿಗಲ್ಲುಗಳನ್ನು ಸಾಧಿಸುವುದು ನಮ್ಮ ಆಕಾಂಕ್ಷೆಗಳಾಗಿರಬಹುದು. ಆದಾಗ್ಯೂ, ಜೀವನದ ಮೇಲೆ ನಿಜವಾಗಿಯೂ ಪ್ರಭಾವ ಬೀರುವಂತ ಮತ್ತು ಅಳಿಸಲಾಗದಂತ ಗುರುತು ಬಿಡುವಂತೆ, ನಾವು ಮಾಡುವುದಕ್ಕಿಂತ ಹಾಗೇ ನಡೆದುಕೊಳ್ಳುವುದಕ್ಕೆ ಆದ್ಯತೆ ನೀಡಬೇಕು ಎಂಬುದನ್ನು ನೆನಪಿನಲ್ಲಿಡೋಣ. ನಾವು ನಮ್ಮ ಚಾರಿತ್ರ್ಯವನ್ನು ಗುಣೀಕರಿಸಿಕೊಳ್ಳುವಾಗ, ನಾವು ಸಮಾನ ಮನಸ್ಸಿನ ವ್ಯಕ್ತಿಗಳನ್ನು ಆಕರ್ಶಿಸುವ ಆಯಸ್ಕಾಂತಗಳಾಗುತ್ತೇವೆ. 

ಜನರು ಸತ್ಯಾಸತ್ಯತೆಗೆ, ಅವರ ಮಾತುಗಳು ಅವರ ಕಾರ್ಯಗಳಿಗೆ ಹೊಂದಿಕೆಯಾಗಿ, ಅವರ ಭರವಸೆಗಳನ್ನು ಉಳಿಸಿಕೊಂಡು ಅವರ ಜೀವನವು ಕ್ರಿಸ್ತನ ಪ್ರೀತಿ ಮತ್ತು ಕೃಪೆಯನ್ನು ಹೊರಹಾಕುತ್ತದೆ. .

"ಹೀಗಿರಲಾಗಿ ದೇವರಿಂದ ಆರಿಸಿಕೊಂಡವರಾಗಿ, ಪರಿಶುದ್ಧರೂ ಹಾಗೂ ಪ್ರಿಯರೂ ಆಗಿರುವುದರಿಂದ ಕನಿಕರ, ದಯೆ, ದೀನತೆ, ಸಾತ್ವಿಕತ್ವ ಮತ್ತು ಸಹನೆ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ." (ಕೊಲೊಸ್ಸೆಯವರಿಗೆ 3:12) 
ಜನರು ವರ್ಚಸ್ಸಿಗಿಂತ ಚಾರಿತ್ರ್ಯವನ್ನು, ಶೈಲಿಗಿಂತ ಸಾರವನ್ನು ಮತ್ತು ಪ್ರಭಾವಕ್ಕಿಂತ ಸಮಗ್ರತೆಯನ್ನು ಗೌರವಿಸುವ ಜಗತ್ತನ್ನು ಕಲ್ಪಿಸಿಕೊಳ್ಳಿ. ಕ್ರಿಸ್ತನ ಬೆಳಕನ್ನು ಹೊತ್ತವರಾಗಿ, ನಮಗೆ ಮಾದರಿಯ ಮೂಲಕ ಮುನ್ನಡೆಸುವ ಸವಲತ್ತು ಮತ್ತು ಜವಾಬ್ದಾರಿ ಇದೆ. ನಮ್ಮ ಜೀವನವು ದೇವರು ನಮಗೆ ನೀಡಿರುವ ಪ್ರತಿಭೆಗಳಿಗೆ ಸಾಕ್ಷಿಗಳಾಗಿರದೇ, ಆತನು ನಮ್ಮೊಳಗೆ ನಿರ್ಮಿಸಿರುವ ಚಾರಿತ್ರ್ಯಕ್ಕೆ ಸಾಕ್ಷಿಗಳಾಗಲಿ. 

Bible Reading: John 2-4
ಪ್ರಾರ್ಥನೆಗಳು
ತಂದೆಯೇ, ಪ್ರತಿಭೆಗಿಂತ ಚಾರಿತ್ರ್ಯಕ್ಕೆ ಆದ್ಯತೆ ನೀಡುವ ಜ್ಞಾನವನ್ನು ನಮಗೆ ನೀಡು. ನಮ್ಮ ಜೀವನವು ನಿಮ್ಮ ಹೃದಯವನ್ನು ಪ್ರತಿಬಿಂಬಿಸಿ, ಇತರರನ್ನು ನಿಮ್ಮ ಕೃಪೆಎಡೆಗೆ ಕರೆತರುವಂತಾಗಲಿ. ಆಯ್ಕೆಯ ಸಂಧಿಗ್ದ  ಕ್ಷಣಗಳಲ್ಲಿ ನಮ್ಮನ್ನು ಬಲಪಡಿಸಿ ಆಗ ನಮ್ಮ ಪರಂಪರೆಯು ಶಾಶ್ವತ ಸಮಗ್ರತೆಯಾಗಿರಬಹುದು. ಆಮೆನ್.

Join our WhatsApp Channel


Most Read
● ಕುಟುಂಬಕ್ಕಾಗಿ ಇರುವ ಗುಣಮಟ್ಟದ ಸಮಯ
● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - II
● ಬೀಜದ ಕುರಿತ ಒಂದು ಆಘಾತಕಾರಿ ಸತ್ಯ.
● ಪವಿತ್ರಾತ್ಮನಿಗಿರುವ ಹೆಸರುಗಳು ಮತ್ತು ಬಿರುದುಗಳು
● ಕರ್ತನಿಗೆ ಮೊರೆಯಿಡಿರಿ.
● ಸ್ವಸ್ಥ ಬೋಧನೆಯ ಪ್ರಾಮುಖ್ಯತೆ
● ಚಿಂತೆಯಿಂದ ಹೊರಬರಲು ಈ ಸಂಗತಿಗಳ ಕುರಿತು ಯೋಚಿಸಿ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್