ಶತ್ರುವು ಕ್ರೈಸ್ತರ ವಿರುದ್ಧ ಬಳಸುವ ಅತ್ಯಂತ ಸೂಕ್ಷ್ಮ ಆದರೆ ವಿನಾಶಕಾರಿ ಆಯುಧಗಳಲ್ಲಿ ತೊಡಕುಗಳು ಸಹ ಒಂದು. ತೊಡಕು ತನ್ನನ್ನು ತಾನು ಬಹಿರಂಗವಾಗಿ ಘೋಷಿಸಿಕೊಳ್ಳುವುದು ಬಹಳ ವಿರಳ.ಆದರೆ ಅದಕ್ಕೆ ಬದಲಾಗಿ, ನೋವು, ತಪ್ಪು ತಿಳುವಳಿಕೆ, ನಿರೀಕ್ಷೆಗಳನ್ನು ಪೂರೈಸದಿರುವುದು ಅಥವಾ ಅನ್ಯಾಯವೆಂದು ಗ್ರಹಿಸಿದ ಸಂಗತಿಗಳ ಮೂಲಕ ಅದು ಸದ್ದಿಲ್ಲದೆ ಹೃದಯಕ್ಕೆ ಜಾರಿಕೊಳ್ಳುತ್ತದೆ.
“ನಿನ್ನ ಧರ್ಮಶಾಸ್ತ್ರವನ್ನು ಪ್ರೀತಿಸುವವರಿಗೆ ಸಂಪೂರ್ಣ ಸಮಾಧಾನವಿರುತ್ತದೆ; ಅಂಥವರಿಗೆ ವಿಘ್ನಕರವಾದದ್ದೇನೂ ಇರುವದಿಲ್ಲ.” (ಕೀರ್ತನೆ 119:165)
ಎಂದು ದೇವರವಾಕ್ಯವು ನಮಗೆ ಸ್ಪಷ್ಟವಾಗಿ ಎಚ್ಚರಿಸುತ್ತದೆ.
ಇಲ್ಲಿ ವಿಘ್ನಕರವಾದದ್ದು ಎಂಬ ಪದವು ಒಂದು ಗುಪ್ತ ಬಲೆ ಅಂದರೆ ಪ್ರಗತಿಯನ್ನು ತಡೆಯುವ ಹಾದಿಯಲ್ಲಿ ಇರಿಸಲಾದ ಯಾವುದೋ ಒಂದು ಬಲೆ ಎಂದರ್ಥವಾಗಿದೆ. ನಮ್ಮನ್ನು ನೋಯಿಸಲು ಮಾತ್ರವಲ್ಲ, ನಮ್ಮನ್ನು ತಡೆಯಲು ವಿನ್ಯಾಸಗೊಳಿಸಲಾದ ಬಲೆಯೇ ತೊಡಕುಗಳು.
ತೊಡಕು ಅನಿವಾರ್ಯ, ಆದರೆ ಸೆರೆವಾಸ ಐಚ್ಛಿಕ
ಕರ್ತನಾದ ಯೇಸು ತೊಡಕು ಮುಕ್ತ ಜೀವನವು ನಿಮಗಿರುತ್ತದೆ ಎಂದು ಎಂದಿಗೂ ಭರವಸೆ ನೀಡಲಿಲ್ಲ. ವಾಸ್ತವವಾಗಿ, ಆತನು ಹೇಳಿದ್ದೇನೆಂದರೆ:
“ಆತನು ತನ್ನ ಶಿಷ್ಯರಿಗೆ - ತೊಡಕುಗಳು ಬಾರದೆ ಇರಲಾರವು; ಆದರೂ ಅವು ಯಾವನಿಂದ ಬರುತ್ತವೆಯೋ ಅವನ ಗತಿಯನ್ನು ಏನು ಹೇಳಲಿ? ” (ಲೂಕ 17:1).
ಸಮಸ್ಯೆಯೆಂದರೆ ತೊಡಕು ಬರುತ್ತದೆ ಎಂಬುದು ಅಲ್ಲ, ಆದರೆ ಅದು ಬಂದಾಗ ನಾವು ಏನು ಮಾಡುತ್ತೇವೆ ಎಂಬುದು.
ತೊಡಕು ಅಪಾಯಕಾರಿಯಾಗುವುದು ಅದು ಸಂಭವಿಸಿದಾಗ ಅಲ್ಲ, ಆದರೆ ಅದರಲ್ಲೇ ಮುಳುಗಿದಾಗ. ಸವಾಲು ಇಲ್ಲದೆ ಹೃದಯವನ್ನು ಪ್ರವೇಶಿಸುವುದು ಶೀಘ್ರದಲ್ಲೇ ಮನಸ್ಸನ್ನು ರೂಪಿಸುತ್ತದೆ ಮತ್ತು ಮನಸ್ಸನ್ನು ರೂಪಿಸುವಂತದ್ದು ಅಂತಿಮವಾಗಿ ನಿರ್ಧಾರಗಳನ್ನು ನಿಯಂತ್ರಿಸುತ್ತದೆ.
"ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು. ಜ್ಞಾನೋಕ್ತಿಗಳು ನಮಗೆ ಎಚ್ಚರಿಕೆ ನೀಡುತ್ತದೆ."(ಜ್ಞಾನೋಕ್ತಿ 4:23).
ನೊಂದ ಹೃದಯವು ನಿಧಾನವಾಗಿ ಸಂತೋಷ, ಸ್ಪಷ್ಟತೆ, ವಿವೇಚನೆ ಮತ್ತು ಶಾಂತಿಯನ್ನು ಕದಡುತ್ತದೆ.
ಅನೇಕ ಕ್ರೈಸ್ತರು ಮೊದಲು ಬೇಸರಗೊಳ್ಳಲು ಪ್ರಾರಂಭಿಸಿ ಕೊನೆಯಲ್ಲಿ ಕಠಿಣರಾಗುತ್ತಾರೆ. ಇಬ್ರಿಯರಿಗೆ ಬರೆದ ಪತ್ರವು ಈ ಪ್ರಕ್ರಿಯೆ ಬಗ್ಗೆ ಗಂಭೀರವಾಗಿ ಮಾತನಾಡುತ್ತದೆ:
“ ಸಹೋದರರೇ, ನೋಡಿಕೊಳ್ಳಿರಿ, ಜೀವಸ್ವರೂಪನಾದ ದೇವರನ್ನು ಬಿಟ್ಟುಹೋಗುವ ಅಪನಂಬಿಕೆಯುಳ್ಳ ಕೆಟ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಇರಬಾರದು. ನಿಮ್ಮಲ್ಲಿ ಒಬ್ಬರಾದರೂ ಪಾಪದಿಂದ ಮೋಸಹೋಗಿ ಕಠಿನರಾಗದಂತೆ ಈಹೊತ್ತು ಎಂಬ ಕಾಲವು ಇರುವ ತನಕ ಪ್ರತಿನಿತ್ಯವೂ ಒಬ್ಬರನ್ನೊಬ್ಬರು ಎಚ್ಚರಿಸಿರಿ." (ಇಬ್ರಿಯ 3:12–13).
ನೊಂದ ಹೃದಯವು ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಮೂಲಕ ಮೋಸಗೊಳಿಸಿಕೊಳ್ಳುತ್ತದೆ. ನಾವು ಹಿಂದೆ ಸರಿಯುವುದು, ಕಠೋರವಾಗಿ ಮಾತನಾಡುವುದು, ಪ್ರತ್ಯೇಕಿಸಿಕೊಳ್ಳುವುದು ಅಥವಾ ಸೇವೆ ಮಾಡುವುದನ್ನು ನಿಲ್ಲಿಸುವುದು ಇವೆಲ್ಲವೂ ಸರಿಯೇ ಎಂದು ಅದು ನಮಗೆ ಮನವರಿಕೆ ಮಾಡಿಕೊಡುತ್ತದೆ.ಇದು ಮನಸ್ಸಿನ ಕೋಪವು ಇನ್ನೂ ವೃದ್ಧಿಸುವ ಪರಿಣಾಮವನ್ನೆ ಬೀರುತ್ತದೆ ಎಂದು ಕರ್ತನಾದ ಯೇಸು ಎಚ್ಚರಿಸಿದ್ದಾನೆ:
"ಆಗ ಅನೇಕರು ಹಿಂಜರಿದು ಒಬ್ಬರನ್ನೊಬ್ಬರು ಹಿಡುಕೊಡುವರು; ಒಬ್ಬರ ಮೇಲೊಬ್ಬರು ದ್ವೇಷ ಮಾಡುವರು. (ಮತ್ತಾಯ 24:10).
ವೈಯಕ್ತಿಕ ಮನಸ್ತಾಪದಿಂದ ಪ್ರಾರಂಭವಾಗುವಂತದ್ದು ಸಂಬಂಧಗಳ ಸ್ಥಗಿತ, ಆತ್ಮೀಕವಾಗಿ ತಣ್ಣಗಾಗುವ ಮತ್ತು ಉದ್ದೇಶದಿಂದ ಬೇರ್ಪಡುವಿಕೆಯಾಗಿ ಕೊನೆಗೊಳ್ಳಬಹುದು.
ಬೇಸರಗೊಳ್ಳದ ಕ್ರಿಸ್ತನು
ಪ್ರವಾದಿಯಾದ ಯೆಶಾಯನು ಯೇಸುವಿನ ಕುರಿತು ಹೀಗೆ ಪ್ರವಾದಿಸಿದನು:
“ಅವನು ಧಿಕ್ಕರಿಸಲ್ಪಟ್ಟವನು, ಮನುಷ್ಯರು ಸೇರಿಸಿಕೊಳ್ಳದವನು, ಸಂಕಷ್ಟಕ್ಕೊಳಗಾದವನು, ವ್ಯಾಧಿಪೀಡಿತನು, ಜನರು ಮುಖವನ್ನು ಓರೆಮಾಡಿಕೊಳ್ಳುವ ಧಿಕ್ಕಾರಕ್ಕೆ ಒಳಗಾದವನೂ ಆಗಿದ್ದನು...... ಅವನು ಬಾಧೆಗೆ ಒಳಗಾಗಿ ತನ್ನನ್ನು ತಗ್ಗಿಸಿಕೊಂಡನು, ಬಾಯಿ ತೆರೆಯಲಿಲ್ಲ; ವಧ್ಯಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆಯೂ ಉಣ್ಣೆ ಕತ್ತರಿಸುವವರ ಮುಂದೆ ಮೌನವಾಗಿರುವ ಕುರಿಯ ಹಾಗೂ ಇದ್ದನು, ಬಾಯಿ ತೆರೆಯಲೇ ಇಲ್ಲ." (ಯೆಶಾಯ 53:3,7).
ಯೇಸು ನಂಬಿಕೆ ದ್ರೋಹ, ತಪ್ಪು ತಿಳುವಳಿಕೆ, ಸುಳ್ಳು ಆರೋಪ ಮತ್ತು ಸ್ವಜನರ ಪರಿತ್ಯಾಗವನ್ನು ಎದುರಿಸಿದನು - ಆದರೂ ಆತನು ಬೇಸರಗೊಳ್ಳುವುದನ್ನು ನಿರಾಕರಿಸಿದನು. ಏಕೆ? ಏಕೆಂದರೆ ಆತನು ಹಾಗೇ ಬೇಸರಗೊಂಡಿದ್ದರೆ ಆ ನೋವು ಆತನನ್ನು ಶಿಲುಬೆಯನ್ನು ಹತ್ತಲು ಬಿಡದೇ ಬೇರೆಡೆಗೆ ತಿರುಗಿಸುತ್ತಿತ್ತು.
"ಆತನು ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದರಿಸದೆ ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು."ಎಂದು ಅಪೊಸ್ತಲನಾದ ಪೇತ್ರನು ನಮಗೆ ನೆನಪಿಸುತ್ತಾನೆ (1 ಪೇತ್ರ 2:23).
ಬೇಸರಗೊಳ್ಳುವುದರಿಂದ ಮುಕ್ತರಾಗುವುದು ದೌರ್ಬಲ್ಯವಲ್ಲ - ಅದು ಆತ್ಮೀಕ ಅಧಿಕಾರ.
ಮನಸ್ತಾಪ ಏಕೆ ತುಂಬಾ ಅಪಾಯಕಾರಿ
ಮನಸ್ತಾಪವು ವಿವೇಚನೆಯನ್ನು ಕುರುಡಾಗಿಸುತ್ತದೆ. ಇದು ಉದ್ದೇಶಗಳನ್ನು ವಿರೂಪಗೊಳಿಸುತ್ತದೆ. ಇದು ಪ್ರೀತಿಯ ಬದಲು ಅನುಮಾನದ ಮೂಲಕ ಸಂಭಾಷಣೆಗಳನ್ನು ಮರು ವ್ಯಾಖ್ಯಾನಿಸುತ್ತದೆ.
"ಮತ್ಸರವೂ ಪಕ್ಷಭೇದವೂ ಇರುವ ಕಡೆ ಗಲಿಬಿಲಿಯೂ ಸಕಲವಿಧ ನೀಚಕೃತ್ಯಗಳೂ ಇರುವವು". ಎಂದು ಅಪೊಸ್ತಲನಾದ ಯಾಕೋಬನು ಎಚ್ಚರಿಸುತ್ತಾನೆ: (ಯಾಕೋಬ 3:16).
ಮನನೊಂದ ವಿಶ್ವಾಸಿಯು ಇನ್ನೂ ಪ್ರಾರ್ಥಿಸುತ್ತಿರಬಹುದು, ಆರಾಧಿಸುತ್ತಿರಬಹುದು ಮತ್ತು ಸೇವೆ ಮಾಡುತ್ತಲು ಇರಬಹುದು - ಆದರೆ ಅದರಲ್ಲಿ ಶಾಂತಿ, ಸಂತೋಷ ಅಥವಾ ಸ್ಪಷ್ಟತೆ ಇರುವುದಿಲ್ಲ. ಆಂತರ್ಯವು ಕಾವಲು ಕಾಯುತ್ತಿರುವಾಗಲೂ ಹೊರಭಾಗವು ಸಕ್ರಿಯವಾಗಿರುತ್ತದೆ.
ಒಂದು ಪ್ರವಾದನಾ ಕರೆ
ಈ ವರ್ಷದ ಆರಂಭದಲ್ಲಿಯೇ ನಿಮ್ಮ ಹೃದಯಗಳನ್ನು ಪರೀಕ್ಷಿಸಿಕೊಳ್ಳಬೇಕೆಂದು ನಾನು ನಿಮ್ಮನ್ನು ಆಹ್ವಾನಿಸುತ್ತೇನೆ. ಅಭ್ಯಾಸಗಳು ರೂಪುಗೊಳ್ಳುವ ಮೊದಲು ಮತ್ತು ಮಾರ್ಗಗಳು ಗಟ್ಟಿಯಾಗುವ ಮೊದಲೇ, ಮೂಲದಲ್ಲಿರುವ ಮನಸ್ತಾಪ ವನ್ನೂ ಸರಿಪಡಿಸಿಕೊಳ್ಳಬೇಕೆಂದು ದೇವರು ನಮ್ಮನ್ನು ಕರೆಯುತ್ತಾನೆ:
“ದೇವಾ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ಗೊತ್ತುಮಾಡು. ನಾನು ಕೇಡಿನ ಮಾರ್ಗದಲ್ಲಿರುತ್ತೇನೋ ಏನೋ ನೋಡಿ ಸನಾತನಮಾರ್ಗದಲ್ಲಿ ನನ್ನನ್ನು ನಡಿಸು."ಎಂದು ದಾವೀದನು ಪ್ರಾರ್ಥಿಸಿದನು (ಕೀರ್ತನೆ 139:23–24).
Bible Reading: Genesis 19-21
ಪ್ರಾರ್ಥನೆಗಳು
ಕರ್ತನೇ, ನನ್ನ ಹೃದಯದಲ್ಲಿರುವ ಪ್ರತಿಯೊಂದು ಮನಸ್ತಾಪದ ಬೀಜವನ್ನು ಬಯಲು ಮಾಡು. ನನ್ನನ್ನು ಗಾಯಗೊಳಿಸಿರುವುದನ್ನು ಗುಣಪಡಿಸು, ಕಠಿಣವಾಗಿರುವುದನ್ನು ಮೃದುಗೊಳಿಸು ಮತ್ತು ನಾನು ನಿನ್ನೊಂದಿಗೆ ನಡೆಯುವಾಗ ನನ್ನ ಹೃದಯವನ್ನು ಕಾಪಾಡು. ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸುತ್ತೇನೆ. ಆಮೆನ್!
Join our WhatsApp Channel
Most Read
● ದಿನ 35:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ಯಜಮಾನನ ಬಯಕೆ
● ಕರ್ತನು ಎಂದಿಗೂ ಕೈ ಬಿಡುವುದಿಲ್ಲ
● ಆತ್ಮನ ಫಲವನ್ನು ಹೇಗೆ ಬೆಳೆಸಿಕೊಳ್ಳುವುದು -2
● ಕ್ರಿಸ್ತ ಕೇಂದ್ರಿತ ಮನೆಯನ್ನು ನಿರ್ಮಿಸುವುದು.
● ದಿನ 09 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಮಧ್ಯಸ್ಥಿಕೆಯ ಕುರಿತ ಪ್ರವಾದನಾ ಪಾಠ - 2
ಅನಿಸಿಕೆಗಳು
