ಅನುದಿನದ ಮನ್ನಾ
1
1
37
ಮನಸ್ತಾಪವು ಆತ್ಮೀಕ ಬಂಧನಕ್ಕೆ ಬಾಗಿಲು ತೆರೆದುಕೊಡುತ್ತದೆ
Wednesday, 7th of January 2026
ಮನಸ್ತಾಪವು ಎಂದಿಗೂ ಸಣ್ಣದಾಗಿ ಉಳಿದುಕೊಳ್ಳಲು ಉದ್ದೇಶಿಸುವುದಿಲ್ಲ. ನೋವಿನ ಕ್ಷಣವಾಗಿ ಪ್ರಾರಂಭವಾಗಿ,ಅದನ್ನು ಪರಿಹರಿಸದೆ ಬಿಟ್ಟರೆ, ಸದ್ದಿಲ್ಲದೆ ಆತ್ಮೀಕ ಬಂಧನಕ್ಕೆ ದ್ವಾರವಾಗಬಹುದು.
ಆಂತರಿಕ ಗಾಯಗಳನ್ನು ಹಾಗೇ ಬಿಟ್ಟಾಗ ಅವು ಬಾಹ್ಯವಾಗಿ ಜಗಳವಾಡುವ ಸ್ಥಿತಿಯನ್ನು ಆಹ್ವಾನಿಸಬಹುದು ಎಂದು ಧರ್ಮಗ್ರಂಥವು ನಮಗೆ ಎಚ್ಚರಿಸುತ್ತದೆ.
"ಸೈತಾನನಿಗೆ ಸ್ಥಳವಕಾಶ ಕೊಡಬೇಡಿ" ಎಂದು ಅಪೊಸ್ತಲ ಪೌಲನು ನೇರ ಸೂಚನೆಯನ್ನು ನೀಡುತ್ತಾನೆ (ಎಫೆಸ 4:27).
ಸ್ಥಳ ಎಂಬ ಪದವು ಸ್ವಇಚ್ಛೆಯಿಂದ ಅಥವಾ ತಿಳಿಯದೆ ಶರಣಾಗಿಸುವ ಪ್ರದೇಶವನ್ನು ಸೂಚಿಸುತ್ತದೆ. ಅದು ವಿಶ್ವಾಸಿಗಳು ನೀಡುವ ಸಾಮಾನ್ಯವಾಗಿ ಕೊಯ್ಯುವ ಒಂದು ಬೆಳೆ ಎಂದರೆ ಕ್ಷಮಿಸಲಾಗದಂತ ಮನಸ್ಸಿಗಾದ ನೋವುಗಳು.
ಗಾಯದಿಂದ ಭದ್ರಕೋಟೆಗೆ
ಗಾಯವು ಒಂದು ನೋವು; ಕೋಟೆಎಂಬುದು ಒಂದು ಭದ್ರ ಸ್ಥಾನವಾಗಿದೆ. ಮನಸ್ತಾಪವು ಗುಣವಾಗದಿದ್ದಾಗ, ಅದು ಅಸಮಾಧಾನ, ಕಹಿತನ, ಹಿಂದೆ ಸರಿಯುವಿಕೆ, ಕೋಪ ಅಥವಾ
ಅಪನಂಬಿಕೆ ಎಂಬ ಆಲೋಚನಾ ಮಾದರಿಯಾಗಿ ಗಟ್ಟಿಯಾಗಿ ನೆಲೆಗೊಳ್ಳುತ್ತಾ ಹೋಗುತ್ತದೆ.
" ನಾವು ಉಪಯೋಗಿಸುವ ಆಯುಧಗಳು ಲೋಕಸಂಬಂಧವಾದ ಆಯುಧಗಳಲ್ಲ; ಅವು ದೇವರ ಎಣಿಕೆಯಲ್ಲಿ ಬಲವಾಗಿದ್ದು ಕೋಟೆಗಳನ್ನು ಕೆಡವಿಹಾಕುವಂಥವುಗಳಾಗಿವೆ.ನಾವು ವಿತರ್ಕಗಳನ್ನೂ ದೇವಜ್ಞಾನವನ್ನು ವಿರೋಧಿಸುವದಕ್ಕೆ ಏರಿಸಲ್ಪಟ್ಟಿರುವ ಉನ್ನತವಾದ ಎಲ್ಲಾ ಕೊತ್ತಲಗಳನ್ನೂ ಕೆಡವಿಹಾಕಿ ಎಲ್ಲಾ ಯೋಚನೆಗಳನ್ನು ಕ್ರಿಸ್ತನಿಗೆ ವಿಧೇಯವಾಗುವಂತೆ ಸೆರೆಹಿಡಿಯುವಂತದ್ದು... ಎಂದು ಅಪೊಸ್ತಲ ಪೌಲನು ವಿವರಿಸುತ್ತಾನೆ (2 ಕೊರಿಂಥ 10:4–5).
ಭದ್ರ ಕೋಟೆಗಳು ಪುನರಾವರ್ತಿತ ಆಲೋಚನೆಗಳಿಂದ ನಿರ್ಮಿಸಲ್ಪಟ್ಟಿರುತ್ತವೆ. ಮನಸ್ತಾಪವು ಆ ಆಲೋಚನೆಗಳಿಗೆ ಭಾವನಾತ್ಮಕ ಇಂಧನವನ್ನು ಪೂರೈಸುತ್ತಾ, ದೇವರಿಗೆ ಉದ್ದೇಶಪೂರ್ವಕ ಶರಣಾಗದೆ ಹೋದರೆ ಅವುಗಳನ್ನು ಕೆಡವಲು ಕಷ್ಟವಾಗುತ್ತದೆ.
ಕ್ಷಮಿಸದಿರುವಿಕೆಯ ಕುರಿತ ಎಚ್ಚರಿಕೆ
ಕರ್ತನಾದ ಯೇಸು ತನ್ನ ಅತ್ಯಂತ ಗಂಭೀರವಾದ ಬೋಧನೆಗಳಲ್ಲಿ ಒಂದು ಬೋಧನೆಯಾಗಿ ಕ್ಷಮಿಸದ ಸೇವಕನ ಸಾಮ್ಯವನ್ನು ಕೊಟ್ಟನು(ಮತ್ತಾಯ 18:21–35). ಅಪಾರ ಸಾಲವನ್ನು ಮನ್ನ ಮಾಡಿಸಿಕೊಂಡ ಸೇವಕನು ಸಣ್ಣ ಸಾಲವನ್ನು ಮನ್ನಿಸಲು ನಿರಾಕರಿಸಿದನು. ಅದರ ಫಲಿತಾಂಶವು ತೀವ್ರವಾಗಿತ್ತು:
"ಯಜಮಾನನು ತನಗೆ ಕೊಡಬೇಕಾದ ಸಾಲವನ್ನು ತೀರಿಸುವ ತನಕ ಪೀಡಿಸುವವರ ಕೈಗೆ ಅವನನ್ನು ಒಪ್ಪಿಸಿದನು.(ಮತ್ತಾಯ 18:34).
ಈ ವಾಕ್ಯವೃಂದವು ಆತ್ಮೀಕ ವಾಸ್ತವವನ್ನು ಬಹಿರಂಗಪಡಿಸುತ್ತದೆ: ಕ್ಷಮಿಸದಿರುವುದು ವಿಶ್ವಾಸಿಗಳನ್ನು ಹಿಂಸೆಗೆ ಒಳಪಡಿಸುತ್ತದೆ - ದೇವರು ಹಾಗೇ ಮಾಡಬೇಕೆಂಬುದಾಗಿ ಬಯಸುತ್ತಾನೆ ಎಂಬ ಕಾರಣಕ್ಕಾಗಿ ಅಲ್ಲ, ಆದರೆ ಮನಸ್ತಾಪವು ಆತ್ಮೀಕ ರಕ್ಷಣೆಯನ್ನು ತೆಗೆದುಹಾಕುತ್ತದೆ ಎಂಬ ಕಾರಣದಿಂದಾಗಿ.
ಯೇಸು ನಂತರ ”ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಸಹೋದರನಿಗೆ ಮನಃಪೂರ್ವಕವಾಗಿ ಕ್ಷವಿುಸದೆಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು" ಎಂಬುದಾಗಿ ತೀರ್ಪು ಕೊಟ್ಟನು(ವಚನ 35).
ಬಂಧನವು ಸ್ಥಾನಮಾನದ ಮೇಲೆ ಅಲ್ಲ, ಶಾಂತಿಯ ಮೇಲೆ ಪರಿಣಾಮ ಬೀರುತ್ತದೆ
ಮನಸ್ತಾಪವು ರಕ್ಷಣೆಯನ್ನು ತೆಗೆದುಹಾಕುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ - ಆದರೆ ಅದು ಶಾಂತಿ, ಸಂತೋಷ, ಸ್ಪಷ್ಟತೆ ಮತ್ತು ಅಧಿಕಾರವನ್ನು ಕಸಿದುಕೊಳ್ಳುತ್ತದೆ. ವಿಶ್ವಾಸಿಯು ಇನ್ನೂ ದೇವರನ್ನು ಪ್ರೀತಿಸಬಹುದು, ಆದರೆ ಆತಂಕ, ಭಾರ ಅಥವಾ ನಿರಂತರ ಆಂತರಿಕ ಅಶಾಂತಿಯಿಂದ ಭಾರವಾಗಿ ಬದುಕಬಹುದು.
"ಸ್ಥಿರಚಿತ್ತನನ್ನು ಶಾಂತಿಯಲ್ಲಿ ನೆಲೆಗೊಳಿಸಿ ಕಾಯುವಿ; ಅವನಿಗೆ ನಿನ್ನಲ್ಲಿ ಭರವಸವಿದೆ." ಎಂದು ಪ್ರವಾದಿಯಾದ ಯೆಶಾಯನು ಬರೆಯುತ್ತಾನೆ. (ಯೆಶಾಯ 26:3).
ಮನಸ್ತಾಪವು ಮನಸ್ಸನ್ನು ದೇವರಿಂದ ನೋವಿನ ಕಡೆಗೆ, ವಿಶ್ವಾಸದಿಂದ ಆತ್ಮರಕ್ಷಣೆ ಕಡೆಗೆ ಬದಲಾಯಿಸುತ್ತದೆ. ಹೃದಯವು ಜ್ಞಾನದಿಂದಲ್ಲ, ಭಯದಿಂದ ರಕ್ಷಿಸಲ್ಪಡುತ್ತದೆ.
ಯೋಸೇಫನು ಬೇಸರ ಗೊಳ್ಳಲು ಬೇಕಾದ ಎಲ್ಲಾ ಕಾರಣಗಳನ್ನು ಹೊಂದಿದ್ದನು - ಸಹೋದರರಿಂದ ದ್ರೋಹಕ್ಕೊಳಗಾದನು, ಸುಳ್ಳು ಆರೋಪ ಹೊರಿಸಲ್ಪಟ್ಟವನಾದನು, ಜೈಲಿನಲ್ಲಿ ಬಿಡಲ್ಪಟ್ಟು ಮರೆಯಲ್ಪಟ್ಟನು.
ಆದರೂ ದೇವರವಾಕ್ಯವು ಅವನ ಹೃದಯದಲ್ಲಿ ಯಾವುದೇ ಕಹಿಯನ್ನು ದಾಖಲಿಸುವುದಿಲ್ಲ. ತನ್ನ ಸಹೋದರರನ್ನು ಎದುರುಗೊಂಡಾಗ,
"ನೀವಂತೂ ನನಗೆ ಕೇಡಾಗಬೇಕೆಂದು ಎಣಿಸಿದ್ದಿರಿ; ಆದರೆ ದೇವರು ಮೇಲಾಗಬೇಕೆಂದು ಸಂಕಲ್ಪಿಸಿದನು. ಈಗ ಅನುಭವಕ್ಕೆ ಬಂದ ಪ್ರಕಾರವೇ ಅನೇಕ ಪ್ರಾಣಿಗಳಿಗೆ ಸಂರಕ್ಷಣೆಯುಂಟಾಗುವಂತೆ ಮಾಡಿದನು." ಘೋಷಿಸಿದನು(ಆದಿಕಾಂಡ 50:20).
ಮನಸ್ತಾಪವನ್ನು ಇಟ್ಟುಕೊಳ್ಳಲು ಯೋಸೆಪನು ನಿರಾಕರಿಸಿದ್ದು ಅವನ ಸ್ವಾತಂತ್ರ್ಯವನ್ನು ಕಾಪಾಡಿ ಅವನನ್ನು ಉನ್ನತ ಸ್ಥಾನಕ್ಕೇರಿಸಿತು.
ಕಾರ್ಯೋನ್ಮುಖವಾಗಲು ಇಂದು ಒಂದು ಕರೆ.
ನಿಮಗೆ ನೋವುಂಟುಮಾಡಿದ್ದನ್ನು ಮಾತ್ರವಲ್ಲ - ನೀವು ಏನನ್ನು ಮನಸ್ಸಿನಲ್ಲಿ ಹಿಡಿದಿಟ್ಟುಕೊಂಡಿದ್ದೀರಿ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಮನಸ್ತಾಪವನ್ನು ಪದೇ ಪದೇ ಮೆಲುಕು ಹಾಕುವುದರಲ್ಲಿ ಸ್ವಾತಂತ್ರ್ಯ ಕಂಡುಬರುವುದಿಲ್ಲ, ಆದರೆ ಅದನ್ನು ದೇವರಿಗೆ ಬಿಟ್ಟು ಕೊಡುವುದರಲ್ಲಿ ಅದು ಕಂಡುಬರುತ್ತದೆ.
"ದೇವರೇ, ನನ್ನಲ್ಲಿ ಶುದ್ಧಹೃದಯವನ್ನು ನಿರ್ಮಿಸು; ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನ ಪಡಿಸು".ಎಂದು ದಾವೀದನು ಪ್ರಾರ್ಥಿಸಿದನು (ಕೀರ್ತನೆ 51:10).
Bible Reading: Genesis 22-24
ಪ್ರಾರ್ಥನೆಗಳು
ಕರ್ತನೇ, ನಾನು ಹೊತ್ತಿರುವ ಪ್ರತಿಯೊಂದು ಮನಸ್ತಾಪದ ಹೊರೆಯನ್ನು ಯೇಸುನಾಮದಲ್ಲಿ ನಾನು ಬಿಟ್ಟುಕೊಡುತ್ತೇನೆ. ಮನಸ್ತಾಪವು ತೆರೆದಿರುವ ಪ್ರತಿಯೊಂದು ಬಾಗಿಲನ್ನು ನಾನು ಯೇಸುನಾಮದಲ್ಲಿ ಮುಚ್ಚುತ್ತೇನೆ. ನನ್ನ ಹೃದಯದಲ್ಲಿ ಶಾಂತಿ, ಸ್ವಾತಂತ್ರ್ಯ ಮತ್ತು ಸಂಪೂರ್ಣತೆಯನ್ನು ಯೇಸುನಾಮದಲ್ಲಿ ಪುನಃಸ್ಥಾಪಿಸಿ. ಆಮೆನ್!
Join our WhatsApp Channel
Most Read
● ನೀವು ಒಂಟಿತನದ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದೀರಾ?● ತಡೆಗಳನ್ನೊಡ್ಡುವ ಗೋಡೆ
● ಆತ್ಮವಂಚನೆ ಎಂದರೇನು? -I
● ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಂಥದ್ದು ಆಂತರಿಕ ಸ್ವಸ್ಥತೆಯನ್ನು ತರುತ್ತದೆ.
● ಧೈರ್ಯವಾಗಿರಿ.!
● ವಿವೇಚನೆ v/s ತೀರ್ಪು
● ದಿನ 30:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
ಅನಿಸಿಕೆಗಳು
