ಐಶ್ವರ್ಯವಂತನಾದ ಯೌವ್ವನಸ್ಥನು ದುಃಖದಿಂದ ಹೊರಟು ಹೋಗುವುದನ್ನು ನೋಡಿದ ನಂತರ, ಶಿಷ್ಯರು ತೀವ್ರವಾಗಿ ಆ ವಿಚಾರದ ಕುರಿತು ಪ್ರಭಾವಿತರಾದರು. ಯೇಸುವನ್ನು ಹಿಂಬಾಲಿಸಲು ಒಬ್ಬರು ಸಂಪತ್ತನ್ನು ತ್ಯಜಿಸುವುದು ಎಷ್ಟು ಕಷ್ಟಕರ ಎಂಬುದನ್ನು ಅವರು ನೋಡಿದ್ದರು. ಸ್ವಾಭಾವಿಕವಾಗಿ, ಇದು ಅವರ ಮನಸ್ಸಿನಲ್ಲಿ ಹಾಗಾದರೆ ನಮ್ಮ ಕಥೆ ಏನು? ನಿಜವಾಗಿಯೂ ಆತನಿಗಾಗಿ ಎಲ್ಲವನ್ನೂ ತೊರೆದು ಬಂದವರಿಗೆ ಏನಾಗುತ್ತದೆ? ಎನ್ನುವ ಒಂದು ಪ್ರಮುಖ ಪ್ರಶ್ನೆಯನ್ನು ಹುಟ್ಟುಹಾಕಿತು.
ಪೇತ್ರನು ಹಾಗೆ ಮಾತಾನಾಡುತ್ತಾ, ಗುಂಪಿನ ಪರವಾಗಿ ಮಾತನಾಡಿ ಅವನು ಯೇಸುವಿಗೆ
"ನೋಡು, ನಾವು ಎಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ."ಎಂದು ಹೇಳಿದನು (ಲೂಕ 18:28 - NKJV)
ಪೇತ್ರನು ಅದರ ಕುರಿತು ಹೆಮ್ಮೆಪಡುತ್ತಿರಲಿಲ್ಲ. ಅವನು ಪ್ರಾಮಾಣಿಕನಾಗಿದ್ದನು. ಆ ಎಲ್ಲಾ ಶಿಷ್ಯರು ತಮ್ಮ ಮನೆಗಳು, ಕುಟುಂಬಗಳು, ಮೀನುಗಾರಿಕೆ ವ್ಯವಹಾರಗಳು, ದೈನಂದಿನ ಆದಾಯ ಮತ್ತು ವೈಯಕ್ತಿಕ ಭದ್ರತೆಯನ್ನು ತೊರೆದು ಯೇಸುವನ್ನು ಹಿಂಬಾಲಿಸಿದರು. ಇದೇನು ಸಣ್ಣ ತ್ಯಾಗವಲ್ಲ.
ದೇವರ ದೃಷ್ಟಿಯಲ್ಲಿ ಅಂತಹ ದುಬಾರಿ ವಿಧೇಯತೆಗೆ ಅರ್ಥ ಮತ್ತು ಮೌಲ್ಯವಿದೆಯೇ ಎಂದು ಪೇತ್ರನು ತಿಳಿಯಲು ಬಯಸಿದನು. ಕರ್ತನಾದ ಯೇಸು ಆಳವಾದ ಭರವಸೆ ಮತ್ತು ಪ್ರೋತ್ಸಾಹದೊಂದಿಗೆ ಉತ್ತರಿಸುತ್ತಾ:
“ ಆತನು ಅವರಿಗೆ - ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನು ದೇವರ ರಾಜ್ಯದ ನಿವಿುತ್ತ ಮನೆಯನ್ನಾಗಲಿ ಹೆಂಡತಿಯನ್ನಾಗಲಿ ಅಣ್ಣತಮ್ಮಂದಿರನ್ನಾಗಲಿ ತಂದೆತಾಯಿಗಳನ್ನಾಗಲಿ ಮಕ್ಕಳನ್ನಾಗಲಿ ಬಿಟ್ಟುಬಿಟ್ಟಿರುವನೋ ಅವನಿಗೆ ಈಗಿನ ಕಾಲದಲ್ಲಿ ಅನೇಕ ಪಾಲು ಹೆಚ್ಚಾದವುಗಳು ಸಿಕ್ಕೇ ಸಿಕ್ಕುತ್ತವೆ; ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವದು ಎಂದು ಹೇಳಿದನು.” (ಲೂಕ 18:29–30)
ಯೇಸು ಇಲ್ಲಿ ಘನವಾಗಿ ಸ್ಪಷ್ಟಪಡಿಸಿದ ಒಂದು ವಿಷಯವಿದೆ. ದೇವರು ತನ್ನ ರಾಜ್ಯಕ್ಕಾಗಿ ಮಾಡಿದ ತ್ಯಾಗವನ್ನು ಎಂದಿಗೂ ನಿರ್ಲಕ್ಷಿಸುವುದಿಲ್ಲ. ತನಗಾಗಿ ತ್ಯಜಿಸಿದ ಯಾವುದೇ ಸಂಗತಿಯು ಎಂದಿಗೂ ನಿಜವಾಗಿಯೂ ಕಳೆದುಹೋಗುವುದಿಲ್ಲ. ಲೋಕವು ಹಣ ಅಥವಾ ಸೌಕರ್ಯದಲ್ಲಿ ಮಾತ್ರ ಪ್ರತಿಫಲವನ್ನು ಲೆಕ್ಕ ಹಾಕುತ್ತದೆ, ಆದರೆ ದೇವರು ಹೃದಯವನ್ನೇ ನೋಡುವವನಾಗಿದ್ದು ಅದಕ್ಕಿಂತ ಹೆಚ್ಚಿನ ಮತ್ತು ಆಳವಾದ ಆಶೀರ್ವಾದಗಳೊಂದಿಗೆ ಪ್ರತಿಕ್ರಿಯಿಸುತ್ತಾನೆ.
ಆದಾಗ್ಯೂ, ಪ್ರತಿಫಲವು ಕೇವಲ ಭೌತಿಕವಲ್ಲ ಎಂದು ಯೇಸು ತೋರಿಸುತ್ತಾನೆ. ಆಶೀರ್ವಾದಗಳಲ್ಲಿ ಸಮಾಧಾನ, ಉದ್ದೇಶ, ಆತ್ಮೀಕ ಕುಟುಂಬ ಮತ್ತು ಈ ಜೀವನದಲ್ಲಿ ದೇವರ ಪ್ರಸನ್ನತೆ - ಮತ್ತು ಮುಂಬರುವ ಯುಗದಲ್ಲಿ ಶಾಶ್ವತ ಜೀವನವೂ ಸೇರಿವೆ. ದೇವರರಾಜ್ಯದ ಪ್ರತಿಫಲಗಳು (ವ್ಯವಹಾರ ಒಪ್ಪಂದದಂತೆ),ವಹಿವಾಟಿನದ್ದಲ್ಲ ಆದರೆ ರೂಪಾಂತರ ಪಡಿಸುವಂತದ್ದು. ದೇವರು ಸಂದರ್ಭಗಳನ್ನು ಮಾತ್ರವಲ್ಲದೇ ವ್ಯಕ್ತಿಯನ್ನೇ ಬದಲಾಯಿಸುತ್ತಾನೆ. ಶಿಷ್ಯರು ದೇವರ ಯೋಜನೆಯಲ್ಲಿ ಬಹಳ ವಿಶೇಷ ಪಾತ್ರವನ್ನು ವಹಿಸಿದರು.
ಅವರ ವಿಧೇಯತೆ ಮತ್ತು ತ್ಯಾಗವು ಆದಿ ಸಭೆಗೆ ಅಡಿಪಾಯವನ್ನು ಹಾಕಿತು. ಧರ್ಮಗ್ರಂಥವು ಈ ಗೌರವವನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ:
“ಅಪೊಸ್ತಲರೂ ಪ್ರವಾದಿಗಳೂ ಎಂಬ ಅಸ್ತಿವಾರದ ಮೇಲೆ ನೀವು ಮಂದಿರದೋಪಾದಿಯಲ್ಲಿ ಕಟ್ಟಲ್ಪಟ್ಟಿದ್ದೀರಿ.” (ಎಫೆಸ 2:20)
ಚರ್ಚ್ ಅಪೊಸ್ತಲರ ಬೋಧನೆಗಳು ಮತ್ತು ಸಾಕ್ಷಿಯ ಮೇಲೆ ನಿರ್ಮಿಸಲ್ಪಟ್ಟಿದ್ದು, ಯೇಸು ಎಲ್ಲದರ ಕೇಂದ್ರಬಿಂದು ಮತ್ತು ಆಧಾರವಾಗಿದ್ದಾನೆ ಎಂಬುದು ಇದರರ್ಥ.
ಪ್ರಕಟನೆ ಪುಸ್ತಕವು ಅವರಿಗೆ ನೀಡಲಾದ ನಿತ್ಯವಾದ ಪ್ರತಿಫಲವನ್ನು ಪ್ರಕಟಿಸುತ್ತದೆ:
“ಪಟ್ಟಣದ ಪ್ರಾಕಾರಕ್ಕೆ ಹನ್ನೆರಡು ಅಸ್ತಿವಾರಗಳಿದ್ದವು; ಅವುಗಳ ಮೇಲೆ ಯಜ್ಞದ ಕುರಿಯಾದಾತನ ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳಿದ್ದವು.(ಪ್ರಕಟನೆ 21:14)
ಈ ವಚನಗಳು ಭೂಮಿಯ ಮೇಲಿನ ಅವರ ಅನಿತ್ಯವಾದ ಸಂಗತಿಗಳ ತ್ಯಾಗಗಳು ಪರಲೋಕದಲ್ಲಿ ನಿತ್ಯವಾದ ಗೌರವಕ್ಕೆ ಕಾರಣವಾಯಿತು ಎಂಬುದನ್ನು ನಮಗೆ ತೋರಿಸುತ್ತವೆ.
ದೇವರು ತನಗೆ ನಂಬಿಗಸ್ತರಾಗಿರುವವರನ್ನು ಎಂದಿಗೂ ಮರೆಯುವುದಿಲ್ಲ. ದೇವರ ರಾಜ್ಯವು ಲೋಕದ ವ್ಯವಸ್ಥೆಗಿಂತ ಬಹಳ ಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಲೋಕದಲ್ಲಿ, ಭದ್ರವಾಗಿ ಹಿಡಿದಿಟ್ಟುಕೊಳ್ಳುವುದನ್ನು ಜ್ಞಾನ ಎಂದು ನೋಡಲಾಗುತ್ತದೆ. ಆದರೆ ದೇವರ ರಾಜ್ಯದಲ್ಲಿ, ಕೊಡುವುದು ಮತ್ತು ಸೇವೆ ಮಾಡುವುದೇ ನಿಜವಾದ ಸಂಪತ್ತಿಗೆ ಕಾರಣವಾಗುತ್ತದೆ.
ಯೇಸು ಸ್ವತಃ ಹೇಳಿದ್ದೇನೆಂದರೆ: “ತೆಗೆದುಕೊಳ್ಳುವುದಕ್ಕಿಂತ ಕೊಡುವುದೇ ಹೆಚ್ಚು ಭಾಗ್ಯ.. ” ಎಂದು(ಅ. ಕೃ 20:35)
ಇದರರ್ಥ ದೇವರು ಜನರು ಕೊರತೆಯಲ್ಲಿ ಬದುಕಬೇಕೆಂದು ಬಯಸುತ್ತಾನೆ ಎಂದಲ್ಲ.ಬದಲಾಗಿ ಹೃದಯವು ಉದಾರವಾಗಿದ್ದಾಗ ಸಂತೋಷ, ಸಮಾಧಾನ ಮತ್ತು ಆಶೀರ್ವಾದ ಹರಿದುಬರುತ್ತದೆ ಎಂದರ್ಥ. ದೇವರ ಆರ್ಥಿಕತೆಯಲ್ಲಿ, ನಷ್ಟದಂತೆ ಕಾಣುವಂತದು ಹೆಚ್ಚಾಗಿ ಲಾಭವಾಗಿರುತ್ತದೆ ಮತ್ತು ಶರಣಾಗತಿಯು ವಿಜಯಕ್ಕೆ ಕಾರಣವಾಗಿರುತ್ತದೆ.
ದಾನ ಮಾಡುವ ಹೃದಯವನ್ನು ಹೊಂದಿರುವುದು ಒಬ್ಬ ವ್ಯಕ್ತಿಯನ್ನು ಹಣವು ನಿಯಂತ್ರಿಸದಂತೆ ರಕ್ಷಿಸುತ್ತದೆ.
"ಹಣದ ಪ್ರೀತಿ ಎಲ್ಲಾ ರೀತಿಯ ದುಷ್ಟತನದ ಮೂಲವಾಗಿದೆ." ಎಂದು ಬೈಬಲ್ ನಮಗೆ ಸ್ಪಷ್ಟವಾಗಿ ಎಚ್ಚರಿಸುತ್ತದೆ: (1 ತಿಮೊಥೆಯ 6:10 )
ಹಣವು ಕೆಟ್ಟದ್ದಲ್ಲ, ಆದರೆ ಹಣದ ಪ್ರೀತಿಯು ಹೃದಯವನ್ನು ಆವರಿಸಿ ಕೊಂಡಾಗ, ಅದು ಜನರನ್ನು ದೇವರಿಂದ ದೂರ ಮಾಡುತ್ತದೆ. ದೇವರೊಂದಿಗೆ ಹೊಂದಿಕೊಂಡ ಹೃದಯವು ಕೂಡಿಸಿಟ್ಟುಕೊಳ್ಳುವುದಕ್ಕಿಂತ ಉದಾರತೆ, ವಿಧೇಯತೆ ಮತ್ತು ನಂಬಿಕೆಯನ್ನು ಹೆಚ್ಚು ಗೌರವಿಸುತ್ತದೆ. ಔದಾರ್ಯದ ಬಗ್ಗೆ ದೇವರ ವಾಗ್ದಾನವು ದೃಢ ಮತ್ತು ವಿಶ್ವಾಸಾರ್ಹವಾಗಿದೆ.
"ಕೊಡಿರಿ, ಅದು ನಿಮಗೆ ಕೊಡಲ್ಪಡುತ್ತದೆ: ಒತ್ತಿ, ಅಲ್ಲಾಡಿಸಿ,ತುಂಬಿ ಚೆಲ್ಲುವಂತೆ ಒಳ್ಳೆಯ ಅಳತೆಯಿಂದ ನಿಮ್ಮ ಮಡಿಲಿಗೆ ಹಾಕಲಾಗುವುದು." (ಲೂಕ 6:38 - ESV)
ಈ ವಚನವು ದೇವರು ಔದಾರ್ಯವನ್ನು ಎಂದಿಗೂ ಮೀರುವುದಿಲ್ಲ ಎಂದು ನಮಗೆ ಬೋದಿಸುತ್ತದೆ. ನಾವು ಸಮಯ, ಸಂಪನ್ಮೂಲಗಳು, ಕ್ಷಮೆ ಅಥವಾ ಪ್ರೀತಿಯನ್ನು ನೀಡಲಿ, ದೇವರು ಅದನ್ನು ಮಾನವ ಲೆಕ್ಕಾಚಾರವನ್ನೇ ಮೀರಿದ ರೀತಿಯಲ್ಲಿ ಗುಣಿಸುತ್ತಾನೆ. ಕೊಡುವ ಜೀವನಶೈಲಿಯಲ್ಲಿ ಬದುಕುವುದು ಎಂದರೆ ಲೌಕಿಕ ಸಂಪತ್ತಿಗಿಂತ ದೇವರ ರಾಜ್ಯದ ಮೌಲ್ಯಗಳನ್ನು ಆರಿಸಿಕೊಳ್ಳುವುದು ಎಂದಾಗಿದೆ. ದೇವರು ನಮ್ಮ ಅಗತ್ಯಗಳನ್ನು ತಿಳಿದಿದ್ದಾನೆ ಮತ್ತು ನಮ್ಮನ್ನು ನೋಡಿಕೊಳ್ಳುತ್ತಾನೆ ಎಂದು ನಂಬುವುದು ಎಂದರ್ಥ.
"ಆದರೆ ಮೊದಲು ದೇವರ ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕಿರಿ, ಆಗ ಇವೆಲ್ಲವೂ ನಿಮಗೆ ಸೇರಿಸಿಕೊಡಲ್ಪಡುವವು."ಎಂದು ಯೇಸು ಭರವಸೆಯನ್ನು ನೀಡಿದನು (ಮತ್ತಾಯ 6:33)
ನಾವು ಈ ರೀತಿ ಬದುಕುವಾಗ, ಯೇಸು ವಾಗ್ದಾನ ಮಾಡಿದ "ಇನ್ನೂ ಅನೇಕ ಪಟ್ಟು ಆಶೀರ್ವಾದಗಳನ್ನು" ಇಲ್ಲಿಯೂ ಪರಲೋಕದಲ್ಲಿಯೂ ಅನುಭವಿಸಲು ನಾವು ನಮ್ಮನ್ನು ಹೊಂದಿಸಿಕೊಳ್ಳುತ್ತೇವೆ.
Bible Reading: Exodus 7-8
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನನ್ನಲ್ಲಿ ನಿಜವಾದ ಉದಾರತೆಯ ಹೃದಯವನ್ನು ಹುಟ್ಟುಹಾಕು. ನಿತ್ಯವಾದ ಸಂಪತ್ತಿನ ನಿಮ್ಮ ವಾಗ್ದಾನದಲ್ಲಿ ನಂಬಿಕೆಯಿಟ್ಟು, ನಿಮ್ಮ ರಾಜ್ಯದಲ್ಲಿ ನನ್ನ ಜೀವನವನ್ನು ಹೂಡಿಕೆಮಾಡಲು ನನಗೆ ಯೇಸುನಾಮದಲ್ಲಿ ಸಹಾಯ ಮಾಡಿ ಆಮೆನ್.
Join our WhatsApp Channel
Most Read
● ನೀವು ದೇವರ ಉದ್ದೇಶಕ್ಕಾಗಿ ನಿಯೋಜಿಸಲ್ಪಟ್ಟಿದ್ದೀರಿ● ದೇವರು ವಿಭಿನ್ನವಾಗಿ ನೋಡುವವನಾಗಿದ್ದಾನೆ.
● ಪ್ರವಾದನಾ ಪೂರಕ ಮಧ್ಯಸ್ಥಿಕೆ ಪ್ರಾರ್ಥನೆ ಎಂದರೇನು?
● ಮನಃಪೂರ್ವಕ ಹುಡುಕಾಟ
● ಯಾರ ಸಂದೇಶವನ್ನು ನೀವು ನಂಬುವಿರಿ?
● ದೇವರ ವಾಕ್ಯವು ನಿಮ್ಮನ್ನು ಬೇಸರಗೊಳಿಸಬಹುದೇ?
● ನಿಮ್ಮ ಕೆಲಸದ ಕುರಿತ ಒಂದು ರಹಸ್ಯ
ಅನಿಸಿಕೆಗಳು
