ಅನುದಿನದ ಮನ್ನಾ
1
1
23
ಪ್ರಕಟಮಾಡದ ಸಾಮರ್ಥ್ಯಗಳು: ವರಗಳನ್ನು ಬಳಕೆಮಾಡದಿರುವಲ್ಲಿರುವ ಅಪಾಯ.
Monday, 26th of January 2026
Categories :
ನಂಬಿಕೆ (Faith)
ಭಯ (Fear)
ಕರ್ತನಾದ ಯೇಸು
ಹಿಂತಿರುಗಿ ಬಂದ ಯಜಮಾನನ ಸೇವಕನ ಕುರಿತು ಹೇಳುತ್ತಾನೆ:
ಬಳಿಕ ಮತ್ತೊಬ್ಬನು ಬಂದು - ದೊರೆಯೇ, ಇಗೋ ನೀನು ಕೊಟ್ಟ ಮೊಹರಿ.. ಇದನ್ನು ವಸ್ತ್ರದಲ್ಲಿ ಕಟ್ಟಿ ಇಟ್ಟುಕೊಂಡೆನು ಅಂದನು.” (ಲೂಕ 19:20-21)
ಈ ಸೇವಕ ಆ ಮೊಹರಿಯನ್ನು ಕದ್ದಿಲ್ಲ. ಅವನು ಅದನ್ನು ಕಳೆದುಕೊಳ್ಳಲೂ ಇಲ್ಲ. ಅವನು ಅದರೊಂದಿಗೆ ಏನನ್ನೂ ಮಾಡಲಿಲ್ಲ. ಮತ್ತು ನಮ್ಮಲ್ಲಿ ಅನೇಕರು ಅದನ್ನು ಅರ್ಥಮಾಡಿಕೊಳ್ಳಬಹುದು.
ಅನೇಕ ವಿಶ್ವಾಸಿಗಳು ದಂಗೆಕೋರರಲ್ಲ - ಅವರು ಕೇವಲ ನಿಷ್ಕ್ರಿಯರಾಗಿದ್ದಾರೆ ಅಷ್ಟೇ. ದೇವರು ಅವರಿಗೆ ಏನೋ ಒಂದನ್ನು ಕೊಟ್ಟಿದ್ದಾನೆಂದು ಅವರಿಗೆ ತಿಳಿದಿದೆ, ಆದರೆ ಅವರು ಅದನ್ನು ಬಳಸದೆ, ಮುಟ್ಟದೆ "ಸುರಕ್ಷಿತವಾಗಿ", ಇಡುತ್ತಾರೆ.
ಸೇವಕನು ಭಯಪಟ್ಟಿದ್ದರಿಂದ ಆ ಮೊಹರಿಯನ್ನು ಬಚ್ಚಿಟ್ಟನು. ಭಯವು ಹೆಚ್ಚಾಗಿ ಬುದ್ಧಿವಂತಿಕೆಯ ವೇಷ ಧರಿಸುತ್ತದೆ.
ಸಾಮಾನ್ಯವಾಗಿ ನಾವು
- “ನಾನು ವಿಫಲವಾದರೆ ಏನು ಗತಿ?”
- “ಜನರು ನನ್ನನ್ನು ಆಡಿಕೊಂಡರೆ ಏನು ಗತಿ?”
- “ನಾನು ಸಾಕಷ್ಟು ಸಫಲನಾಗದಿದ್ದರೆ ಏನು ಗತಿ?”
ಎಂದು ಹೇಳುತ್ತೇವೆ.
"ಪರಿಪೂರ್ಣ ಪ್ರೀತಿ ಭಯವನ್ನು ಓಡಿಸುತ್ತದೆ, ಏಕೆಂದರೆ ಭಯವು ಯಾತನೆ ಹೊಂದುತ್ತ ಇರುತ್ತದೆ.” (1 ಯೋಹಾನ 4:18) ಎಂದು ಬೈಬಲ್ ನಮಗೆ ಸ್ಪಷ್ಟವಾಗಿ ಹೇಳುತ್ತದೆ.
ಭಯವು ನಮ್ಮನ್ನು ರಕ್ಷಿಸುವುದಿಲ್ಲ - ಅದು ನಮ್ಮನ್ನು ನಿಷ್ಕ್ರಿಯೆಗೆ ತಳ್ಳುತ್ತದೆ. ಅದು ಸರಿಯಾದ ದಿಕ್ಕಿನಲ್ಲಿ ಒಂದು ಸಣ್ಣ ಹೆಜ್ಜೆಯನ್ನು ಇಡುವುದಕ್ಕೂ ತಡೆಮಾಡುತ್ತದೆ.
ನಾವು ದೇವರನ್ನು ತಪ್ಪಾಗಿ ಅರ್ಥಮಾಡಿಕೊಂಡಾಗ, ನಾವು ಬಚ್ಚಿಡುತ್ತೇವೆ.
ಸೇವಕನು ತನ್ನ ಯಜಮಾನನು ಕಠಿಣವಾದ ಮನುಷ್ಯನು ಮತ್ತು ನಿಷ್ಕರುಣಿಯೂ ಆಗಿದ್ದಾನೆ ಎಂದು ನಂಬಿದ್ದನು. ಆ ತಪ್ಪು ನಂಬಿಕೆಯಿಂದಾಗಿ, ಅವನು ಪ್ರಯತ್ನಿಸುವುದನ್ನೇ ನಿಲ್ಲಿಸಿದನು.
ದೇವರು ಯಾವಾಗಲೂ ನಮ್ಮನ್ನು ನಿರಾಶೆಗೊಳಿಸುತ್ತಾನೆ. ದೇವರು ಯಾವಾಗಲೂ ಪರಿಪೂರ್ಣತೆಯನ್ನೇ ನಿರೀಕ್ಷಿಸುತ್ತಾನೆ.
ದೇವರು ತಪ್ಪುಗಳಿಗೆ ಬೇಗನೆ ಶಿಕ್ಷಿಸುವವನಾಗಿದ್ದಾನೆ ಎಂದು ಇಂದು ಅನೇಕ ಜನರು ಯೋಚಿಸುತ್ತಾರೆ. ಆದರೆ ದೇವರವಾಕ್ಯ ನಮಗೆ ಒಂದು ಸತ್ಯವನ್ನು ಹೇಳುತ್ತದೆ ಅದೇನೆಂದರೆ"ಯೆಹೋವನು ಕನಿಕರವೂ ದಯೆಯೂ ದೀರ್ಘಶಾಂತಿಯೂ ಪೂರ್ಣಪ್ರೀತಿಯೂ ಉಳ್ಳವನು.”ಎಂದು. (ಕೀರ್ತನೆ 103:8)
ನಾವು ದೇವರ ಹೃದಯವನ್ನು ನಿಜವಾಗಿಯೂ ಅರ್ಥಮಾಡಿಕೊಂಡಾಗ, ನಾವು ಬಚ್ಚಿಟ್ಟುಕೊಳ್ಳುವುದನ್ನು ನಿಲ್ಲಿಸುತ್ತೇವೆ ಮತ್ತು ಸೇವೆ ಮಾಡಲು ಪ್ರಾರಂಭಿಸುತ್ತೇವೆ.
ನಮ್ಮ ಮಾತುಗಳೇ ನಮ್ಮ ನಂಬಿಕೆ ಎಂಥದ್ದು ಎಂದು ಪ್ರಕಟ ಪಡಿಸುತ್ತವೆ.
ಆ ಸೇವಕನು ಯಜಮಾನನ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿದನು—ಮತ್ತು ಅದೇ ಮಾತುಗಳ ಆಧಾರದ ಮೇಲೆ
ಅವನಿಗೆ ತೀರ್ಪಾಯಿತು.
“ಜೀವನ್ಮರಣ ಗಳು ನಾಲಿಗೆಯ ವಶ.” (ಜ್ಞಾನೋಕ್ತಿ 18:21)ಎಂದುಬೈಬಲ್ ಹೇಳುತ್ತದೆ.
ನಾವು ಮಾತನಾಡುವುದು ನಾವು ಏನನ್ನು ನಂಬುತ್ತಿದ್ದೇವೆ ಎಂಬುದನ್ನು ತೋರಿಸುತ್ತದೆ. ನಾವು “ನನಗೆ ಸಾಧ್ಯವಿಲ್ಲ,” “ನಾನು ಕರೆಯಲ್ಪಟ್ಟಿಲ್ಲ,” ಎಂದು ನಿರಂತರವಾಗಿ ಹೇಳುತ್ತಿದ್ದರೆ ದೇವರು ಬಾಗಿಲುಗಳನ್ನು ತೆರೆದಿದ್ದರೂ ಅದು ಕಾರ್ಯ ಮಾಡದಂತೆ ನಾವೇ ತಡೆ ಹಿಡಿಯಬಹುದು.
ದೇವರು ಪ್ರಯತ್ನವನ್ನು ನಿರೀಕ್ಷಿಸುತ್ತಾನೆಯೇ ಹೊರತು ಪರಿಪೂರ್ಣತೆಯನ್ನಲ್ಲ.
ಯಜಮಾನನು ಬಹಳ ಮುಖ್ಯವಾದದ್ದನ್ನು ಹೇಳಿದನು: ಹಣವನ್ನು ಬ್ಯಾಂಕಿನಲ್ಲಿ ಇಟ್ಟಿದ್ದರೂ ಸಹ ಏನನ್ನೂ ಮಾಡದೆ ಇರುವುದಕ್ಕಿಂತ ಉತ್ತಮವಾಗಿತ್ತು ಎಂದು.
ಇದು ನಮಗೆ ದೇವರು ಪ್ರಯತ್ನವನ್ನು ಗೌರವಿಸುತ್ತಾನೆ ಎಂಬ ಒಂದು ಬಲವಾದ ವಿಷಯವನ್ನು ಹೇಳುತ್ತದೆ—.
“ಕ್ರಿಯೆಗಳಿಲ್ಲದ ನಂಬಿಕೆ ಸತ್ತದ್ದು.” (ಯಾಕೋಬ 2:26)
ನೀವು ಎಲ್ಲವನ್ನೂ ಮಾಡಬೇಕಾಗಿಲ್ಲ ಆದರೆ ಏನನ್ನಾದರೂ ಮಾಡಿ.
ಎಲ್ಲರಿಗೂ ಒಂದು ಮೊಹರಿ ಕೊಡಲ್ಪಟ್ಟಿರುತ್ತದೆ.
ನಿಮ್ಮ ಮೊಹರಿ ಆತ್ಮೀಕವಾಗಿ ಕಾಣದಿರಬಹುದು. ಅದು : ದಯೆಯಿಂದ ಮಾತನಾಡುವ ನಿಮ್ಮ ಸಾಮರ್ಥ್ಯ, ಕೆಲಸದಲ್ಲಿ ನಿಮ್ಮ ಕೌಶಲ್ಯ, ನಿಮ್ಮ ಸಮಯ, ನಿಮ್ಮ ಪ್ರಭಾವ, ಸಹಾಯ ಮಾಡಲು ನಿಮಗಿರುವ ಇಚ್ಛೆ ಇವುಗಳಾಗಿರಬಹುದು.
"ಭಲಾ, ನಂಬಿಗಸ್ತನಾದ ಒಳ್ಳೇ ಆಳು ನೀನು; ಸ್ವಲ್ಪ ಕೆಲಸದಲ್ಲಿ ನಂಬಿಗಸ್ತನಾಗಿದ್ದಿ, ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ; ನಿನ್ನ ಧಣಿಯ ಸೌಭಾಗ್ಯದಲ್ಲಿ ಸೇರು"(ಮತ್ತಾಯ 25:23) ಎಂದು ಯಜಮಾನ ಹೇಳುವ ಶ್ಲಾಘನೆಯನ್ನು ಯೇಸು ನಮಗೆ ನೆನಪಿಸುತ್ತಾನೆ.
ದೇವರು ಸಣ್ಣ ವಿಷಯಗಳಿಂದ ಪ್ರಾರಂಭಿಸುತ್ತಾನೆ.
ಭಯವು ದೇವರಿಂದ ಬರುವಂತದ್ದಲ್ಲ.
ನೀವು ಭಯದಲ್ಲಿ ಬದುಕಬೇಕೆಂದು ಸೃಷ್ಟಿಸಲ್ಪಟ್ಟಿಲ್ಲ
“ದೇವರು ನಮಗೆ ಭಯದ ಆತ್ಮವನ್ನು ನೀಡದೇ, ಬಲ ಪ್ರೀತಿ ಶಿಸ್ತಿನ ಆತ್ಮವನ್ನು ನೀಡಿದ್ದಾನೆ.” (2 ತಿಮೊಥೆಯ 1:7)
ನಿಮ್ಮ ಬದುಕನ್ನು ನೀವು ಬೆಳೆಯಲು, ಹೆಜ್ಜೆ ಹಾಕಲು, ದೇವರು ನಿಮ್ಮ ಕೈಯಲ್ಲಿ ಇಟ್ಟದ್ದನ್ನು ಹೂಡಿಕೆ ಮಾಡಲು ವಿನ್ಯಾಸಗೊಳಿಸಲಾಗಿದೆ.
ದೇವರು ನಿಮಗೆ ಕೊಟ್ಟದ್ದನ್ನು ಬಚ್ಚಿಡಬೇಡಿರಿ.
ಮೂರನೇ ಸೇವಕನ ಕಥೆ ಒಂದು ಎಚ್ಚರಿಕೆ ಯಾಗಿಯೂ - ಆದರೆ ಒಂದು ಆಹ್ವಾನವಾಗಿಯೂ ಇದೆ.
"ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು." (ಗಲಾತ್ಯ 6:9)
ನಿಮ್ಮ ಮೊಹರಿಯನ್ನು ಮುಚ್ಚಿಡಬೇಡಿ.
ಅದನ್ನು ಬಳಸಿ. ಪ್ರಯತ್ನಿಸಿ. ಹೊರಬನ್ನಿ. ದೇವರನ್ನು ನಂಬಿರಿ. ನಂಬಿಕೆಯ ಒಂದು ಸಣ್ಣ ಕ್ರಿಯೆ ಕೂಡ ದೊಡ್ಡ ಉದ್ದೇಶವನ್ನು ಪ್ರಕಟಿಸುವಂತದ್ದಾಗಿದೆ.
Bible Reading: Exodus 23-25
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಮ್ಮ ತಲಾಂತನ್ನು ಭಯಪಡದೇ ಮುಕ್ತವಾಗಿ ನಿಮ್ಮ ಮಹಿಮೆಗಾಗಿ ಬಳಸಲು ನಮಗೆ ಬಲ ನೀಡಿ. ನಿಮ್ಮನ್ನು ಸ್ಪಷ್ಟವಾಗಿ ನೋಡಲು ಮತ್ತು ನಿಮ್ಮ ಸತ್ಯವನ್ನು ಪ್ರತಿಧ್ವನಿಸುವ ಜೀವವುಳ್ಳ ಮಾತುಗಳನ್ನು ಮಾತನಾಡಲು ನಮಗೆ ಸಹಾಯ ಮಾಡಿ. ನಾವು ಧೈರ್ಯಶಾಲಿ ಮೇಲ್ವಿಚಾರಕರಾಗಿ, ನಿಮ್ಮ ರಾಜ್ಯದ ಉದ್ದೇಶಕ್ಕಾಗಿ ನಮ್ಮ ಮೊಹರಿಗಳನ್ನು ಯೇಸುನಾಮದಲ್ಲಿ ಹೂಡಿಕೆ ಮಾಡುವಂತಾಗಲಿ. ಆಮೆನ್.
Join our WhatsApp Channel
Most Read
● ನಿಮ್ಮ ಭವಿಷ್ಯಕ್ಕಾಗಿ ದೇವರ ಕೃಪೆ ಮತ್ತು ಉದ್ದೇಶವನ್ನು ಅಳವಡಿಸಿಕೊಳ್ಳುವುದು● ಸರಿಯಾದವುಗಳನ್ನು ಶೋಧಿಸಿ ಅವುಗಳನ್ನೇ ಹಿಬಾಲಿಸುವುದು.
● ದೇವರ 7 ಆತ್ಮಗಳು: ಆಲೋಚನೆ ನೀಡುವ ಆತ್ಮ
● ಶ್ರೇಷ್ಠತೆಯನ್ನು ಸಾಧಿಸುವುದು ಹೇಗೆ?
● ಮಳೆಯಾಗುತ್ತಿದೆ
● ಪ್ರೀತಿಯ ಭಾಷೆ
● ದೇವರ 7 ಆತ್ಮಗಳು: ಜ್ಞಾನದ ಆತ್ಮ
ಅನಿಸಿಕೆಗಳು
