ಅನುದಿನದ ಮನ್ನಾ
2
2
50
ಪ್ರೀತಿಯಿಂದ ಪ್ರೇರೇಪಿಸಿಲ್ಪಟ್ಟದ್ದು.
Wednesday, 4th of February 2026
Categories :
ಪ್ರೀತಿ (Love)
ಕೊಡುವಿಕೆ ಕ್ರೈಸ್ತ ನಂಬಿಕೆಯ ಕೇಂದ್ರ ವಿಷಯವಾಗಿದೆ, ಆದರೆ ಇದನ್ನು ಹೆಚ್ಚಾಗಿ ಉಡಾಫೆ ಮಾಡಬಲ್ಲ ಬದ್ಧತೆ ಅಥವಾ ಗಣಿತದ ಒಂದು ಸೂತ್ರ ಎಂದು ತಪ್ಪಾಗಿ ಅರ್ಥೈಸಲಾಗುತ್ತದೆ.
ಸತ್ಯವೇದದ ಮೂಲಭಾಗವನ್ನು ನೋಡುವಾಗ, ನಿಜವಾದ ಕೊಡುವಿಕೆಯು ಅದು "ಯಾವುದು" ಅಥವಾ "ಎಷ್ಟು" ಎಂಬುದರ ಬಗ್ಗೆ ಅಲ್ಲ - ಬದಲಾಗಿ ಅದು "ಏಕೆ"
ಎಂಬುದರ ಕುರಿತಾದ್ದಾದದು ಎಂಬುದನ್ನು ನಾವು ನೋಡುತ್ತೇವೆ.
ಪ್ರೀತಿಯ ಉತ್ತುಂಗದ ಉದಾಹರಣೆಯಾದ ಕೊಡುವುದನ್ನು ಅರ್ಥಮಾಡಿಕೊಳ್ಳಲು, ನಾವು ದೇವರ ಸ್ವರೂಪವನ್ನು ನೋಡಬೇಕು.
ಸತ್ಯವೇದದಲ್ಲಿನ ಅತ್ಯಂತ ಪ್ರಸಿದ್ಧ ವಾಕ್ಯ, ಯೋಹಾನ 3:16 ಈ ಸಂಗತಿಗೆ ಇರುವ ಸಂಪರ್ಕವನ್ನು ಸ್ಪಷ್ಟಪಡಿಸುತ್ತದೆ:
" ದೇವರು ಈ ಲೋಕದ ಮೇಲೆ ಎಷ್ಟೋ ಪ್ರೀತಿಯನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು "
ನೈಸರ್ಗಿಕ ಹರಿವನ್ನು ಗಮನಿಸಿ: ದೇವರು ಪ್ರೀತಿಸಿದ ಕಾರಣದಿಂದ, ಆತನು ಕೊಟ್ಟನು. 1 ಯೋಹಾನ 4:16 ರಲ್ಲಿ, "ದೇವರು ಪ್ರೀತಿಯಾಗಿದ್ದಾನೆ" ಎಂದು ನಮಗೆ ಹೇಳಲಾಗಿದೆ. ಪ್ರೀತಿಯೇ ಆತನ ಗುರುತಾಗಿರುವುದರಿಂದ, ಕೊಡುವುದು ಆತನ ನೈಸರ್ಗಿಕ ಪ್ರತಿಕ್ರಿಯೆಯಾಗಿದೆ. ಆತನು ನೀಡಬೇಕಾಗಿರುವುದರಿಂದ ಆತನು ನೀಡುವುದಿಲ್ಲ;ಆದರೆ ಆತನು ಯಾರಾಗಿದ್ದಾನೋ ಆ ಕಾರಣದಿಂದಾಗಿ ಆತನು ನೀಡುತ್ತಾನೆ. ಆತನ ಅನುಯಾಯಿಗಳಾಗಿ, ನಾವು ಸಹ ಈ ಮಾದರಿಯನ್ನು ಅನುಸರಿಸಲು ಕರೆಯಲ್ಪಟ್ಟಿದ್ದೇವೆ. ತಂದೆಯ ಪ್ರೀತಿ ನಮ್ಮಲ್ಲಿ ವಾಸಿಸುತ್ತಿದ್ದರೆ, ಅದು ಅಂತಿಮವಾಗಿ ನಮ್ಮನ್ನು ಕೊಡುವವರನ್ನಾಗಿಯೂ ಪರಿವರ್ತಿಸುತ್ತದೆ.
ನಿಮ್ಮ ಮನೋಭಾವ ಏಕೆ ಮುಖ್ಯ.
ತಪ್ಪು ಕಾರಣಕ್ಕಾಗಿ "ಒಳ್ಳೆಯ ಕೆಲಸ" ಮಾಡಲು ಸಾಧ್ಯವಿದೆ. ತೆರಿಗೆ ವಿನಾಯಿತಿ ಪಡೆಯಲು ಅಥವಾ ಇತರರ ಮುಂದೆ ಚೆನ್ನಾಗಿ ಕಾಣಲು ನೀವು ದತ್ತಿ ಸಂಸ್ಥೆಗೆ ಹಣವನ್ನು ನೀಡಬಹುದು. ಆದಾಗ್ಯೂ, ಪ್ರೀತಿಯ ಹೃದಯವಿಲ್ಲದೆ ದಾನ ಮಾಡುವುದು ಆತ್ಮೀಕವಾಗಿ ಬರಿದಾದ್ದದ್ದು ಎಂದು ಸತ್ಯವೇದ ಎಚ್ಚರಿಸುತ್ತದೆ.
ಎಂದು ಕೊರಿಂಥ 13:3 ರಲ್ಲಿ, ಅಪೋಸ್ತಲ ಪೌಲನು ಬರೆಯುತ್ತಾನೆ.
" ನನಗಿರುವುದೆಲ್ಲವನ್ನು ಬಡವರಿಗೆ ಅನ್ನದಾನಮಾಡಿದರೂ, ನನ್ನ ದೇಹವನ್ನು ಸುಡುವುದಕ್ಕೆ ಒಪ್ಪಿಸಿದರೂ, ಪ್ರೀತಿಯು ನನಗಿಲ್ಲದಿದ್ದರೆ ನನಗೇನು ಪ್ರಯೋಜನವಿಲ್ಲ. ನಾನು ಬರಿದಾಗಿರುವನು."
ಇದು ಆಶ್ಚರ್ಯಕರ ಹೇಳಿಕೆಯಾಗಿದೆ. ನೀವು ಹೊಂದಿರುವ ಪ್ರತಿಯೊಂದು ಪೈಸೆಯನ್ನು ನೀವು ದಾನ ಮಾಡಬಹುದು ಅಥವಾ ನಿಮ್ಮ ಜೀವವನ್ನೇ ತ್ಯಾಗ ಮಾಡಬಹುದು, ಆದರೆ ಪ್ರೀತಿಯ ಪ್ರೇರಣೆಯಿಲ್ಲದಿದ್ದರೆ, ದೇವರ ದೃಷ್ಟಿಯಲ್ಲಿ ಸಿಗುವ"ಲಾಭ" ಶೂನ್ಯವಾಗಿರುತ್ತದೆ. ದೇವರ ಆರ್ಥಿಕತೆಯಲ್ಲಿ, ನೀಡುವವರ ಹೃದಯವು ವರಗಳಿಗಿಂತ ಹೆಚ್ಚು ಮೌಲ್ಯಯುತವಾಗಿದೆ.
ನಿಯಮ ಬದ್ಧತೆಯ ಬಲೆ
ಯೇಸುವಿನ ಕಾಲದಲ್ಲಿ, ಧಾರ್ಮಿಕ ಮುಖಂಡರು (ಫರಿಸಾಯರು) ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುವುದರಲ್ಲಿ ಗೀಳನ್ನು ಹೊಂದಿದ್ದರು. ಅವರು ಎಷ್ಟು ಜಾಗರೂಕರಾಗಿದ್ದರು ಎಂದರೆ ಅವರು ತಮ್ಮ ಸಣ್ಣ ಮಸಾಲೆ ಬೀಜಗಳಲ್ಲಿಯೂ ಹತ್ತನೇ ಒಂದು ಭಾಗವನ್ನು ದೇವಾಲಯಕ್ಕೆ ನೀಡಬೇಕೆಂದು ಅಪೇಕ್ಷಿಸುತ್ತಿದ್ದರು. ಆದರೆ ಯೇಸು ಇವುಗಳಿಗೆ ಪ್ರಭಾವಿತನಾಗಲಿಲ್ಲ.
ಎಂದು ಮತ್ತಾಯ 23:23 ರಲ್ಲಿ, ಆತನು ಅವರಿಗೆ ಹೇಳಿದನು.
" ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಪುದೀನ, ಮರುಗಪತ್ರೆ, ಸಬಸಿಗೆಸೊಪ್ಪು, ಜೀರಿಗೆಗಳಲ್ಲಿ ದಶಮ ಭಾಗವನ್ನು ಕೊಡುತ್ತೀರಿ ಸರಿ, ಆದರೆ ಧರ್ಮಶಾಸ್ತ್ರದಲ್ಲಿ ಮುಖ್ಯವಾದುದನ್ನು ಅಂದರೆ ನ್ಯಾಯವನ್ನೂ, ಕರುಣೆಯನ್ನೂ ನಂಬಿಕೆಯನ್ನೂ ಬಿಟ್ಟುಬಿಟ್ಟಿದ್ದೀರಿ. ಇವುಗಳನ್ನು ಮಾಡಬೇಕು; ಅವುಗಳನ್ನೂ ಬಿಡಬಾರದು."
ಅಲ್ಲಿ ಕೊಡುವುದು ಕೆಟ್ಟದು ಎಂದು ಯೇಸು ಹೇಳುತ್ತಿರಲಿಲ್ಲ; ಬದಲಾಗಿ ನೀವು ನಿಮ್ಮ ದೈನಂದಿನ ಜೀವನದಲ್ಲಿ ಕೆಟ್ಟ ಮನೋಭಾವ ಅಥವಾ ಅಪ್ರಾಮಾಣಿಕರಾಗಿದ್ದರೆ ಕೊಡುವುದು ಬರೀ ಟೊಳ್ಳು ಎಂದು ಆತನು ಹೇಳಿದನು.. ಅವರ ಲೆಕ್ಕಾ ಚಾರ ಸರಿಯಾಗಿತ್ತು, ಆದರೆ ಅವರ ಹೃದಯಗಳು ತಪ್ಪಾಗಿದ್ದವು. ಅವರು ಕರುಣೆಗಿಂತ ಕರ್ತವ್ಯ ಮತ್ತು ಹೆಮ್ಮೆಯ ಭಾವನೆಯಿಂದ ವರ್ತಿಸುತ್ತಿದ್ದರು.
ಹೊಸ ಪ್ರೇರಣೆ
ಹಾಗಾದರೆ, ನಮ್ಮನ್ನು ಯಾವುದು ಪ್ರೇರೇಪಿಸಬೇಕು? ಅದು ಅಪರಾಧಿ ಭಾವನೆಯಾಗಿರಬಾರದು ಮತ್ತು ಇತರರು ನೋಡಬೇಕೆಂಬ ಬಯಕೆಯಾಗಿರಬಾರದು. ಬದಲಾಗಿ, ಕ್ರಿಸ್ತನು ನಮಗಾಗಿ ಏನು ಮಾಡಿದ್ದಾನೆಂದು ನಾವು ಭಾವಿಸುವುದಾಗಿರಬೇಕು.
ಎಂದು 2 ಕೊರಿಂಥ 5:14-15 (NIV) ನಲ್ಲಿ, ಪೌಲನು ವಿವರಿಸುತ್ತಾನೆ.
"ಯಾಕೆಂದರೆ ಕ್ರಿಸ್ತನ ಪ್ರೀತಿಯು ನಮ್ಮನ್ನು ಒತ್ತಾಯಪಡಿಸುತ್ತದೆ; ಎಲ್ಲರಿಗೋಸ್ಕರ ಒಬ್ಬನು ಸತ್ತಮೇಲೆ ಎಲ್ಲರೂ ಸತ್ತಂತಾಯಿತೆಂದು ನಿಶ್ಚಯಿಸಿಕೊಂಡಿದ್ದೇವೆ. ಕ್ರಿಸ್ತನು ಎಲ್ಲರಿಗೋಸ್ಕರ ಸತ್ತದ್ದರಿಂದಾಗಿ ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೇ ತಮಗೋಸ್ಕರ ಸತ್ತು ಎದ್ದು ಬಂದಾತನಿಗಾಗಿ ಜೀವಿಸಬೇಕು."
ಯೇಸುವಿನ ತ್ಯಾಗದ ಆಳವನ್ನು ನಾವು ನಿಜವಾಗಿಯೂ ಗ್ರಹಿಸಿಕೊಳ್ಳುವಾಗ, ಅದು ನಮ್ಮನ್ನು ಸ್ವಾರ್ಥದಿಂದ ಬದುಕುವುದನ್ನು ನಿಲ್ಲಿಸಬೇಕೆಂದು "ಒತ್ತಾಯಿಸುತ್ತದೆ" ಅಥವಾ ತಳ್ಳುತ್ತದೆ.ಆಗ ನಾವು "ನನಗೆ ಏನು ಪ್ರಯೋಜನ?" ಎಂದು ಕೇಳುವುದನ್ನು ನಿಲ್ಲಿಸಿ "ನಾನು ಆತನನ್ನು ಹೇಗೆ ಸೇವಿಸಬಹುದು?" ಎಂಬುದಾಗಿ ಕೇಳಿಕೊಳ್ಳಲು ಪ್ರಾರಂಭಿಸುತ್ತೇವೆ.
ಹೃದಯ ಪರೀಕ್ಷೆ .
ಇಂದು ಸ್ವಲ್ಪ ಸಮಯ ಅಂತರಮುಖಿಯಾಗಿ ನಿಮ್ಮನ್ನು ನೋಡಿಕೊಳ್ಳಿ. ನೀವು ಹಣವನ್ನು ನೀಡುತ್ತಿರಲಿ, ಚರ್ಚ್‌ನಲ್ಲಿ ಸೇವೆ ಸಲ್ಲಿಸುತ್ತಿರಲಿ ಅಥವಾ ಸ್ನೇಹಿತರಿಗಾಗಿ ಪ್ರಾರ್ಥಿಸುತ್ತಿರಲಿ, ನಿಮ್ಮನ್ನು ಕೇಳಿಕೊಳ್ಳಿ: ಏನೆಂದರೆ ನಾನು ಇದನ್ನು ಪ್ರೀತಿಯಿಂದ ಮಾಡುತ್ತಿದ್ದೇನೆಯೇ ಅಥವಾ ಅಭ್ಯಾಸದ ಸಲುವಾಗಿ ಮಾಡುತ್ತಿದ್ದೇನೆಯೇ? ದೇವರ ಸೇವೆ ಎಂದಿಗೂ ಕೆಲಸವೆಂದು ಭಾವಿಸಬಾರದು; ಇದು ನಮಗೆ ನೀಡಲಾದ ಶ್ರೇಷ್ಠ ವರಗಳಿಗೆ ಕೃತಜ್ಞತೆಯ ಪ್ರತಿಕ್ರಿಯೆಯಾಗಿರಬೇಕು.
Bible Reading: Leviticus 7-9
ಅರಿಕೆಗಳು
1. ನನಗೆ ಅನುಗ್ರಹಿಸಲ್ಪಟ್ಟ ಪವಿತ್ರಾತ್ಮನು ದೇವರ ಪ್ರೀತಿಯನ್ನು ನನ್ನ ಹೃದಯದಲ್ಲಿ ಸುರಿಸಿದ್ದಾನೆಂದು ನಾನು ನುಡಿಯುತ್ತೇನೆ ಮತ್ತು ಘೋಷಿಸುತ್ತೇನೆ. ಇನ್ನು ಮುಂದೆ, ನಾನು ಮಾಡುವ ಎಲ್ಲವೂ ಪ್ರೀತಿಯಿಂದ ಪ್ರೇರೇಪಿಸಲ್ಪಡುತ್ತದೆ.
2. ನನ್ನ ಕೊಡುವಿಕೆ, ನನ್ನ ಸೇವೆ, ನನ್ನ ಮಧ್ಯಸ್ಥಿಕೆ ಪ್ರಾರ್ಥನೆಗಳು ಪ್ರತಿಯೊಂದೂ ಕರ್ತನಿಗೆ ಸುಗಂಧಭರಿತ ಪರಿಮಳವಾಗುತ್ತವೆ.
Join our WhatsApp Channel
Most Read
● ನಮ್ಮ ಆಯ್ಕೆಯ ಪರಿಣಾಮಗಳು● ನೀವು ದೇವರಿಂದ ನೇಮಿಸಲ್ಪಡುವ ಮುಂದಿನ ಬಿಡುಗಡೆ ನಾಯಕರು ನೀವಾಗಬಹುದು
● ಪ್ರೀತಿ - ಗೆಲ್ಲುವ ತಂತ್ರ -2
● ಪರಿಶೋಧನೆಯ ಸಮಯದಲ್ಲಿ ನಂಬಿಕೆ
● ದೇವರ ವಾಕ್ಯವನ್ನು ಓದುವುದರಿಂದಾಗುವ 5 ಪ್ರಯೋಜನಗಳು
● ಕೆಲವು ನಾಯಕರು ಪಾಪದಲ್ಲಿ ಬಿದ್ದು ಹೋದದರಿಂದ ನಾವು ಸಹ ನಂಬಿಕೆಯನ್ನು ತ್ಯಜಿಸಬೇಕೆ?
● ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿ - 1
ಅನಿಸಿಕೆಗಳು
