ನೀವು ಮೂಡಣದ ಜೋಯೀಷರಲ್ಲಿ ಒಬ್ಬರಾಗಿ, ಒಂದು ನಿಗೂಢ ಆಕಾಶ ವಿದ್ಯಮಾನವನ್ನು ಅನುಸರಿಸುತ್ತಾ ಅಂತಿಮವಾಗಿ ಯೆರುಸಲೆಮ್‌ಗೆ ಆಗಮಿಸುವುದನ್ನು ಕಲ್ಪಿಸಿಕೊಳ್ಳಿ. ನಂತರ, ಅರಸನಾದ ಹೆರೋದನು ನಿಮ್ಮನ್ನು ರಹಸ್ಯವಾಗಿ ಕರೆದು. ನಿಮ್ಮನ್ನು ಅಲ್ಲಿಗೆ ಕರೆದುಕೊಂಡು ಬಂದ ಅಸಾಧಾರಣ ನಕ್ಷತ್ರದ ಬಗ್ಗೆ ಅವನಿಗೆ ನಿಖರವಾದ ವಿವರವನ್ನು ಹೇಳುವಂತೆ ಕೇಳುತ್ತಾನೆ ಎಂದಿಟ್ಟುಕೊಳ್ಳಿ.ಅದಕ್ಕಿಂತ ಹೆಚ್ಚಾಗಿ, ಆ ಮಗುವನ್ನು ಹುಡುಕಿ ಅವನಿಗೆ ವರದಿ ಮಾಡಬೇಕೆಂದೂ, ಅದು ನಿಮಗೆ ಸಿಕ್ಕಿದರೆ ತಾನೂ ಬಂದು ಆ ಮಗುವನ್ನು ಆರಾಧಿಸಲು ಇಚ್ಛೆಸುತ್ತೇನೆ "ಎಂದು ಅವನು ಹೇಳಿದರೆ (ಮತ್ತಾಯ 2:8)
ಆ ಕ್ಷಣದಲ್ಲಿ, ನೀವು ಹೆರೋದನಲ್ಲಿ ಒಬ್ಬ ಮಿತ್ರನನ್ನು - ಈ ನವಜಾತ ಅರಸನನ್ನು ಗೌರವಿಸಲು ಉತ್ಸುಕನಾಗಿ ಕಾಣುವ ಶಕ್ತಿಶಾಲಿ ವ್ಯಕ್ತಿಯೊಬ್ಬನನ್ನು ಕಾಣುತ್ತಿದ್ದೇನೆ ಎಂದು ನೀವು ಭಾವಿಸಬಹುದು. ಎಲ್ಲವೂ ಸರಿಯಾಗಿದೆ ಎಂದು ಧ್ವನಿಸುತ್ತಾ. ಎಲ್ಲವೂ ಹೊಂದಿಕೆಯಾಗುತ್ತಿದೆ ಎಂದೇ ತೋರುತ್ತದೆ. ಆದರೆ ನಿಮಗೆ ಕಾಣುತ್ತಿರುವುದು ನಿಮಗೆ
ಮೋಸದಾಯಕವಾಗಿರಬಹುದು.
ದೈವಿಕ ಎಚ್ಚರಿಕೆ
ಆಗ ಒಂದು ಕನಸು - ಹೆರೋದನ ಬಳಿಗೆ ಹಿಂತಿರುಗಬಾರದೆಂದು ಸೂಚಿಸುವ ದೈವಿಕ ಎಚ್ಚರಿಕೆಯ ಕನಸು ಬೀಳುತ್ತದೆ (ಮತ್ತಾಯ 2:12). ಇದ್ದಕ್ಕಿದ್ದಂತೆ, ನೀವು ಒಂದು ಕವಲುದಾರಿಯನ್ನು ಕಂಡುಕೊಳ್ಳುತ್ತೀರಿ. ಈಗ ನೀವು ರಾಜನ ಕೋರಿಕೆಯನ್ನು ಗೌರವಿಸಬೇಕಾ ಅಥವಾ ದೈವಿಕ ಸೂಚನೆಯನ್ನು ಪಾಲಿಸಬೇಕಾ?ಎನ್ನುವ ಪ್ರಶ್ನೆ ಎದುರಾಗುತ್ತದೆ. ಇಲ್ಲಿ ಆ ಜೋಯೀಷರು ಎರಡನೆಯದನ್ನು ಆರಿಸಿಕೊಂಡರು. ಅವರು ತಮ್ಮ ಸ್ವಂತ ದೇಶಕ್ಕೆ "ಮತ್ತೊಂದು ದಾರಿಯಲ್ಲಿ" ಹೊರಟರು
ಈ ನಿರ್ಧಾರವು ಸಣ್ಣದಾಗಿರಲಿಲ್ಲ. ಅದಕ್ಕೆ ಧೈರ್ಯದ ಅಗತ್ಯವಿತ್ತು. ಅದಕ್ಕೆ ವಿವೇಚನೆಯ ಅಗತ್ಯವಿತ್ತು. ಅದಕ್ಕೆ ವಿಧೇಯತೆಯ ಅಗತ್ಯವಿತ್ತು.
ಮಾನವ ಅಧಿಕಾರಕ್ಕಿಂತ ವಿಧೇಯತೆಗೆ ಆಧ್ಯತೆ
ಬೈಬಲ್ ಮಾನವ ಕಾರ್ಯಸೂಚಿಗಳಿಗೆ ಅಧೀನತೆಗಿಂತ ದೇವರಿಗೆ ವಿಧೇಯತೆ ತೋರುವ ಅಗತ್ಯವನ್ನು ಪದೇ ಪದೇ ಒತ್ತಿಹೇಳುತ್ತದೆ. ಯೆಶಾಯ 1:19 ರಲ್ಲಿ " ನೀವು ಒಪ್ಪಿ ವಿಧೇಯರಾದರೆ ದೇಶದ ಮೇಲನ್ನು ಅನುಭವಿಸುವಿರಿ";ಎಂಬುದಾಗಿ ನಾವು ಓದುತ್ತೇವೆ ಅಪೊಸ್ತಲರ ಕೃತ್ಯಗಳು 5:29 ರಲ್ಲಿ, ಅಪೊಸ್ತಲರು ಧೈರ್ಯದಿಂದ , "ನಾವು ಮನುಷ್ಯರಿಗಿಂತ ದೇವರಿಗೆ ಹೆಚ್ಚಾಗಿ ವಿಧೇಯರಾಗಬೇಕು."ಎಂದು ಘೋಷಿಸಿದರು.
ಜೋಯೀಸರ ವಿಧೇಯತೆಯು ಅವರನ್ನು ಹೆರೋದನ ಗುಪ್ತ ಬಲೆಯಿಂದ ರಕ್ಷಿಸಿತು. ನಿರುಪದ್ರವ ವಿನಂತಿಯಂತೆ ತೋರುತ್ತಿದ್ದದ್ದು ವಾಸ್ತವದಲ್ಲಿ, ವಿನಾಶಕಾರಿ ಯೋಜನೆಯ ಭಾಗವಾಗಿತ್ತು. ದೇವರ ಎಚ್ಚರಿಕೆಯನ್ನು ಪಾಲಿಸಲು ತೋರಿದ ಅವರ ಇಚ್ಛೆಯು ಅವರನ್ನು ಆತನ ದೈವಿಕ ಉದ್ದೇಶದೊಂದಿಗೆ ಸಮನ್ವಯ ಗೊಳಿಸಿತು.
ರಾಜನನ್ನು ಧಿಕ್ಕರಿಸಲು ತೆಗೆದುಕೊಂಡ ಅವರ ಧೈರ್ಯವನ್ನು ಊಹಿಸಿ. ಹೆರೋದನು ಯಾರೋ ಕೇವಲ ಸ್ಥಳೀಯ ಅಧಿಕಾರಿಯಾಗಿರಲಿಲ್ಲ - ಅವನು ಅಧಿಕಾರ ಮತ್ತು ಪ್ರಭಾವವನ್ನು ಹೊಂದಿರುವ ಅರಸನಾಗಿದ್ದನು. ಆದರೂ ದೈವಿಕ ಸೂಚನೆಯು ರಾಜಮನೆತನದ ಆಜ್ಞೆಯನ್ನು ಮೀರಿಸುತ್ತದೆ ಎಂಬುದಾಗಿ ಜೋಯೀಷರು ಗುರುತಿಸಿಕೊಂಡರು.
“ಮತ್ತೊಂದು ಮಾರ್ಗ”ದ ಆಯ್ಕೆ ಮಾಡಿಕೊಳ್ಳುವಲ್ಲಿರುವ ಜಾಣ್ಮೆ.
ಅವರ ಆಯ್ಕೆಯು ನಿರ್ಣಾಯಕ ಬೈಬಲ್ ಸತ್ಯವನ್ನು ಒತ್ತಿಹೇಳುತ್ತದೆ: ಅದೇನೆಂದರೆ ವಿಧೇಯತೆ ಅನಾನುಕೂಲ ಅಥವಾ ಅಪಾಯಕಾರಿ ಎಂದು ಭಾವಿಸುವಾಗಲೂ ದೇವರಿಗೆ ವಿಧೇಯತೆ ತೋರುವುದರಿಂದ ನಿಜವಾದ ಜ್ಞಾನವು ಪ್ರಕಟಗೊಳ್ಳುತ್ತದೆ.
ಎಂದು ಜ್ಞಾನೋಕ್ತಿ 3:5–6 ನಮಗೆ ನೆನಪಿಸುತ್ತದೆ.
"ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು."
ಮಾನವ ದೃಷ್ಟಿಕೋನದಿಂದ, ಹೆರೋದನ ಬಳಿಗೆ ಹಿಂತಿರುಗುವುದು ತಾರ್ಕಿಕವಾಗಿ ಸರಿಯಿದ್ದಿರಬಹುದಿತ್ತು. ರಾಜನೀತಿಗೆ ಅನುಸರಣೆಯನ್ನು ಅದು ಸೂಚಿಸಿ ಸುರಕ್ಷತೆಯು ರಾಜನೀತಿಗೆ ತೋರುವ ಸಹಕಾರದಲ್ಲಿ ಅಡಗಿದೆ ಎಂಬುದಾಗಿ ಅದು ತೋರುತ್ತದೆ.
ಆದರೆ ದೇವರ ಜ್ಞಾನವು ಹೆಚ್ಚಾಗಿ ಬೇರೆಯೇ ದಿಕ್ಕನ್ನೇ ಸೂಚಿಸುತ್ತದೆ.
"ಆದರೆ ಮೇಲಣಿಂದ ಬರುವ ಜ್ಞಾನವು ಮೊದಲು ಪರಿಶುದ್ಧವಾದದ್ದು, ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸಂತೋಷವಾಗಿ ಒಪ್ಪಿಕೊಳ್ಳುವಂಥದು, ಕರುಣೆ ಮುಂತಾದ ಒಳ್ಳೇ ಫಲಗಳಿಂದ ತುಂಬಿರುವಂಥದು ಆಗಿದೆ; ಅದರಲ್ಲಿ ಚಂಚಲವೂ ಕಪಟವೂ ಇಲ್ಲ."ಎಂದು ಯಾಕೋಬ 3:17 ದೈವಿಕ ಜ್ಞಾನವನ್ನು ವಿವರಿಸುತ್ತದೆ. ದೂರದ ದೇಶದಿಂದ ಬಂದ ಜೋಯೀಷರು ಈ ಪರಲೋಕದ ಜ್ಞಾನವನ್ನು ಸರಳ ವಿಧೇಯತೆಯ ಮೂಲಕ ಪ್ರದರ್ಶಿಸಿದರು.
ವಿಧೇಯತೆ ಅಪಾಯಕಾರಿ ಎಂದು ತೋರುವಾಗ
ಇಂದು ನಮಗೆ ಪಾಠವೇನು?
ದೇವರಿಗೆ ವಿಧೇಯತೆ ತೋರುವುದು ಎಂದರೆ "ಮತ್ತೊಂದು ಮಾರ್ಗ" ವನ್ನು - ಆದರೆ ಲೋಕಕ್ಕೆ ಮೂರ್ಖತನ ಅಥವಾ ಅಪಾಯಕಾರಿ ಎಂದು ತೋರುವ ಮಾರ್ಗವನ್ನೇ ತೆಗೆದುಕೊಳ್ಳಬೇಕು ಎನ್ನುವುದಾಗಿದೆ.
ಇದರರ್ಥ ಅನುಕೂಲಕರವೆಂದು ತೋರುವ ಅವಕಾಶವನ್ನು ನಿರಾಕರಿಸುವುದು. ಮೌನವು ಸುರಕ್ಷಿತವೆಂದು ಭಾವಿಸುವಾಗ ಸತ್ಯಕ್ಕಾಗಿ ನಿಲ್ಲುವುದು ಅಗತ್ಯವಾಗಬಹುದು. ಪ್ರಭಾವಕ್ಕಿಂತ ಸಮಗ್ರತೆಯನ್ನು ಆರಿಸಿಕೊಳ್ಳುವುದನ್ನು ಇದು ಒಳಗೊಂಡಿರಬಹುದು.
ದೇವರ ಜ್ಞಾನವು ಸಾಮಾನ್ಯವಾಗಿ ಮಾನವ ತಾರ್ಕಿಕತೆಯನ್ನು ಗೊಂದಲಗೊಳಿಸುತ್ತದೆ. 1 ಕೊರಿಂಥ 1:25 ಘೋಷಿಸುವಂತೆ, "ದೇವರ ಮೂರ್ಖತನವು ಮನುಷ್ಯರ ಜ್ಞಾನಕ್ಕಿಂತ ಶ್ರೇಷ್ಠ ವಾಗಿದೆ."
ದೇವರ ನಿರ್ದೇಶನವು ನಮ್ಮ ಆರಾಮ ವಲಯಗಳನ್ನು ಅಡ್ಡಿಪಡಿಸಬಹುದು ಮತ್ತು ನಮ್ಮ ಯೋಜನೆಗಳಿಗೆ ಸವಾಲು ಒಡ್ಡಬಹುದು, ಆದರೂ ಅದು ಯಾವಾಗಲೂ ಜೀವ ಮತ್ತು ಉದ್ದೇಶದ ಕಡೆಗೆ ನಮ್ಮನ್ನು ಕರೆದೊಯ್ಯುತ್ತದೆ.
ನಂಬಿಕೆಯಿಂದ ನಡೆಯುವುದು
ಮಾನವ ಒತ್ತಡ ಮತ್ತು ದೈವಿಕ ಪ್ರೇರಣೆಯ ನಡುವಿನ ಆಯ್ಕೆಯನ್ನು ಎದುರಿಸುತ್ತಿರುವಾಗ, ನೀವು ಒಂದು ಕವಲುದಾರಿಯಲ್ಲಿ ನಿಮ್ಮನ್ನು ಕಂಡುಕೊಂಡಾಗ - ಜೋಯೀಷರನ್ನು ನೆನಪಿಸಿಕೊಳ್ಳಿ. ಅವರ ವಿಧೇಯತೆ ಕೇವಲ ಪ್ರಯಾಣ ಯೋಜನೆಗಳ ಬದಲಾವಣೆಯಾಗಿರಲಿಲ್ಲ; ಅದು ನಂಬಿಕೆಯ ಕ್ರಿಯೆಯಾಗಿತ್ತು.
ಅವರು ರಾಜಕೀಯ ನಿರೀಕ್ಷೆಗಿಂತ ದೈವಿಕ ಸೂಚನೆಯನ್ನು ಅನುಸರಿಸಿದರು.
ಅಪೊಸ್ತಲ ಪೌಲನು 2 ಕೊರಿಂಥ 5:7 ರಲ್ಲಿ ಬರೆದಂತೆ, “ನಾವು ನೋಡುವವರಾಗಿ ನಡೆಯದೇ, ನಂಬಿ ನಡೆಯುವವರಾಗಿದ್ದೇವೆ.”
ಕೆಲವೊಮ್ಮೆ ನಂಬಿಕೆ ಎಂದರೆ ತಾರ್ಕಿಕವಾಗಿ ತೋರುವ ವಿಷಯಗಳಿಂದ ದೂರ ಸರಿದು ದೇವರು ಹೇಳಿದ್ದನ್ನು ಆರಿಸಿಕೊಳ್ಳುವುದಾಗಿದೆ. ಕೆಲವೊಮ್ಮೆ ನಂಬಿಕೆ ಎಂದರೆ
“ಮತ್ತೊಂದು ಮಾರ್ಗ”ವನ್ನು ಆಯ್ಕೆ ಮಾಡಿಕೊಳ್ಳುವುದಾಗಿದೆ.
ಆಗ ಆ ವಿಧೇಯತೆಯಲ್ಲಿ ರಕ್ಷಣೆ, ಜ್ಞಾನ ಮತ್ತು ದೇವರ ದೊಡ್ಡ ಉದ್ದೇಶದೊಂದಿಗೆ ಸಮನ್ವಯ ಇರುತ್ತದೆ.
Bible Reading: Number 8-10
ಪ್ರಾರ್ಥನೆಗಳು
ತಂದೆಯಾದ ದೇವರೇ, ನಿನ್ನ ಚಿತ್ತಕ್ಕೆ ಅದು ಕಷ್ಟಕರ ಅಥವಾ ಅನಾನುಕೂಲವಾಗಿದ್ದರೂ ಸಹ ಅದಕ್ಕೇ ವಿಧೇಯರಾಗಲು ನಮಗೆ ಧೈರ್ಯವನ್ನು ನೀಡು. ಮೂಡಣ ಜೋಯೀಷರಂತೆ ನಾವು ನಿಮ್ಮ ಮಾರ್ಗದರ್ಶನವನ್ನು ಕೇಳಲು ಮತ್ತು ವಿರಳವಾದ ಪ್ರಯಾಣದ ಮಾರ್ಗವನ್ನು ಆರಿಸಿಕೊಳ್ಳಲು ಜ್ಞಾನ ಹೊಂದಿ ಅದು ನಮ್ಮ ಜೀವನಕ್ಕಾಗಿ ನಿಮ್ಮ ಪರಿಪೂರ್ಣ ಯೋಜನೆಗೆ ಕಾರಣವಾಗುವಂತಾಗುತ್ತದೆ ಎಂದು ನಂಬುತ್ತೇವೆ. ಆಮೆನ್.
Join our WhatsApp Channel
Most Read
● ಮರೆಯಾದ ಸ್ಥಳವನ್ನು ಆಶ್ರಯಿಸಿಕೊಳ್ಳುವುದು.● ದೇವರ ಯೋಜನೆಯಲ್ಲಿರುವ ತಂತ್ರಗಾರಿಕೆಯ ಶಕ್ತಿ
● ನಿಮ್ಮ ರೂಪಾಂತರವು ಶತ್ರುವಿಗೆ ಭಯತರುತ್ತದೆ.
● ಬೀಜದಲ್ಲಿರುವ ಶಕ್ತಿ -3
● ದೆಬೋರಳ ಜೀವನದಿಂದ ಕಲಿಯಬಹುದಾದ ಪಾಠಗಳು
● ಕೋಪವನ್ನು ಅರ್ಥಮಾಡಿಕೊಳ್ಳುವುದು
● ಪ್ರಾರ್ಥನೆಯ ಪರಿಮಳ
ಅನಿಸಿಕೆಗಳು
