ಅನುದಿನದ ಮನ್ನಾ
1
0
49
ಐಕ್ಯತೆ ಮತ್ತು ವಿಧೇಯತೆಯ ಒಂದು ದರ್ಶನ
Wednesday, 12th of August 2026
Categories :
ಬದ್ಧತೆ (commitment)
ವಿಧೇಯತೆ (Obedience)
ಇಬ್ರಿಯ10: 24 -25ರಲ್ಲಿ "ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ. ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ. ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ. " ಎಂದು ಪ್ರೇರಿಪಿಸಲ್ಪಡುತ್ತೇವೆ. ಸಭೆಯಾಗಿ ಒಂದಾಗಿ ಕೂಡಿ ಬರುವ ನಿಮ್ಮ ಸಮರ್ಪಣಾ ಭಾವ, ಒಬ್ಬರನ್ನೊಬ್ಬರು ಉತ್ತೇಜಿಸುವಪರಿ, ಪ್ರೀತಿಯಲ್ಲಿಯೂ- ಸತ್ಕಾರ್ಯ ಮಾಡುವುದರಲ್ಲಿಯೂ ಮತ್ತೊಬ್ಬರನ್ನು ಉತ್ತೇಜಿಸುವ ನಿಮ್ಮ ಈ ನಡೆಯು ನಿಮ್ಮ ನಂಬಿಗಸ್ತಿಕೆಗೇ ಸಾಕ್ಷಿಯಾಗಿದೆ.
ಕರ್ತನಾದ ಯೇಸು ಸ್ವಾಮಿಯ ಸ್ವತಃ ತಾನೇ ಸಭೆಯಾಗಿ ಕೂಡಿಕೊಳ್ಳುವ ಮಹತ್ವಕ್ಕೆ ಒತ್ತು ಕೊಟ್ಟಿರುವುದನ್ನು ನಾವು ನೋಡಬಹುದು."ಯಾಕಂದರೆ ಇಬ್ಬರು ಮೂವರು ನನ್ನ ಹೆಸರಿನಲ್ಲಿ ಎಲ್ಲಿ ಕೂಡಿ ಬಂದಿರುತ್ತಾರೋ ಅಲ್ಲಿ ಅವರ ನಡುವೆ ನಾನು ಇದ್ದೇನೆ" ಎಂದು ಮತ್ತಾಯ 18: 20ರಲ್ಲಿ ಆತನು ಹೇಳಿದ್ದಾನೆ. ನಾವು ಈ ರೀತಿ ಸಭೆಯಾಗಿ ಕೂಡುವುದನ್ನು ಆಲಕ್ಷಿಸುವಾಗ ನಾವು ಕ್ರಿಸ್ತನು ನಮ್ಮ ಮಧ್ಯದಲ್ಲಿರುವ ವಿಭಿನ್ನವಾದ ಪ್ರಸನ್ನತೆಯನ್ನೂ ಮತ್ತು ಆಶೀರ್ವಾದವನ್ನು ಕಳೆದುಕೊಳ್ಳುವವರಾಗುತ್ತೇವೆ.
ಅಲಕ್ಷ್ಯ ಮಾಡುವುದರಿಂದ ಒದಗುವ ಸತ್ಯವೇದ ಆಧಾರಿತ ಅಪಾಯಗಳು.
ಸಹೋದರ ಅನ್ಯೋನ್ಯತೆಯನ್ನು ಕಡೆಗಣಿಸುವುದರಿಂದ ಆಗುವ ಅಪಾಯಗಳ ಕುರಿತು ಸತ್ಯವೇದವು ನಮ್ಮನ್ನು ಎಚ್ಚರಿಸುತ್ತದೆ. "ಜನರಲ್ಲಿ ಸೇರದವನು ಸ್ವೇಚ್ಫಾನುಸಾರ ನಡೆಯುತ್ತಾ ಸಮಸ್ತ ಸುಜ್ಞಾನಕ್ಕೂ ರೇಗುವನು." ಎಂದು ಜ್ಞಾನೋಕ್ತಿ 18:1ಹೇಳುತ್ತದೆ. ತನ್ನನ್ನು ಪ್ರತ್ಯೇಕ ಪಡಿಸಿಕೊಳ್ಳುವ ಸ್ವಭಾವವು ಒಬ್ಬರನ್ನು ಸ್ವಾರ್ಥ ಚಿಂತನೆಗೆ ತಳ್ಳಿ ದೈವಿಕ ಜ್ಞಾನದಿಂದ ದೂರಮಾಡುತ್ತದೆ.
ಶತ್ರುವು (ಸೈತಾನನು) ಯಾವಾಗಲೂ ಈ ರೀತಿ ಪ್ರತ್ಯೇಕಗೊಂಡ ವಿಶ್ವಾಸಿಗಳ ಮೇಲೆಯೇ ತನ್ನ ಗುರಿಯಿಟ್ಟು ಆತ್ಮಿಕ ದಾಳಿಗಳಿಗೆ ತುತ್ತಾಗುವಂತೆ ಮಾಡುತ್ತಾನೆ.ಈ ಒಂದು ಕಾರಣದಿಂದಾಗಿಯೇ ಅನೇಕರು ಸಂಪೂರ್ಣವಾದ ಬಿಡುಗಡೆಯನ್ನು ಇಂದು ಹೊಂದಿಕೊಳ್ಳಲಾಗುತ್ತಿಲ್ಲ.
"ನಿಮ್ಮಲ್ಲಿ ಒಬ್ಬರಾದರೂ ಪಾಪದಿಂದ ಮೋಸಹೋಗಿ ಕಠಿನರಾಗದಂತೆ ಈಹೊತ್ತು ಎಂಬ ಕಾಲವು ಇರುವ ತನಕ ಪ್ರತಿನಿತ್ಯವೂ ಒಬ್ಬರನ್ನೊಬ್ಬರು ಎಚ್ಚರಿಸಿರಿ." ಎಂದು ಇಬ್ರಿಯರಿಗೆ 3:13 ನಮಗೆ ನೆನಪಿಸುತ್ತದೆ.ನಿಯಮಿತವಾಗಿ ಸಭೆಯಾಗಿ ಕೂಡಿಬರುವ ಕ್ರಿಯೆಯು ನಮ್ಮನ್ನು ಮೋಸಗೊಳಿಸುವ ಪಾಪಗಳಿಂದ ಕಾಯುತ್ತದೆ. ನಮ್ಮನ್ನು ನಾವೇ ಪ್ರತ್ಯೇಕಿಸಿಕೊಳ್ಳುವಂತದ್ದು ನಮ್ಮ ಹೃದಯವನ್ನು ದೇವರ ಸತ್ಯಗಳಿಗೆ ದೂರಾಗುವಂತೆ ಮಾಡಿ ನಮ್ಮ ಹೃದಯವನ್ನು ಕಠಿಣ ಮಾಡಿಕೊಳ್ಳುವಂತ ಅಪಾಯಕ್ಕೆ ದೂಡುತ್ತದೆ.
ಪರಿಶೋಧಿಸಿಕೊಂಡು ಪುನಃ ಬದ್ಧರಾಗಲು ಉತ್ತೇಜನ
"ಆದದರಿಂದ ಜೋಲುಬಿದ್ದ ಕೈಗಳನ್ನೂ ನಡುಗುವ ಮೊಣಕಾಲುಗಳನ್ನೂ ಸುಧಾರಿಸಿಕೊಳ್ಳಿರಿ; ನಿಮ್ಮ ಕಾಲುಗಳಿಂದ ನೆಟ್ಟಗೆ ಮುಂದೆ ನಡೆಯಿರಿ. ಹೀಗೆ ಮಾಡಿದರೆ ಕುಂಟಕಾಲು ಉಳುಕಿಹೋಗದೆ ವಾಸಿಯಾಗುವದು. ಎಲ್ಲರ ಸಂಗಡ ಸಮಾಧಾನದಿಂದಿರುವದಕ್ಕೂ ಪರಿಶುದ್ಧತೆಯನ್ನು ಹೊಂದುವದಕ್ಕೂ ಪ್ರಯತ್ನಮಾಡಿರಿ; "ಇಬ್ರಿಯರಿಗೆ 12:12-14 ರ ಈ ವಾಕ್ಯಗಳನ್ನು ನೆನಪಿಡಿರಿ.ನಾವೆಲ್ಲರೂ ಕ್ರಿಸ್ತನ ದೇಹದ ಭಾಗಗಳಾಗಿರುವುದರಿಂದ ಒಂದು ಅಂಗವು ಎಲ್ಲವಾದರೆ ಇಡೀ ದೇಹ ನರಳುತ್ತದೆ.
ಯಾಕೋಬ 1: 22ರಲ್ಲಿ ಹೇಳಿರುವ "ವಾಕ್ಯವನ್ನು ಕೇಳಿದರೂ ಅದರಂತೆ ನಡೆಯದೆ ತಮ್ಮನ್ನೇ ತಾವು ಮೋಸಗೊಳಿಸಿಕೊಳ್ಳುವಂಥವರಂತೆ ನಾವು ಆಗದಿರೋಣ. ಅದಕ್ಕೆ ಬದಲಾಗಿ ದೇವರ ವಾಕ್ಯವನ್ನು ಕೈಗೊಂಡು ನಡೆಯುವರಾಗಿ ನಮ್ಮ ಮುಂದೆ ಇಟ್ಟಿರುವ ದರ್ಶನದಲ್ಲಿ ಭಾಗಿಯಾಗೋಣ ಅಪೋಸ್ತಲ ಕೃತ್ಯ 2:42 ರಲ್ಲಿ ಆದಿಸಬೆಯ ಕ್ರೈಸ್ತರು ಅಪೋಸ್ತಲರಿಗೆ ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡು ಅಪೋಸ್ತಲರ ಬೋಧನೆಯನ್ನು ಕೇಳುವುದರಲ್ಲಿಯೂ, ಸಹೋದರ ಅನ್ಯೋನ್ಯತೆಯಲ್ಲಿಯೂ ಪ್ರಾರ್ಥನೆಯಲ್ಲಿಯೂ ಹಾಗೂ ರೊಟ್ಟಿ ಮುರಿಯುವುದರಲ್ಲಿಯೂ ಐಕ್ಯರಾಗಿದ್ದರು. ಈ ಒಂದು ಭಕ್ತಿಯ ಸಂಚಲನವು ಒಂದು ದೊಡ್ಡ ಆತ್ಮಿಕ ಉಜ್ಜೀವನಕ್ಕೆ ನಾಂದಿ ಹಾಡಿತು ಮತ್ತು ನಾವಿಂದು ಅದೇ ಭಕ್ತಿಯನ್ನು ಆಚರಿಸಲು ಕರೆಯಲ್ಪಟ್ಟವರಾಗಿದ್ದೇವೆ.
Bible Reading: Jeremiah 5-6
ಪ್ರಾರ್ಥನೆಗಳು
ತಂದೆಯೇ, ನಿನ್ನ ದರ್ಶನಕ್ಕಾಗಿ ಬದ್ಧವಾಗಿರುವಂತೆ ನನ್ನನ್ನು ಬಲಪಡಿಸು, ನಾವು ನಂಬಿಕೆಯಲ್ಲಿಯೂ ವಿದೇಯತೆಯಲ್ಲಿಯೂ ಒಬ್ಬರನ್ನೊಬ್ಬರು ಬಲಪಡಿಸುವವರಾಗಿ ಒಬ್ಬರನ್ನೊಬ್ಬರು ಕಟ್ಟುವವರಾಗಿ ಬೆಳೆಯುವಂತೆ ಯೇಸು ನಾಮದಲ್ಲಿ ನಮಗೆ ಸಹಾಯ ಮಾಡು. ಆಮೇನ್.
Join our WhatsApp Channel
Most Read
● ಮರೆತುಹೋಗುವಿಕೆಯ ಅಪಾಯಗಳು● ನಂಬಿಕೆಯ ಜೀವಿತ
● ದೇವರ ಯೋಜನೆಯಲ್ಲಿರುವ ತಂತ್ರಗಾರಿಕೆಯ ಶಕ್ತಿ
● ಪುರುಷರು ಯಾಕೆ ಪತನಗೊಳ್ಳುವರು -2
● ಸಣ್ಣ ಬೀಜದಿಂದ ಎತ್ತರದ ಮರದವರೆಗೆ
● ಅಂದುಕೊಂಡಿದ್ದಕ್ಕಿಂತ ಮಿಗಿಲಾಗಿ ಅಧ್ಭುತಗಳನ್ನು ಮಾಡುವ ದೇವರು
● ವಿರಳವಾಗಿ ಪ್ರಯಾಣಿಸಿದ ರಸ್ತೆ
ಅನಿಸಿಕೆಗಳು
