english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ನೀವು ಎಷ್ಟು ಜೋರಾಗಿ ಮಾತಾಡ ಬಲ್ಲಿರಿ?
ಅನುದಿನದ ಮನ್ನಾ

ನೀವು ಎಷ್ಟು ಜೋರಾಗಿ ಮಾತಾಡ ಬಲ್ಲಿರಿ?

Sunday, 16th of August 2026
1 0 49
Categories : ದೇವರವಾಕ್ಯದ ಅರಿಕೆ(Confessing the word)
ನಾನೊಮ್ಮೆ ದಡೂತಿ ಬಾಕ್ಸರ್ ಗಳ ಪಂದ್ಯಕ್ಕೇ ಮುನ್ನ ನಡೆಯುವ ಅವರ ಸಂದರ್ಶನವನ್ನು ನೋಡುತ್ತಿದ್ದೆ. ಸರಿ ಎಲ್ಲಾ ಜನಪ್ರಿಯ ಜನಸಂಧಿತ ಸ್ಪರ್ಧೆಗಳಲ್ಲಿ ಇರುವಂತೆಯೇ ತಮ್ಮ ವಿಜಯದ ಕುರಿತು ಧೈರ್ಯವಾಗಿ ಅವರು ಮಾತನಾಡುತ್ತಿದ್ದರು. ವಾಸ್ತವವಾಗಿ ಅವರ ಮಾತುಗಳನ್ನು ಕೇಳಿದ ಮೇಲೆ ಯಾರು ಗೆಲ್ಲಬಹುದು ಎಂದು ನಮ್ಮಲ್ಲಿ ಬಹುತೇಕರು ಯೋಚಿಸಿರುತ್ತೇವೆ.

ಅವರ ಮಾತುಗಳು ಬಿಸಿಬಿಸಿಯಾಗಿಯೂ  ಬಿರುಸಾಗಿಯೂ ಇದ್ದವು. ಅವರಿಬ್ಬರೂ ಬಾಕ್ಸಿಂಗ್ ರಿಂಗ್ ಗೆ ಕಾಲಿಡುವ ಮೊದಲು ಅಥವಾ ದಾಳಿ ಮಾಡುವ ಮೊದಲು ನೀಡುವ ಪ್ರತಿ ಹೇಳಿಕೆಯೂ ಆತ್ಮವಿಶ್ವಾಸದಿಂದ ತಳತಳಿಸುತ್ತಿತ್ತು. ಪ್ರಪಂಚದಾದ್ಯಂತ ಲಕ್ಷಾಂತರ ಜನರು ವೀಕ್ಷಿಸುತ್ತಿರುವ ಕ್ಯಾಮರಗಳ ಮುಂದೆ ಅವರು ಮಾತನಾಡುವಾಗ ಅವರ ಮನಸ್ಸಿನಲ್ಲಿ ಏನಾಗುತ್ತಿರಬಹುದು ಎಂದು ಯೋಚಿಸಿ ಈ ಬಾಕ್ಸಿಂಗ್ ಹೋರಾಟವನ್ನು ಯಾರು ಗೆಲ್ಲಬಹುದು ಎಂದು ನಾನು  ಆಶ್ಚರ್ಯ ಚಕಿತನಾಗಿದ್ದೆ.

 ಅವರು ಯಾಕಷ್ಟು ಜೋರಾಗಿ ಆತ್ಮ ವಿಶ್ವಾಸದಿಂದ ಮಾತನಾಡುತ್ತಾರೆ ನಿಮಗೆ ಗೊತ್ತೇ? ಯಾಕೆಂದರೆ ಅವರಲ್ಲಿ ಪ್ರತಿಯೊಬ್ಬರೂ ಗೆಲುವು ತಮ್ಮದೇ ಎಂದು ನಂಬಿರುತ್ತಾರೆ. ಅದಕ್ಕಾಗಿ ಅವರು ಅಷ್ಟು ಜೋರಾಗಿ ಧೈರ್ಯದಿಂದ ಹೇಳು ತ್ತಿರುತ್ತಾರೆ. ನೋಡಿ, ನಮಗೆ ಯಾವುದೋ ಅಥವಾ ಒಂದು ನಿರ್ದಿಷ್ಟ ಫಲಿತಾಂಶಕ್ಕಾಗಿ ದೇವರನ್ನು ನಂಬಬೇಕೆಂದು ಕಲಿಸಲಾಗುತ್ತದೆ. ಆದರೆ ನಾವು ಯಾವುದನ್ನು ನಂಬುತ್ತೇವೋ ಅದರ ಕುರಿತು ಜೋರಾಗಿ ಮಾತನಾಡುವುದನ್ನು ನಮಗೆ ಕಲಿಸುವುದು ಅಪರೂಪ.
"ಹೃದಯದಿಂದ ನಂಬುವದರ ಮೂಲಕ ನೀತಿಯು ದೊರಕುತ್ತದೆ. ಬಾಯಿಂದ ಅರಿಕೆಮಾಡುವದರ ಮೂಲಕ ರಕ್ಷಣೆಯಾಗುತ್ತದೆ." ಎಂದು ಸತ್ಯವೇದ ಹೇಳುತ್ತದೆ. (ರೋಮಾಪುರದವರಿಗೆ 10:10)

ನಿಮಗಿದರ ಅರ್ಥಗೊತ್ತೇ? ರಕ್ಷಣೆಯು ಕೇವಲ ಹೃದಯದಲ್ಲಿ ನಂಬಿದ್ದರಿಂದ ಮಾತ್ರ ಬರುವುದಿಲ್ಲ. ಆದರೆ ನೀವು ಅದನ್ನು ಹೇಳಬೇಕು ಮತ್ತು ನೀವು ಕೇಳುವಂತ ಎಲ್ಲರ ಮುಂದೆ ಧೈರ್ಯವಾಗಿ ಜೋರಾಗಿ ಅದನ್ನು ಅರಿಕೆ ಮಾಡಬೇಕು.‭ "ಹೀಗಿದ್ದರೂ - ನಂಬಿದೆನು, ಆದದರಿಂದ ಮಾತಾಡಿದೆನು ಎಂಬ ಶಾಸ್ತ್ರೋಕ್ತಿಯಲ್ಲಿ ಕಾಣುವ ನಂಬಿಕೆಯ ಭಾವವನ್ನೇ ಹೊಂದಿ ನಾವೂ ನಂಬಿದವರು, ಆದದರಿಂದ ಮಾತಾಡುತ್ತೇವೆ." ಎಂದು ಅಪೋಸ್ತಲನಾದ ಪೌಲನು 2 ಕೊರಿಂಥದವರಿಗೆ 4:13ರಲ್ಲಿ ಹೇಳುತ್ತಾನೆ. ನಾವು ಅರಿಕೆ ಮಾಡುವವರೆಗೂ ನಮ್ಮ ನಂಬಿಕೆಯು ಸಮೀಕರಣವು ಸಂಪೂರ್ಣ ಹೊಂದುವುದೇ ಇಲ್ಲ.

ಮಿತ್ರರೇ, ನಿಮ್ಮ ಆರೋಗ್ಯದ ಕುರಿತು ನೀವು ಏನನ್ನು ನಂಬಿದ್ದೀರಿ? ನಿಮ್ಮ ಆರ್ಥಿಕ ಸ್ಥಿತಿ ಕುರಿತು, ನಿಮ್ಮ ಮದುವೆ ಕುರಿತು, ನಿಮ್ಮ ಶಿಕ್ಷಣ ಅಥವಾ ನಿಮ್ಮ ಸಂಗಾತಿಯ ಕುರಿತು ಏನನ್ನು ನಂಬುತ್ತಿದ್ದೀರಿ?  ನೀವು ನಿಜಕ್ಕೂ ಯೇಸು ಸ್ವಸ್ತಗೊಳಿಸುವನು  ಎಂದು ನಂಬುತ್ತೀರಾ?  ನೀವು ನಿಜಕ್ಕೂ ನಿಮ್ಮ ಸಂಗಾತಿ ಉತ್ತಮವಾಗಿ ಬದಲಾಗುವರು ಎಂದು ನಂಬುತ್ತೀರಾ? ನಿಮ್ಮ ಮಗುವು ದುಷ್ಟಚಟದಿಂದ ಬಿಡುಗಡೆ ಹೊಂದುವುದು ಎಂದು ನಂಬುತ್ತೀರಾ? ನೀವು ಈ ಸಾಲಗಳಿಂದ ಹೊರ ಬರುತ್ತೀರಿ ಎಂದು ನಂಬುತ್ತೀರಾ? ನೀವು ಹಾಗೆ ಮಾಡುವುದಾದರೆ ಅದನ್ನು ಜೋರಾಗಿ ಅರಿಕೆ ಮಾಡಿರಿ. "ನಾವು ನಂಬಿದೆವು, ಅದಕ್ಕಾಗಿ ಮಾತನಾಡಿದೆವು" ಎಂದು ಪೌಲನು ಹೇಳಿದ್ದಾನೆ.

ನೀವು ಈಗ ಏನನ್ನು ನೋಡುತ್ತಿದ್ದೀರೋ ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ವರದಿಗಳನ್ನೆಲ್ಲ ನೋಡಿ ಕೈ ಚೆಲ್ಲಬೇಡಿರಿ. ಕೇವಲ ನೀವೇನನ್ನು ನಂಬಿದ್ದೀರೋ ಅದನ್ನೇ ಅರಿಕೆ ಮಾಡುತ್ತಾ ಇರಿ. "...ದುರ್ಬಲನೂ ಶೂರನೆಂದುಕೊಳ್ಳಲಿ" ಎಂದು ಸತ್ಯವೇದ ಹೇಳುತ್ತದೆ. (ಯೋವೇಲ 3:10). ಅವನು ಬಲಹೀನ ನಾಗಿದ್ದರೂ ತಾನು ಬಲಶಾಲಿ ಎಂದು ಘೋಷಿಸಲಿ. ಆಗ ಬಲವು ಅವನಲ್ಲಿ ಕಾರ್ಯ ಮಾಡುತ್ತದೆ. ಇದುವೇ ನಿಮ್ಮ ಇಂದಿನ ಕಾರ್ಯ ಯೋಜನೆ ಆಗಲಿ. ನೀವು ಏನನ್ನು ನೋಡಲು ಬಯಸುತ್ತಿದ್ದೀರೋ ಅದನ್ನು ಧೈರ್ಯವಾಗಿ ಘೋಷಿಸಿರಿ ನಿಮ್ಮನ್ನು ಗೇಲಿ ಮಾಡುವವರ ಮಧ್ಯದಲ್ಲಿ ನೀವದನ್ನು ಕಂಡೆ ಕಾಣುವಿರಿ.

Bible Reading: Jeremiah 16-18
ಪ್ರಾರ್ಥನೆಗಳು
ತಂದೆಯೇ, ಈ ದಿನದ ನಿನ್ನ ವಾಕ್ಯಕ್ಕಾಗಿ ಸ್ತೋತ್ರ. ನೀನು ನನ್ನ ಜೀವಿತಕಾಗಿ ಅನುಗ್ರಹಿಸಿರುವ ವಾಗ್ದಾನಗಳನ್ನು ನನ್ನ ಹೃದಯದಲ್ಲಿ ಒಂದಿಷ್ಟೂ ಸಂದೇಹ ಪಡದೆ ಧೈರ್ಯವಾಗಿ ಹೇಳುವಂತ ಧೈರ್ಯದ ಆತ್ಮವನ್ನು ನನಗೆ ಅನುಗ್ರಹಿಸಬೇಕೆಂದು ಯೇಸು ನಾಮದಲ್ಲಿ ಬೇಡುತ್ತೇನೆ. ಆಮೇನ್.


Join our WhatsApp Channel


Most Read
● ನಾವು ಸಭೆಯಾಗಿ ನೇರವಾಗಿ ಕೂಡಿಕೊಳ್ಳದೆ ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ ಸಭೆಯ ಆರಾಧನೆಯಲ್ಲಿ ಭಾಗವಹಿಸಬಹುದೇ?
● ಎರಡು ಸಾರಿ ಸಾಯಬೇಡಿರಿ
● ನಿಮ್ಮ ಆತ್ಮಿಕ ಶಕ್ತಿಯನ್ನು ನವೀಕರಿಸಿಕೊಳ್ಳುವುದು ಹೇಗೆ -3
● ಯೇಸು ಕತ್ತೆಯ ಮೇಲೆ ಸವಾರಿ ಮಾಡಿದ್ದೇಕೆ?
● ಉಪವಾಸದ ಮೂಲಕ ದೇವದೂತರ ಸಂಚಲನೆಯನ್ನು ಉಂಟು ಮಾಡುವುದು.
● ಹೊಸ ಒಡಂಬಡಿಕೆಯ ನಡೆದಾಡುವ ದೇವಾಲಯ.
● ಪ್ರಾರ್ಥನಾ ಜೀವಿತ ಜೀವಿಸಲು ಕೆಲವು ಪ್ರಾಯೋಗಿಕ ಸಲಹೆಗಳು.
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2026 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್