ಅನುದಿನದ ಮನ್ನಾ
ನಿಮ್ಮ ಆರಾಮದಾಯಕ ವಲಯದಿಂದ ಹೊರಬನ್ನಿ.
Friday, 26th of January 2024
0
0
454
Categories :
ಆರಾಮ ವಲಯ (Comfort zone)
"ಯೆಹೋವನು ಅಬ್ರಾಮನಿಗೆ - ನೀನು ಸ್ವದೇಶವನ್ನೂ ಬಂಧು ಬಳಗವನ್ನೂ ತಂದೆಯ ಮನೆಯನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟುಹೋಗು. [2] ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡಿ ಆಶೀರ್ವದಿಸಿ ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು."(ಆದಿಕಾಂಡ 12:1-2).
ಪ್ರತಿಯೊಬ್ಬರಿಗೂ ತಮ್ಮದೇ ಆದ ಆರಾಮದಾಯಕ ವಲಯವಿರುತ್ತದೆ.
1. ಒಂದು ನಿರ್ದಿಷ್ಟ ಮಟ್ಟದ ಉಷ್ಣತೆಯ ವಾತಾವರಣವಿದ್ದರೆ ನಮಗೆ ತುಂಬಾ ಆರಾಮದಾಯಕ ಎನಿಸುತ್ತದೆ.
2. ನಮಗೆ ಸುಲಭ ಎನಿಸುವ ಜೀವನ ಶೈಲಿಯು ನಮಗೆ ಆರಾಮದಾಯಕ ಎನಿಸುತ್ತದೆ.
3. ಸಭೆಯು ಮುಗಿದ ನಂತರ ಕೆಲವು ಜನರ ಗುಂಪಿರುತ್ತದೆ. ಅವರೊಟ್ಟಿಗೆ ಮಾತಾಡುವದೆಂದರೆ ನಮಗೆ ಇನ್ನೂ ಅಧಿಕವಾದ ಆರಾಮದಾಯಕ ಅನುಭವ ಕೊಡುತ್ತದೆ ಎನಿಸುತ್ತದೆ.
ಈ ಆರಾಮದಾಯಕ ವಲಯ ಎಂದರೇನು?
ನಿಮ್ಮ ಆರಾಮದಾಯಕ ವಲಯ ಎಂಬುವಂತದ್ದು ನಿಮಗೆ ಚಿರಪರಿಚಿತವಾದ ಜನರು,ಸ್ಥಳ, ವಸ್ತು ಮತ್ತು ಅಭ್ಯಾಸಗಳಿಂದ ಉಂಟಾದ ವಲಯವಾಗಿದೆ. ದೇವರು ಅಬ್ರಹಾಮನನ್ನು ಆಶೀರ್ವದಿಸುವುದ್ದಕ್ಕೆ ಮೊದಲು ಅಬ್ರಹಾಮನನ್ನು ಅವನ ಆರಾಮದಾಯಕ ವಲಯದಿಂದ ಹೊರಬರಲು ಹೇಳಿದನು. ಸತ್ಯವೇನೆಂದರೆ ನಾವು ನಮ್ಮ ಆರಾಮದಾಯಕ ವಲಯವನ್ನು ಬಿಟ್ಟು ಹೊರಬರುವವರೆಗೂ ದೇವರು ನಮಗಾಗಿ ಇಚ್ಚೈಸಿರುವ ಆಶೀರ್ವಾದಗಳಾವುವೂ ಸಹ ಆತನು ನಮಗಾಗಿ ದಯಪಾಲಿಸಲು ಸಾಧ್ಯವಿಲ್ಲ.
"ಮಾತಾಡುವದನ್ನು ಮುಗಿಸಿದ ಮೇಲೆ ಸೀಮೋನನಿಗೆ - ಆಳವಾದ ಸ್ಥಳಕ್ಕೆ ದೋಣಿಯನ್ನು ನಡಿಸಿ ಮೀನುಬೇಟೆಗಾಗಿ ನಿಮ್ಮ ಬಲೆಗಳನ್ನು ಹಾಕಿರಿ ಎಂದು ಹೇಳಿದನು."(ಲೂಕ 5:4).
ದೇವರು ನಿಮ್ಮನ್ನು ಅಧಿಕಾಧಿಕವಾಗಿ ಆಶೀರ್ವದಿಸಬೇಕೆಂದು ಬಯಸುತ್ತಾನೆ!.ಈ ಕಾರಣದಿಂದಲೇ ಆತನು ಸೀಮೋನಿಗೆ ದೋಣಿಯನ್ನು ಆಳವಾದ ಸ್ಥಳಕ್ಕೆ ನಡೆಸಿ ಮೀನು ಬೇಟೆಗಾಗಿ ನಿಮ್ಮ ಬಲೆಗಳನ್ನು ಹಾಕಿರಿ ಎಂದು ಹೇಳಿದನು. ಆಳವಾದ ಸ್ಥಳಕ್ಕೆ ಹೋದಾಗಲೇ,ಹೆಚ್ಚಾದ ಪ್ರಮಾಣದಲ್ಲಿ ಒಳ್ಳೆಯ ಗುಣಮಟ್ಟದಲ್ಲಿರುವ ಮೀನುಗಳನ್ನು ಹಿಡಿಯಲು ಸಾಧ್ಯ. ನೀವು ದಡದಲ್ಲಿಯೇ ನಿಂತು ತೀರದ ನೀರಿನಲ್ಲಿ ಅವುಗಳನ್ನು ಪಡೆಯಲು ಸಾಧ್ಯವಿಲ್ಲ. ಆದರೆ ಆಳವಾದ ಜಾಗಕ್ಕೆ ಹೋಗಬೇಕೆಂದರೆ ನಿಮಗೆ ಆರಾಮದಾಯಕ ವಲಯ ಎನಿಸುವ ದಡವನ್ನು ಬಿಟ್ಟು ದೂರ ಹೋಗಲೇಬೇಕು.
ಈಗ ನಿಮಗೆ ನಿಮ್ಮ ಆಶೀರ್ವಾದಕ್ಕಿಂತಲೂ ನಿಮ್ಮ ಆರಾಮವೇ ನಿಮಗೆ ಮುಖ್ಯ ಎನಿಸುತ್ತಿದ್ದರೆ ನೀವು ಎಂದಿಗೂ ಆಶೀರ್ವಾದವನ್ನು ಹೊಂದುಕೊಳ್ಳುವುದಿಲ್ಲ. ಆದರೆ ಯಾರ್ಯಾರು ತಮ್ಮ ಆರಾಮದಾಯಕ ವಲಯವನ್ನು ಬಿಟ್ಟು ಮುಂದೆ ಹೋಗಲು ಮನಸ್ಸು ಮಾಡುತ್ತಾರೆಯೋ ಅವರಿಗೆ ದೇವರು "ಇಗೋ, ನಾನು ಹೊಸದಾದ ಕಾರ್ಯ ಮಾಡುವೆನು" ಎನ್ನುವನು
ಕೆಲವರು ಆತ್ಮಿಕ ಸ್ಥಿತಿಯಲ್ಲಿಯೂ ಸಹ ಒಂದು ನಿರ್ದಿಷ್ಟ ಆತ್ಮಿಕ ಆರಾಮದಾಯಕ ವಲಯದಲ್ಲೇ ನಿಂತುಬಿಟ್ಟಿರುತ್ತಾರೆ.
1. ನಮ್ಮವರಲ್ಲಿ ಕೆಲವರಿಗೆ ವರ್ಷದಲ್ಲಿ ಒಮ್ಮೆ 15 ನಿಮಿಷಗಳಷ್ಟು ಪ್ರಾರ್ಥನೆ ಮಾಡಿದರೆ ಸಾಕು ಅದೇ ಆರಾಮ ಎಂದೆನಿಸುತ್ತದೆ.
2. ನಮ್ಮಲ್ಲಿ ಕೆಲವರಿಗೆ ಎಂದಿಗೂ ಹೊಸದಾದ ಆತ್ಮಗಳನ್ನು ಆದಾಯ ಮಾಡಬೇಕು ಎನಿಸುವುದಿಲ್ಲ. ಏಕೆಂದರೆ ನಮ್ಮ ಜೊತೆ ಈಗ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಜನರ ಜೊತೆಯಲ್ಲಿಯೇ ನಾವು ತುಂಬಾ ಆನಂದವಾಗಿದ್ದೇವೆ ಎಂದುಕೊಳ್ಳುತ್ತಾರೆ.
3. ನಮ್ಮಲ್ಲಿ ಕೆಲವರು ಇಂದಿಗೂ ಸಹ 50 ರೂಗಳಿಗಿಂತ 100ರೂಗಳಿಗಿಂತ ಹೆಚ್ಚಾದ ಕಾಣಿಕೆಯನ್ನು ಸಮರ್ಪಿಸುವುದಿಲ್ಲ. (ನಾನಿಲ್ಲಿ ನೀವು ಹೀಗೆ ಮಾಡಿದರೆ ನಿಮ್ಮ ಹಣ ನನಗೆ ದೊರಕುತ್ತದೆ ಎಂಬ ಉದ್ದೇಶದಿಂದ ಹೇಳುತ್ತಿಲ್ಲ ಆದರೆ ನೀವು ಈ ಚಕ್ರದಿಂದ ಹೊರ ಬರಬೇಕೆಂದು ಹೇಳುತ್ತಿದ್ದೇನೆ).
4. ನಮ್ಮಲ್ಲಿ ಕೆಲವರು ಎಂದಿಗೂ ಉಪವಾಸ ಮಾಡುವುದಿಲ್ಲ
5. ನಮ್ಮಲ್ಲಿ ಕೆಲವರು ತಿಂಗಳುಗಟ್ಟಲೆಯಾದರೂ ಮತ್ತೂ ಕೆಲವರು ವರ್ಷಗಳಾದರೂ ಇನ್ನೊಬ್ಬರ ಮೇಲೆ ಹಗೆಯನ್ನು ದ್ವೇಷವನ್ನು ಸಾಧಿಸುತ್ತಲೇ ಇರುತ್ತಾರೆ. ಅನೇಕರಿಗೆ ಇದು ತುಂಬಾ ಆರಾಮದಾಯಕ ವಿಧಾನ ಎನಿಸುತ್ತದೆ
ಯೇಸುಸ್ವಾಮಿಯು ಜನರಿಗೆ ಮೀನನ್ನೂ ರೊಟ್ಟಿಯನ್ನೂ (ಹಿತವಾದ ಆಹಾರ) ಉಣ ಬಡಿಸಿದಾಗ ಅವರು ಆತನನ್ನು ಅರಸನನ್ನಾಗಿ ಮಾಡಬೇಕೆಂದು ಯೋಚಿಸಿದರು.
ಆದರೆ ಯಾವಾಗ ಯೇಸು ಸ್ವಾಮಿಯು ತಿನ್ನಲು ತನ್ನ ದೇಹವನ್ನು, ಕುಡಿಯಲು ತನ್ನ ರಕ್ತವನ್ನು (ಅಹಿತವಾದ ಆಹಾರ) ಕೊಡುತ್ತೇನೆ ಎಂದು ಹೇಳಿದನೋ, ಆಗ ಅವರೆಲ್ಲರೂ ಆತನನ್ನು ಬಿಟ್ಟು ಅಗಲಿ ಹೋದರು. ಹೀಗೆಯೇ ಇಂದೂ ಸಹ ಅನೇಕ ಜನರು ಇರುವಂತದ್ದು.
ದಯವಿಟ್ಟು ಈ ರೀತಿಯ ಜನರಂತೆ ಆಗಬೇಡಿರಿ.!
ನಾವು ತುಂಬಾ ಆರಾಮದಾಯಕವಾದ ಸ್ಥಿತಿಯಲ್ಲಿ ಇರುವಾಗ ನಾವು ಮುಂದಕ್ಕೆ ಚಲಿಸುವುದೇ ಇಲ್ಲ ನಾವು ಚಳುವಳಿಗಳಾಗದೇ,ಸ್ಮಾರಕಗಳಾಗಿಯೇ ಉಳಿದುಬಿಡುತ್ತೇವೆ.
"ನಂಬಿಕೆಯಿಂದಲೇ ಅಬ್ರಹಾಮನು ಕರೆಯಲ್ಪಟ್ಟ ಕೂಡಲೆ ಕರೆದಾತನ ಮಾತನ್ನು ಕೇಳಿ ತಾನು ಬಾಧ್ಯವಾಗಿ ಹೊಂದಬೇಕಾಗಿದ್ದ ಸ್ಥಳಕ್ಕೆ ಹೊರಟು ಹೋದನು; ತಾನು ಹೋಗಬೇಕಾದ ಸ್ಥಳವು ಯಾವದೆಂದು ತಿಳಿಯದೆ ಹೊರಟನು."(ಇಬ್ರಿಯರಿಗೆ 11:8)
ಅನೇಕರು ತಮ್ಮ ಆರಾಮದಾಯಕ ವಲಯವನ್ನು ಬಿಟ್ಟು ಬರುವ ಬೆಲೆಯನ್ನು ಕಟ್ಟಲು ನಿರಾಕರಿಸಿಬಿಟ್ಟಿರುವ ಕಾರಣ ಅವರು ದೇವರು ತಮಗೆ ಕೊಟ್ಟಿರುವ ಕರೆಯನ್ನು ಪೂರೈಸಲು ಅಸಮರ್ಥರಾಗಿದ್ದಾರೆ. ವೈವಿದ್ಯವಾಗಿ ಕಾರ್ಯ ಮಾಡಲು ಧೈರ್ಯ ಮಾಡಿರಿ.ದೇವರು ನಿಮಗಾಗಿ ಇಟ್ಟಿರುವ ಕರೆಯನ್ನು ನೆರವೇರಿಸಲು ನಿಮ್ಮ ಆರಾಮದಾಯಕ ವಲಯವನ್ನು ಬಿಟ್ಟು ಹೊರಬನ್ನಿ.
ಪ್ರಾರ್ಥನೆಗಳು
ಈ ಪ್ರಾರ್ಥನಾ ಕ್ಷಿಪಣಿಗಳು ನಿಮ್ಮ ಹೃದಯದ ಆಳದಿಂದ ಬರುವವರೆಗೂ ಪುನರಾವರ್ತನೆ ಮಾಡಿರಿ. ಆನಂತರವೇ ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗಿರಿ. ಒಂದೊಂದು ಪ್ರಾರ್ಥನಾ ಅಂಶಗಳನ್ನು ವ್ಯಕ್ತಿಗತ ಮಾಡಿಕೊಂಡು ಪ್ರತಿಯೊಂದಕ್ಕೂ ಕನಿಷ್ಠ ಪಕ್ಷ ಒಂದೊಂದು ನಿಮಿಷವಾದರೂ ಮುಡಿಪಾಗಿಡಿ. ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗುವ ಮೊದಲು ನಿಜವಾಗಿಯೂ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೆರೋ ಎಂದು ಖಚಿತ ಪಡಿಸಿಕೊಳ್ಳಿ.
1. ತಂದೆಯೇ ನನ್ನ ಜೀವನದಲ್ಲಿ ನನಗಾಗಿ ಇಟ್ಟಿರುವ ನಿನ್ನ ಯೋಜನೆಯನ್ನು ಪೂರೈಸಲು ಯೇಸು ನಾಮದಲ್ಲಿ ನನಗೆ ನಿಮ್ಮ ಬಲವನ್ನು ಅನುದಿನವೂ ಅನುಗ್ರಹಿಸಿ.
2. ನನ್ನ ವಿರುದ್ಧವಾಗಿ ಕಾರ್ಯ ಮಾಡುತ್ತಿರುವ ಎಲ್ಲಾ ಸ್ಥಬ್ಧತೆಯ ಬಲವೇ ಯೇಸು ನಾಮದಲ್ಲಿ ಸುಟ್ಟು ಬೂದಿಯಾಗು. ನಿನ್ನ ಸಮಯ ಮುಗಿದಿದೆ,ಯೇಸು ನಾಮದಲ್ಲಿ ನನ್ನನ್ನು ಬಿಟ್ಟು ತೊಲಗು.
3. ಯೇಸು ನಾಮದಲ್ಲಿ ನಾನು ಉನ್ನತ ಸ್ಥಿತಿಗೆ ಇರುವೆನು.ಆಮೆನ್
Join our WhatsApp Channel
Most Read
● ಕರ್ತನೇ, ನನ್ನ ಚಿತ್ತ- ಚಂಚಲಗೊಳಿಸುವ ಸಂಗತಿಗಳಿಂದ ನನ್ನನ್ನು ಬಿಡಿಸು.● ಯುದ್ಧಕ್ಕಾಗಿ ತರಬೇತಿ.
● ಬೀಜದಲ್ಲಿರುವ ಶಕ್ತಿ-1
● ಶಾಂತಿಯು ನಮ್ಮ ಬಾಧ್ಯತೆಯಾಗಿದೆ.
● ಕೃಪೆಯಿಂದಲೇ ರಕ್ಷಣೆ
● ದೇವರವಾಕ್ಯವನ್ನು ಮಾರ್ಪಡಿಸಬೇಡಿರಿ
● ವಿವೇಚನೆ v/s ತೀರ್ಪು
ಅನಿಸಿಕೆಗಳು