ಅನುದಿನದ ಮನ್ನಾ
ಅಭಿಷೇಕಕ್ಕಿರುವ ಪ್ರಪ್ರಥಮ ಶತೃ
Monday, 29th of January 2024
2
1
364
Categories :
ಅಭಿಷೇಕ(Anointing)
ಚಿತ್ತಚಂಚಲತೆ(Distraction)
ಇಂದಿನ ಧಾವಂತವಾಗಿ ಓಡುವ ಜೀವನದ ಪರಿಸರದಲ್ಲಿ ನಾವು ದೇವರೊಂದಿಗೆ ಸಂಪರ್ಕದಲ್ಲಿರದಂತೆ, ದೇವರು ನಮಗಾಗಿ ನಿಯೋಜಿಸಿದ ಉದ್ದೇಶವನ್ನು ನೆರವೇರಿಸದಂತೆ ನಮ್ಮನ್ನು ಅಡ್ಡದಾರಿಗೆ ಎಳೆಯುವಂತಹ ಚಿತ್ತ ಚಂಚಲತೆಯ ವಿಚಾರಗಳು ಇಂದು ಸರ್ವೇಸಾಮಾನ್ಯ. "ಅಭಿಷೇಕಕ್ಕಿರುವ ಪ್ರಪ್ರಥಮ ಶತ್ರುವೆಂದರೆ ಅದು ಚಿತ್ತ ಚಂಚಲತೆ" ಎಂದು ಒಬ್ಬ ದೇವರ ಮನುಷ್ಯನು ಹೇಳಿದ್ದನ್ನು ಒಮ್ಮೆ ನಾನು ಕೇಳಿದ್ದೇನೆ. ಈ ಒಂದು ಭಾವವು ಇಡೀ ಸತ್ಯವೇದದ ತುಂಬೆಲ್ಲ ಪ್ರತಿದ್ವನಿಸಿ ನಮಗೆ ಅಂತವುದೇನೂ ತೊಂದರೆ ಪಡಿಸುವಂತದಲ್ಲ ಎಂದು ಎನಿಸುತ್ತಲೇ ನಮ್ಮ ಆತ್ಮಿಕ ಪ್ರಯಾಣದ ಮೇಲೆ ಪ್ರಮುಖವಾದ ಪರಿಣಾಮಗಳನ್ನು ಇವು ಬೀರುತ್ತವೆ.
ಬದುಕು ಬಾಳಿನ ಒತ್ತಡದ ಪ್ರಲೋಭನೆಗಳು.
ನಮ್ಮ ಜೀವನವು ಅನೇಕ ಬೇಡಿಕೆಗಳಿಂದಲೂ ಒತ್ತಡಗಳಿಂದಲೂ ತುಂಬಿದಾಗಿದ್ದು ಪ್ರತಿಯೊಂದು ಸಹ ನಮ್ಮ ಗಮನವನ್ನು ಅಪೇಕ್ಷಿಸುತ್ತದೆ. ಈ ಚಿತ್ತ ಚಂಚಲತೆಯ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದಾಗ ಅವು ನಮ್ಮನ್ನು ದೈವಿಕ ಪಥದಿಂದ ದಾರಿ ತಪ್ಪಿಸಲೆಂದೇ ಇವೆ ಎಂಬುದು ಸ್ಪಷ್ಟವಾಗುತ್ತದೆ. ಮತ್ತಾಯ 6:33ರಲ್ಲಿ ನಮಗೊಂದು ಬಲವಾದ ಎಚ್ಚರಿಕೆಯ ಮಾತಿದೆ ಅದೇನೆಂದರೆ "ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು." ಎಂದು. ಈ ವಾಕ್ಯವು ನಾವು ನಮ್ಮ ಪ್ರಾಪಂಚಿಕವಾದ ವಿಚಾರಗಳಿಗಿಂತ ಆತ್ಮಿಕ ಪ್ರಯಾಣಕ್ಕೆ ಹೆಚ್ಚಾದ ಪ್ರಾಶಸ್ತ್ಯ ನೀಡಬೇಕೆಂದು ನಮ್ಮನ್ನು ಉತ್ತೇಜಿಸುತ್ತದೆ.
ಸೈತಾನನ ಕ್ರಿಯೆ : ಚಿತ್ತ ಚಂಚಲತೆಯನ್ನು ತನ್ನ ಆಯುಧವಾಗಿ ಬಳಸಿಕೊಳ್ಳುವುದು.
ಶತ್ರುವಾದ ಸೈತಾನನು ಯಾವಾಗಲೂ ದೇವರಿಂದ ನಮ್ಮ ಲಕ್ಷ್ಯವನ್ನು ಬೇರೆಡೆಗೆ ಸೆಳೆಯಲು ಚಿತ್ತ ಚಂಚಲತೆಯ ವಿಚಾರಗಳನ್ನು ಸಾಧನವಾಗಿ ಬಳಸುತ್ತಾನೆ.ಕ್ರೈಸ್ತರಾಗಿ ನಾವು ಈ ಚಿತ್ತ ಚಂಚಲತೆಯನ್ನು ಗುರುತಿಸುವಂಥದ್ದು ಹೋರಾಡುವಂಥದ್ದು ನಮಗೆ ಇರುವ ನಿರ್ಣಾಯಕ ಕಾರ್ಯವಾಗಿದೆ.ಎಫಸ್ಸೆ 6:11ರಲ್ಲಿನ ವಾಕ್ಯವು "ಸೈತಾನನ ತಂತ್ರೋಪಾಯಗಳನ್ನು ನೀವು ಎದುರಿಸಿ ನಿಲ್ಲುವದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ. "ಎಂದು ನಮ್ಮನ್ನು ಒತ್ತಾಯ ಪಡಿಸುತ್ತದೆ
ಚಿತ್ತ ಚಂಚಲದ ವಿಚಾರಗಳ ಬಗೆಗಿನ ಅರಿವು ಮತ್ತು ಆತ್ಮಿಕ ಸಿದ್ಧತೆಗಳೇ ನಮ್ಮ ಗಮನವನ್ನು ವಿಕೇಂದ್ರೀಕರಣ ಗೊಳಿಸುವ ವಿಚಾರದಿಂದ ಹೊರಬರಲಿರುವ ಕೀಲಿ ಕೈಗಳಾಗಿವೆ.
ಈ ಚಿತ್ತ ಚಂಚಲತೆಯು ನಮ್ಮನ್ನು ಪರಿಣಾಮಕಾರಿಯಾಗಿ ಕರ್ತನ ಸೇವೆ ಮಾಡಲಾಗದಂತೆ ನಮ್ಮ ಸಾಮರ್ಥ್ಯವನ್ನೆಲ್ಲಾ ತಡೆ ಹಿಡಿಯುವಂತದ್ದಾಗಿದೆ.1 ಕೊರಿಯಂತೆ 7:35 ನಮ್ಮನ್ನು ಈ ರೀತಿ ಎಚ್ಚರಿಸುತ್ತದೆ "ನೀವು ಯಾವುದೇ ಭಿನ್ನಭಾವವಿಲ್ಲದೆ ಕರ್ತನ ಸೇವೆ ಮಾಡುವಂಥವರಾಗಿರಬೇಕು".. ಎಂದು ನಮ್ಮ ಗಮನವು ಚಿದ್ರ ಚಿದ್ರವಾಗಿದ್ದರೆ ನಮ್ಮ ಸೇವೆಯೂ ಸಹ ದುರ್ಬಲವಾಗಿ ಬಿಡುತ್ತದೆ. ಸೇವೆ ಎಂಬುದು ಕೇವಲ ಕೆಲಸವಲ್ಲ, ಬದಲಾಗಿ ಹೃದಯಪೂರ್ವಕವಾದ ಭಕ್ತಿಯಿಂದ ಸೇವಿಸುವಂತದ್ದಾಗಿದೆ.
ಲೂಕ 10.40 ರಲ್ಲಿ ಕರ್ತನ ಸೇವೆಯ ಗಡಿಬಿಡಿಯಲ್ಲೇ ಕಳೆದು ಹೋದಂತಹ ಮಾರ್ಥಾಳ ಚರಿತ್ರೆಯು ನಮಗೆ ಇದನ್ನು ವಿವರಿಸುತ್ತದೆ. ನಾವು ಎಷ್ಟೇ ಸದುದ್ದೇಶದಿಂದ ದೇವರ ಸೇವೆ ಕಾರ್ಯಗಳಲ್ಲಿ ಆಸಕ್ತರಾಗಿದ್ದರೂ ಸಹ ಅವು ಕ್ರಿಸ್ತನ ಮೇಲೆ ನಾವು ಲಕ್ಷ್ಯವಿಡದಂತೆ ನಮ್ಮನ್ನು ತಡೆಯುತ್ತಿದ್ದರೆ ಆ ಸೇವೆಗಳು ಸಹ ಚಿತ್ತ ಚಂಚಲತೆ ಉಂಟು ಮಾಡುವ ಕಾರ್ಯಗಳಾಗಿ ಬಿಡುತ್ತದೆ ಎಂಬುದನ್ನು ನಾವು ಈ ಒಂದು ಸನ್ನಿವೇಶದಿಂದ ಕಲಿತುಕೊಳ್ಳಬಹುದು. ನಮ್ಮ ಸೇವೆಗಳು ನಮ್ಮ ಭಕ್ತಿಯನ್ನು ಬಿಂಬಿಸಬೇಕೇ ಹೊರತು ನಮ್ಮ ಚಿತ್ತವನ್ನು ಚಂಚಲಗೊಳಿಸಬಾರದು. ನಾವು ನಮ್ಮ ಸೇವೆ ಮತ್ತು ನಮ್ಮ ಭಕ್ತಿ ಇವೆರಡರ ಸಮತೋಲನವನ್ನು ಕಾಯ್ದುಕೊಂಡಿದ್ದೇವೆಯೋ ಎಂಬುದನ್ನು ಖಾತರಿಪಡಿಸಿಕೊಳ್ಳುವುದು ಬಹು ಮುಖ್ಯ ಕಾರ್ಯವಾಗಿದೆ.
ಚಿತ್ತ ಚಂಚಲತೆಯೊಂದಿಗೆ ನನ್ನ ವೈಯಕ್ತಿಕ ಹೋರಾಟ.
ನಾನು ಸಹ ನನ್ನ ಜೀವನದಲ್ಲಿ 'ಬಹಳವಾದ ಕಾರ್ಯವನ್ನು ಮಾಡಬೇಕು' ಎಂಬ ಪ್ರಲೋಭನೆಯೊಂದಿಗೆ ಬಹಳ ಸೆಣಸಾಡಿದ್ದೇನೆ. ಅಸಂಖ್ಯಾತ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂಬ ಬಯಕೆಯೂ ಸಹ ಅಗಾಧವಾಗಿ ಬಿಡಬಹುದು.ಆಗ ಕೀರ್ತನೆ 46:10 "ಬಿಡಿರಿ, ನಾನೇ ದೇವರು ಎಂದು ತಿಳಿದುಕೊಳ್ಳಿ" ಎಂಬ ವಾಕ್ಯವು ನಿಶ್ಚಿಂತೆಯಿಂದ ನಿಶ್ಚಲವಾಗಿ ನಾವು ಸುಮ್ಮನೆ ಇರುವ ಮೂಲಕವೇ ದೇವರು ನಮಗೆ ಕೊಟ್ಟಿರುವ ಕರೆಯ ಬಗೆಗೆ ಸ್ಪಷ್ಟತೆಯನ್ನೂ ಮತ್ತು ಲಕ್ಷ್ಯವಿಡುವುದನ್ನೂ ನಾವು ಕಂಡುಕೊಳ್ಳಬಹುದು ಎಂದು ಸಲಹೆ ನೀಡಿತು. ಕರ್ತನು ನಾನು ಸುಮ್ಮನಿದ್ದು ಎಲ್ಲದಕ್ಕೂ ದೇವರನ್ನೇ ಎದುರು ನೋಡುವುದರ ಮಹತ್ವವನ್ನು ನನಗೆ ಕಲಿಸಿಕೊಟ್ಟು ನಾನು ನಿಜವಾಗಿ ಯಾವುದಕ್ಕಾಗಿ ಕರೆಯಲ್ಪಟ್ಟಿದ್ದೇನೋ ಅದರ ಮೇಲೆ ಮಾತ್ರ ನನ್ನ ಗಮನವನ್ನು ಕೇಂದ್ರೀಕರಿಸುವಂತೆ ಮಾರ್ಗದರ್ಶನ ನೀಡಿದನು.
ಇತರರನ್ನು ನೋಡಿ ಅವರಂತೆ ಆಗಲು ಯೋಚಿಸುವ ಚಿತ್ತ ಚಂಚಲತೆಗಳು ಸಹ ದೇವರು ನಮಗಾಗಿ ಇಟ್ಟಿರುವ ವಿಭಿನ್ನವಾದ ಕರೆಯಿಂದ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯಬಹುದು .ರೋಮಾಪುರದವರಿಗೆ 12:2
"ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ." ಎಂದು ಸಲಹೆ ನೀಡುತ್ತದೆ. ನಾವು ಇತರರ ಜೀವನ ಶೈಲಿಯನ್ನು ಅನುಕರಣೆ ಮಾಡದೆ ನಮಗಾಗಿ ಇಟ್ಟಿರುವ ವೈಯಕ್ತಿಕ ಮಾರ್ಗದರ್ಶನವನ್ನು ಅಪ್ಪಿಕೊಂಡು ಸಾಗುತ್ತಾ ನಮ್ಮ ಜೀವಿತದಲ್ಲಿ ದೇವರ ಮಾರ್ಗದರ್ಶನವನ್ನು ಮಾತ್ರ ಎದುರು ನೋಡಬೇಕು.
ಸಾಮಾಜಿಕ ಜಾಲತಾಣಗಳಿಂದ ಆಗುವ ಚಿತ್ತ ಚಂಚಲತೆ.
ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಅಂತಹ ಸಾಮಾಜಿಕ ಜಾಲತಾಣಗಳ ವೇದಿಕೆಗಳು ಸಂಪರ್ಕ ಸಾಧಿಸಲು ಮೌಲ್ಯವುಳ್ಳ ಉಪಕರಣಗಳಾಗಿದ್ದರೂ ಇವೂ ಸಹ ಚಿತ್ತ ಚಂಚಲತೆಗೊಳಿಸುವ ಬಹು ಮುಖ್ಯ ಅಂಶಗಳಾಗಿ ಬಿಟ್ಟಿವೆ. ಚಿತ್ತ ಚಂಚಲತೆಯ ಅಪಾಯಗಳು ಆ ವೇದಿಕೆಗಳಲ್ಲಿರದೇ ಅವು ನಮ್ಮನ್ನು ಅರ್ಥಪೂರ್ಣವಾದ ದೈವಾನ್ವೇಷಣೆಯಿಂದ ನಮ್ಮನ್ನು ದೂರ ಮಾಡುವಷ್ಟರ ಮಟ್ಟಿಗೆ ನಮ್ಮ ಸಮಯ ಹಾಗೂ ಗಮನದ ಮೇಲೆ ಅವುಗಳು ಸಾರ್ವಭೌಮತ್ವವನ್ನು ಹೊಂದಿರುವಂಥದ್ದು ಅಪಾಯಕಾರಿಯಾಗಿದೆ.
"ಮೇಲಿರುವಂಥವುಗಳ ಮೇಲೆ ಮನಸ್ಸಿಡಿರಿ, ಭೂಸಂಬಂಧವಾದವುಗಳ ಮೇಲೆ ಇಡಬೇಡಿರಿ."ಎಂದು ಕೊಲೊಸ್ಸೆಯವರಿಗೆ 3:2 ನಮಗೆ ಸೂಚನೆ ನೀಡುತ್ತದೆ. ಈ ವಾಕ್ಯವು ಲೌಕಿಕವಾಗಿ ಚಿತ್ತ ಚಂಚಲಪಡಿಸುವ ವಿಚಾರಗಳನ್ನು ಬಿಟ್ಟು ಆತ್ಮಿಕ ಜೀವಿತದ ಮೇಲೆ ನಾವು ಪ್ರಾಶಸ್ತ್ಯ ನೀಡಬೇಕು ಎಂದು ನಮ್ಮನ್ನು ಎಚ್ಚರಿಸುತ್ತದೆ.
ಅತಿಯಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುವಂಥದ್ದು ನಮ್ಮನ್ನು ದೇವರಿಂದಲೂ ನಮ್ಮ ಪ್ರೀತಿ ಪಾತ್ರದಿಂದಲೂ ಸಂಪರ್ಕ ಕಳೆದುಕೊಳ್ಳುವಂತೆ ಮಾಡಬಲ್ಲವು. ಇಂದಿನ ಜಗತ್ತಿನಲ್ಲಿ ಆನ್ ಲೈನ್ ಬಳಕೆಯು ಅತಿರೇಕಕ್ಕೆ ಹೋಗಿರುವುದರಿಂದ ನಿಜವಾದ ವೈಯಕ್ತಿಕ ಸಂಪರ್ಕದ ಮಹತ್ವವೇನು ಎಂಬುದನ್ನು ಅರಿತುಕೊಳ್ಳಬೇಕಾದುದು ನಿರ್ಣಾಯಕವಾಗಿದೆ. ಇಬ್ರಿಯ 10: 24 -25 ರ ವಾಕ್ಯವು ಒಬ್ಬರನ್ನೊಬ್ಬರನ್ನು ಅರ್ಥಮಾಡಿಕೊಳ್ಳಲು ಪರಸ್ಪರ ಪ್ರೀತಿಸಲು,ಒಳಿತುಗಳನ್ನು ಹಂಚಿಕೊಳ್ಳಲು ಎಲ್ಲರೂ ಒಂದಾಗಿ ಪರಸ್ಪರ ಕೂಡಿಕೊಳ್ಳುವ ಅಭ್ಯಾಸವನ್ನು ನಾವು ಬಿಟ್ಟುಬಿಡಬಾರದು ಎಂದು ನಮ್ಮನ್ನು ಉತ್ತೇಜಿಸುತ್ತದೆ. ನಾವು ಆತ್ಮಿಕವಾಗಿಯೂ ಭಾವನಾತ್ಮಕವಾಗಿಯೂ ಬೆಳೆಯಲು ಸಂಬಂಧಗಳ ಪೋಷಣೆಯ ಮೌಲ್ಯವು ಎಷ್ಟರಮಟ್ಟಿಗೆ ಅಗತ್ಯ ಎಂಬುದನ್ನು ಇದು ಒತ್ತಿ ಹೇಳುತ್ತದೆ.
ಈ ಒಂದು ಜಗತ್ತಿನ ಗಲಾಟೆಗಳ ನಡುವೆಯೂ ದೇವರ ಹೃದಯದ ಸಾಮಿಪ್ಯಕ್ಕೆ ನಮ್ಮನ್ನು ಕೊಂಡೊಯ್ಯುವ ದೇವರ ವಾಕ್ಯದ ಜ್ಞಾನಕ್ಕೆ ನಾವು ಅಂಟಿಕೊಳ್ಳೋಣ.ನಾವು ದೇವರೊಂದಿಗಿರುವ ನಮ್ಮ ಸಂಬಂಧದ ಮೇಲೂ ಮತ್ತು ದೇವರು ನಮಗಾಗಿ ಇಟ್ಟಿರುವ ವಿಶೇಷ ಕರೆಯ ಕಡೆಗೂ ನಮ್ಮ ಪ್ರಾಶಸ್ತ್ಯವನ್ನು ನೀಡುವ ಮುಖಾಂತರ ನಾವು ಈ ಎಲ್ಲಾ ಚಿತ್ತ ಚಂಚಲತೆಗಳನ್ನು ಗೆಲ್ಲಬಹುದು ಮತ್ತು ದೇವರು ನಮ್ಮ ಜೀವಿತದಲ್ಲಿ ಇಟ್ಟಿರುವ ಉದ್ದೇಶವನ್ನು ಪರಿಪೂರ್ಣಗೊಳಿಸಬಹುದು.
ಅರಿಕೆಗಳು
ಈ ಪ್ರಾರ್ಥನಾ ಕ್ಷಿಪಣಿಗಳು ನಿಮ್ಮ ಹೃದಯದ ಆಳದಿಂದ ಬರುವವರೆಗೂ ಪುನರಾವರ್ತನೆ ಮಾಡಿರಿ. ಆನಂತರವೇ ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗಿರಿ. ಒಂದೊಂದು ಪ್ರಾರ್ಥನಾ ಅಂಶಗಳನ್ನು ವ್ಯಕ್ತಿಗತ ಮಾಡಿಕೊಂಡು ಪ್ರತಿಯೊಂದಕ್ಕೂ ಕನಿಷ್ಠ ಪಕ್ಷ ಒಂದೊಂದು ನಿಮಿಷವಾದರೂ ಮುಡಿಪಾಗಿಡಿ. ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗುವ ಮೊದಲು ನಿಜವಾಗಿಯೂ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೆರೋ ಎಂದು ಖಚಿತ ಪಡಿಸಿಕೊಳ್ಳಿ.
1. ನಾನೊಂದು ನಿರ್ದಿಷ್ಟ ಉದ್ದೇಶಕ್ಕಾಗಿ ಇರುವ ವ್ಯಕ್ತಿಯಾಗಿದ್ದೇನೆ. ದೇವರು ನನ್ನ ಜೀವಿತಕ್ಕಾಗಿ ದಯಪಾಲಿಸಿರುವ ಆತ್ಮಿಕ ವರಗಳ ಮತ್ತು ಕರೆಗಳಿಗನುಸಾರವಾಗಿ ನಾನು ದೈವಿಕವಾದ ಲಕ್ಷ್ಯದಿಂದ ಯೇಸುನಾಮದಲ್ಲಿ ಕಾರ್ಯ ಮಾಡುತ್ತೇನೆ.(ರೋಮ 11:21)
2. ಕರ್ತನ ಆತ್ಮವು ನನ್ನ ಮೇಲೆಯೂ ಹಾಗೂ ನನ್ನೊಳಗೂ ಇರುವುದರಿಂದ ಆತನು ನನ್ನೊಳಗೆ ಹುದುಗಿಸಿಟ್ಟಿರುವ ವರಗಳು ನನ್ನೊಳಗಿಂದ ಉಕ್ಕುತ್ತವೆ.(2 ತಿಮೋತಿ 1:6)
3. ನಾನು ನಿರ್ದಿಷ್ಟ ಕರೆ ಹೊಂದಿರುವ ವ್ಯಕ್ತಿಯಾಗಿದ್ದು ನಾನು ಕ್ರಿಸ್ತನ ರಾಯಭಾರಿಯಾಗಿದ್ದೇನೆ. ಕರ್ತನೇ ನನ್ನ ಸಹಾಯಕನು. (2ಕೊರಿಯಂತೆ 5:20)
Join our WhatsApp Channel
Most Read
● ಇನ್ನೂ ಯಾವುದಕ್ಕಾಗಿ ಕಾಯುತ್ತಿದ್ದೀರಿ?● ಸೆರೆಯಲ್ಲಿ ದೇವರ ಸ್ತೋತ್ರ
● ಯಾವುದೂ ಮರೆಯಾಗಿಲ್ಲ
● ದಿನ 16:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಸತ್ತವರೊಳಗಿಂದ ಮೊದಲು ಎದ್ದು ಬಂದವನು.
● ದುಷ್ಟ ಮಾದರಿಗಳಿಂದ ಹೊರಬರುವುದು.
● ದಿನ 04:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು