ಅನುದಿನದ ಮನ್ನಾ
2
0
81
ಸಮರುವಿಕೆಯ ಕಾಲ- 3
Wednesday, 22nd of January 2025
Categories :
Fruit of the Spirit
Pruning
" ನೀವು ನನ್ನಲ್ಲಿ ನೆಲೆಗೊಂಡಿರ್ರಿ, ನಾನೂ ನಿಮ್ಮಲ್ಲಿ ನೆಲೆಗೊಂಡಿರುವೆನು. ಕೊಂಬೆಯು ಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೆ ತಾನೇ ಫಲಕೊಡಲಾರದೋ ಹಾಗೆಯೇ ನೀವು ನನ್ನಲ್ಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ.(ಯೋಹಾನ 15:4 )
"ನನ್ನಲ್ಲಿ ನೆಲೆಗೊಂಡಿರ್ರಿ ಮತ್ತು ನಾನು ನಿನ್ನಲ್ಲಿ ನೆಲೆಗೊಂಡಿರುತ್ತೇನೆ" - ಇದರಲ್ಲಿ ಆತನಲ್ಲಿ ನೆಲೆಗೊಳ್ಳುವ ಪ್ರಾಥಮಿಕ ಆಯ್ಕೆಯು ನಮ್ಮದೇ ಆಗಿರುತ್ತದೆ. "ಬಳ್ಳಿಯಲ್ಲಿ ನೆಲೆಗೊಳ್ಳದೆ (ಪ್ರಮುಖವಾಗಿ ಐಕ್ಯವಾಗದೆ) ಯಾವುದೇ ಕೊಂಬೆಯೂ ಸ್ವತಃ ತಾನೇ ಫಲವನ್ನು ನೀಡುವುದಿಲ್ಲವೋ ಹಾಗೆಯೇ ನೀವು ನನ್ನಲ್ಲಿ ನೆಲೆಗೊಳ್ಳದಿದ್ದರೆ ನೀವು ಫಲವನ್ನು ನೀಡಲಾರಿರಿ."
ಸಮರುವಿಕೆಯು ನಮ್ಮ ಫಲಪ್ರದತೆಯ ಮೂಲವನ್ನು ಪ್ರದರ್ಶಿಸುತ್ತದೆಯೇ ಹೊರತು ನಮ್ಮನ್ನು ನಿರುತ್ಸಾಹಗೊಳಿಸುವುದಕ್ಕಾಗಿ ದೇವರು ನಮ್ಮನ್ನು ಕತ್ತರಿಸುವ ಕ್ರಿಯೆಯನ್ನಲ್ಲ. ವಾಸ್ತವವಾಗಿ, ಸಮರುವಿಕೆಯ ಸಮಯವು ನಿಮ್ಮ ಫಲಪ್ರದತೆಯ ನಿಜವಾದ ಮೂಲವನ್ನು ಪ್ರದರ್ಶಿಸುತ್ತವೆ. ಹಾಗೆಂದರೇನು ?ಅದನ್ನು ವಿವರಿಸಲು ನನಗೆ ಅನುಮತಿಸಿ: ನಾವು ಸಮೃದ್ಧಿಯನ್ನು ಹೊಂದಿದ ಕಾಲದಲ್ಲಿ , ನಮ್ಮ ಫಲಪ್ರದತೆಯು ನಮ್ಮ ಸ್ವಂತ ಶ್ರಮದಿಂದ, ನಮ್ಮ ಕಾರ್ಯತಂತ್ರಗಳಿಂದ, ನಮ್ಮ ಪ್ರತಿಭೆಗಳಿಂದ, ನಮ್ಮ ಸಾಮರ್ಥ್ಯಗಳಿಂದ, ಇತ್ಯಾದಿಗಳಿಂದ ಬರುತ್ತದೆ ಎಂದು ನಾವು ನಂಬಿಕೊಳ್ಳಬಹುದು. ಸ್ವಾಭಾವಿಕವಾಗಿ ನಾವು ಹೆಮ್ಮೆಯ ಮನೋಭಾವದಲ್ಲಿ ದೇವರ ಮೇಲೆ ಆಧಾರಗೊಳ್ಳದಂತೆ ವರ್ತಿಸುತ್ತೇವೆ, ಪ್ರಾಕೃತಿಕವಾಗಿ ನಾಸ್ತಿಕರಾಗಿ ಆಗ ಕಾರ್ಯನಿರ್ವಹಿಸಬಹುದು.
ಈ ರೀತಿ ಯೋಚಿಸುವವರು ನಾವು ಮಾತ್ರವಲ್ಲ. ಇತರರೂ ಸಹ ಹಾಗೆಯೇ ಯೋಚಿಸಿ ಮೋಸ ಹೋಗುತ್ತಾರೆ. : “ಓಹ್! ಅದು ಅವನಿಗಿದ್ದ ಅರ್ಹತೆಗಳಿಂದಾಗಿ, ಅಥವಾ ಅವನಿಗಿದ್ದ ಸಂಪರ್ಕಗಳಿಂದಾಗಿ, ಅಥವಾ ಇಂಗ್ಲಿಷ್‌ನ ಮೇಲಿನ ಅವನ ಹಿಡಿತದಿಂದಾಗಿ ಅವನು ಯಶಸ್ವಿಯಾಗಿದ್ದಾನೆ. ಎನ್ನುವಂತ ಹೇಳಿಕೆಗಳನ್ನು ನೀಡುತ್ತಾರೆ. ಆದರೆ, ಸಮರುವಿಕೆಯ ಕಾಲವು ಪ್ರಾರಂಭವಾದಾಗ, ನಿಮ್ಮ ಜೀವನದಲ್ಲಿ ದೇವರು ಇರುವುದರಿಂದ ಮಾತ್ರವೇ ಇದು ಉಂಟಾಗಿದೆ ಎಂದು ನಿಮ್ಮ ಸುತ್ತಲಿರುವ ಪ್ರತಿಯೊಬ್ಬರೂ ತಿಳಿದು ಅದನ್ನೇ ಘೋಷಿಸುತ್ತಾರೆ. ಅವರು ನಿಮ್ಮ ಫಲಪ್ರದತೆಯ ನಿಜವಾದ ಮೂಲವನ್ನು ತಿಳಿದುಕೊಳ್ಳುತ್ತಾರೆ. ನೀವು ಇಲ್ಲಿಯವರೆಗೆ ಬಂದಿರುವುದು ದೇವರಿಂದ ಮಾತ್ರ ಎಂದು ಅವರಿಗೆ ಖಚಿತವಾಗಿ ತಿಳಿಯುತ್ತದೆ. ಮುಂದೇನು? ನಿಮಗೂ ಅದು ತಿಳಿದು ಬರುತ್ತದೆ. ಇದು ನೀವು ಯಾರೆಂಬುದರ ಕಾರಣದಿಂದಲ್ಲ ಆದರೆ ಆತನು ಯಾರಾಗಿದ್ದಾನೋ ಅದರಿಂದಲೇ .
ಸಮರುವಿಕೆ ವಾಸ್ತವವಾಗಿ ಆಳ್ವಿಕೆಯ ತರಬೇತಿಯಾಗಿದೆ.
ಸಮರುವಿಕೆ - ಅದು ಒಂದು ಆಚರಣೆಯೋ ಮತ್ತು ಕೇವಲ ನಿಯಮವೊ ಅಲ್ಲ, ಆದ್ದರಿಂದ ನಾವು ಕ್ರಿಸ್ತನನ್ನು ಹೊರತುಪಡಿಸಿ "ನಾವು ಏನನ್ನೂ ಮಾಡಲು ಸಾಧ್ಯವಿಲ್ಲ" ಎಂಬುದನ್ನು ನಮಗೆ ನಿಜವಾಗಿಯೂ ಅರ್ಥಮಾಡಿಸುವ ವಾಸ್ತವವಾಗಿ ಆಳ್ವಿಕೆಯ ತರಬೇತಿಯಾಗಿದೆ
ನಮ್ಮಲ್ಲಿ ಹೆಚ್ಚಿನವರು ನಾವು ಹೇಗಿದ್ದೆವೋ ಹಾಗೆಯೇ ಅಲ್ಲಿಯೇ ತೃಪ್ತರಾಗಿದ್ದೇವೆ ಎನ್ನುತ್ತಾರೆ ! ನಾವು ಹೇಗಿದ್ದರೂ , ದೇವರು ನಮ್ಮನ್ನು ತುಂಬಾ ಪ್ರೀತಿಸುತ್ತಾನೆ, ಆದರೆ ನಾವು ಎಲ್ಲಿದ್ದೇವೆಯೋ ಮತ್ತು ನಾವು ಇರುವ ರೀತಿಯಲ್ಲಿಯೇ ಆತನು ನಮ್ಮನ್ನು ಬಿಟ್ಟು ಬಿಡುವುದಿಲ್ಲ. ಆತನು ನಮಗಾಗಿ ಹೊಸಮೈಲಿಗಲ್ಲು ಗಳನ್ನು ಇಟ್ಟಿದ್ದಾನೆ .
ಆದರೆ ನಮಗಿರುವ ದೊಡ್ಡ ಪ್ರಶ್ನೆಗಳೇನೆಂದರೆ :
1. ಸಮರುವಿಕೆಯ ಪ್ರಕ್ರಿಯೆಯಲ್ಲಿ ನಾವು ಆತನನ್ನು ನಂಬುತ್ತೇವೆಯೇ?
2. ನಾವು ಸರಿಯಾದ ಕೆಲಸವನ್ನು ಮಾಡುವುದನ್ನು ಮುಂದುವರಿಸುತ್ತೇವೆಯೇ ಮತ್ತು ಲೋಕದೊಡನೆ ರಾಜಿ ಮಾಡಿಕೊಳ್ಳುವುದಿಲ್ಲವೇ? ಎಂಬುದೇ
" ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು." ಎಂದು ಗಲಾತ್ಯದವರಿಗೆ 6:9ನಮ್ಮನ್ನು ಪ್ರೋತ್ಸಾಹಿಸುತ್ತದೆ.
ಅರಿಕೆಗಳು
ತಂದೆಯೇ, ನನ್ನ ಜೀವನದ ಮೇಲೆ ಇರುವ ಪವಿತ್ರಾತ್ಮದ ಅಭಿಷೇಕವು ಸಾವು ಮತ್ತು ವಿನಾಶಕ್ಕೆ ಕರೆಯಲ್ಪಡುವ ಅಥವಾ ಅದಕ್ಕೆ ಸಂಬಂಧಿಸಿದ ಎಲ್ಲವನ್ನೂ ಯೇಸುವಿನ ಹೆಸರಿನಲ್ಲಿ ಹಿಮ್ಮೆಟ್ಟಿಸುತ್ತದೆ ಎಂದು ನಾನು ಅರಿಕೆ ಮಾಡುತ್ತೇನೆ . ನನ್ನ ಕೈಗಳ ಕೆಲಸವೆಲ್ಲವೂ ಸಮೃದ್ಧಿಯಾಗುತ್ತದೆ ಮತ್ತು ಅದು ದೇವರಿಗೆ ಮಹಿಮೆಯನ್ನು ತರುತ್ತದೆ. ನನ್ನ ಫಲಿತಾಂಶಗಳು ಪ್ರಪಂಚದ ಯಾವುದೇ ಆರ್ಥಿಕತೆಯ ಪ್ರಭಾವಕ್ಕೆ ಒಳಗಾಗಲಾರದು ಎಂದು ಯೇಸುನಾಮದಲ್ಲಿ ಅರಿಕೆ ಮಾಡುತ್ತೇನೆ.
Join our WhatsApp Channel

Most Read
● ಭಾನುವಾರದ ಬೆಳಗ್ಗೆ ನಿಗದಿತ ಸಮಯಕ್ಕೆ ಸಭೆಗೆ ಹೋಗುವುದು ಹೇಗೆ● ಯುದ್ಧಕ್ಕಾಗಿ ತರಬೇತಿ.
● ದೇವರಿಗಾಗಿ ದಾಹದಿಂದಿರುವುದು
● ಇದು ನಿಮಗಾಗಿ ಬದಲಾಗುತ್ತಿದೆ
● ದಿನ 25:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ರೂಪಾಂತರ ಹೊಂದಲು ಇರುವ ಸಾಮರ್ಥ್ಯ.
● ಇತರರೊಂದಿಗೆ ಸಮಾಧಾನದಿಂದ ಜೀವಿಸಿರಿ
ಅನಿಸಿಕೆಗಳು