ಅನುದಿನದ ಮನ್ನಾ
ಆ ಸುಳ್ಳುಗಳನ್ನು ಬಯಲಿಗೆಳೆಯಿರಿ.
Wednesday, 28th of February 2024
1
2
385
Categories :
ನಂಬಿಕೆಗಳನ್ನು(Beliefs)
ಇತ್ತೀಚೆಗಷ್ಟೇ ಉತ್ತರ ಭಾರತದಲ್ಲಿನ ಕ್ರೈಸ್ತರ ಸಂಖ್ಯೆ ಅಷ್ಟೇನೂ ಇರದ ಒಂದು ಕಡೆಯಿಂದ ಒಬ್ಬ ಯೌವನಸ್ತನಾದ ಹುಡುಗನು ನನಗೊಂದು ಇ ಮೇಲ್ ಕಳಿಸಿದ್ದನು. ಆ ಹುಡುಗನು ಅವನ ಶಾಲೆಯ ದಿನಗಳಿಂದಲೂ ಅವನು ಯೇಸುವನ್ನು ನಂಬುವುದಕೋಸ್ಕರ ಇತರ ಸಹಪಾಠಿಗಳ ಚುಚ್ಚು ಮಾತುಗಳಿಂದ ಬಾದಿತನಾಗಿದ್ದನು.ಇದು ಅವನಿಗೆ ಕ್ರಿಸ್ತೀಯ ಜೀವಿತವೆಂದರೆ ಕಷ್ಟ ಸಂಕಟಗಳಿಂದ ತುಂಬಿದ ಜೀವನ ಎಂಬ ನಂಬಿಕೆಯನ್ನು ಅವನಲ್ಲಿ ಗಟ್ಟಿಗೊಳಿಸಿತ್ತು.
ಈಗ ಅವನು ಕಾಲೇಜಿಗೆ ಬಂದಿದ್ದರೂ ಈ ನಂಬಿಕೆಯು ಅವನನ್ನು ಏಕಾಂಗಿಯಾಗಿ ಕಪ್ಪೆ ಚಿಪ್ಪಿನಲ್ಲಿ ಬಚ್ಚಿಟ್ಟುಕೊಳ್ಳುವಂತೆ ಯಾರೊಡನೆಯೂ ಸೇರದಂತೆ ಮಾಡಿತ್ತು. ಇದರ ಪರಿಣಾಮವಾಗಿ ಅವನ ಶೈಕ್ಷಣಿಕ ಫಲಿತಾಂಶವೂ ಕಡಿಮೆಯಾಗಿತ್ತು.
ಅದಕ್ಕಾಗಿ ನಾನು ಅವನಿಗೆ ಬರೆದ ಪ್ರತ್ಯುತ್ತರದ ಭಾಗವನ್ನು ಇಲ್ಲಿ ಬರೆಯುತ್ತಿದ್ದೇನೆ ಏಕೆಂದರೆ ಇದು ಇಲ್ಲಿರುವ ಅನೇಕರಿಗೂ ಅನ್ವಯವಾಗುವಂತಿದೆ ಎಂದು ನಾನು ನೆನೆಸುತ್ತೇನೆ.
ನಮ್ಮಲ್ಲಿ ಅನೇಕರ ನಂಬಿಕೆಗಳು ದೇವರ ವಾಕ್ಯದಲ್ಲಿನ ಸತ್ಯದ ಮೇಲೆ ಆಧಾರಗೊಂಡಿಲ್ಲ. ಆದುದರಿಂದಲೇ ನಾನಾಗಲಿ ನೀವಾಗಲಿ ಪ್ರತಿದಿನ ದೇವರ ವಾಕ್ಯವನ್ನು ಓದಲೇಬೇಕು. ( ನೋಹ ಆಪ್ ನಲ್ಲಿರುವ ಅನುದಿನದ ಮನ್ನಾ, ಸತ್ಯವೇದದ ವ್ಯಾಖ್ಯಾನವು ನಿಮಗೆ ಅದಕ್ಕಾಗಿ ಒಳ್ಳೆಯ ಆರಂಭ ಕೇಂದ್ರವಾಗಿದೆ)
ನೀವು ತಿಂಗಳುಗಟ್ಟಲೆ, ವರ್ಷಗಟ್ಟಲೆಯಿಂದ ನಿಮ್ಮ ಅನೇಕ ಪರಿಸ್ಥಿತಿಗಳ ದೆಸೆಯಿಂದ ನೀವು ಕೂಡಿಟ್ಟು ಕೊಂಡಿರುವ ಅನೇಕ ತಪ್ಪಾದ ನಂಬಿಕೆಗಳಿಗೆ ದೇವರ ವಾಕ್ಯದಲ್ಲಿರುವ ಸತ್ಯವು ಸವಾಲನ್ನೊಡ್ದುತ್ತದೆ.
"ಯಾಕಂದರೆ ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, ಯಾವ ಇಬ್ಬಾಯಿಕತ್ತಿಗಿಂತಲೂ ಹದವಾದದ್ದು, ಪ್ರಾಣಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ."(ಇಬ್ರಿಯರಿಗೆ 4:12)
ಗಮನಿಸಿ, ದೇವರ ವಾಕ್ಯವು ನಮ್ಮ ಹೃದಯದಲ್ಲಿರುವ ಆಲೋಚನೆಗಳು ಮತ್ತು ಬಯಕೆಗಳನ್ನು ಬಯಲು ಪಡಿಸುವಂತದ್ದಾಗಿದೆ (ಅದರ ಮೇಲೆ ಬೆಳಕು ಚೆಲ್ಲುತ್ತದೆ)
ಅದು ಯಾವುದು ಸತ್ಯ ಯಾವುದು ಸುಳ್ಳು ಯಾವುದು ಸರಿ ಯಾವುದು ತಪ್ಪು, ಇತ್ಯಾದಿಗಳನ್ನು ಬಯಲಿಗೆ ತರುತ್ತದೆ. ಇದು ನಿಮಗೆ ಕೇಳಿಸಿಕೊಳ್ಳಲು ಸಾಮಾನ್ಯ ವಿಷಯ ಅನ್ನಿಸಬಹುದು ಆದರೆ ಇದುವೇ ನಿರ್ಣಾಯಕವಾದ ಅಂಶವಾಗಿದೆ
ಮೊದಲು ದೇವರ ವಾಕ್ಯವು ನಿಮ್ಮ ತಪ್ಪಾದ ನಂಬಿಕೆಯ ಮೂಲವನ್ನು ಹುಡುಕುವ ಕಾರ್ಯ ಮಾಡುತ್ತದೆ. (ಉದಾಹರಣೆಗೆ ನೀನು ಮೂರ್ಖನಲ್ಲ, ನೀವು ಬಿದ್ದು ಹೋದವರಲ್ಲ, ನೀವು ಕುರೂಪಿಯಲ್ಲ ಅಥವಾ ನಿಮ್ಮ ಕುಟುಂಬದಲ್ಲಿ ನೀವು ನತದೃಷ್ಟರಲ್ಲ ಇತ್ಯಾದಿ)
ಎರಡನೆಯದಾಗಿ, ದೇವರ ವಾಕ್ಯದಲ್ಲಿರುವ ಸತ್ಯದ ಮೂಲಕ ಆ ತಪ್ಪಾದ ನಿಮ್ಮ ಗ್ರಹಿಕೆಗಳನ್ನು ಸರಿಪಡಿಸುತ್ತದೆ. ನೀವು ದೇವರ ದೃಷ್ಟಿಯಲ್ಲಿ ನಿಜವಾಗಿ ಏನಾಗಿದ್ದೀರಿ (ನೀವು ದೇವರಿಂದ ಪ್ರೀತಿಸಲ್ಪಟ್ಟವರು, ನೀವು ದೇವರಾದುಕೊಂಡವರು, ನೀವು ದೇವರಿಂದ ಕ್ಷಮಿಸಲ್ಪಟ್ಟವರು ಆಗಿದ್ದೀರಿ ಎಂಬ ಸತ್ಯ). ನೀವು (ಅತ್ಯದ್ಭುತ ಪ್ರೀತಿ ಉಳ್ಳ ದೇವರನ್ನು) ವಿಶ್ವಾಸಿಸುವ ಗುಂಪಿಗೆ ಸೇರಿದವರಾಗಿದ್ದು, ದೇವರ ಅತೀತವಾದ ಪ್ರೀತಿಯು ಮತ್ತು ವಾಗ್ದಾನಗಳು ನಿಮಗಾಗಿಯೇ ಇದೆ ಅವು ಇಂದಿಗೂ ಎಂದೆಂದಿಗೂ ಸ್ಥಿರವಾಗಿ ನಿಲ್ಲುವಂತೆದ್ದಾಗಿದೆ ಎಂಬ ಸತ್ಯದಿಂದ ನಿಮ್ಮ ತಪ್ಪಾದ ನಂಬಿಕೆಗಳನ್ನು ಸರಿಪಡಿಸುತ್ತದೆ.
ಆದ್ದರಿಂದ ದೇವರ ವಾಕ್ಯವನ್ನು ಅಧ್ಯಯನಿಸುವುದನ್ನು ಬಿಟ್ಟುಬಿಡಬೇಡಿರಿ. ಏಕೆಂದರೆ ನೀವು ನಿಮ್ಮ ಜೀವಿತದ ಪ್ರತಿಯೊಂದು ಕ್ಷೇತ್ರದಲ್ಲೂ ಜಯಶಾಲಿಗಳಾಗಿರಲು ಮತ್ತು ಉನ್ನತ ಸ್ಥಿತಿಗೆ ಏರಲೆಂದೇ ನೀವು ರೂಪಿಸಲ್ಪಟ್ಟಿದ್ದೀರಿ ಎಂಬುದನ್ನು ದೇವರ ವಾಕ್ಯವನ್ನು ಧ್ಯಾನಿಸುವಾಗಲೇ ನೀವು ಅವುಗಳನ್ನು ಕಾಣಲಾರಂಭಿಸುವಿರಿ.
ಪ್ರಾರ್ಥನೆಗಳು
ತಂದೆಯೇ, ನಿನ್ನ ಪರಿಶುದ್ಧ ವಾಕ್ಯಗಳು ನನ್ನ ಆತ್ಮದಲ್ಲಿ ಆಳವಾಗಿ ಬೇರೂರಲಿ. ನಿತ್ಯವೂ ನಿನ್ನ ವಾಕ್ಯಗಳನ್ನು ಅಧ್ಯಯನ ಮಾಡುವಂತೆ ಯೇಸು ನಾಮದಲ್ಲಿ ನನಗೆ ಸಹಾಯ ಮಾಡು. ನನ್ನ ಜೀವಿತದಿಂದ ನಿನಗೆ ಮಹಿಮೆ ಉಂಟಾಗುವಂಥಹ ಮರೆಯಾಗಿರುವ ಸತ್ಯಗಳನ್ನು ಯೇಸು ನಾಮದಲ್ಲಿ ನನಗೆ ಪ್ರಕಟಿಸು ಆಮೆನ್
Join our WhatsApp Channel
Most Read
● ಕರ್ತನ ಸೇವೆ ಮಾಡುವುದು ಎಂದರೇನು II● ಮೂರು ನಿರ್ಣಾಯಕ ಪರೀಕ್ಷೆಗಳು
● ಹೋಲಿಕೆಯ ಬಲೆ
● ದಿನ 24:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಬೆಟ್ಟಗಳ ಮತ್ತು ತಗ್ಗಿನ ದೇವರು.
● ಅಗ್ನಿಯು ಸುರಿಯಲ್ಪಡಬೇಕು
● ಅಪ್ಪನ ಮಗಳು - ಅಕ್ಷಾ
ಅನಿಸಿಕೆಗಳು