ಅನುದಿನದ ಮನ್ನಾ
ನರಕ ಎನ್ನುವುದು ನಿಜವಾಗಿ ಇರುವಂಥ ಸ್ಥಳ
Thursday, 29th of February 2024
2
2
469
Categories :
ನರಕ (Hell)
ಅನೇಕ ಕ್ರೈಸ್ತರು ಮತ್ತು ಅನೇಕ ಕ್ರೈಸ್ತ ಬೋಧಕರು ಸಾಧ್ಯವಾದಷ್ಟು ನರಕದ ಬಗ್ಗೆ ಮಾತಾಡಲು ಹಿಂದೇಟಾಗುತ್ತಾರೆ. "ತಿರುಗಿಕೊಳ್ಳಿ -ಇಲ್ಲವಾದರೆ ಸುಟ್ಟು ಹೋಗುವಿರಿ" ಎಂಬ ಸುವಾರ್ತಾ ವಿಧಾನದಿಂದ ನಾವು ದೂರ ಉಳಿಯಬೇಕೆಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೂ ನಾವು ಸತ್ಯವನ್ನು ಮೀರಿ ಹೋಗಿ ಪ್ರಪಾತಕ್ಕೆ ಬೀಳುವ ಕೆಲಸ ಆಗಬಾರದು.
ಇಂದು ನೀವು ಏನೇ ಮಾಡಿದರೂ, ನೀವು ಏನನ್ನು ನಂಬುತ್ತಿದ್ದರೂ ಪರವಾಗಿಲ್ಲ ನೀವು ಪರಲೋಕವನ್ನು ಸೇರಿಕೊಳ್ಳುವಿರಿ ಎಂದು ಹೇಳುವಂತಹ ಸುಳ್ಳು ಜನರನ್ನು ನರಕಕ್ಕೆ ನಡೆಸುತ್ತಿದೆ
ಪರಲೋಕ ಮತ್ತು ನರಕ ಎಂಬ ಸ್ಥಳಗಳು ನಿಜವಾಗಿ ಇರುವಂತ ಸ್ಥಳಗಳಾಗಿವೆ. ಪರಲೋಕವೆನ್ನುವಂತದ್ದು ಸಿದ್ಧವಾದ ಜನರಿಗಾಗಿ ಸಿದ್ಧವಾದ ಸ್ಥಳವಾಗಿದೆ(ಯೋಹಾನ 14:1-6) ಮತ್ತು ಈ ಸಿದ್ಧತೆಯು ನೀವು ಯೇಸುವನ್ನೇ ಕರ್ತನೆಂದು ದೇವರು ನಮಗಾಗಿ ಆತನನ್ನು ಸತ್ತವರೊಳಗಿಂದ ಎಬ್ಬಿಸಿದನು ಎಂಬುದನ್ನು ಹೃದಯದಿಂದ ಒಪ್ಪಿ ಬಾಯಿಯಿಂದ ಅರಿಕೆ ಮಾಡುವ ಮೂಲಕ ಉಂಟಾಗುತ್ತದೆ. ಆಗ ನೀವು ನಿಮ್ಮ ಪಾಪಕ್ಕೆ ತರಬೇಕಾದ ದಂಡನೆಯಿಂದ ರಕ್ಷಿಸಲ್ಪಡುವಿರಿ. ದೇವರ ಸನ್ನಿಧಾನದಲ್ಲಿ ನೀತಿವಂತರೆಂದು ಎಣಿಸಲ್ಪಡುವಿರಿ ಮತ್ತು ನಿಮ್ಮ ಪ್ರಾಣಾತ್ಮ ಶರೀರಗಳಿಗೆ ಆತನಿಂದ ರಕ್ಷಣೆ ಉಂಟಾಗುತ್ತದೆ. (ರೋಮ 10:9-10)
ಎರಡನೆಯದಾಗಿ, ಈ ಒಂದು ನಿಮ್ಮ ನಿರ್ಧಾರವು ದೇವರ ಕುಟುಂಬದಲ್ಲಿ ನೀವು ನೆಲೆಗೊಳ್ಳುವಂತೆ ಮಾಡುತ್ತದೆ (ಯೋಹಾನ 1:12) ದೇವರು ನೀವು ಆತನಲ್ಲಿ ನೀತಿವಂತರೆಂದು ಎಣಿಸಲ್ಪಟ್ಟಿದ್ದೀರಿ ಎಂದು ಘೋಷಿಸುತ್ತಾನೆ. ಇದುವೇ ನಮಗೆ ನಾವು ಸತ್ತ ಮೇಲೆ ಪರಲೋಕಕ್ಕೆ ಹೋಗಲಿದ್ದೇವೆ ಎಂಬ ಭರವಸೆಯನ್ನು ನಮಗೆ ಕೊಡುತ್ತದೆ. 'ನೀವು ಪರಲೋಕವನ್ನು "ಸಂಪಾದನೆ" ಮಾಡಿಕೊಳ್ಳಲು ಸಾಧ್ಯವಿಲ್ಲ'! ಪರಲೋಕವು ದೇವರ ಕುಟುಂಬಕ್ಕೆ ಸೇರಿದವರ ಮನೆಯಾಗಿದೆ ಮತ್ತು ನಾವು ನಮ್ಮ ತಂದೆ ಇರುವ ಮನೆಗೆ ಹೋಗಲಿದ್ದೇವೆ (2ಕೊರಿಯಂತೆ 5:8, ಕೀರ್ತನೆ 16:11)
ಪ್ರತಿಯೊಬ್ಬ ವ್ಯಕ್ತಿಯೂ ದೇವರೊಂದಿಗೆ ನಿತ್ಯತ್ವದಲ್ಲಿ ನೆಲೆಸಿರಬೇಕೆಂಬುದೇ ದೇವರ ಬಯಕೆಯಾಗಿದೆ. ನರಕ ಎಂಬುದು ಮನುಷ್ಯರಿಗಾಗಿ ಸಿದ್ಧವಾಗದೆ ಸೈತಾನನಿಗೂ, ಅವನನ್ನು ಹಿಂಬಾಲಿಸಿ ಬಿದ್ದು ಹೋದ ದೇವದೂತರುಗಳಿಗೂ ಸಿದ್ಧ ಮಾಡಲ್ಪಟ್ಟಿದೆ(ಮತ್ತಾಯ 25:41) ದೇವರು ಪ್ರೀತಿ ಸ್ವರೂಪನು ಮತ್ತು ಯಾರೊಬ್ಬರೂ ಪರಲೋಕದಿಂದ ವಂಚಿತರಾಗುವುದನ್ನು ಆತನು ಇಷ್ಟಪಡುವುದಿಲ್ಲ (2ಪೇತ್ರ 3:9). ಆದರೆ ಆತನು ಎಂದಿಗೂ ಎಲ್ಲರೂ ತನ್ನನ್ನು ಅಂಗೀಕರಿಸಿಕೊಳ್ಳಲೇಬೇಕು ಎಂದು ಯಾರನ್ನೂ ಒತ್ತಾಯ ಪಡಿಸುವುದಿಲ್ಲ.
ಪರಲೋಕದ ನಮ್ಮ ತಂದೆಯು ನಮ್ಮನ್ನು ಬಹಳವಾಗಿ ಪ್ರೀತಿಸುವವನಾಗಿದ್ದಾನೆ. ಆದರೆ ಪ್ರತಿಯೊಬ್ಬ ಮನುಷ್ಯನಿಗೂ ಆಯ್ಕೆಯ ಸ್ವಾತಂತ್ರ್ಯವನ್ನು ಕೊಟ್ಟಿದ್ದಾನೆ. ಆದ್ದರಿಂದಲೇ ನಾವು ಸಾಧ್ಯವಾದಷ್ಟು ನಮ್ಮ ಸುತ್ತಲಿರುವ ಜನಕ್ಕೆ ಆತನ ಪ್ರೀತಿಯನ್ನು ಪರಿಚಯಿಸಬೇಕು. ಆಗ ನಾವು ಅವರ ಪ್ರೀತಿಯ ತಂದೆಯನ್ನು ಅವರಿಗೆ ಪರಿಚಯ ಮಾಡಿಕೊಟ್ಟ ಹಾಗೆ ಆಗುತ್ತದೆ.
ಪ್ರಾರ್ಥನೆಗಳು
ತಂದೆಯೇ, ನನ್ನ ದಂಡನೆಗಾಗಿ ವಿಮೋಚನ ಕ್ರಯವಾಗಿ ತನ್ನನ್ನೇ ಒಪ್ಪಿಸಿಕೊಟ್ಟ ನಿನ್ನ ಮಗನಾದ ಯೇಸುವಿನ ಮೇಲೆ ನಾನು ಭರವಸೆ ಇಡುತ್ತೇನೆ. ಯೇಸುಕ್ರಿಸ್ತನೇ ನನ್ನ ಕರ್ತನು ಮತ್ತು ರಕ್ಷಕನು ಎಂದೂ ಮತ್ತು ಪರಲೋಕವೇ ನನ್ನ ನಿತ್ಯವಾದ ಮನೆಯೆಂದು ನಾನು ನಂಬುತ್ತೇನೆ.ಆಮೇನ್
Join our WhatsApp Channel
Most Read
● ದಿನ 34:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ಯಜಮಾನನ ಬಯಕೆ
● ಆತ್ಮೀಕ ಚಾರಣ
● ದೇವರು ಹೇಗೆ ಒದಗಿಸುತ್ತಾನೆ #2
● ನೀವು ದೇವರಿಂದ ನೇಮಿಸಲ್ಪಡುವ ಮುಂದಿನ ಬಿಡುಗಡೆ ನಾಯಕರು ನೀವಾಗಬಹುದು
● ಕೆಲವು ನಾಯಕರು ಪಾಪದಲ್ಲಿ ಬಿದ್ದು ಹೋದದರಿಂದ ನಾವು ಸಹ ನಂಬಿಕೆಯನ್ನು ತ್ಯಜಿಸಬೇಕೆ?
● ಸರಿಪಡಿಸಿಕೊಳ್ಳಿರಿ
ಅನಿಸಿಕೆಗಳು