ನಮ್ಮ ಕರುಣಾಸದನ್ ಮಿನಿಸ್ಟ್ರಿಯಲ್ಲಿ ನಾವು ಅಕ್ಷರಶಃ ಪ್ರತಿನಿತ್ಯ ನೂರಾರು ಪ್ರಾರ್ಥನಾ ಮನವಿಗಳನ್ನು ಸ್ವೀಕರಿಸುತ್ತೇವೆ. ಅದರಲ್ಲಿ ಬಹುತೇಕ ಮನವಿಗಳು ಹಣಕಾಸಿನ ಸಮಸ್ಯೆಗಳಿಗೇ ಸಂಬಂಧಿಸಿರುತ್ತದೆ.
ಇದು ನಿಜಕ್ಕೂ ಕಷ್ಟಕರವಾದ ಸಂಗತಿಯೇ. ಆದರೆ ನಮ್ಮ ಎಲ್ಲಾ ಇಕ್ಕಟ್ಟುಗಳಲ್ಲಿ ಕರ್ತನೇ ನಮ್ಮ ಸಹಾಯಕನು,ಆಶ್ರಯವು ಬಲವೂ ಆಗಿದ್ದಾನೆ.(ಕೀರ್ತನೆ 46:1).
ನಾನು ಜನರೊಟ್ಟಿಗೆ ಮಾತು ಮಾತನಾಡುವಾಗಲೆಲ್ಲಾ ಅವರೊಂದು ಹಣಕಾಸಿನ ಅದ್ಭುತ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ ಎಂಬುದಾಗಿ ಹೇಳುತ್ತಾರೆ. ಈಗ ನಿಮ್ಮ ಹಣಕಾಸಿನ ಪ್ರತಿಯೊಂದು ವಿಚಾರದಲ್ಲೂ ದೇವರ ಮಧ್ಯಪ್ರವೇಶಿಕೆ ಬೇಕೇ ಬೇಕು ಎಂಬುದನ್ನು ನಂಬುವಂತದ್ದು ಸತ್ಯವೇದ ಆಧಾರಿತ ನಂಬಿಕೆಯಾಗಿದೆ. ಅದರಲ್ಲಿ ತಪ್ಪೇನಿಲ್ಲ. ಆದಾಗಿಯೂ ಅನೇಕರು ತಮ್ಮ ಹಣಕಾಸಿನ ಅದ್ಭುತ ಬಿಡುಗಡೆಯನ್ನು ಹೇಗೆ ಸ್ವೀಕರಿಕೊಳ್ಳಬೇಕು ಎಂಬ ಪರಿಜ್ಞಾನವಿಲ್ಲದೆಯೇ ತಮ್ಮ ಬಿಡುಗಡೆಯನ್ನು ಕಳೆದುಕೊಳ್ಳುತ್ತಾರೆ. ದಯವಿಟ್ಟು ಇದನ್ನು ವಿವರಿಸಲು ನನಗೆ ಅನುಮತಿಸಿ.
#1. ಯಾವಾಗಲೂ ಕರ್ತನನ್ನೇ ಎದುರು ನೋಡಿ.
ನೀವು ಹಣಕಾಸಿನ ಅದ್ಭುತ ಬಿಡುಗಡೆಗಾಗಿ ಪ್ರಾರ್ಥಿಸುವಾಗಲೆಲ್ಲಾ ನೀವು ಕರ್ತನನ್ನೇ ಎದುರು ನೋಡಬೇಕು.ಆತನಿಂದ ಮಾತ್ರ ನಿಜವಾದ ಬಿಡುಗಡೆ ಕೊಡಲು ಸಾಧ್ಯ.
"ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳೂ ಮೇಲಣಿಂದ ಸಕಲವಿಧವಾದ ಬೆಳಕಿಗೂ ಮೂಲಕಾರಣನಾದವನಿಂದ ಇಳಿದುಬರುತ್ತವೆ. ಆತನಲ್ಲಿ ಚಂಚಲತ್ವವೇನೂ ಇಲ್ಲ, ವ್ಯತ್ಯಾಸದ ಸೂಚನೆಯೂ ಇಲ್ಲ."(ಯಾಕೋಬನು 1:17)
#2. ಹಣಕಾಸಿನ ಅದ್ಭುತ ಬಿಡುಗಡೆ ಎಂದರೆ ದೈವಿಕ ಮಾರ್ಗದರ್ಶನ.
ಕೀರ್ತನೆ 32:8 ರಲ್ಲಿ ಕರ್ತನು ಹೇಳುತ್ತಾನೆ... "[ಯೆಹೋವನು] - ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆ ಹೇಳುವೆನು [ಅನ್ನುತ್ತಾನಲ್ಲಾ]."ಎಂದು.ಅದು ಉದ್ಯೋಗದಲ್ಲಿಯೇ ಆಗಿರಲಿ ಅಥವಾ ಹೂಡಿಕೆಯ ಅವಕಾಶಗಳಲ್ಲಾಗಿರಲಿ ಅಥವಾ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿಯೇ ಆಗಿರಲಿ ದೇವರಿಂದ ಬರುವ ಒಂದು ಮಾತು ನಿಮ್ಮ ಕಥೆಯನ್ನೇ ಬದಲಾಯಿಸಬಲ್ಲದು.
ಆದಿಕಾಂಡ 26ರಲ್ಲಿ ನೋಡುವಾಗ ಆಗ ಆ ದೇಶದಲ್ಲಿ ಕ್ಷಾಮ ಉಂಟಾಗಿತ್ತು. ಇದರಿಂದಾಗಿ ಇಸಾಕನು ಆ ದೇಶವನ್ನು ಬಿಟ್ಟು ಹೋಗಲು ಬಯಸಿದ್ದನು. ಆ ಸಮಯದಲ್ಲಿ ಕರ್ತನಾದ ದೇವರು ಅವನಿಗೆ ಕಾಣಿಸಿಕೊಂಡು"ಅಲ್ಲಿ ಯೆಹೋವನು ಅವನಿಗೆ ದರ್ಶನಕೊಟ್ಟು - ನೀನು ಐಗುಪ್ತದೇಶಕ್ಕೆ ಇಳಿದುಹೋಗಬೇಡ; ನಾನು ಹೇಳುವ ದೇಶದಲ್ಲಿ ನೀನು ವಾಸಮಾಡಬೇಕು. [3] ನೀನು ಈ ದೇಶದಲ್ಲಿ ಪ್ರವಾಸಿಯಾಗಿರು; ನಾನು ನಿನ್ನ ಬಳಿಯಲ್ಲಿದ್ದು ನಿನ್ನನ್ನು ಅಭಿವೃದ್ಧಿಪಡಿಸಿ ನಿನಗೂ ನಿನ್ನ ಸಂತತಿಯವರಿಗೂ ಈ ಪ್ರದೇಶಗಳನ್ನೆಲ್ಲಾ ಕೊಡುವೆನು."ಎಂದನು. (ಆದಿಕಾಂಡ 26:2-3).
ಇದರಂತೆ ನಡೆದ "ಇಸಾಕನು ಆ ದೇಶದಲ್ಲಿ ಬೀಜವನ್ನು ಬಿತ್ತಿ ಅದೇ ವರುಷದಲ್ಲಿ ನೂರರಷ್ಟು ಬೆಳೆಯನ್ನು ಹೊಂದಿದನು; ಯೆಹೋವನು ಅವನನ್ನು ಅಭಿವೃದ್ಧಿಪಡಿಸಿದನು; [13] ಅವನ ಐಶ್ವರ್ಯವು ದಿನೇ ದಿನೇ ಹೆಚ್ಚಿದ್ದರಿಂದ ಬಹು ಧನವಂತನಾದನು; " ಎಂದು ಆದಿಕಾಂಡ 26:12-13 ನಮಗೆ ಹೇಳುತ್ತದೆ.
ಕರ್ತನ ಮಾರ್ಗದರ್ಶನವು ನಮಗೆ ಕನಸಿನ ಮೂಲಕವೂ ದರ್ಶನದ ಮೂಲಕವೂ ದೇವ ಮನಷ್ಯರು ಆಡುವ ಪ್ರವಾದನೆಯ ಮಾತುಗಳ ಮೂಲಕ ಇಲ್ಲವೇ ನಾವು ಸತ್ಯವೇದವನ್ನು ಓದುವಾಗ ವಾಕ್ಯದ ಮೂಲಕವೂ ಸಹ ದೊರಕುತ್ತದೆ.
#3. ಹಣಕಾಸಿನ ಅದ್ಭುತ ಬಿಡುಗಡೆ ಎಂದರೆ ನಿಮ್ಮ ಹಣಕಾಸನ್ನು ಬಂಧಿಸಿರುವ ವೈರಿಯ ಬಲವನ್ನು ತೊಡೆದುಹಾಕುವುದು ಎಂಬುದಾಗಿದೆ.
ನೀವು ಯೋಬನ ಪುಸ್ತಕವನ್ನು ಓದಿ ನೋಡುವುದಾದರೆ ಅಲ್ಲಿ ಸೈತಾನನು ಯೋಬನ ಮೇಲೆ ಆಕ್ರಮಣ ಮಾಡಿ ಅವನನ್ನು ದಾರಿದ್ರಕ್ಕೆ ತಳ್ಳಿದನು ಎಂಬುದನ್ನು ನಾವು ನೋಡಬಹುದು. (ಯೋಬ 1ನೇ ಅಧ್ಯಾಯ ಓದಿರಿ)
ಅನೇಕ ಜನರು ಹೀಗೆಯೇ ಸೈತಾನನ ಬಲದ ದೆಸೆಯಿಂದ ಮಿತಿಮೀರಿದ ನಷ್ಟವನ್ನು ದಾರಿದ್ರವನ್ನು ಇಂದು ಅನುಭವಿಸುತ್ತಿದ್ದಾರೆ. ಅವರು ಎಷ್ಟೇ ಕಷ್ಟಪಟ್ಟರೂ ಸಹ ಅವರಲ್ಲಿ ಯಾವುದೇ ಬದಲಾವಣೆ ಕಾಣಲು ಸಾಧ್ಯವಾಗುತ್ತಿಲ್ಲ.
ಅಂಥವರಲ್ಲಿ ನೀವೂ ಒಬ್ಬರಾಗಿದ್ದರೆ, ನೀವು ಉಪವಾಸದಿಂದಲೂ ಪ್ರಾರ್ಥನೆಯ ಮೂಲಕವೂ ಸೈತಾನನ ಬಲಗಳನ್ನು ಮುರಿಯಬೇಕು.
ನಾವು ಒಟ್ಟಾಗಿ ಕೂಡಿ ಬಂದು ಪ್ರಾರ್ಥಿಸುವಾಗ ದೇವರ ಬಲವು ತೀವ್ರವಾಗಿ ಕಾರ್ಯ ಮಾಡುತ್ತದೆ (ಯಾಜಕ ಕಾಂಡ 26:8)
ನೀವು ಮಧ್ಯರಾತ್ರಿ 12 ಗಂಟೆಯಿಂದ ಮರುದಿನ ಮಧ್ಯಾಹ್ನ 2 ಗಂಟೆವರೆಗೆ ಅಂದರೆ ಒಟ್ಟಾರೆ 14 ಗಂಟೆಗಳಕಾಲ ಉಪವಾಸವಿದ್ದು ಪ್ರಾರ್ಥನೆ ಮಾಡಬಹುದು. ಸಾಧ್ಯವಾದಲ್ಲಿ ಅದನ್ನು 15 ಗಂಟೆಗಳವರೆಗೂ ವಿಸ್ತರಿಸಬಹುದು
ನಾವು ಸಹ ಪ್ರತಿ ಮಂಗಳವಾರ/ ಗುರುವಾರ /ಶನಿವಾರ ಸಂಜೆ 6:30 ರಿಂದ ಆತ್ಮಭರಿತವಾದ ಸಮಯದಲ್ಲಿ ನಿಮ್ಮನ್ನು ಯೂಟ್ಯೂಬಿನಲ್ಲಿ ಸಂಧಿಸುತ್ತೇವೆ.
ಪ್ರಾರ್ಥನೆಗಳು
ತಂದೆಯೇ, ನನ್ನ ಹಣಕಾಸಿನ ಮೇಲೆ ನಿನ್ನ ಹಸ್ತವನ್ನು ಚಾಚು. ನಿನ್ನ ವಾಕ್ಯ ಹೇಳುತ್ತದೆ ನೀನು ನಮಗೆ ಸಂಪತ್ತನ್ನು ಗಳಿಸುವ ಸಾಮರ್ಥ್ಯವನ್ನು ಅನುಗ್ರಹಿಸಿರುವೆ ಎಂದು. ಆದ್ದರಿಂದ ಕರ್ತನೇ, ನನ್ನನ್ನು ಸಮೃದ್ಧಿಗೊಳಿಸುವ ನಿನ್ನ ಸಾಮರ್ಥ್ಯದ ಮೇಲೆಯೇ ನಾನು ಯೇಸುವಿನ ನಾಮದಲ್ಲಿ ಭರವಸೆ ಇಡುತ್ತೇನೆ ಆಮೇನ್.
Join our WhatsApp Channel
Most Read
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ● ಸರ್ವಶಕ್ತನಾದ ದೇವರ ಅದ್ಬುತ ಸಮಾಗಮ.
● ನೂತನ ಆತ್ಮೀಕ ವಸ್ತ್ರಗಳನ್ನು ಧರಿಸಿಕೊಳ್ಳಿ
● ವ್ಯರ್ಥವಾದದಕ್ಕೆ ಹಣ
● ಭಾನುವಾರದ ಬೆಳಗ್ಗೆ ನಿಗದಿತ ಸಮಯಕ್ಕೆ ಸಭೆಗೆ ಹೋಗುವುದು ಹೇಗೆ
● ಕಾಮದ ದುರಿಚ್ಛೆಗಳಿಂದ ಹೊರಬರುವುದು
● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - III
ಅನಿಸಿಕೆಗಳು