ಅನುದಿನದ ಮನ್ನಾ
ಅಂತ್ಯದಿನಗಳ ಕುರಿತು ಪ್ರವಾದನ ಯುಕ್ತ ಗೂಡಾರ್ಥ ವಿವರಣೆ
Wednesday, 10th of April 2024
3
2
200
Categories :
ಅಂತ್ಯಕಾಲ (End Time)
ಕ್ರಿಸ್ತ ವಿರೋಧಿ ಎಂದರೇನು?
"ಪ್ರತಿರೋಧಿ" ಎಂಬ ಪದದ ಅರ್ಥ ವಿರೋಧಿಸುವಂಥದ್ದು ಎಂದು. ಹಾಗಾಗಿ ಕ್ರಿಸ್ತನಿಗೆ ಸಂಬಂಧಿಸಿದ ಆತನ ಸಂದೇಶ, ಆತನ ವ್ಯಕ್ತಿತ್ವ, ಆತನ ಸ್ವಭಾವ, ಆತನ ಕಾರ್ಯಗಳು ಇತ್ಯಾದಿ ಯಾವುದನ್ನೇ ಆಗಲಿ ವಿರೋಧಿಸುವಂಥದ್ದು ಕ್ರಿಸ್ತ ವಿರೋಧಿಯಾಗಿದೆ.
ಕ್ರಿಸ್ತ ವಿರೋಧಿಯಾದವನಿಗೂ ಮತ್ತು ಕ್ರಿಸ್ತ ವಿರೋಧಿಗಳಿಗೂ ಇರುವ ವ್ಯತ್ಯಾಸ.
"ಮಕ್ಕಳಿರಾ, ಇದು ಕಡೇ ಗಳಿಗೆಯಾಗಿದೆ; ಕ್ರಿಸ್ತವಿರೋಧಿ ಬರುತ್ತಾನೆಂದು ನೀವು ಕೇಳಿದ್ದೀರಷ್ಟೆ; ಈಗಲೂ ಕ್ರಿಸ್ತವಿರೋಧಿಗಳು ಬಹುಮಂದಿ ಎದ್ದಿದ್ದಾರೆ; ಇದರಿಂದ ಇದು ಕಡೇ ಗಳಿಗೆಯಾಗಿದೆ ಎಂದು ತಿಳುಕೊಳ್ಳುತ್ತೇವೆ."(1 ಯೋಹಾನನು 2:18 )
ಯೋಹಾನನು ಇಲ್ಲಿ ಮೊದಲು "ಕ್ರಿಸ್ತ ವಿರೋಧಿ" ಎಂದು ಏಕವಚನದಲ್ಲಿಯೂ ಆಮೇಲೆ ಎರಡನೆಯ ಸಾರಿ ಕ್ರಿಸ್ತ ವಿರೋಧಿಗಳು ಎಂಬ ಬಹುಚನದ ಪದಗಳನ್ನುಉಪಯೋಗಿಸಿ ಎರಡನ್ನೂ ಪ್ರತ್ಯೇಕಿಸಿದ್ದಾನೆ.
ಇಲ್ಲಿ ಅಪೋಸ್ತಲನಾದ ಯೋಹಾನನು ಕ್ರಿಸ್ತ ವಿರೋಧಿಗೂ ಕ್ರಿಸ್ತ ವಿರೋಧಿಗಳಿಗೂ ಇರುವ ವ್ಯತ್ಯಾಸವನ್ನು ಸ್ಪಷ್ಟಪಡಿಸುತ್ತಿದ್ದಾನೆ.ಈಗ ಈ ವಾಕ್ಯದಲ್ಲಿ ಹೇಳಿರುವುದನ್ನು ಸ್ವಲ್ಪ ಗಮನಿಸಿ ನೋಡಿ "ಈಗಲೂ ಅನೇಕ ಮಂದಿ ಕ್ರಿಸ್ತ ವಿರೋಧಿಗಳು ಎದ್ದಿದ್ದಾರೆ"
ಯೋಹಾನನು ಮುಂದುವರೆದು ಹೇಳುವುದೇನೆಂದರೆ
"ಯೇಸುವು ಕ್ರಿಸ್ತನಲ್ಲ ಎನ್ನುವವನು ಸುಳ್ಳುಗಾರನಲ್ಲವಾದರೆ ಸುಳ್ಳುಗಾರನು ಬೇರೆ ಎಲ್ಲಿದ್ದಾನೆ? ಯಾವನಾದರೂ ತಾನು ತಂದೆಯನ್ನೂ ಮಗನನ್ನೂ ಅರಿಯೆನು ಎಂದು ಹೇಳಿದರೆ ಅವನೇ ಕ್ರಿಸ್ತ ವಿರೋಧಿ."( "1 ಯೋಹಾನನು 2:22).
ಹಾಗಾಗಿ ಕ್ರಿಸ್ತ ವಿರೋಧಿಗಳ ಸಾಮಾನ್ಯ ಗುಣಲಕ್ಷಣ ಎಂದರೆ ಅವರು ಯೇಸುವನ್ನು ಕ್ರಿಸ್ತನೆಂದು (ದೇವರಿಂದ ಅಭಿಶೇಕಿಸಲ್ಪಟ್ಟವನೆಂದು) ಅಂಗೀಕರಿಸಿಕೊಳ್ಳದವರಾಗಿದ್ದಾರೆ.
ಅಪೋಸ್ತಲನಾದ ಯೋಹಾನನು ಇನ್ನೂ ಮುಂದುವರೆದು ಹೇಳುವುದೇನೆಂದರೆ "ಯಾರು ಯೇಸುವನ್ನು ಕ್ರಿಸ್ತನೆಂದು ಅಥವಾ ಮೆಸ್ಸಿಯನೆಂದು ಅಂಗೀಕರಿಸಿಕೊಳ್ಳುವುದಿಲ್ಲವೋ, ತಂದೆಯನ್ನು -ಮಗನನ್ನು ಅಂಗೀಕರಿಸಿಕೊಳ್ಳುವುದಿಲ್ಲವೋ ಆ ವ್ಯಕ್ತಿ ಮತ್ತು ಆ ಜನರು ಕ್ರಿಸ್ತ ವಿರೋಧಿಗಳಾಗಿದ್ದಾರೆ."
ಯೋಹಾನನ ಕಾಲದಲ್ಲಿ ಇದ್ದಂತೆ ಇಂದೂ ಸಹ ಅನೇಕ ಮಂದಿ ಕ್ರಿಸ್ತ ವಿರೋಧಿಗಳು ಇದ್ದಾರೆ. ಆದುದರಿಂದ ನಾವು ಈ ವಿಚಾರದಲ್ಲಿ ಮೋಸ ಹೋಗದಂತೆ ಜಾಗರೂಕರ ಆಗಿರಬೇಕು. ಉದಾಹರಣೆಗೆ ಹಿಟ್ಲರ್ ಒಬ್ಬ ಕ್ರಿಸ್ತ ವಿರೋಧಿಯಾಗಿದ್ದನು.
ಕರ್ತನಾದ ಯೇಸು ಹೇಳಿದಂತೆ "ನನ್ನೊಂದಿಗೆ ಕೂಡಿಸಲ್ಪಡದವನು ನನಗೆ ವಿರೋಧಿಯಾಗಿದ್ದಾನೆ" (ಪ್ರತಿರೋಧಿ) (ಮತ್ತಾಯ 12:30). ನೀವು ಕ್ರಿಸ್ತನಿಗಾಗಿ ಜೀವಿಸುತ್ತಾ ಇರವವರಲ್ಲದಿದ್ದರೆ ನೀವು ಕ್ರಿಸ್ತನಿಗೆ ವಿರೋಧಿಗಳಾಗಿದ್ದೀರಿ. ಹಾಗಾಗಿ ಕ್ರಿಸ್ತನಿಗೆ ವಿರೋಧಿಗಳಾದವರೇ ಕ್ರಿಸ್ತ ವಿರೋಧಿಯಾಗಿದ್ದಾರೆ ಎಂಬುದಂತೂ ಸ್ಪಷ್ಟ.
ಕ್ರಿಸ್ತ ವಿರೋಧಿಯ ಗುಣಲಕ್ಷಣಗಳು
"ಯಾರೂ ಯಾವ ವಿಧದಲ್ಲಿಯೂ ನಿಮ್ಮನ್ನು ಮೋಸಗೊಳಿಸದಂತೆ ನೋಡಿಕೊಳ್ಳಿರಿ; ಯಾಕಂದರೆ ಮೊದಲು ಮತಭ್ರಷ್ಟತೆಯು ಉಂಟಾಗಿ ಅಧರ್ಮಸ್ವರೂಪನು ಬೈಲಿಗೆ ಬಂದ ಹೊರತು ಆ ದಿನವು ಬರುವದಿಲ್ಲ.4 ಯಾವದು ದೇವರೆನಿಸಿಕೊಳ್ಳುತ್ತದೋ ಯಾವದು ಪೂಜೆ ಹೊಂದುತ್ತದೋ ಅದನ್ನೆಲ್ಲಾ ನಾಶನಕ್ಕೆ ಅಧೀನನಾದ ಆ ಪುರುಷನು ಎದುರಿಸಿ ಅದಕ್ಕಿಂತ ಮೇಲಾಗಿ ತನ್ನನ್ನು ತಾನೇ ಹೆಚ್ಚಿಸಿಕೊಂಡು ತಾನು ದೇವರೆಂದು ಹೇಳಿಕೊಂಡು ದೇವರ ಗರ್ಭಗುಡಿಯಲ್ಲೇ ಕೂತುಕೊಳ್ಳುತ್ತಾನೆ."(2 ಥೆಸಲೋನಿಕದವರಿಗೆ 2:3-4)
ಅಪೋಸ್ತಲನಾದ ಪೌಲನು ಇಲ್ಲಿ ಒಬ್ಬ ವ್ಯಕ್ತಿಯ ಕುರಿತಾಗಿ "ಪಾಪದ ಮನುಷ್ಯನು, ಅಧರ್ಮ ಸ್ವರೂಪನಾದವನು ಯಾವುದು ದೇವರೆನಿಸಿಕೊಳ್ಳುವುದು ಯಾವುದು ಆರಾಧನೆ ಹೊಂದುತ್ತದೋ ಅವುಗಳನ್ನೆಲ್ಲ ಮೀರಿ ತನ್ನನ್ನು ಹೆಚ್ಚಿಸಿಕೊಳ್ಳುವವನು, ನಾಶನದ ಮಗನು ಎಂದು ಕರೆದಿದ್ದಾನೆ "ಕೆಲವರು ಕ್ರಿಸ್ತ ವಿರೋಧಿ ಎಂದರೆ, ಈಗಿರುವಂತಹ ಪ್ರತಿಯೊಬ್ಬರ ಮಾಹಿತಿಗಳನ್ನು ಕಲೆಹಾಕಿ ಇಟ್ಟುಕೊಳ್ಳುವ ಸೂಪರ್ ಕಂಪ್ಯೂಟರ್ ಎಂದು ಬೋಧಿಸುತ್ತಾರೆ. ಇದೊಂದು ತಪ್ಪಾದ ಮಾಹಿತಿಯಾಗಿದ್ದು ಇದಕ್ಕೆ ತಿದ್ದುಪಡಿಯ ಅವಶ್ಯಕತೆ ಇದೆ. ಸತ್ಯವೇದವು ಕ್ರಿಸ್ತ ವಿರೋಧಿ ಎಂಬುವನು ಒಬ್ಬ ಮನುಷ್ಯನಾಗಿದ್ದಾನೆ ಎಂದು ಸ್ಪಷ್ಟವಾಗಿ ಹೇಳಿದೆ.
ಅಪೋಸ್ತಲನಾದ ಪೌಲನು ಕ್ರಿಸ್ತ ವಿರೋಧಿ ಎಂಬುವವನು ಅಧರ್ಮ ಸ್ವರೂಪನಾದ ವ್ಯಕ್ತಿಯಾಗಿದ್ದಾನೆ ಎಂದು ನಮ್ಮನ್ನು ಎಚ್ಚರಿಸಿದ್ದಾನೆ.(2 ಥೆಸಾಲೋನಿಕ 2:3, 8:9)
ಈ ನಿರ್ದಿಷ್ಟ ವ್ಯಕ್ತಿಯು ಭವಿಷ್ಯದಲ್ಲಿ ಬರುವ ಸಂಕಟ ಕಾಲದಲ್ಲಿ ಅನೇಕರನ್ನು ವಂಚಿಸಲು ಸುಳ್ಳಾದ ಸೂಚಕ ಕಾರ್ಯ ಅದ್ಭುತ ಕಾರ್ಯಗಳನ್ನು ಮಾಡುತ್ತಾನೆ (2ಥೆಸಲೋನಿಕ 2:9-10) ಅಪೋಸ್ತಲನಾದ ಯೋಹಾನನು ತನ್ನ ಪ್ರಕಟಣೆ ಗ್ರಂಥದಲ್ಲಿ ಇವನನ್ನು "ಮೃಗ" ಎಂದು ವರ್ಣಿಸಿದ್ದಾನೆ (ಪ್ರಕಟಣೆ 13:1-10).
ಸೈತಾನನಿಂದ ಪ್ರೇರೇಪಿಸಲ್ಪಟ್ಟ ಈ ವ್ಯಕ್ತಿಯು ತನ್ನನ್ನು ಹೆಚ್ಚಿಸಿಕೊಂಡು ಸಂಕಟಕಾಲದಲ್ಲಿ ಮೊದಲು ಇಸ್ರಾಯೆಲ್ಯರೊಂದಿಗೆ ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತಾನೆ (ದಾನಿಯೇಲ 9: 22) ಆದರೆ ನಂತರದಲ್ಲಿ ಅವನು ಇಡೀ ಲೋಕವನ್ನೇ ಆಳ್ವಿಕೆ ಮಾಡಲು ಉದ್ದೇಶಿಸಿ ಯಹೂದ್ಯರನ್ನೆಲ್ಲ ನಾಶ ಮಾಡಲು ತನ್ನ ಒಪ್ಪಂದವನ್ನು ಮೀರುತ್ತಾನೆ. ಅವನು ವಿಶ್ವಾಸಿಗಳನ್ನು ಹಿಂಸಿಸಿ, ತನ್ನದೇ ಆದ ರಾಜ್ಯವನ್ನು ಸ್ಥಾಪಿಸುತ್ತಾನೆ. (ಪ್ರಕಟಣೆ 13)ಇವನು ತನ್ನನ್ನು ತಾನೇ ಮಹಿಮೆಗೊಳಿಸಿಕೊಳ್ಳಲು ಅಹಂಕಾರದ ಮಾತುಗಳಿಂದ ಕೊಚ್ಚಿಕೊಳ್ಳುತ್ತಾನೆ (2ಥೆಸಾಲೋನಿಕ 2:4)
ಪ್ರಾರ್ಥನೆಗಳು
ತಂದೆಯೇ, ನಿನ್ನ ಪವಿತ್ರಾತ್ಮನಿಂದ ಮತ್ತು ನಿನ್ನ ಪರಿಶುದ್ಧ ವಾಕ್ಯಗಳಿಂದ ಈ ಒಂದು ಅಂತ್ಯಕಾಲಕ್ಕಾಗಿ ನನ್ನನ್ನು ಯೇಸುನಾಮದಲ್ಲಿ ಭೌತಿಕವಾಗಿಯೂ ಆತ್ಮಿಕವಾಗಿಯೂ ಸಿದ್ಧಪಡಿಸು.
Join our WhatsApp Channel
Most Read
● ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?- 2● ದಿನ 04:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಪರಿಶೋಧನೆಯ ಸಮಯದಲ್ಲಿ ನಂಬಿಕೆ
● ಆರಂಭಿಕ ಹಂತದಲ್ಲಿಯೇ ಕರ್ತನನ್ನು ಕೊಂಡಾಡಿರಿ
● ಕರ್ತನೇ ನನ್ನ ದೀಪವನ್ನು ಬೆಳಗಿಸು.
● ನಂಬತಕ್ಕ ಸಾಕ್ಷಿ
● ಅಂತಿಮ ಸುತ್ತನ್ನೂ ಗೆಲ್ಲುವುದು
ಅನಿಸಿಕೆಗಳು